Home namma chikmagalur chikamagalur  ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಸಿ.ಟಿ.ರವಿ ಹಠ ! ಇತರರಿಗೆ ಪೀಕಲಾಟ ?
chikamagalurHomeLatest Newsnamma chikmagalur

 ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಸಿ.ಟಿ.ರವಿ ಹಠ ! ಇತರರಿಗೆ ಪೀಕಲಾಟ ?

Share
Share

ಚಿಕ್ಕಮಗಳೂರು: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಾಳೆ ಚುನಾವಣೆ ನಡೆಯಲಿದೆ .ಅಖಾಡದಲ್ಲಿ ಒಂದೇ ಪಕ್ಷದವರು ಅಂದರೆ ಬಿಜೆಪಿ ಯಲ್ಲಿಯೇ ಪೈಪೋಟಿ ನಡೆಯುತ್ತಿದೆ.

ಸಿ.ಟಿ.ರವಿ ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷರಾಗ ಬೇಕೆಂಬ ಹಠಕ್ಕೆ ಬಿದ್ದಿರುವುದು ಬಹಿರಂಗ ಸತ್ಯ. ಯಾವಾಗ ಸೊಸೈಟಿ ನಿರ್ದೇಶಕರಾದರೋ ಅಂದೇ ನಿರ್ಧಾರ ಮಾಡಿಕೊಂಡಂತೆ ಹೀಗಾಗಿ ಈಗಾಗಲೇ ಹಲವರ ಜೊತೆಗೆ ಮಾತನಾಡಿದ್ದಾರೆ.ಇವರು ಮನಸ್ಸು ಮಾಡಿದರೆ ದೊಡ್ಡ ವಿಚಾರವಲ್ಲ.ಆದರೆ ಹಾಲಿ ಅಧ್ಯಕ್ಷ ಸುರೇಶ್ ಮತ್ತೆ ಮುಂದುವರೆಯ ಬೇಕು ಎಂಬ ತೀರ್ಮಾನ ಮಾಡಿಕೊಂಡಿರುವುದು ಬಿಜೆಪಿ ಒಳ ಜುಗಲ್ ಬಂದಿಗೆ ಕಾರಣವಾಗಿದೆ.

ಜಾತಿ ಜಗಳದ ಫಲಶೃತಿಗೆ ಬೇಸತ್ತಿರುವ ಸುರೇಶ್ ಕಳೆದ ಐದು ವರ್ಷಗಳಿಂದ ಬ್ಯಾಂಕ್ ನಬಾರ್ಡ್ ನಿಂದ “ಎ” ಗ್ರೇಡ್ ಸ್ಥಾನ ಪಡೆದಿದೆ.ರೈತರಿಗೆ ನಿರೀಕ್ಷೆ ಮೀರಿ ಸಾಲ ನೀಡಲಾಗಿದೆ ಜೊತೆಗೆ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಗಿದೆ ಆದರೂ ಲಿಂಗಾಯತರು ಬ್ಯಾಂಕ್ ಕೆಡಿಸಿದ್ದಾರೆ ಎಂದು ಸಮೂಹದ ಬಗ್ಗೆ ಮಾತನಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಇದರ ಬದಲು ಸುರೇಶ್ ಸರಿಯಾದ ಆಡಳಿತ ನೀಡಲಿಲ್ಲ ಎಂದು ಹೇಳಿದ್ದರೆ ಒಪ್ಪಬಹುದಿತ್ತು ಎನ್ನುವ ಅಭಿಪ್ರಾಯ ಕೇಳಿಬರುತ್ತಿದೆ ಇದಕ್ಕೆ ಕೆರಳಿರುವ ಸುರೇಶ್ ಚುನಾವಣೆ ನಡೆಯಲಿ ಎಂಬ ಅಭಿಪ್ರಾಯಕ್ಕೆ ಬಂದಂತೆ ಕಾಣುತ್ತಿದೆ.
ಬಿಜೆಪಿ ಕೋರ್ ಕಮಿಟಿ ಸಭೆ ಇಂದು ಸಂಜೆ ನಡೆಯಲಿದೆ ಅಲ್ಲಿ ತೀರ್ಮಾನ ಕಷ್ಟವಾದರೆ ಸದಸ್ಯರ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ ಮಾಡಬಹುದು.

ರಾಜಕೀಯದಲ್ಲಿ ಸಿ.ಟಿ.ರವಿ ಸ್ಟ್ರಾಂಗ್ ಎನ್ನುವುದರಲ್ಲಿ ಅನುಮಾನವಿಲ್ಲ.ಸುರೇಶ್ ಕೂಡ ಈ ವಿಚಾರದಲ್ಲಿ ಗಟ್ಟಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.ಸಿ.ಟಿ.ರವಿ ವಿರುದ್ದ ಕೂಡ ಬಿಜೆಪಿಯಲ್ಲಿ ಮುಡುಗಟ್ಟಿದ ವಾತವರಣ ಇರುವುದು ಗುಟ್ಟಾಗಿ ಉಳಿದಿಲ್ಲ. ಬ್ಯಾಂಕ್ ಗೆ ಆಡಳಿತಾಧಿಕಾರಿ ನೇಮಕವಾಗಿದ್ದರೆ ಎಲ್ಲರೂ ಮನೆಯಲ್ಲಿ ಇರಬೇಕಿತ್ತು ಆದರೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿದ್ದ ಬೆಳ್ಳಿ ಪ್ರಕಾಶ್ ರ ಧೈರ್ಯಕ್ಕೆ ಸಾಥ್ ನೀಡಿದವರು ಸುರೇಶ್ ಈಗ ನೋಡಿದರೆ ಜಾತಿ ಲಡಾಯಿ ಮಾಡಿ ನಾನು,ನಾನು ಎನ್ನುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಯನ್ನು ಬಿಜೆಪಿ ಮಾಜಿ ಶಾಸಕರೊಬ್ಬರು ನಿರ್ದಾಕ್ಷಿಣ್ಯವಾಗಿ ಹೇಳುವ ಸಾಧ್ಯತೆ ಇದೆ.

ಸಿ.ಟಿ.ರವಿ ಅಧ್ಯಕ್ಷರಾದರೆ ಬಸವರಾಜಪ್ಪ ಉಪಾಧ್ಯಕ್ಷರಾಗುವ ಸಾಧ್ಯತೆ ಇದೆ.ಡಿ.ಎಸ್.ಸುರೇಶ್ ಅಧ್ಯಕ್ಷರಾಗಿ ಮುಂದುವರೆದರೆ ಶೃಂಗೇರಿ ಕ್ಷೇತ್ರದ ಯಾರಾದರೂ ಉಪಾಧ್ಯಕ್ಷ ರಾಗಬಹುದು ಎಂಬ ಸುದ್ದಿ ಇದೆ. ಡಿ.ಸಿ.ಸಿ.ಬ್ಯಾಂಕ್ ನಿಂದ ರಾಜಕೀಯ ಏರು ಪೇರು ಆಗಿರುವುದನ್ನು ನೋಡಿದರೆ ಜಿಲ್ಲಾ ರಾಜಕಾರಣದಲ್ಲಿ ಬಹಳಷ್ಟು ಬದಲಾವಣೆ ಆಗುವುದು ಖಚಿತ ಎಂದು ಅನುಭವಿ ರಾಜಕಾರಣಿಗಳ ಅಭಿಪ್ರಾಯ.

C.T. Ravi Hatha for the post of DCC Bank Chairman

Share

Leave a comment

Leave a Reply

Your email address will not be published. Required fields are marked *

Don't Miss

ಮಳೆಯಾಗದೆ ಸಂಕಷ್ಟಕ್ಕೆ ಸಿಲುಕಿದ ರೈತರ ಸ್ಥಿತಿ ಅವಲೋಕಿಸಿದ ಸಚಿವ ಜಾರ್ಜ್

ಚಿಕ್ಕಮಗಳೂರು: ಸಕಾಲದಲ್ಲಿ ಮಳೆಯಾಗದೆ ಸಂಕಷ್ಟಕ್ಕೆ ಸಿಲುಕಿರುವ ರೈತರು, ಒಣಗಿ ನಿಂತಿರುವ ಭೂಮಿ, ಮಳೆಯ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ್ದ ಬೀಜಗಳು ಮೊಳಕೆ ಒಡೆಯದೆ ಬಿಸಿಲಿನ ಝಳಕ್ಕೆ ಸಿಲುಕಿ ಸುಟ್ಟುಹೋಗಿರುವುದನ್ನು ಜಿಲ್ಲಾ ಉಸ್ತುವಾರಿ ಸಚಿವ...

ಸಚಿವ ಕೆ.ಜೆ. ಜಾರ್ಜ್ ಬೆಂಗಾವಲು ವಾಹನ ಅಪಘಾತ

ಚಿಕ್ಕಮಗಳೂರು : ಅಜ್ಜಂಪುರ ಜಿಲ್ಲೆಯ ಬಯಲುಸೀಮೆ ಪ್ರದೇಶಗಳಲ್ಲಿ ಬರ ಪರಿಸ್ಥಿತಿ ವೀಕ್ಷಣೆಗಾಗಿ ಪ್ರವಾಸದಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅವರ ಬೆಂಗಾವಲು (Escort) ವಾಹನ ಅಪಘಾತಕ್ಕೀಡಾದ ಘಟನೆ ಅಜ್ಜಂಪುರ ಪಟ್ಟಣದಲ್ಲಿ...

Related Articles

ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆ ಮಲೆನಾಡಿಗೆ ಕಂಟಕ

ಚಿಕ್ಕಮಗಳೂರು: ಪಶ್ಚಿಮ ಘಟ್ಟ ವ್ಯಾಪ್ತಿಯ ರಾಜ್ಯದ ೧೦ ಜಿಲ್ಲೆಗಳ ೨೦ ಸಾವಿರಕ್ಕೂ ಅಧಿಕ ಚದರ ಕಿಲೋ...

ಅಂಗಾಂಗ ದಾನ ರೂಬೆನ್ ಮೊಸಸ್ ಕುಟುಂಬ ಸಮಾಜಕ್ಕೆ ಮಾದರಿ

ಚಿಕ್ಕಮಗಳೂರು: ಅಂಗಾಂಗ ದಾನ ಮಾಡಿ ರೂಬೆನ್ ಮೊಸಸ್ ಕುಟುಂಬ ಸಮಾಜಕ್ಕೆ ಮಾದರಿಯಾಗಿದೆ ಎಂದು ನಗರಸಭೆ ಪೌರಾಯುಕ್ತ...

ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿಗೆ ಜಿಲ್ಲಾಧಿಕಾರಿ ಸೂಚನೆ

ಚಿಕ್ಕಮಗಳೂರು: ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಅಧಿಕಾರಿಗಳಿಗೆ ಸೂಚಿಸಿದರು. ಕೊಪ್ಪ...

ಫಸಲ್ ಬಿಮಾ ನೋಂದಣಿ ಹೆಚ್ಚಿಸಲು ಜಿಲ್ಲಾಧಿಕಾರಿ ನಿರ್ದೇಶನ

ಚಿಕ್ಕಮಗಳೂರು: ಫಸಲ್ ಬಿಮಾ ಯೋಜನೆಯಡಿ ನೋಂದಣಿ ಕಡಿಮೆಯಾಗಿದ್ದು, ತಕ್ಷಣ ಅಗತ್ಯ ಪ್ರಚಾರ ಕೈಗೊಂಡು ರೈತರ ಮನವೊಲಿಸಿ...