Home namma chikmagalur chikamagalur ಕ್ರೈಸ್ತ ಭಕ್ತಾಧಿಗಳಿಂದ ಸಾಮೂಹಿಕ ಗುಡ್ ಪ್ರೈಡೇ ಆಚರಣೆ
chikamagalurHomeLatest Newsnamma chikmagalur

ಕ್ರೈಸ್ತ ಭಕ್ತಾಧಿಗಳಿಂದ ಸಾಮೂಹಿಕ ಗುಡ್ ಪ್ರೈಡೇ ಆಚರಣೆ

Share
Share

ಚಿಕ್ಕಮಗಳೂರು:- ಗುಡ್ ಪ್ರೈಡ್ ದುಃಖದ ದಿನವಾಗಿದ್ದರೂ ಮಾನವನಿಗಾಗಿ ದೇವರು ತನ್ನನ್ನೇ ಶಿಲುಬೆಯ ಮೇಲೆ ಪ್ರಾಣ ತ್ಯಾಗ ಮಾಡಿದ ದಿನವನ್ನ ಗುಡ್ ಪ್ರೈಡೇ ಅಥವಾ ಶುಭ ಶುಕ್ರವಾರ ದಿನವೆಂದು ಕರೆಯಲ್ಪಡುತ್ತದೆ.

ಇಂದು ಜಗತ್ತಿನಾದ್ಯಂತ ಶುಭ ಶುಕ್ರವಾರವನ್ನು ಕ್ರೈಸ್ತ ಭಕ್ತಾಧಿಗಳು ಚರ್ಚ್‌ಗಳಿಗೆ ಭೇಟಿ ನೀಡಿ ಯೇಸು ಕ್ರಿಸ್ತರು ಶಿಲುಬೆ ಮೇಲೆ ಪ್ರಾಣ ತ್ಯಾಗ ಮಾಡುವ ಮುನ್ನ ೧೪ ಸ್ಥಳಗಳಲ್ಲಿ ನಡೆದ ಘಟನಾವಳಿಯನ್ನು ಸ್ಮರಿಸುತ್ತಾ ಶಿಲುಬೆಯ ಮುಂದೆ ಭಕ್ತಾಧಿಗಳು ಮೊಣಕಾಲು ಊರಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಸರತಿಯಂತೆ ಪ್ರಾರ್ಥನೆ ಸಲ್ಲಿಸುತ್ತಾರೆ.

೨೦೨೬ ವರ್ಷಗಳ ಹಿಂದೆ ಮನುಕುಲದ ರಕ್ಷಣೆಗಾಗಿ ಅವರ ಪಾಪಗಳನ್ನು ಕ್ಷಮಿಸಲು ಪ್ರಭು ಯೇಸು ಕ್ರಿಸ್ತರು ಮನುಷ್ಯ ರೂಪವನ್ನು ಧರಿಸಿಕೊಂಡು ಭೂಲೋಕದಲ್ಲಿ ಮನುಷ್ಯನಿಗೆ ಮಾನವತ್ವವನ್ನು ಕಲಿಸುತ್ತಾ ಮುಂದೆ ಸಾಗುತ್ತಾ ಮನುಷ್ಯನ ಪಾಪಗಳನ್ನು ಕ್ಷಮಿಸಲು ನಮಗಾಗಿ ತಮ್ಮ ರಕ್ತದಿಂದ ತೊಳೆಯಲು ಕಲ್ವಾರಿ ಶಿಲುಬೆಯ ಮೇಲೆ ಕಷ್ಟ, ಹಿಂಸೆ, ನೋವು ತಾಳಿಕೊಂಡು ಪ್ರಭು ಯೇಸು ಕ್ರಿಸ್ತರು ತಮ್ಮನ್ನೇ ಮಾನವ ಕುಲ ಒಳಿತಿಗಾಗಿ ಶಿಲುಬೆಯಲ್ಲಿ ಸಮರ್ಪಿಸಿಕೊಂಡ ದಿನವನ್ನು ಶುಭ ಶುಕ್ರವಾರ ಎಂದು ಕರೆಯಲಾಗುತ್ತದೆ.

ಕ್ರೈಸ್ತ ಭಕ್ತಾಧಿಗಳು ೪೦ ದಿನಗಳ ಉಪವಾಸ ಮೂಲಕ ದಾನ ಧರ್ಮದ ಮೂಲಕ ತಮ್ಮ ತಪ್ಪುಗಳಿಗಾಗಿ ಪ್ರಭು ಯೇಸು ಕ್ರೈಸ್ತರಲ್ಲಿ ಕ್ಷಮೆಯಾಚಿಸಿ, ಆತ್ಮ ಪರಿಶೋಧನೆ ಮಾಡಿಕೊಳ್ಳುವಂತ ದಿನವಾಗಿರುತ್ತದೆ.

ಇಂದು ಸಂತ ಜೋಸೆಫರ ಪ್ರಧಾನಾಲಯದಲ್ಲಿ ಬೆಳಿಗಿನಿಂದ ಮದ್ಯಾಹ್ನದವರೆಗೆ ಸರತಿಯಂತೆ ಸಾವಿರಾರು ಭಕ್ತಾಧಿಗಳು ಶಿಲುಬೆ ಮುಂದೆ ಮೊಣಕಾಲು ಊರಿ ಪ್ರಾರ್ಥನೆ ಸಲ್ಲಿಸಿದರು. ಮಧ್ಯಾಹ್ನ ೩-೩೦ಕ್ಕೆ ಪ್ರಧಾನಾಲಯದಲ್ಲಿ ಪ್ರಭು ಯೇಸು ಕ್ರಿಸ್ತರು ಶಿಲುಬೆಯ ಮೇಲೆ ಪ್ರಾಣ ತ್ಯಾಗ ಮಾಡಿದ ಸಮಯದಲ್ಲಿನ ನಡೆದ ಘಟನಾವಳಿಯನ್ನು ಬೈಬಲ್ ವಾಚನದ ಮೂಲಕ ವಿವರಿಸಿ ಧ್ಯಾನಿಸಲಾಯಿತು.

ನಂತರ ಸಾಮೂಹಿಕ ಪ್ರಾರ್ಥನೆಯಲ್ಲಿ ಚಿಕ್ಕಮಗಳೂರು, ಹಾಸನದ ಧರ್ಮ ಕ್ಷೇತ್ರದ ಬಿಷಪ್‌ರಾದ ಪೂಜ್ಯ ಡಾ.ಟಿ.ಅಂತೋಣಿಸ್ವಾಮಿಯವರು, ಪ್ರಭು ಯೇಸು ಕ್ರಿಸ್ತರ ಮೌಲ್ಯಗಳಾದ ಪ್ರೀತಿ, ಶಾಂತಿ, ದಯೆ, ಕರುಣೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸತ್ಯದ ಹಾದಿಯಲ್ಲಿ ಹೊಸ ಜೀವನದೊಂದಿಗೆ ಆರಂಭಿಸುವಂತೆ ಆಶೀರ್ವಚನ ನೀಡಿದರು.

ಈ ಭಕ್ತಿ ಕಾರ್ಯದಲ್ಲಿ ಪ್ರಧಾನ ದೇವಾಲಯದ ಪ್ರಧಾನ ಗುರುಗಳಾದ ಶಾಂತರಾಜ್ ಆರ್, ಫಾದರ್ ಚಾರ್ಲ್ಸ್ ಪೀರೆರ, ಫಾದರ್ ರಾಯಪ್ಪ, ಫಾದರ್ ಸಂಜಯ್ ಡಿಸೋಜಾ, ಫಾದರ್ ಫೆಡ್ರಿಕ್ ಪಾಯಸ್ ಮತ್ತಿತರರು ಭಾಗವಹಿಸಿದ್ದರು.

Mass Good Friday celebration by Christian devotees

Share

Leave a comment

Leave a Reply

Your email address will not be published. Required fields are marked *

Don't Miss

ಭಿಕ್ಷುಕಿಯನ್ನು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ

ಚಿಕ್ಕಮಗಳೂರು:  ಕ್ಷುಲ್ಲಕ ಕಾರಣಕ್ಕೆ ಸೈಜುಕಲ್ಲು ಎತ್ತಿಹಾಕಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿಗೆ ಇಲ್ಲಿನ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ನೀಡಿದ್ದು, ೮೧ ಸಾವಿರ ರೂ.ಗಳ ದಂಡ...

ಹುಬ್ಬಳ್ಳಿ-ಚಿಕ್ಕಮಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆ ವಿಸ್ತರಣೆ

ಚಿಕ್ಕಮಗಳೂರು: ನೈಋತ್ಯ ರೈಲ್ವೆಯು ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಹುಬ್ಬಳ್ಳಿ ಮತ್ತು ಚಿಕ್ಕಮಗಳೂರು ನಡುವೆ ಚಲಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆಯನ್ನು ವಿಸ್ತರಿಸಲು ನಿರ್ಧರಿಸಿದೆ. ಈ ಹಿಂದೆ ಜೂನ್ 21,...

Related Articles

ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

ಚಿಕ್ಕಮಗಳೂರು: RVR ಹೆಲ್ತ್ ಕೇರ್ ವತಿಯಿಂದ, ಶ್ರೀ ವಿಜಯ್ ಎಂ.ಎನ್. ಶೆಟ್ಟಿ ಹಾಗೂ ಡಾ. (ಪ್ರೊ). ರಾಘವೇಂದ್ರ...

ಧುಮ್ಮಿಕ್ಕಿ ಹರಿಯುತ್ತಿರುವ ಹೆಬ್ಬೆ ಫಾಲ್ಸ್‌

ಚಿಕ್ಕಮಗಳೂರು: ಕಾಫಿನಾಡಿನ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಮಳೆ (Rain) ಅಬ್ಬರ ಜೋರಾಗಿದ್ದು, ತರೀಕೆರೆ (Tarikere) ತಾಲೂಕಿನಲ್ಲಿರುವ ಹೆಬ್ಬೆ...

ಶ್ರೀಈಶ್ವರ-ಚೌಡೇಶ್ವರಿ ದೇವಾಲಯಗಳಲ್ಲಿ ಆಭರಣ ಕಳವು

ಕಡೂರು: ತಾಲ್ಲೂಕಿನ ಸಿಂಗಟಗೆರೆ ಸಮೀಪದ ಎಸ್.ಡಿ. ಕೊಪ್ಪಲು ಗ್ರಾಮದ ಶ್ರೀಈಶ್ವರ ಹಾಗೂ ಚೌಡೇಶ್ವರಿ ದೇವಾಲಯಗಳಲ್ಲಿ ದೇವರ...

ತರೀಕೆರೆಯ ಗೋಪಿಕೃಷ್ಣಗೆ ಎಂಎಲ್ ಸಿ ಸ್ಥಾನ ನೀಡಬೇಕು

ಚಿಕ್ಕಮಗಳೂರು: ಅಹಿಂದ ಪರವಾಗಿ ಮಾತಾಡುವ ಕಾಂಗ್ರೆಸ್ ಪಕ್ಷ ಮಡಿವಾಳ ಸಮುದಾಯದ ಮುಖಂಡರಿಗೆ ರಾಜಕೀಯ ಪ್ರಾತಿನಿಧ್ಯ ನೀಡುತ್ತಿಲ್ಲ....