ಚಿಕ್ಕಮಗಳೂರು: ರಾಷ್ಟ್ರೀಯ ಹಬ್ಬಗಳನ್ನು ಒಂದು ದಿನ ಆಚರಿಸಿ ಮರೆಯುವುದಕ್ಕಿಂತಜನರಅಭಿರುಚಿಗೆತಕ್ಕಗುಡಿ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಕಾರ್ಯಕ್ರಮಗಳು ನಡೆದಾಗ ಮಾತ್ರರಾಷ್ಟ್ರೀಯ ಹಬ್ಬಗಳ ಆಚರಣೆಗೆ ನಿಜ ಅರ್ಥ ಬರುತ್ತದೆಎಂದುಜಿಲ್ಲಾಧಿಕಾರಿಎನ್.ಎಂ ನಾಗರಾಜ್ ಅಭಿಪ್ರಾಯಿಸಿದರು.
ಅವರು ನೇತಾಜಿ ಸುಭಾಷ್‌ಚಂದ್ರ ಬೋಸ್‌ಜಿಲ್ಲಾಆಟದ ಮೈದಾನದಲ್ಲಿ ಜಿಲ್ಲಾಡಳಿತ, ಜಿ.ಪಂ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿಗಣರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಫಲಪುಷ್ಪ ಪ್ರದರ್ಶನ ಹಾಗೂ ಚೈತ್ರೋತ್ಸವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಚೈತ್ರೋತ್ಸವ-೨ ಬಹಳ ಯಶಸ್ವಿಯಾಗಿ ಮೂಡಿಬಂದಿದೆ, ಕೇವಲ ಫಲಪುಷ್ಪ ಪ್ರದರ್ಶನವಾಗದೆ ವೈವಿಧ್ಯಮಯ ಚಟುವಟಿಕೆಗಳಿಗೆ ಪೂರಕವಾದ ಅವಕಾಶಗಳನ್ನು ಕಲ್ಪಿಸಲಾಗಿತ್ತುಎಂದು ಶ್ಲಾಘಿಸಿದರು.
ಪ್ರವಾಸೋದ್ಯಮವೇ ಬಂಡವಾಳವಾಗಿರುವ ಜಿಲ್ಲೆಯಲ್ಲಿ ಈ ಪ್ರದರ್ಶನದಲ್ಲಿ ಸರ್ವರೂ ಪಾಲ್ಗೊಂಡು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಈ ರೀತಿಯ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆದಾಗಜನರಿಗೆಉಪಯುಕ್ತ ಮಾಹಿತಿದೊರೆಯಲು ಸಹಕಾರಿಯಾಗಲಿದೆಎಂದು ಹೇಳಿದರು.
ಶ್ವಾನ ಮತ್ತು ಜಾನುವಾರುಗಳ ಪ್ರದರ್ಶನ, ಫಲಪಾಕ ಸ್ಪರ್ಧೆ ಶುಚಿರುಚಿಯಾಗಿತಯಾರಿಸಲಾಗಿತ್ತು. ಭಾಗವಹಿಸಿದ ಎಲ್ಲಾ ಮಹಿಳೆಯರಿಗೂ ಬಹುಮಾನ ನೀಡಬೇಕೆನ್ನುವ ಮಟ್ಟಿಗೆ ಖಾದ್ಯಗಳನ್ನು ತಯಾರಿಸಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಗಣರಾಜ್ಯೋತ್ಸವವನ್ನು ಕಳೆದ ಮೂರು ದಿನಗಳಿಂದ ಆಚರಣೆ ಮಾಡಿದಅನುಭವವಾಯಿತು, ಸಾಂಸ್ಕೃತಿಕಕಾರ್ಯಕ್ರಮ, ಫಲಪುಷ್ಪ ಪ್ರದರ್ಶನಎಲ್ಲವೂಅದ್ದೂರಿಯಾಗಿತ್ತುಎಂದರು.
ವ್ಯಾಪಾರ ವಹಿವಾಟು, ಮಹಿಳಾ ಸಬಲೀಕರಣ, ಮಕ್ಕಳಿಗೆ ವೇದಿಕೆ ಅವಕಾಶ ನೀಡಲಾಗಿದ್ದು, ಅಂತಿಮವಾಗಿ ಮನರಂಜನೆಯ ಪ್ರತಿಫಲವನ್ನುಎಲ್ಲರೂ ಅನುಭವಿಸಿದ್ದಾರೆಂದು ಭಾವಿಸುತ್ತೇನೆಂದರು.
ಮುಂದಿನ ದಿನಗಳಲ್ಲಿ ಈ ಫಲಪುಷ್ಪ ಪ್ರದರ್ಶನವನ್ನು ಕಣ್ಣುಗಳಿಗೆ ಮುದ ನೀಡುವ ಹಬ್ಬವನ್ನಾಗಿಆಚರಿಸಲುತೀರ್ಮಾನಿಸಲಾಗಿದೆಎಂದಅವರು, ಈ ಕಾರ್ಯಕ್ರಮಅದ್ದೂರಿಯಾಗಿ ಬಹಳ ಉಪಯುಕ್ತವಾಗಿದ್ದು, ಇದನ್ನುಆಯೋಜನೆ ಮಾಡಿದಜಿ.ಪಂ ಸಿಇಒ ಮತ್ತವರತಂಡಕ್ಕೆಅಭಿನಂದನೆ ತಿಳಿಸಿದರು.
ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್‌ಕೀರ್ತನ ಮಾತನಾಡಿ, ಈ ಫಲಪುಷ್ಪ ಪ್ರದರ್ಶನದಲ್ಲಿ ವಿವಿಧ ಬಗೆಯ ೧೫೦ ಸ್ಟಾಲ್‌ಗಳನ್ನು ನಿರ್ಮಾಣ ಮಾಡಿ ಮಾರಾಟಗಾರರಿಗೆ ಅನುಕೂಲ ಕಲ್ಪಿಸಲಾಗಿತ್ತುಎಂದರು.
ಕಳೆದ ಮೂರು ದಿನಗಳಿಂದ ಈ ಕಾರ್ಯಕ್ರಮದಲ್ಲಿ ಮನರಂಜನೆ, ಜಾನುವಾರು, ಡಾಗ್ ಶೋ ಪ್ರದರ್ಶನಜನರ ಮನಸೂರೆಗೊಂಡವು. ಮೂರು ದಿನಗಳಲ್ಲಿ ೧.೫೦ ಕೋಟಿರೂ. ವ್ಯಾಪಾರ ವಹಿವಾಟು ನಡೆಸಲಾಗಿದೆ. ಸ್ವಸಹಾಯ ಸಂಘದ ಮಹಿಳೆಯರು, ಮದ್ಯಮ ವರ್ಗದವರು ಭಾಗವಹಿಸುವ ಮೂಲಕ ಆರ್ಥಿಕ ಸದೃಢರಾಗಿದ್ದಾರೆಂದು ಹೇಳಿದರು.
ಇಳಕಲ್, ಮೊಳಕಾಲ್ಮೂರು ಸೀರೆಗಳು ಅತೀ ಹೆಚ್ಚು ಮಾರಾಟವಾಗಿದ್ದು, ಕೆಎಸ್‌ಐಸಿ ಮೈಸೂರು ಸಿಲ್ಕ್ ೭೫ ಲಕ್ಷ ರೂ.ಗಳ ಸೀರೆಗಳು ಮಾರಾಟವಾಗಿದ್ದು, ಇದು ಬಹಳಷ್ಟು ಜನರಜೀವನೋಪಾಯಕ್ಕೆ ನಾಂದಿಯಾಗಿದೆಎಂದು ತಿಳಿಸಿದರು.
ಈ ಕಾರ್ಯಕ್ರಮದ ಯಶಸ್ವಿಗೆ ಜಿಲ್ಲಾಧಿಕಾರಿಗಳ ಸಲಹೆ ಸಹಕಾರದಜೊತೆಗೆತೋಟಗಾರಿಕೆ, ಕೃಷಿ ಇಲಾಖೆ ಸೇರಿದಂತೆಎಲ್ಲಾ ಇಲಾಖಾಧಿಕಾರಿಗಳ ಸಹಕಾರ ಪ್ರಮುಖವಾಗಿದ್ದು, ನಗರಸಭೆ ಸ್ವಚ್ಚತೆ ಮತ್ತು ದೂಳು ಆಗದಂತೆ ನೀರು ಸಿಂಪಡಿಸಿ ಸಹಕಾರ ನೀಡಿದ್ದು, ಎಲ್ಲರಿಗೂಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಜಿತೇಂದ್ರಕುಮಾರ್‌ದಯಾಮ, ತೋಟಗಾರಿಕೆಇಲಾಖೆಯಜಂಟಿ ನಿರ್ದೇಶಕಿ ಮಂಗಳ, ಯೋಜನಾ ನಿರ್ದೇಶಕಿ ಸುಜಾತ, ಕೃಷಿಕ ಸಮಾಜದಅಶೋಕ್ ಮತ್ತಿತರರು ಅಧಿಕಾರಿಗಳು ಭಾಗವಹಿಸಿದ್ದರು.
Performances that suit people’s tastes are necessary to commemorate national festivals.
Leave a comment