Home namma chikmagalur chikamagalur ಅಂಬೇಡ್ಕರ್ ಜಯಂತಿಗೆ ಅಡ್ಡಿ ಕ್ರಮಕ್ಕೆ ದಲಿತ ಸಂಘರ್ಷ ಸಮಿತಿ ಆಗ್ರಹ
chikamagalurHomeLatest Newsnamma chikmagalur

ಅಂಬೇಡ್ಕರ್ ಜಯಂತಿಗೆ ಅಡ್ಡಿ ಕ್ರಮಕ್ಕೆ ದಲಿತ ಸಂಘರ್ಷ ಸಮಿತಿ ಆಗ್ರಹ

Share
Share

ಚಿಕ್ಕಮಗಳೂರು: ಮರ್ಲೆಹೊಸಕೋಟೆಯಲ್ಲಿ ಕಂದಾಯ ಜಾಗದಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಲು ಮುಂದಾಗಿದ್ದಾಗ ಧ್ವಜಗಳನ್ನು ತೆರವುಗೊಳಿಸಿದ ಗ್ರಾಮಲೆಕ್ಕಿಗರು ಮತ್ತು ರಾಜಸ್ವನಿರೀಕ್ಷರನ್ನು ಅಮಾನತುಪಡಿಸಬೇಕು. ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಸವರ್ಣೀಯರ ಮೇಲೆ ದೌರ್ಜನ್ಯಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ದಲಿತ ಸಂಘರ್ಷ ಸಮಿತಿ ಮುಖಂಡ ಮರ್ಲೆ ಅಣ್ಣಯ್ಯ ಒತ್ತಾಯಿಸಿದರು.

ಸುದ್ದಿಗೋಷ್ಟಿಯಲ್ಲಿ ಬುಧವಾರ ಮಾತನಾಡಿ, ಏ ೧೪ರಂದು ಬೆಳಿಗ್ಗೆ ಪರಿಶಿಷ್ಟರು ಅಂಬೇಡ್ಕರ್ ಜಯಂತಿ ಆಚರಿಸಲು ಕಂದಾಯ ಇಲಾಖೆಗೆ ಸೇರಿದ ಖಾಲಿಜಾಗದಲ್ಲಿ ಮುಂದಾದಾಗ ಸವರ್ಣೀಯರು ಮಹಿಳೆಯರನ್ನು ಮುಂದೆ ಬಿಟ್ಟು ಜಯಂತಿ ಆಚರಿಸಲು ಅಡ್ಡಿಪಡಿಸಿದ್ದಾರೆಂದು ದೂರಿದರು.

ಕೆಲವು ಸವರ್ಣಿಯರು ಅಂಬೇಡ್ಕರ್ ಭಾವಚಿತ್ರಕ್ಕೆ ಬೆಂಕಿ ಹಚ್ಚಲು ಪ್ರಚೋದಿಸಿದ್ದಾರೆ. ಪರಿಶಿಷ್ಟರಿಗೆ ಬಹಿಷ್ಕಾರ ಹಾಕಬೇಕು. ಊರಿನಿಂದ ಹೊರಹಾಕಬೇಕೆಂದು ನಿಂದಿಸಿದ್ದಾರೆ. ಅಂಬೇಡ್ಕರ್ ಭಾವಚಿತ್ರಕ್ಕೆ ಹಾನಿಪಡಿಸಿದ್ದಾರೆ, ನೀಲಿಬಾವುಟವನ್ನು ಕಿತ್ತುಹಾಕಿದ್ದಾರೆ. ದೀಪದ ಕಂಬವನ್ನು ಬಿಸಾಕಿದ್ದಾರೆಂದು ಆರೋಪಿಸಿದರು.

ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿಗಳು ತಹಸೀಲ್ದಾರ್ ಅವರನ್ನು ಸ್ಥಳಕ್ಕೆ ಕಳುಹಿಸಿ ಜಯಂತಿ ಆಚರಿಸಲು ಅವಕಾಶ ನೀಡಲು ಸೂಚಿಸಿದ್ದಾರೆ. ಅಧಿಕಾರಿ ಸ್ಥಳಕ್ಕೆ ಬಂದಾಗ, ಪೊಲೀಸರು ಇದ್ದರು ಜಯಂತಿ ಆಚರಿಸಲು ಸರ್ವರ್ಣಿಯ ಕೆಲವರು ಅಡ್ಡಿಪಡಿಸಿದ್ದಾರೆ. ಬಳಿಕ ಪೊಲೀಸರು ಜನರನ್ನು ಚದುರಿಸಿ ಅಂಬೇಡ್ಕರ್ ಭಾವಚಿತ್ರಕ್ಕೆ ಹಾರಹಾಕಿ ದೀಪಬೆಳಗಿಸಿದ್ದಾರೆಂದು ತಿಳಿಸಿದರು.

ಗ್ರಾಮದ ವಿದ್ಯಾವಂತ ಯುವಕರನ್ನು ಠಾಣೆಗೆ ಬರುವಂತೆ ದೂರವಾಣಿಯಲ್ಲಿ ಒತ್ತಾಯಿಸುತ್ತಿದ್ದು, ಠಾಣೆ ಮೆಟ್ಟಿಲು ತುಳಿದರೆ ಮುಂದಿನ ವಿದ್ಯಾಭ್ಯಾಸಕ್ಕೆ ಎಲ್ಲಿ ತೊಂದರೆಯಾಗುತ್ತದೆ ಎಂದು ಹೆದರುತ್ತಿದ್ದಾರೆ. ಗ್ರಾಮದಲ್ಲಿ ಶಾಂತಿ ನೆಲಸಲು ಪೊಲೀಸ್ ರಕ್ಷಣೆ ನೀಡಬೇಕೆಂದು ಕೋರಿದರು.

ಮುಖಂಡರಾದ ಟಿ.ಎಲ್.ಗಣೇಶ್, ಭೀಮಯ್ಯ, ರೇವಣ್ಣ,ಗ್ರಾಮಸ್ಥರಾದ ಸಿದ್ದಯ್ಯ,. ಆನಂದ್, ಕುಮಾರ್ ಇದ್ದರು.

Dalit Sangharsh Samiti demands action to disrupt Ambedkar Jayanti

Share

Leave a comment

Leave a Reply

Your email address will not be published. Required fields are marked *

Don't Miss

ಸಂಪುಟ ಪುನರ್ರಚನೆ ಹೈಕಮಾಂಡ್ ಗೆ ಬಿಟ್ಟಿದ್ದು

ಚಿಕ್ಕಮಗಳೂರು: ಸಚಿವ ಸ್ಥಾನದ ಆಕಾಂಕ್ಷಿ ಶಾಸಕರು ನವದೆಹಲಿಗೆ ಭೇಟಿ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ. ಸಂಪುಟ ಪುನರ್ರಚನೆ ನಿರ್ಧಾರವನ್ನು ಹೈಕಮಾಂಡ್ ಕೈಗೊಳ್ಳಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಎನ್.ಆರ್.ಪುರ ಪ್ರವಾಸಿ...

ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರ ಸಾವು

ಚಿಕ್ಕಮಗಳೂರು: ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಇಬ್ಬರು ವ್ಯಕ್ತಿಗಳು ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಮೂಡಿಗೆರೆ ಠಾಣಾ ವ್ಯಾಪ್ತಿಯ ಕುನ್ನಳ್ಳಿ ಗ್ರಾಮದ ವಿನೋದ್ (28) ಅವರು ಕೂಲಿ...

Related Articles

ಜನರ ಆಶೀರ್ವಾದದಿಂದ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ

ಕಡೂರು: ರಾಜ್ಯದಲ್ಲಿ ಜೆಡಿಎಸ್ ಅಸ್ತಿತ್ವವನ್ನು ಪ್ರಶ್ನಿಸುವವವರಿಗೆ ಜನರೇ ಮುಂದಿನ ದಿನಗಳಲ್ಲಿ ಉತ್ತರ ನೀಡಲಿದ್ದು, ಜನರ ಆಶೀರ್ವಾದ...

ಜಾತ್ಯತೀತ ಜನತಾದಳ ಸಿದ್ದಾಂತದಲ್ಲಿ ಯಾವುದೇ ಬದಲಾವಣೆ ಇಲ್ಲ

ಚಿಕ್ಕಮಗಳೂರು : ಜಾತ್ಯತೀತ ಜನತಾದಳ ಅನ್ನುವುದು ಅದರ ಘೋಷ ವಾಕ್ಯದಲ್ಲೇ ಇದೆ. ನಮ್ಮ ಸಿದ್ದಾಂತದಲ್ಲಿ ಯಾವುದೇ...

ಮೀನು ಹಿಡಿಯಲು ಹೋಗಿದ್ದ ಇಬ್ಬರು ಯುವಕರು ನೀರು ಪಾಲು

ಚಿಕ್ಕಮಗಳೂರು: ಮೀನು ಹಿಡಿಯಲು ಹೋಗಿದ್ದ ಇಬ್ಬರು ಯುವಕರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ಚಿಕ್ಕಮಗಳೂರು ತಾಲೂಕಿನ...

ಅಜ್ಜಂಪುರ ತಾಲೂಕಿನ ಆಸಂಧಿ ಗ್ರಾಮದಲ್ಲಿ ರೈತರೊಬ್ಬರ ಎತ್ತಿನ ಗಾಡಿ ಕಳ್ಳತನ

ಅಜ್ಜಂಪುರ: ರೈತರೊಬ್ಬರ ಎತ್ತಿನ ಗಾಡಿ ಕಳ್ಳತನವಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಆಸಂಧಿ ಗ್ರಾಮದಲ್ಲಿ...