Home namma chikmagalur chikamagalur ಕ್ಷುಲ್ಲಕ ಕಾರಣಕ್ಕೆ ಜಗಳ – ಎರಡು ಕುಟುಂಬಗಳ ನಡುವೆ ಮಾರಾಮಾರಿ
chikamagalurHomeLatest Newsnamma chikmagalur

ಕ್ಷುಲ್ಲಕ ಕಾರಣಕ್ಕೆ ಜಗಳ – ಎರಡು ಕುಟುಂಬಗಳ ನಡುವೆ ಮಾರಾಮಾರಿ

Share
Share

ಕಡೂರು : ಮಕ್ಕಳ ಆಟದ ವಿಚಾರಕ್ಕೆ ಶುರುವಾದ ಸಣ್ಣ ವಾಗ್ವಾದವೊಂದು ಮಚ್ಚು, ಕಲ್ಲು ತೂರಾಟದಂತಹ ಭೀಕರ ಹಲ್ಲೆಯಾಗಿ ಮಾರ್ಪಟ್ಟಿರುವ ಘಟನೆ ಕಡೂರು ತಾಲ್ಲೂಕಿನ ಯಗಟಿ ಪೊಲೀಸ್ ಠಾಣಾ ವ್ಯಾಪ್ತಿಯ ವಕ್ಕಲಗೆರೆ ಬೋವಿಹಟ್ಟಿಯಲ್ಲಿ ನಡೆದಿದೆ.

ಈ ಘಟನೆಗೆ ಸಂಬಂಧಿಸಿದಂತೆ ಕನ್ನಿಕಾ ಕುಟುಂಬದ ವಿರುದ್ಧ ಚೈತ್ರಾ ಅವರು ಪ್ರತಿ ದೂರು ನೀಡಿದ್ದು, ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ದೂರಿನ ಸಾರಾಂಶದಂತೆ, ಚೈತ್ರಾ ಅವರ ತಂಗಿಯ ಮಗ ಗೌತಮ್ ಎಂಬ ಆರು ವರ್ಷದ ಬಾಲಕ ಆಟವಾಡುತ್ತಿದ್ದಾಗ ನೆರೆಮನೆಯ ಕನ್ನಿಕಾ ಎಂಬುವವರು ಮಗುವಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ.

ಇದನ್ನು ಪ್ರಶ್ನಿಸಲು ಹೋದ ಚೈತ್ರಾ ಅವರ ಕೂದಲನ್ನು ಹಿಡಿದು ಎಳೆದಾಡಿದ ಕನ್ನಿಕಾ ಮತ್ತು ಆಕೆಯ ಅಣ್ಣ ಶಿವಕುಮಾರ್, ಕಲ್ಲಿನಿಂದ ಹಲ್ಲೆ ನಡೆಸಿ ರಕ್ತಗಾಯ ಮಾಡಿದ್ದಾರೆ ಎನ್ನಲಾಗಿದೆ. ಗಲಾಟೆ ವಿಕೋಪಕ್ಕೆ ಹೋದಾಗ ಕನ್ನಿಕಾ ಅವರು ಮನೆಯಿಂದ ಮಚ್ಚು ತಂದು ಚೈತ್ರಾ ಅವರ ತಂಗಿ ಶಿಲ್ಪಾ ಅವರ ಕಿವಿಯ ಭಾಗಕ್ಕೆ ಹಲ್ಲೆ ನಡೆಸಿದ್ದಾರೆ ಹಾಗೂ ಮಗಳ ಮೇಲೆಯೂ ತೆಂಗಿನಕಾಯಿಯಿಂದ ಹೊಡೆದಿದ್ದರಿಂದ ಹಲ್ಲು ಮುರಿದು ಗಾಯವಾಗಿದೆ ಎಂದು ಚೈತ್ರಾ ದೂರಿನಲ್ಲಿ ವಿವರಿಸಿದ್ದಾರೆ.

ಸದ್ಯ ಹಲ್ಲೆಗೊಳಗಾದವರು ಕಡೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಜಗಳಕ್ಕೆ ಭದ್ರ ಎಂಬುವವರ ಕುಮ್ಮಕ್ಕೇ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ಈ ಸಂಬಂಧ ಯಗಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಒಂದೇ ಹಳ್ಳಿಯ ನೆರೆಮನೆಯವರು ಸಣ್ಣ ಕಾರಣಕ್ಕೆ ಈ ರೀತಿ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

A fight over a trivial reason – a fight between two families

Share

Leave a comment

Leave a Reply

Your email address will not be published. Required fields are marked *

Don't Miss

ಆ.21 ರಿಂದ ಸಮಾಧಾನ್ ಸಮಾರೋಹ್ ವಿಶೇಷ ಲೋಕ ಅದಾಲತ್

ಚಿಕ್ಕಮಗಳೂರು: ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಶೀಘ್ರ ವಿಲೇವಾರಿಗಾಗಿ ‘ಸಮಾಧಾನ್ ಸಮಾರೋಹ್’ ಶೀರ್ಷಿಕೆಯಡಿ ವಿಶೇಷ ಲೋಕ ಅದಾಲತ್ ಅನ್ನು ಆಗಸ್ಟ್ ೨೧, ೨೨ ಹಾಗೂ ೨೩ ರಂದು ಆಯೋಜಿಸಲಾಗಿದೆ ಎಂದು...

ಮುತ್ತಿನಕೊಪ್ಪ ಗ್ರಾಮದ ಶಂಕರಪುರದಲ್ಲಿ ಕಳ್ಳತನ

ಎನ್.ಆರ್.ಪುರ : ಮುತ್ತಿನಕೊಪ್ಪ ಗ್ರಾಮದ ಶಂಕರಪುರದಲ್ಲಿ ಕಳ್ಳತನ ನಡೆದಿದೆ. ಸುಗಂಧಿ ಎಂಬುವವರ ಮಗಳು ರಕ್ಷಾ ಅವರು ಮದುವೆ ಕಾರ್ಯಕ್ರಮಕ್ಕಾಗಿ ಬ್ಯಾಂಕ್‌ನಿಂದ ಬಿಡಿಸಿಕೊಂಡು ಬಂದಿದ್ದ ಒಡವೆಗಳನ್ನು ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಲಾಗಿದ್ದು ಮಂಗಳವಾರ...

Related Articles

ನಾಗರಿಕ ವೇದಿಕೆಯಿಂದ ಪ್ರತಿಭಟನೆ ಖಂಡನೆ

ತರೀಕೆರೆ: ಸಂವಿಧಾನ ಸಾರ್ವಜನಿಕರು ಆರೋಗ್ಯಕರವಾಗಿ ಪ್ರತಿಭಟಿಸಲು ಅವಕಾಶ ಕಲ್ಪಿಸಿದೆ. ಆದರೆ ಅದನ್ನು ದುರ್ಬಳಕೆ ಮಾಡಿಕೊಂಡು ಕಳೆದ...

ಅಂಬೇಡ್ಕರ್ ಜಯಂತಿಗೆ ಅಡ್ಡಿ : ಆರೋಪಿಗಳ ಬಂಧನಕ್ಕೆ ಪ್ರತಿಭಟನೆ

ಚಿಕ್ಕಮಗಳೂರು:  ಅಂಬೇಡ್ಕರ್ ಜಯಂತಿಗೆ ಅಡ್ಡಿಪಡಿಸಿರುವ ಆರೋಪಿಗಳನ್ನು ಬಂಧನಕ್ಕೆ ಒಳಪಡಿಸಬೇಕು ಎಂದು ಒತ್ತಾಯಿಸಿ ದಲಿತ ಸಂಘಟನೆಗಳ ಒಕ್ಕೂಟದ...

ಸಂವಿಧಾನದ ಆಶಯ ಕಗ್ಗೊಲೆ ಮಾಡುತ್ತಿರುವ ಸಿಎಂ

ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ವೋಟು ಡಕಾಯಿತಿ ಆಗಿದೆ ಎಂಬ ಪದ ಬಳಕೆ ಮಾಡುವ ಮೂಲಕ...

ಪಹಣಿ ತಿದ್ದುಪಡಿ ಸಮಸ್ಯೆ ನಿವಾರಣೆಗೆ ರೈತರ ಪರದಾಟ

ಚಿಕ್ಕಮಗಳೂರು: ಕಾಫಿನಾಡಿನ ರೈತರಿಗೆ ಒಂದೆಡೆ ಯೂರಿಯಾ ಗೊಬ್ಬರದ ಸಮಸ್ಯೆಯಾದರೆ ಮತ್ತೊಂದೆಡೆ ಪಹಣಿ ತಿದ್ದುಪಡಿ ಸಮಸ್ಯೆಯಿಂದಾಗಿ ಈ...