Home namma chikmagalur Banagalore ನಕಲಿ “ಐ.ಎ.ಎಸ್” ಮಿಥುನ್ ಬಂಧನ
BanagaloreHomeLatest Newsnamma chikmagalur

ನಕಲಿ “ಐ.ಎ.ಎಸ್” ಮಿಥುನ್ ಬಂಧನ

Share
Share

ಬೆಂಗಳೂರು: ಚಿಕ್ಕಮಗಳೂರು ಮೂಲದ ಮಿಥುನ್ ಎಂಬತಾ ಐ.ಎ.ಎಸ್.ನ ನಕಲಿ ದಾಖಲೆ ಸೃಷ್ಟಿ ಮಾಡಿ ಹಲವರಿಗೆ ವಂಚನೆ ಮಾಡಿದ್ದು ಬೆಂಗಳೂರಿನ ಅಮೃತಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಅರೋಗ್ಯ ಇಲಾಖೆಯ ಎನ್.ಹೆಚ್.ಎಮ್.ನ ಉಸ್ತುವಾರಿ ಎಂದು ಹೇಳಿಕೊಂಡ ಮಲ್ಲೇಗೌಡ ಜನರ ಆಸ್ಪತ್ರೆಯಲ್ಲಿ ಠೀಕಾಣೆ ಹೂಡಿದ್ದ ಈತ ಹಲವು ಮೆಡಿಕಲ್ ಶಾಪ್ ನವರನ್ನು ನಂಬಿಸಿ ಮೆಡಿಕಲ್ ಸಪ್ಲೈ ಮಾಡಿಸಿಕೊಡುವುದಾಗಿ ಹಣ ಪಡೆದಿದ್ದಾನೆ ಎನ್ನಲಾಗಿದೆ.

ಶ್ರೇಯಸ್ ಮೆಡಿಕಲ್ ಶಾಪ್ ನ ಸತೀಶ್ ಎಂಬುವರಿಂದ ನಲವತ್ತು ಲಕ್ಷಕ್ಕೂ ಹೆಚ್ಚು ಹಣ ತೆಗೆದುಕೊಂಡು ಮೋಸ ಮಾಡಿದ್ದಾನೆ ಎಂದು ದೂರು ದಾಖಲಾಗಿದೆ.ಇದೇ ರೀತಿಯಲ್ಲಿ ಹಲವರಿಗೆ ವಂಚಿಸಿರುವ ಮಾಹಿತಿಗಳು ಹರಿದಾಡುತ್ತಿವೆ.

ಬೆಂಗಳೂರಿನ ಲಾಡ್ಜ್ ಬಳಿ ಗಲಾಟೆಗೆ ಸಂಬಂಧಿಸಿದಂತೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈತ ನಕಲಿ ದಾಖಲೆ ಸೃಷ್ಟಿ ಮಾಡಿರವುದು ಬೆಳಕಿಗೆ ಬಂದಿದೆ.

ನ್ಯೂಸ್ ಕಿಂಗ್ ನಲ್ಲಿ ಜಿಲ್ಲೆಯ ಮಿಥುನ್ ಐ.ಎ.ಎಸ್.ಮಾಡಿರುವ ಬಗ್ಗೆ ಈ ಹಿಂದೆ ಸುದ್ದಿ ಪ್ರಕಟಿಸಿತ್ತು.ಇದಕ್ಕೂ ಪೂರಕ ದಾಖಲೆ ಪರಿಶೀಲನೆ ಮಾಡಿತ್ತು.ಆದರೆ ಅವನ ವರ್ತನೆ ಮತ್ತು ನಡವಳಿಕೆ ಈತ ಐ.ಎ.ಎಸ್.ಮಾಡಿರಲು ಸಾಧ್ಯವಿಲ್ಲ ಎನ್ನುತ್ತಿರುವಾಗಲೇ ಈತನ ಬಂಧನ ಸುದ್ದಿ ಹೊರ ಬಂದಿದೆ.

ಜಿಲ್ಲೆಯಲ್ಲಿ ಎರಡು ಕೋಟಿಗೂ ಹೆಚ್ಚಿನ ವಂಚನೆ ಮಾಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.ಇನ್ನೂ ಬೆಂಗಳೂರಿನಲ್ಲಿ ಎಷ್ಟು ಜನರಿಗೆ ವಂಚನೆ ಆಗಿದೆ ಎಂಬದು ತಿಳಿದು ಬರಬೇಕಾಗಿದೆ.ಚಿಕ್ಕಮಗಳೂರು ಆಸ್ಪತ್ರೆಯಲ್ಲಿ ಗುತ್ತಿಗೆ ಅಧಾರದ ಮೇಲೆ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳ ಹೆಸರು ಕೇಳಿಬರುತ್ತಿದೆ.

Fake “IAS” Mithun arrested

Share

Leave a comment

Leave a Reply

Your email address will not be published. Required fields are marked *

Don't Miss

ಕ್ಷೇತ್ರ ಪುನರ್ ವಿಂಗಡಣೆ ಪಿಸು-ಪಿಸು, ಗುಸು-ಗುಸು !

ಚಿಕ್ಕಮಗಳೂರು: ಲೋಕಸಭಾ ಮತ್ತು ವಿಧಾನ ಸಭಾ ಕ್ಷೇತ್ರಗಳ ಪುನರ್ ವಿಂಗಡಿಸಿ ಹೊಸ ಕ್ಷೇತ್ರಗಳನ್ನು ರಚಿಸುವುದರ ಜೊತೆಗೆ ಮಹಿಳಾ ಮೀಸಲಾತಿ ನೀಡಲು ಏಪ್ರಿಲ್ ತಿಂಗಳ16 ರಂದು ಲೋಕಸಭೆಯ ವಿಶೇಷ ಅಧಿವೇಶನ ಕರೆಯಲಾಗಿದೆ ಲೋಕಸಭಾ...

ಕ‌ಳ್ಳನಿಂದ ಬೆಲೆಬಾಳುವ ‌ಡ್ರೈಪೂಟ್‌ಗಳ ಕಳವು

ಶೃಂಗೇರಿ: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಭೀಕರ ಯುದ್ಧವು ಇದೀಗ ಕಾಫಿನಾಡಿನ ವ್ಯಾಪಾರಸ್ಥರಿಗೂ ಬಿಸಿ ಮುಟ್ಟಿಸಿದೆ. ಯುದ್ಧದ ಹಿನ್ನೆಲೆಯಲ್ಲಿ ವಿದೇಶಗಳಿಂದ ಆಮದಾಗುವ ಡ್ರೈಫೂಟ್ಸ್ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದ್ದು, ಮಾರುಕಟ್ಟೆಯಲ್ಲಿ ಇವುಗಳ ಬೆಲೆ...

Related Articles

ಅಂಬೇಡ್ಕರ್ ಜಯಂತಿ ಮೆರವಣಿಗೆ ಮೇಲೆ ಅಪಘಾತ-ಬಾಲಕಿ ಸಾವು

ಚಿಕ್ಕಮಗಳೂರು: ನಗರದ  ಬಿಳೇಕಲ್ಲು ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಮೆರವಣಿಗೆ ವೇಳೆ ಭಾರೀ ಅಚಾತುರ್ಯ ಸಂಭವಿಸಿ ದುರ್ಘಟನೆ...

ನಗರದಲ್ಲಿ ಹಾಡುಹಗಲೇ ಶಿಕ್ಷಕಿಯ ಮಾಂಗಲ್ಯ ಸರ ಅಪಹರಣ

ಚಿಕ್ಕಮಗಳೂರು: ಹಾಡುಹಗಲೇ ಶಿಕ್ಷಕಿಯ ಕೊರಳಿಗೆ ಕೈ ಹಾಕಿ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋದ ಘಟನೆ ಸೋಮವಾರ...

ಜೋಕಾಲಿ ಆಡುತ್ತಿದ್ದ ವೇಳೆ ಸೀರೆ ಉರುಳಾಗಿ ಬಾಲಕಿ ಸಾವು

ಚಿಕ್ಕಮಗಳೂರು: ಮನೆ ಒಳಗೆ ಜೋಕಾಲಿ ಆಡುತ್ತಿದ್ದ ವೇಳೆ ಸೀರೆ ಉರುಳಾಗಿ ಕುತ್ತಿಗೆಗೆ ಸಿಲುಕಿದ ಪರಿಣಾಮ ಬಾಲಕಿ...

ಡಾ.ಅಂಬೇಡ್ಕರ್ ವಿಚಾರಧಾರೆಗಳು ವಿಶ್ವಕ್ಕೆ ದಾರಿದೀಪ

ಚಿಕ್ಕಮಗಳೂರು:  ೧೨ನೇ ಶತಮಾನದಲ್ಲಿ ಜಗಜ್ಯೋತಿ ಬಸವೇಶ್ವರರು ಕಂಡ ಸಮ ಸಮಾಜದ ಕನಸಿಗೆ, ೨೦ನೇ ಶತಮಾನದಲ್ಲಿ ಸಂವಿಧಾನ...