Home namma chikmagalur chikamagalur ಜಿಲ್ಲೆಯ ರಾಜಕಾರಣಿಗಳು ಮೀಸಲಾತಿ ಕಂಟಕದಿಂದ ಸದ್ಯಕ್ಕೆ ಬಚಾವ್
chikamagalurHomeLatest Newsnamma chikmagalur

ಜಿಲ್ಲೆಯ ರಾಜಕಾರಣಿಗಳು ಮೀಸಲಾತಿ ಕಂಟಕದಿಂದ ಸದ್ಯಕ್ಕೆ ಬಚಾವ್

Share
Share

ಚಿಕ್ಕಮಗಳೂರು: ಕೇಂದ್ರ ಸರ್ಕಾರ ತರಾತುರಿಯಲ್ಲಿ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮೀಸಲಾತಿ ತರಲು ಯತ್ನಿಸಿ ಪ್ರಸ್ತುತ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಒಪ್ಪಿಗೆ ಪಡೆಯುವ ಸಾಧ್ಯತೆ ಇದೆ.

ಲೋಕಸಭೆ ಮತ್ತು ರಾಜ್ಯ ಸಭೆಗಳಲ್ಲಿ ಬಿಜೆಪಿಗೆ ಬಹುಮತ ಇದ್ದರೂ ಮಿತ್ರ ಪಕ್ಷಗಳ ಬೆಂಬಲ ಪಡೆಯಲು ತಯಾರಿ ನಡೆಸಿದೆ.ಇದಕ್ಕಾಗಿ 2011ರ ಜನಗಣತಿಯನ್ನು ಆಧಾರದಲ್ಲಿ ಒಂದು ವೇಳೆ ಒಪ್ಪಿಗೆ ಪಡೆದರು ಕಾಯ್ದೆ ತಿದ್ದುಪಡಿ ಮಾಡಬೇಕು.

2011 ಜನಗಣತಿ ಆಧಾರದಲ್ಲಿ ಮೀಸಲಾತಿ ಜಾರಿಗೆ ಬಂದರು 2029 ರ ಚುನಾವಣೆಗೆ ಜಾರಿಗೆ ಬರುತ್ತದೆ. ಇದನ್ನು ನೋಡಿದರೆ ಕರ್ನಾಟಕ ವಿಧಾನ ಸಭಾ ಚುನಾವಣೆಗಳು 2028ಕ್ಕೆ ನಡೆಯುವುದರಿಂದ ಚಿಕ್ಕಮಗಳೂರು ಜಿಲ್ಲೆಯ ವಿಧಾನಸಭೆ ಯಥಾಸ್ಥಿತಿಯಲ್ಲಿ ಚುನಾವಣೆಗಳು ನಡೆಯುತ್ತವೆ.ಹೀಗಾಗಿ ಚಿಕ್ಕಮಗಳೂರು ಜಿಲ್ಲೆಯ ವಿಧಾನ ಸಭಾ ಚುನಾವಣೆ ಪ್ರತಿನಿಧಿಗಳು ಮತ್ತು ಆಕಾಂಕ್ಷೆ ಇರುವ ರಾಜಕಾರಣಿಗಳಿಗೆ ಆತಂಕ ನಿವಾರಣೆ ಆಗಿದೆ.

ವಿಧಾನ ಸಭೆಗೆ ಪರಿಣಾಮ ಬೀರದಿದ್ದರು ಲೋಕಸಭಾ ಚುನಾವಣೆಗೆ ಮೀಸಲಾತಿ ಅನ್ವಯವಾಗುವುದರಿಂದ ಲೋಕಸಭೆಗೆ ಯಾವ ಮೀಸಲಾತಿ ಬರುತ್ತದೆ ಎಂಬ ನಿಗೂಢ ಮಾತ್ರ ಕಾಡುತ್ತದೆ.
ಕರ್ನಾಟಕದಲ್ಲಿ 28 ಲೋಕಸಭಾ ಚುನಾವಣಾ ಕ್ಷೇತ್ರಗಳ ಜೊತೆಗೆ ಇನ್ನೂ14 ಲೋಕಸಭಾ ಕ್ಷೇತ್ರಗಳು ಹೆಚ್ಚಾಗುತ್ತವೆ ಎನ್ನಲಾಗುತ್ತಿದ್ದು ಬಹುತೇಕ ಚಿಕ್ಕಮಗಳೂರು ಜಿಲ್ಲೆ ಪ್ರಥಮ ಬಾರಿ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳನ್ನು ಒಳಗೊಳ್ಳುವ ಸಾಧ್ಯತೆ ಇದೆ.

ಜಿಲ್ಲೆಯ ಚಿಕ್ಕಮಗಳೂರು ವಿಧಾನ ಸಬೆ ಮಹಿಳಾ ಮೀಸಲು ಕ್ಷೇತ್ರವಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು ಮುಂದೆ ಯಾರು ಎನ್ನುವಾಗಲೇ ಹಾಲಿ ಶಾಸಕ ಹೆಚ್.ಡಿ.ತಮ್ಮಯ್ಯ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಧ್ಯೆ ಫೈಟ್ ನಡೆಯುವುದು ಖಚಿತ. ಇದೇ ರೀತಿ ಮೂಡಿಗೆರೆ ಮೀಸಲು ಕ್ಷೇತ್ರ ಬದಲಾಗಿ ತರೀಕೆರೆ ಕ್ಷೇತ್ರ ಮೀಸಲು ಕ್ಷೇತ್ರವಾಗುತ್ತದೆ ಎಂಬ ಮಾತುಗಳಿಗೆ ವಿರಾಮ ದೊರೆಯುವುದು ಖಚಿತವಾಗಿದ್ದು ನವಯುಗದ ಹೈಟೆಕ್ ನಯನ ಮತ್ತು ಕುಟುಂಬ ರಾಜಕಾರಣಿ ಜಿ.ಹೆಚ್.ಶ್ರೀನಿವಾಸ್ ಕಿಲ,ಕಿಲ ಎನ್ನುತ್ತಲೇ ಕ್ಷೇತ್ರದಲ್ಲಿ ಸುತ್ತಾಡಿ ನಾನೇ,ನಾನೇ ಎನ್ನುತ್ತಿದ್ದಾರೆ .ಒಟ್ಟಾರೆ ಮೀಸಲು ಎಂಬ ಧೂಮಕೇತು ಸದ್ಯಕ್ಕೆ ಅಪ್ಪಳಿಸದಿರುವುದರಿಂದ ಜಿಲ್ಲೆಯಲ್ಲಿ ಯಥಾಸ್ಥಿತಿ ರಾಜಕೀಯ ನಡೆಯುವುದು ಖಚಿತವಾಗಿದೆ.

ಮಹಿಳಾ ಮೀಸಲಾತಿ ಜಾರಿಗೊಳಿಸಿ ಬಿಜೆಪಿ ರಾಜಕೀಯ ಲಾಭ ಪಡೆಯಬಹುದು ಎನ್ನಲಾಗಿದ್ದು ಹೀಗಾಗಿ ತರಾತುರಿಯಲ್ಲಿ 2029 ರ ಲೋಕಸಭಾ ಚುನಾವಣೆಯ ಒಳಗಡೆ ಮೀಸಲಾತಿ ಜಾರಿ ಮಾಡುವುದು ಖಚಿತ ಎಂದು ಹೇಳಲಾಗುತ್ತಿದೆ.

District politicians are currently spared from the reservation hurdle.

Share

Leave a comment

Leave a Reply

Your email address will not be published. Required fields are marked *

Don't Miss

ಭಿಕ್ಷುಕಿಯನ್ನು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ

ಚಿಕ್ಕಮಗಳೂರು:  ಕ್ಷುಲ್ಲಕ ಕಾರಣಕ್ಕೆ ಸೈಜುಕಲ್ಲು ಎತ್ತಿಹಾಕಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿಗೆ ಇಲ್ಲಿನ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ನೀಡಿದ್ದು, ೮೧ ಸಾವಿರ ರೂ.ಗಳ ದಂಡ...

ಹುಬ್ಬಳ್ಳಿ-ಚಿಕ್ಕಮಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆ ವಿಸ್ತರಣೆ

ಚಿಕ್ಕಮಗಳೂರು: ನೈಋತ್ಯ ರೈಲ್ವೆಯು ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಹುಬ್ಬಳ್ಳಿ ಮತ್ತು ಚಿಕ್ಕಮಗಳೂರು ನಡುವೆ ಚಲಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆಯನ್ನು ವಿಸ್ತರಿಸಲು ನಿರ್ಧರಿಸಿದೆ. ಈ ಹಿಂದೆ ಜೂನ್ 21,...

Related Articles

ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

ಚಿಕ್ಕಮಗಳೂರು: RVR ಹೆಲ್ತ್ ಕೇರ್ ವತಿಯಿಂದ, ಶ್ರೀ ವಿಜಯ್ ಎಂ.ಎನ್. ಶೆಟ್ಟಿ ಹಾಗೂ ಡಾ. (ಪ್ರೊ). ರಾಘವೇಂದ್ರ...

ಧುಮ್ಮಿಕ್ಕಿ ಹರಿಯುತ್ತಿರುವ ಹೆಬ್ಬೆ ಫಾಲ್ಸ್‌

ಚಿಕ್ಕಮಗಳೂರು: ಕಾಫಿನಾಡಿನ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಮಳೆ (Rain) ಅಬ್ಬರ ಜೋರಾಗಿದ್ದು, ತರೀಕೆರೆ (Tarikere) ತಾಲೂಕಿನಲ್ಲಿರುವ ಹೆಬ್ಬೆ...

ಶ್ರೀಈಶ್ವರ-ಚೌಡೇಶ್ವರಿ ದೇವಾಲಯಗಳಲ್ಲಿ ಆಭರಣ ಕಳವು

ಕಡೂರು: ತಾಲ್ಲೂಕಿನ ಸಿಂಗಟಗೆರೆ ಸಮೀಪದ ಎಸ್.ಡಿ. ಕೊಪ್ಪಲು ಗ್ರಾಮದ ಶ್ರೀಈಶ್ವರ ಹಾಗೂ ಚೌಡೇಶ್ವರಿ ದೇವಾಲಯಗಳಲ್ಲಿ ದೇವರ...

ತರೀಕೆರೆಯ ಗೋಪಿಕೃಷ್ಣಗೆ ಎಂಎಲ್ ಸಿ ಸ್ಥಾನ ನೀಡಬೇಕು

ಚಿಕ್ಕಮಗಳೂರು: ಅಹಿಂದ ಪರವಾಗಿ ಮಾತಾಡುವ ಕಾಂಗ್ರೆಸ್ ಪಕ್ಷ ಮಡಿವಾಳ ಸಮುದಾಯದ ಮುಖಂಡರಿಗೆ ರಾಜಕೀಯ ಪ್ರಾತಿನಿಧ್ಯ ನೀಡುತ್ತಿಲ್ಲ....