Home namma chikmagalur chikamagalur ಕಾರ್ಮಿಕ ವರ್ಗಕ್ಕೆ ಕೇಂದ್ರ ಸರ್ಕಾರ ಅನ್ಯಾಯ
chikamagalurHomeLatest Newsnamma chikmagalur

ಕಾರ್ಮಿಕ ವರ್ಗಕ್ಕೆ ಕೇಂದ್ರ ಸರ್ಕಾರ ಅನ್ಯಾಯ

Share
Share

ಚಿಕ್ಕಮಗಳೂರು:  ಸಮಸ್ತ ಕಾರ್ಮಿಕ ವರ್ಗಕ್ಕೆ ವಿರೋಧಿ ಕಾಯ್ದೆ ಅನುಷ್ಟಾನಗೊಳಿಸಲು ಮುಂದಾಗುತ್ತಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಫೆ.೧೨ ರಂದು ಜಿಲ್ಲೆಯಲ್ಲಿ ಬೃಹತ್ ಪ್ರತಿ ಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪ್ಲಾಂಟೇಷನ್ ವರ್ಕರ್‍ಸ್ ಯೂನಿಯನ್ಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧರ್ಮ ರಾಜ್ ಹೇಳಿದರು.

ನಗರದ ತಮಿಳು ಕಾಲೋನಿಯಲ್ಲಿ ಜಿಲ್ಲಾ ಪ್ಲಾಂಟೇಷನ್ ವರ್ಕರ್‍ಸ್ ಯೂನಿಯನ್ಸ್ ವತಿಯಿಂದ ಗುರು ವಾರ ಆಯೋಜಿಸಿದ್ಧ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾ ಸಂಬಂಧ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೇಂದ್ರದ ಕಾರ್ಮಿಕ ವಿರೋಧಿ ನಡೆಯನ್ನು ಖಂಡಿಸಿ ಪ್ಲಾಂಟೇಷನ್ ವರ್ಕರ್‍ಸ್, ರೈತ ಸಂಘ ಸೇರಿದಂ ತೆ ಸುಮಾರು ೧೦ಕ್ಕೂ ಹೆಚ್ಚು ಸಂಘಟನೆಗಳ ನೇತೃತ್ವದಲ್ಲಿ ಆಯಾ ತಾಲ್ಲೂಕಿನ ಕೇಂದ್ರ ಸರ್ಕಾರದ ಕಚೇರಿ ಮುಚ್ಚಿಸುವ ಮೂಲಕ ಕಾರ್ಮಿಕ ವರ್ಗವು ದೊಡ್ಡ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದರು.

ಕಾರ್ಮಿಕರಿಗೆ ಅನುಕೂಲವಾಗಲು ಮೊದಲು ಕಾಯ್ದೆಗಳು ಅನುಕೂಲವಿತ್ತು. ಇದೀಗ ಕಾರ್ಮಿಕ ಕಾ ಯ್ದೆಯಲ್ಲಿ ನಾಲ್ಕು ಕೋರ್ಡ್‌ಗಳನ್ನು ರಚಿಸುವ ಮೂಲಕ ಕಾರ್ಮಿಕರ ಸವಲತ್ತಿಗೆ ಕತ್ತರಿ ಹಾಕುವ ಕೆಲಸ ಕೇ ಂದ್ರ ಮಾಡುತ್ತಿದೆ. ಇದು ದೇಶದ ಬಹುತೇಕ ಕಾರ್ಮಿಕರಿಗೆ ಪೆಟ್ಟು ಬೀಳಲಿದೆ ಎಂದು ಹೇಳಿದರು.

ಚಿಕ್ಕಮಗಳೂರು, ಕೊಡಗು, ಹಾಸನ ಮತ್ತು ಶಿವಮೊಗ್ಗದ ತೋಟದ ಕಾರ್ಮಿಕರಿಗೆ ಆರೋಗ್ಯ ಸಮ ಸ್ಯೆ ಕಂಡುಬಂದಲ್ಲಿ ತೋಟದ ಮಾಲೀಕರೇ ನಿರ್ವಹಿಸುತ್ತಿದ್ದರು. ಈ ಹೊಸ ಕಾಯ್ದೆಯಿಂದ ಇಎಸ್‌ಐ ಮಾ ಡಿಸಬೇಕು. ಎಲ್ಲಿ ವೈದ್ಯಕೀಯ ಸೇವೆ ಲಭ್ಯವಿದೆ ಅಲ್ಲಿಯೇ ತೆರಳಿ ಚಿಕಿತ್ಸೆ ಕೊಡಿಸಬೇಕಿದೆ. ತೋಟ ಮಾಲೀಕ ರು ಒಮ್ಮೆ ಇಎಸೈ ಹಣ ಪಾವತಿಸಿ ಸುಮ್ಮನಾಗುತ್ತಾರೆ ಎಂದರು.

ಕೇಂದ್ರ ಸರ್ಕಾರ ಕಾರ್ಮಿಕ ಕಾಯ್ದೆ ತಂದೊಡ್ಡುವ ಮೂಲಕ ಕಾರ್ಪೋರೇಟ್ ಕಂಪನಿಗೆ ಲಾಭ ಮಾ ಡಿಕೊಡುತ್ತಿದೆ. ತಳಮಟ್ಟದ ಸಂಬಳವೆಂದರೆ ಕನಿಷ್ಟ ೧೭೦ ರೂ.ಗಳಿಗೆ ತಂದಿಳಿಸುವ ಕೆಲಸ ಮಾಡುತ್ತಿದೆ. ಪ್ರಸ್ತುತ ಒಂದು ಕುಟುಂಬವು ಪ್ರತಿದಿನ ಕನಿಷ್ಟ ೭೦೦-೮೦೦ ದುಡಿಯುವ ಅವಶ್ಯಕತೆಯಿದ್ದು, ಈಗಾಗಲೇ ಕಾರ್ಮಿಕರು ಕೇವಲ ೫೦೦ ರೂ. ಹಂತದಲ್ಲಿದ್ದು ಬಾಕಿ ಹಣ ಸಾಲ ಮಾಡಬೇಕಿದೆ ಎಂದು ಹೇಳಿದರು.

ಒಟ್ಟಾರೆ ಕಾರ್ಮಿಕರ ವಿರೋಧಿ ಕಾಯ್ದೆ ಸಂಬಂಧ ಯೂನಿಯನ್ ಹಾಗೂ ತೋಟದ ಮಾಲೀಕರೊ ಂದಿಗೆ ಚರ್ಚೆ ನಡೆಯುತ್ತಿದೆ. ಈ ರೀತಿಯ ಕಾರ್ಮಿಕ ವಿರೋಧಿ ಕಾಯ್ದೆಗೆ ಮನ್ನಣೆ ನೀಡದಂತೆ ಒತ್ತಾಯಿಸ ಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಯೂನಿಯನ್ ಜಿಲ್ಲಾ ಕಾರ್ಯದರ್ಶಿ ಜಿ.ರಮೇಶ್, ವಿಭಾಗೀಯ ಅಧ್ಯಕ್ಷ ಡೊಂಗ್ರೆ, ಹಾಸನ ಕಾರ್ಯದರ್ಶಿ ಬಸವರಾಜ್, ಸಕಲೇಶಪುರ ಕಾರ್ಯದರ್ಶಿ ಹರೀಶ್, ಸಿಪಿಐ ಮು ಖಂಡರಾದ ರಾಧಾಸುಂದ್ರೇಶ್ ಉಪಸ್ಥಿತರಿದ್ದರು.

The central government is unfair to the working class.

Share

Leave a comment

Leave a Reply

Your email address will not be published. Required fields are marked *

Don't Miss

ಸಾಲದ ಹಣ ಕೇಳಿದ್ದಕ್ಕೆ ಹಲ್ಲೆ; ತಾಯಿ-ಮಗನ ವಿರುದ್ಧ ಪ್ರಕರಣ

ಕಡೂರು: ಸಾಲವಾಗಿ ನೀಡಿದ್ದ ₹50 ಸಾವಿರವನ್ನು ಹಿಂದಿರುಗಿಸುವಂತೆ ಕೇಳಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಯಗಟಿ ಪೊಲೀಸ್ ಠಾಣೆಯಲ್ಲಿ ತಾಯಿ-ಮಗನ ವಿರುದ್ಧ ಪ್ರಕರಣ ದಾಖಲಾಗಿದೆ. ಯಗಟಿ ಗ್ರಾಮದ ಮುದಿಯಪ್ಪ ಬಡಾವಣೆಯ...

ಹುಬ್ಬಳ್ಳಿಯಲ್ಲಿ ಆಗಸ್ಟ್ 9ರಂದು ರಾಜ್ಯಮಟ್ಟದ 32ನೇ ವಿಶ್ವ ಆದಿವಾಸಿ ದಿನಾಚರಣೆ

ಚಿಕ್ಕಮಗಳೂರು: ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಹಾಗೂ ಆದಿವಾಸಿ ಹರಣ ಶಿಖಾರಿ ಪಾರಿ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಆಗಸ್ಟ್ 9ರಂದು ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ 32ನೇ ವಿಶ್ವ ಆದಿವಾಸಿ ದಿನಾಚರಣೆ ಅಂಗವಾಗಿ...

Related Articles

ಗ್ರಾಮೀಣ ಪ್ರದೇಶದಲ್ಲಿ ವಲಸೆ ತಡೆಗೆ ವಿಬಿ ಜಿ ರಾಮ್ ಜಿ ಆಸರೆ

ಚಿಕ್ಕಮಗಳೂರು: ಗ್ರಾಮೀಣ ಭಾಗದ ಜನರು ಉದ್ಯೋಗಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಿ, ತಮ್ಮ ಗ್ರಾಮಗಳಲ್ಲಿಯೇ...

ಆಗಸ್ಟ್ 14 ಮತ್ತು 16 ರಂದು ವಿದ್ಯುತ್ ನಿಲುಗಡೆ

ಚಿಕ್ಕಮಗಳೂರು:  ಗ್ರಾಮೀಣ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಹೊಸದಾದ ಗಾಣದಾಳು ವಿ.ವಿ ಕೇಂದ್ರದ ೧೧ ಕೆ.ವಿ ಲಿಂಕ್...

ವೃದ್ದರ ಮಾಶಾಸನ ಬಿಡುಗಡೆ ಆಗ್ರಹಿಸಿ ಕರವೇ (ಪ್ರವೀಣ್‌ಶೆಟ್ಟಿ)ಬಣ ಪ್ರತಿಭಟನೆ

ಚಿಕ್ಕಮಗಳೂರು: ವೃದ್ದರ ಮಾಶಾಸನ ಬಿಡುಗಡೆ ಹಾಗೂ ಬಿಡದಿಯಲ್ಲಿ ರೈತರ ಜೀವನ ಉಳಿಸಬೇಕು ಎಂದು ಆಗ್ರಹಿಸಿ ಕರವೇ...

ವಿದ್ಯುತ್ ಸ್ಪರ್ಶದಿಂದ ಎರಡು ಜಾನುವಾರುಗಳ ಸಾವು

ನರಸಿಂಹರಾಜಪುರ: ಜಮೀನಿಗೆ ಅಳವಡಿಸಿದ್ದ ಐಬೆಕ್ಸ್ ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ ಪರಿಣಾಮ ಎರಡು...