Home namma chikmagalur chikamagalur ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಸಾವು
chikamagalurCrime NewsHomeLatest Newsnamma chikmagalur

ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಸಾವು

Share
Share

ಚಿಕ್ಕಮಗಳೂರು:  ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಇಬ್ಬರು ವ್ಯಕ್ತಿಗಳು ಸಾವಪ್ಪಿದ್ದಾರೆ.

ಶಾರದಾ ಎಂಬುವರ ಮಗ ಪ್ರದೀಪ್ ಬೈಕಿನಲ್ಲಿ ಮನೆಯಿಂದ ಕಾರ್ಕಳಕ್ಕೆ ಸಂಬಂಧಿಕರ ಮನೆಯಲ್ಲಿ ದೇವತಾ ಕಾರ್ಯಕ್ಕೆ ಹೋಗಲು ವಿದ್ಯಾರಣ್ಯಪುರ ದುರ್ಗಾದೇವಸ್ಥಾನ ಬಂದಿದ್ದು ಅಲ್ಲಿಂದ ಮಹೇಶ್ ಎಂಬುವರ ಜೊತೆಗೆ ಬೈಕಿನಲ್ಲಿ ಹಿಂಬದಿ ಕುಳಿತು ಪ್ರಯಾಣಿಸುತ್ತಿದ್ದಾಗ ತನಿಕೋಡು ಗೇಟಿಂದ ಸುಮಾರು ೪ ಕಿಲೋಮೀಟರ್ ದೂರದ ಸುಂಕದಮಕ್ಕಿ ಗ್ರಾಮದ ಗೋಪಾಲ್ ಅವರ ಮನೆಯ ಮುಂಭಾಗ ಕಾರ್ಕಳ ಕಡೆಯಿಂದ ಯಾವುದೋ ಒಂದು ಲಾರಿ ಬಂದಿದ್ದು, ಆ ಲಾರಿಗೆ ಸೈಡ್ ಕೊಡಲು ಹೋಗಿದ್ದರಿಂದ ಚಾಲಕ ಮಹೇಶ್ ಅವರ ಅಜಾಗರುಕತೆ ಚಾಲನೆಯಿಂದ ಎಡಬದಿಗೆ ಅಯಾತಪ್ಪಿ ಬೈಕಿನ ಸಮೇತವಾಗಿ ಇಬ್ಬರು ಬಿದ್ದ ಪರಣಾಮ ಬೈಕಿನ ಹಿಂಭಾಗ ಕುಳಿತ್ತಿದ್ದ ಪ್ರದೀಪ್‌ನ ತಲೆ ಹಿಂಭಾಗಕ್ಕೆ ರಸ್ತೆಯ ಅಂಚು ತಾಗಿ ಬಲವಾದ ಪೆಟ್ಟುಬಿದ್ದು ರಕ್ತಗಾಯವಾಗಿರುತ್ತದೆ ಬೈಕಿನ ಚಾಲಕ ಮಹೇಶನಿಗೂ ಸಣ್ಣಪುಟ್ಟ ಗಾಯಗಳಾಗಿರುತ್ತದೆ.

ಕೂಡಲೇ ಸಾರ್ವಜನಿಕರು ಯಾವುದೋ ವಾಹನದಲ್ಲಿ ಶೃಂಗೇರಿ ಅಭಿನವ ವಿದ್ಯಾತೀರ್ಥ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿದ್ದು ನಂತರ ಚಿಕಿತ್ಸೆ ಫಲಕಾರಿಯಾಗದೆ ಪ್ರದೀಪ ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿರುತ್ತಾರೆ. ಮೃತರ ತಾಯಿನೀಡಿರುವ ದೂರನ್ನು ಶೃಂಗೇರಿ ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಚಿಕ್ಕಮಗಳೂರು ನಗರದ ಮೊಹಮ್ಮದ್ ಹಿಮರೂಜ್ ಎಂಬುವರು ಮನೆಯಿಂದ ೬೦ ಅಡಿ ರಸ್ತೆಯಲ್ಲಿರುವ ಪಂಚರ್ ಅಂಗಡಿಗೆ ಕೆಲಸಕ್ಕೆಂದು ಹೋಗಿದ್ದು ಲಾರಿಗೆ ಪಂಕ್ಚರ್ ಹಾಕುತ್ತಿದ್ದಾಗ ಹಿಂಬದಿಯಿಂದ ರಿವರ್ಸ್ ಬಂದ ಮಹೀಂದ್ರಾ ಪಿಕ್‌ಅಪ್ ವಾಹನ ಚಾಲಕ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ವಾಹನ ಚಲಾಯಿಸಿಕೊಂಡು ಬಂದು ಮೊಹಮ್ಮದ್ ಹಿಮರೂಜ್ ಅವರ ಮೇಲೆ ವಾಹನ ಹತ್ತಿರುತ್ತದೆ.

ನಂತರ ಅಲ್ಲೆ ಸ್ಥಳದಲ್ಲಿದ್ದ ಲಾರಿಯ ಡೈವರ್ ಹಾಗೂ ಸ್ಥಳೀಯ ಸಾರ್ವಜನಿಕರು ಯಾವುದೋ ಆಟೋದಲ್ಲಿ ಮೊಹಮ್ಮದ್ ಹಿಮರೂಜ್ ಅವರನ್ನು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಮೊಹಮ್ಮದ್ ಹಿಮರೂಜ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.ಮೃತರ ಪತ್ನಿ ಶಾಬಿನಾನಾಜ್ ನೀಡಿರುವ ದೂರನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

Two killed in separate accidents

Share

Leave a comment

Leave a Reply

Your email address will not be published. Required fields are marked *

Don't Miss

ಮುಸ್ಲಿಂ ಕುಟುಂಬ ಇಲ್ಲದ ಬಿ. ಹೊಸಹಳ್ಳಿ ಗ್ರಾಮದಲ್ಲಿ ಮೊಹರಂ ಆಚರಣೆ

ಚಿಕ್ಕಮಗಳೂರು: ಕಾಫಿನಾಡಿನ ಮೂಡಿಗೆರೆ ತಾಲ್ಲೂಕಿನ ಬಿ. ಹೊಸಹಳ್ಳಿ ಗ್ರಾಮದಲ್ಲಿ ಈ ಬಾರಿಯ ಮೊಹರಂ ಹಬ್ಬವು ಭಕ್ತಿ, ಸಂಭ್ರಮ ಹಾಗೂ ಅಭೂತಪೂರ್ವ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ. ಸುಮಾರು 100 ವರ್ಷಗಳ ಸುದೀರ್ಘ ಇತಿಹಾಸ...

ಜಿಲ್ಲಾ ಆಟದ ಮೈದಾನದ ಬಳಿ ಎ.ಎಸ್.ಐ ಮೇಲೆ ಹಲ್ಲೆ

ಚಿಕ್ಕಮಗಳೂರು: ಜಿಲ್ಲಾ ಆಟದ ಮೈದಾನದ ಗೇಟ್ ಮುಂಭಾಗದ ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಮಹೀಂದ್ರ ಥಾರ್ ಜೀಪನ್ನು ಅಡ್ಡವಾಗಿ ನಿಲ್ಲಿಸಿ ಗಲಾಟೆ ಮಾಡಿಕೊಳ್ಳುತ್ತಿದ್ದ ಇಬ್ಬರು ವ್ಯಕ್ತಿಗಳು, ಬುದ್ದಿ ಹೇಳಲು ಹೋದ ಎ.ಎಸ್.ಐ ಭುವನೇಶ್...

Related Articles

ಧರ್ಮಸ್ಥಳ ಸಂಘದ ಸಾಲದ ವಿಚಾರ-ದಂಪತಿಗಳ ಮೇಲೆ ದೊಣ್ಣೆಗಳಿಂದ ಹಲ್ಲೆ

ಶೃಂಗೇರಿ: ಧರ್ಮಸ್ಥಳ ಸಂಘದ ಸಾಲದ ವಿಚಾರವಾಗಿ ಉಂಟಾದ ಸಣ್ಣ ಭಿನ್ನಾಪ್ರಾಯ ವಿಕೋಪಕ್ಕೆ ತಿರುಗಿ, ದಂಪತಿಗಳ ಮೇಲೆ...

ಕೃಷಿಯನ್ನೇ ಅವಲಂಬಿಸಿರುವ ರೈತರು ಒಗ್ಗಟ್ಟ ಪ್ರದರ್ಶಿಸಿ

ಚಿಕ್ಕಮಗಳೂರು: ಕೃಷಿಯನ್ನೇ ಅವಲಂಬಿಸಿರುವ ರೈತರು ಒಗ್ಗಟ್ಟಿನ ಮಂತ್ರ ಪಠಿಸಬೇಕು. ಪರಸ್ಪರ ಒಡೆದಾಳುವ ನೀತಿ ಅನುಸರಿಸಿದರೆ, ಸರ್ಕಾರಗಳು...

ಜಿಲ್ಲೆಯಲ್ಲಿ 43 ಸಾವಿರಕ್ಕೂ ಹೆಚ್ಚು ಪ್ರಕರಣ ಬಾಕಿ

ಚಿಕ್ಕಮಗಳೂರು: ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲು ಜುಲೈ ೧೧...

ಗವನಹಳ್ಳಿ ಶಾಲೆಯ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ

ಚಿಕ್ಕಮಗಳೂರು: ನಗರದ ಗವನಹಳ್ಳಿ ಶಾಲೆಯ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಒನ್-ವೇನಲ್ಲಿ (ಏಕಮುಖ...