ಚಿಕ್ಕಮಗಳೂರು: ಭಾರತದ ಹಿಂದು ಸಂಸ್ಕೃತಿಗೆ ಮುಂಡಾಲ ಸಮಾಜದ ಕೊಡುಗೆ ಅಪಾರವಾಗಿದೆ ಎಂದು ಕಚ್ಚೂರು ಕ್ಷೇತ್ರದ ಧರ್ಮದರ್ಶಿ ಗೋಕುಲದಾಸ್ ತಿಳಿಸಿದರು.
ತಾಲೂಕಿನ ದಾಸರಹಳ್ಳಿ ಗ್ರಾಮ ಪಂಚಾಯಿತಿ ಮೈದಾನದಲ್ಲಿ ಭಾನುವಾರ ನಡೆದ ಅಖಿಲ ಭಾರತ ಮುಂಡಾಲ ಸಮಾಜದ ತಾಲೂಕು ಸಮಿತಿ ಹಮ್ಮಿಕೊಂಡಿದ್ದ ಮುಂಡಾಲ ಸಮಾಜದ ಮಹಾಸಭೆ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮುಂಡಾಲ ಸಮಾಜವು ತಮ್ಮ ಮೂಲ ಸಂಸ್ಕೃತಿಗಳಾದ ನೇಮೋತ್ಸವ, ದೈವಾರಾಧನೆಯಂತಹ ಚಟುವಟಿಕೆಗಳನ್ನು ಆಚರಿಸಿಕೊಂಡು ಬರುತ್ತಿದ್ದು ನಮ್ಮ ದೇಶದ ಕಲೆ ಸಂಸ್ಕಾರವನ್ನು ಉಳಿಸುವಲ್ಲಿ ಮಹಾನ್ ಪಾತ್ರ ವಹಿಸಿದೆ. ನಂಬಿಕೆಗೆ ಅರ್ಹ ಹಾಗು ಮುಗ್ದತೆಯ ಜನರು ಮುಂಡಾಲ ಸಮಾಜದವರು ಚಿಕ್ಕಮಗಳೂರು ಜಿಲ್ಲೆಯ ಕಾಫಿ ತೋಟಗಳಲ್ಲಿ ಕೆಲಸ ಮಾಡಿಕೊಂಡು ಇತರೆ ಸಣ್ಣಪುಟ್ಟ ಕೆಲಸ ಕಾರ್ಯ, ವ್ಯಾಪಾರ ವಹಿವಾಟ್ ಮಾಡಿಕೊಂಡು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆಂದರು.
ಯಾವುದೆ ಕೆಲಸಕಾರ್ಯ ಮಾಡಿದ್ದರು ತಮ್ಮ ಮೂಲ ಸಂಸ್ಕೃತಿ ಧಾರ್ಮಿಕ ಆಚರಣೆಗಳನ್ನು ಮರೆಯದೆ.ಇಂದಿಗು ಆ ಎಲ್ಲಾ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಬರುತ್ತಿರುವುದು ಶ್ಲಾಘನೀಯ,
ಸಮಾಜದ ಜನರು ವಿಶಾಲ ಮನೋಬಾವಹೊಂದಿರಬೇಕು ಹಾಗು ಸಂಘಟನೆಗಳು ಬಲಗೊಳ್ಳಬೇಕು ಆಗ ಮಾತ್ರ ನಮ್ಮಂತಹ ತಳಮಟ್ಟದ ಸಮಾಜಗಳು ಜನಾಂಗಳು ಮೇಲೆ ಬರಲು ಸಾಧ್ಯವೆಂದು ಹೇಳಿದ್ದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಮುಂಡಾಲ ಸಮಾಜವು ಹಿಂದು ಸಮಾಜದ ಒಂದು ಭಾಗ. ಪ್ರಮುಖವಾಗಿ ದೈವ ಭಕ್ತಿ ಹಾಗು ದೇಶ ಭಕ್ತಿಯನ್ನು ಬಿಟ್ಟುಕೊಡದೆ ಇರುವಂತಹ ಸಮಾಜವಾಗಿದೆ ಹಾಗೆ ನೀತಿ ನಿಯತ್ತಿಗೆ ಹೆಸರುವಾಸಿಯಾಗಿದೆ.ಎರಡು, ಮೂರು ತಲೆಮಾರುಗಳ ಹಿಂದೆ ಉದ್ಯೋಗ ಅರಸಿ ಬಹುತೇಕ ಈ ಜನಾಂಗದವರು ಈ ಭಾಗದ ಹಲವೆಡೆ ಬಂದವರು ಇನ್ನು ಕೆಲವರು ಮೂಲ ನಿವಾಸಿಗಳು ಉದ್ಯೋಗ ಅರಸಿ ಬಂದಿದ್ದರ ಜೊತೆಗೆ ತಮ್ಮ ದೈವಗಳನ್ನು ಕರೆತಂದು ದೈವಾರಾಧನೆಯನ್ನು ಮುಂದುವರೆಸುತ್ತ ಇಲ್ಲಿಯವರೆಗು ಕಟ್ಟಿ ಬೆಳಸಿದ ಸಮಾಜ ಮುಂಡಾಲ ಸಮಾಜವೆಂದು ತಿಳಿಸಿದರು.
ಇನ್ನು ಸಮಾಜದ ಯಾವುದೆ ಕಾರ್ಯಕ್ಕೂ ನಾನು ಜೊತೆಯಾಗಿ ನಿಂತಿದೇನೆ ಈ ಮುಂಡಾಲ ಜನರ ದೈವಾರಾಧನೆ ಸಂಸ್ಕೃತಿ ಆಚಾರ ವಿಚಾರಗಳನ್ನುಗಮನಿಸಿದಾದ ಈ ಸಮಾಜವನ್ನು ಸರ್ಕಾರಗಳು ಪ್ರತ್ಯೇಕವಾಗಿ ನೋಡಬೇಕಿತ್ತು. ಉಡುಪಿ, ದಕ್ಷಿಣ ಕನ್ನಡ, ಕೊಡಗು.ಚಿಕ್ಕಮಗಳೂರು, ಹಾಸನ ಸೇರಿ ಹಲವೆಡೆ ಹೆಚ್ಚಾಗಿ ವಾಸವಾಗಿದ್ದಾರೆ. ಇವರಿಗೆ ಪ್ರತ್ಯೇಕವಾಗ ಸೌಲಭ್ಯಗಳು ಸಿಗಬೇಕು ಒಳಮೀಸಲಾತಿ ಹಾಗು ಸರ್ಕಾರದ ಯೋಜನೆಗಳಲ್ಲಿ ಬೇರೆ ತಳಮಟ್ಟದ ಸಮುದಾಯದಂತೆ ಇವರಿಗೂ ಅವಕಾಶಗಳು ಸಿಗುವಂತಾಗ ಬೇಕು.ಹಾಗೆ ಜಿಲ್ಲೆಯಲ್ಲಿ ಸಮಾಜಕ್ಕೆ ಒಂದು ಸಮುಧಾಯ ಭವನ ಬೇಕು ಎಂದು ಮುಂಡಾಲ ಸಮಾಜದ ಮುಖಂಡರು.ಬೇಡಿಕೆ ಇಟ್ಟಿದ್ದು ತಾವು ಶಕ್ತಿಮೀರಿ ಈ ಬೇಡಿಕೆ ಈಡೇರಿಕೆಗೆ ಪ್ರಯತ್ನಿಸುವುದಾಗಿ ತಿಳಿಸಿದ್ದರು.
ಶಾಸಕರಾದ ಹೆಚ್.ಡಿ ತಮ್ಮಯ್ಯ ಮಾತನಾಡಿ, ಸರ್ಕಾರ ಒಳ ಮೀಸಲಾತಿ ಜಾರಿಗೆ ತಂದಂತಹ ಸಂದರ್ಭದಲ್ಲಿ ಮುಂಡಾಲ ಸಮಾಜವನ್ನು ಪ್ರತ್ಯೇಕವಾಗಿ ಒಳಮೀಸಲಾತಿಗೆ ಸೇರಿಸಬೇಕೆಂದು ಹಲವು ಮುಖಂಡರು ಹೇಳಿದ್ದಾರೆ ಇದಕ್ಕೆ ನನ್ನ ಸಹಮತವಿದೆ. ಈ ಮುಂಡಾಲ ಸಮಾಜವು ಮೂಲ ದೈವಾರಾಧನೆಯನ್ನು ದಕ್ಷಿಣ ಕನ್ನಡ ಭಾಗದಿಂದ ಬಂದಿದ್ದರು.ಈ ಭಾಗಗಳಲ್ಲಿ ಬಬ್ಬುಸ್ವಾಮಿಯ ದೇವಾಲಯಗಳನ್ನು ಇವರು ಮಾಡಿದ್ದಾರೆ ಆ ಮೂಲಕ ಭಕ್ತಿ ದೇವರನ್ನು ಉಳಿಸಿದ್ದಾರೆ.
ಈ ಜನಾಂಗವರು ಪ್ರಾಮಾಣಿಕಥೆಗೆ ಹೆಸರಾಗಿದ್ದಾರೆ.ನಾನು ಶಾಸಕನಾಗಿ ಬಂದಮೇಲೆ ಸಣ್ಣ ಸಣ್ಣ ಸಮುದಾಯಗಳನ್ನು ಗುರುತಿಸಿ ಸಹಾಯ ಮಾಡುವ ಕೆಲಸ ಮಾಡಿದ್ದೇನೆ. ಮುಂಡಾಲ ಸಮಾಜದವರು ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಕೇಳಿದ್ದಾರೆ ಜನಾಂಗದವರು ಹೆಚ್ಚಿರುವ ಸ್ಥಳದಲ್ಲಿ ಜಾಗ ಗುರುತಿಸಿಕೊಟ್ಟರೆ ಆ ಜಾಗವನ್ನು ಮುಂಡಾಲ ಸಮಾಜಕ್ಕೆ ಇನ್ನೆರೆಡು ವರ್ಷದಲ್ಲಿ ಮಂಜೂರು ಮಾಡಿ ಕೊಡುವ ಭರವಸೆ ನೀಡಿದರು.
ಇನ್ನು ಅರಿಶಿಣಗುಪ್ಪೆ ಮತ್ತು ಗಾಳಿ ಪೂಜೆಯ ಬಬ್ಬುಸ್ವಾಮಿ ದೇವಾಲಯಗಳ ಕಾಮಗಾರಿಗೆ ತಲಾ ೧೦ ಲಕ್ಷ ರೂ ಅನುಧಾನ ಮಂಜೂರು ಮಾಡಿಸಿದ್ದೇನೆ.ಮುಂದೆ ಕೂಡ ಈ ಸಮಾಜದ ಬೇಡಿಕೆಗಳೀಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತೇನೆ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್. ಎಲ್ ಭೋಜೇಗೌಡ ಮಾತನಾಡಿ ಈ ಸಮಾಜದ ಜನಾಂಗದ ಬೇಡೆಕೆಗೆ ಸರ್ಕಾರ ಸ್ಪಂದಿಸಬೇಕು. ನನ್ನ ಮುಂದೆ ಹಲವು ಬೇಡಿಕೆ ಮುಂದಿಟ್ಟಿದ್ದಾರೆ ಅಲ್ಲದೆ ಸಮುದಾಯ ಭವನ ನಿರ್ಮಾಣಕ್ಕೆ ಸಹಾಯ ಕೇಳಿದ್ದು ಆರ್ಥಿಕವಾಗಿ ಸಹಾಯ ಮಾಡುವುದಾಗಿ ತಿಳಿಸಿದರು.
ಮುಂಡಾಲ ಸಮಾಜದ ಜಿಲ್ಲಾಧ್ಯಕ್ಷ ವೈ. ಜಿ ಸುರೇಶ್ ಮಾತನಾಡಿ, ಮುಂಡಾಲ ಸಮುದಾಯಕ್ಕೆ ಜಿಲ್ಲಾ ಮಟ್ಟದಲ್ಲಿ ಒಂದು ಉತ್ತಮ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಕಟ್ಟಡ ನಿರ್ಮಣಕ್ಕೆ ಅನುದಾನ ಮುಂಜೂರು ಮಾಡುವಂತೆ ಬೇಡಿಕೆ ಮುಂದಿಟ್ಟರು. ತಾಲೂಕು ಅಧ್ಯಕ್ಷರಾದ ವಿಜಯಕುಮಾರ್ ಎರೇಹಳ್ಳ ಮಾತನಾಡಿ ಮುಂಡಾಲ ಸಮಾಜದ ಜನರು ಒಗ್ಗಟಾಗಿ ಸಂಘಟಿತರಾಗಬೇಕು ರಾಜಕೀಯವಾಗಿ ಆರ್ಥಿಕವಾಗಿ ಹಾಗು ಶೈಕ್ಷಣಿಕವಾಗಿ ಮುಂದುವರೆಯಬೇಕು. ಸಮಾಜದ ಜನರು ನಮ್ಮ ಸಭೆ, ಚರ್ಚೆ ಕಾರ್ಯಕ್ರಮಗಳೀಗೆ ಆಗಮಿಸಿ ಪಾಲ್ಗೊಳ್ಳಬೇಕು ಆಗ ಮಾತ್ರ ಏಳಿಗೆ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಆನೇಕ ಗಣ್ಯರನ್ನು ಹಾಗೂ ಪಿ.ಯು.ಸಿಯಲ್ಲಿ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಗರ ಅಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಮಂಜೇಗೌಡ, ಅನಿಲ್‌ಶಾಸ್ತ, ದಾನೇಶ್, ಮಂಜುನಾಥ್ ಬಿ.ಜೆ.ಪಿ ಮಾಧ್ಯಮ ಸಹ ಪ್ರಮುಖ್, ದೀಪಕ್, ಕಾಂಗ್ರೆಸ್ ಮುಖಂಡ ಡಿ.ಸುರೇಶ್, ಜೆ.ಡಿ ಲೋಕೇಶ್, ಅವಿಲ ಚಂದ್ರಶೇಖರ್, ಮಾಲ, ವಿನೋದನಾಗೇಶ್, ಮುಂಡಾಲ ಸಮಾಜ ಉಪಾಧ್ಯಕ್ಷ ರಘು ಕೆ.ಎನ್,ಕಾರ್ಯದರ್ಶಿ ರಮೇಶ್ ಭಾಗವಸಿದ್ದರು. ಜಿ.ಸಿ ಲಕ್ಷ್ಮಣ್ ಪ್ರಾಸ್ತಾವಿಸಿದರು ಸಂತೋಷ್ ನಿರೂಪಿಸಿದರು.
The contribution of the Mundala community to the Hindu culture of India is immense.
Leave a comment