Home namma chikmagalur chikamagalur “ಕುರ್ಚಿ” ಮಹಾತ್ಮೆ: ಶೃಂಗೇರಿಯಲ್ಲಿ ಕಾಂಗ್ರೆಸ್ VS ಬಿಜೆಪಿ ದಂಗಲ್
chikamagalurHomeLatest Newsnamma chikmagalur

“ಕುರ್ಚಿ” ಮಹಾತ್ಮೆ: ಶೃಂಗೇರಿಯಲ್ಲಿ ಕಾಂಗ್ರೆಸ್ VS ಬಿಜೆಪಿ ದಂಗಲ್

Share
Share

ಶೃಂಗೇರಿ: ಶೃಂಗೇರಿ ಕ್ಷೇತ್ರದಲ್ಲಿ ಕಳೆದ ಮೂರು ವರ್ಷಗಳಿಂದ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಮತ್ತು ಬಿಜೆಪಿಯ ಮಾಜಿ ಶಾಸಕ ಜೀವರಾಜ್ ಮಧ್ಯೆ ಕಿತ್ತಾಟ,ಕಿರುಚಾಟ, ಪೊಲೀಸ್ ಠಾಣೆ ಮತ್ತು ನ್ಯಾಯಾಲಯ ಹೀಗೆ ಸಾಗಿ ಬಂದು ಮತ್ತೊಂದು ಮಗ್ಗಲು ಬದಲಾಯಿಸಿದೆ.

2023ರಲ್ಲಿ ಟಿ.ಡಿ.ರಾಜೇಗೌಡರು ಕೇವಲ 201 ಮತಗಳಿಂದ ಜಯಗಳಿಸಿ ಶಾಸಕರಾದರು.ಅಂದೇ ಪರಾಜಿತ ಅಭ್ಯರ್ಥಿ ಜೀವರಾಜ್ ಮರು ಮತ ಎಣಿಕೆ ಮಾಡಲು ಒತ್ತಯಿಸಿ ಅರ್ಜಿ ನೀಡಿದ್ದರು ಅಲ್ಲಿಂದ ಶುರುವಾದ ಲಡಾಯಿ ಕ್ಷೇತ್ರದಲ್ಲಿ ರಾಜಕೀಯ ಬೆಂಕಿ ಜ್ವಾಲೆಯಾಗಿ ಈಗ ಭಸ್ಮ ಆಗುವ ಹಂತಕ್ಕೆ ತಲುಪಿದೆ.ಇದರ ಭಾಗವಾಗಿ ಕೋರ್ಟ್ ನಲ್ಲಿ ದಾವೆ ಹೂಡಿದ ಜೀವರಾಜ್ ಹೈಕೋರ್ಟ್ ನಲ್ಲಿ ಅಂಚೆ ಮತಗಳ ಮರು ಎಣಿಕೆ ಮಾಡಲು ಜಡ್ಜಮೆಂಟ್ ಬಂದಿದೆ.

ಮೇ ಎರಡನೇ ತಾರೀಖು ಮತಗಳ ಎಣಿಕೆ ಪ್ರಾರಂಭಿಸುವಾಗ ಸ್ಟ್ರಾಂಗ್ ಓಪನ್ ಮಾಡುವಾಗ ಚುನಾವಣಾ ಬಾಕ್ಸ್ ಬೀಗ ತೆರೆಯಲಾಗಿದೆ ಡ್ಯಾಮೇಜ ಅಗಿವೆ ಎಂದು ತಕರಾರು ತೆಗೆದವರು ಸುಮ್ಮನಾಗಿದ್ದು ಏಕೆ ? ಕೇವಲ 279 ಮತ ಎಣಿಕೆ ಮುಗಿಯುವ ಮುನ್ನವೇ ಗೆದ್ದಾಗಿದೆ ಎಂದು ಮೆರವಣಿಗೆ ನಡೆಸಿ ಪಟಾಕಿ ಸಿಡಿಸಿದ್ದು ರಾಜೇಗೌಡರ ಕಡೆಯವರ ಆತುರ ತೋರಿಸುತ್ತಿದೆ.ಆದರೆ ಟೇಬಲ್ ಮುಂದೆ ಕುಳಿತ ಜೀವರಾಜ್ 1500 ಹೆಚ್ಚು ಅಂಚೆ ಮತಗಳನ್ನು ಎಣಿಸಲು ಒತ್ತಾಯಿಸಿ ಸಂಪೂರ್ಣ ಮತಗಳ ಎಣಿಕೆ ಮುಗಿದ ಮೇಲೆ 52 ಮತಗಳ ಅಂತರದಿಂದ ಗೆಲುವು ಖಚಿತವಾದ ಮೇಲೆ ಹೋಗಿದ್ದಾರೆ. ಇದರ ಮಧ್ಯೆ ಮತ ಎಣಿಕೆ ಕೇಂದ್ರದ ಮುಂದೆ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿಗರ ಮಧ್ಯೆ ಕಿತ್ತಾಟ ಕೂಗಾಟ ನಡೆದು ಪೊಲೀಸರು ಹೈರಾಣಾಗಿ ಹೋಗಿದ್ದಾರೆ.

ಜೀವರಾಜ್ ಗೆಲುವನ್ನು ಚುನಾವಣಾಧಿಕಾರಿ ಮಾಧ್ಯಮದವರಿಗೆ ತಿಳಿಸಿದ್ದಾರೆ.ನಂತರ ನಡೆದ ಬೆಳವಣಿಗೆಗಳು ರಾಜ್ಯ ಮಟ್ಟಕ್ಕೆ ಶಿಫ್ಟ್ ಆಗಿವೆ.ಅಡಳಿತ ಮತ್ತು ವಿಪಕ್ಷಗಳ ಮಧ್ಯೆ ನಿಂರತರ ಸಮರ ನಡೆಯುತ್ತಿದೆ. ಗೆದ್ದ ಅಭ್ಯರ್ಥಿಗೆ ಸರ್ಟಿಫಿಕೇಟ್ ನೀಡಲು ಸತಾಯಿಸಿದಾಗ ಲೀಗಲ್ ನೋಟೀಸ್ ಕೊಟ್ಟ ನಂತರ ಸರ್ಟಿಫಿಕೇಟ್ ಕೊಡಲಾಗಿದೆ.ಈಗ ವಿಧಾನ ಸಭಾ ಸದಸ್ಯರಾಗಿ ಪ್ರಮಾಣ ವಚನ ನೀಡದೆ ಸತಾಯಿಸಲಾಗುತ್ತಿದೆ ಎಂದು ರಾಜ್ಯಪಾಲರ ಬಳಿ ದೂರಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇದು ಬಿಜೆಪಿಯವರ ಮತ ಚೋರಿಯಲ್ಲ ಡಖಾಯಿತಿ ಎಂದು ಟೇಬಲ್ ಗುದ್ದುತ್ತಿದ್ದಾರೆ.ಇದರ ಮಧ್ಯೆ ಚಿಕ್ಕಮಗಳೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿಗೆ ಹೈಕೋರ್ಟ್ ಸ್ಟೇ ನೀಡಿದೆ.ಇಬ್ಬರಿಗೂ ಪ್ರತಿಷ್ಟೇ ನಿಜಾ ಇದು ಸದ್ಯಕ್ಕೆ ನಿಲ್ಲುವ ಲಕ್ಷಣಗಳಿಲ್ಲಾ.ರಾಜ್ಯ ಸರ್ಕಾರ ಮತ್ತು ವಿರೋಧ ಪಕ್ಷಗಳು ಪ್ರತಿಷ್ಠೆಯಾಗಿ ಪರಿಗಣಿಸಿರುವುದರಿಂದ ರಾಜಕೀಯ ಬೆಂಕಿ ಜ್ವಾಲೆ ಹೆಚ್ಚಾಗುತ್ತಿದೆ.ಉಳಿದಿರುವ ಎರಡು ವರ್ಷದ ಅಧಿಕಾರ ಯಾರಿಗೆ ದೊರೆಯುತ್ತದೆ ಎಂದರೆ ನ್ಯಾಯಾಲಯವೇ ಅಂತಿಮ ಜಡ್ಜಮೆಂಟ್ ನೀಡಬೇಕು.

ಅತ್ತು ಕರೆದು ಒತ್ತಾಯ ಮಾಡಿ ಇಂದು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.ಇನ್ನೂ ಮುಂದೆ ಮುಂದುವರೆಯಲಿದೆ ಮಾರಿ ಹಬ್ಬ ಏಕೆಂದರೆ ಘಾಸಿಗೊಂಡಿರುವ ರಾಜೇಗೌಡ ಮತ್ತು ಕಾಂಗ್ರೆಸ್ ಸರ್ಕಾರ ಇರುವುದರಿಂದ ಎಲ್ಲದಕ್ಕೂ ಆಡ್ಡಗಾಲು ಹಾಕುತ್ತಾರೆ. ಬಿಜೆಪಿಯವರು ಪ್ರತಿಭಟನೆ ಮಾಡುತ್ತಾರೆ ಹೀಗೆ ಎರಡು ವರ್ಷ ಕಾಂಗ್ರೆಸ್ ಮತ್ತು ಬಿಜೆಪಿ ಕಿತ್ತಾಟ,ಕೂಗಾಟ ಕೇಳ ಬೇಕಾದ ಅನಿವಾರ್ಯ ಕ್ಷೇತ್ರದ ಜನರಿಗಿದೆ.

Congress VS BJP clash in Sringeri

Share

Leave a comment

Leave a Reply

Your email address will not be published. Required fields are marked *

Don't Miss

ಮುಸ್ಲಿಂ ಕುಟುಂಬ ಇಲ್ಲದ ಬಿ. ಹೊಸಹಳ್ಳಿ ಗ್ರಾಮದಲ್ಲಿ ಮೊಹರಂ ಆಚರಣೆ

ಚಿಕ್ಕಮಗಳೂರು: ಕಾಫಿನಾಡಿನ ಮೂಡಿಗೆರೆ ತಾಲ್ಲೂಕಿನ ಬಿ. ಹೊಸಹಳ್ಳಿ ಗ್ರಾಮದಲ್ಲಿ ಈ ಬಾರಿಯ ಮೊಹರಂ ಹಬ್ಬವು ಭಕ್ತಿ, ಸಂಭ್ರಮ ಹಾಗೂ ಅಭೂತಪೂರ್ವ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ. ಸುಮಾರು 100 ವರ್ಷಗಳ ಸುದೀರ್ಘ ಇತಿಹಾಸ...

ಜಿಲ್ಲಾ ಆಟದ ಮೈದಾನದ ಬಳಿ ಎ.ಎಸ್.ಐ ಮೇಲೆ ಹಲ್ಲೆ

ಚಿಕ್ಕಮಗಳೂರು: ಜಿಲ್ಲಾ ಆಟದ ಮೈದಾನದ ಗೇಟ್ ಮುಂಭಾಗದ ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಮಹೀಂದ್ರ ಥಾರ್ ಜೀಪನ್ನು ಅಡ್ಡವಾಗಿ ನಿಲ್ಲಿಸಿ ಗಲಾಟೆ ಮಾಡಿಕೊಳ್ಳುತ್ತಿದ್ದ ಇಬ್ಬರು ವ್ಯಕ್ತಿಗಳು, ಬುದ್ದಿ ಹೇಳಲು ಹೋದ ಎ.ಎಸ್.ಐ ಭುವನೇಶ್...

Related Articles

ಧರ್ಮಸ್ಥಳ ಸಂಘದ ಸಾಲದ ವಿಚಾರ-ದಂಪತಿಗಳ ಮೇಲೆ ದೊಣ್ಣೆಗಳಿಂದ ಹಲ್ಲೆ

ಶೃಂಗೇರಿ: ಧರ್ಮಸ್ಥಳ ಸಂಘದ ಸಾಲದ ವಿಚಾರವಾಗಿ ಉಂಟಾದ ಸಣ್ಣ ಭಿನ್ನಾಪ್ರಾಯ ವಿಕೋಪಕ್ಕೆ ತಿರುಗಿ, ದಂಪತಿಗಳ ಮೇಲೆ...

ಕೃಷಿಯನ್ನೇ ಅವಲಂಬಿಸಿರುವ ರೈತರು ಒಗ್ಗಟ್ಟ ಪ್ರದರ್ಶಿಸಿ

ಚಿಕ್ಕಮಗಳೂರು: ಕೃಷಿಯನ್ನೇ ಅವಲಂಬಿಸಿರುವ ರೈತರು ಒಗ್ಗಟ್ಟಿನ ಮಂತ್ರ ಪಠಿಸಬೇಕು. ಪರಸ್ಪರ ಒಡೆದಾಳುವ ನೀತಿ ಅನುಸರಿಸಿದರೆ, ಸರ್ಕಾರಗಳು...

ಜಿಲ್ಲೆಯಲ್ಲಿ 43 ಸಾವಿರಕ್ಕೂ ಹೆಚ್ಚು ಪ್ರಕರಣ ಬಾಕಿ

ಚಿಕ್ಕಮಗಳೂರು: ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲು ಜುಲೈ ೧೧...

ಗವನಹಳ್ಳಿ ಶಾಲೆಯ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ

ಚಿಕ್ಕಮಗಳೂರು: ನಗರದ ಗವನಹಳ್ಳಿ ಶಾಲೆಯ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಒನ್-ವೇನಲ್ಲಿ (ಏಕಮುಖ...