Home namma chikmagalur chikamagalur ಸಂಗೊಳ್ಳಿ ರಾಯಣ್ಣ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ
chikamagalurHomeLatest Newsnamma chikmagalur

ಸಂಗೊಳ್ಳಿ ರಾಯಣ್ಣ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ

Share
Share

ಚಿಕ್ಕಮಗಳೂರು:  ಸಂಗೊಳ್ಳಿ ರಾಯಣ್ಣ ನಾಡು ಅಪ್ರತಿಮೆ ಸ್ವಾತಂತ್ರ್ಯ ಹೋರಾಟಗಾರ. ಬ್ರಿಟಿಷರ ಕಪಿಮುಷ್ಠಿಯಿಂದ ನಲುಗುತ್ತಿದ್ಧ ಭಾರತೀಯರಿಗೆ ನ್ಯಾಯ ಒದಗಿಸಲು ಪ್ರಾಣವನ್ನೆ ಅರ್ಪಿಸಿದ ಧೀ ಮಂತ ಮಹಾಪುರುಷ ಎಂದು ಶಾಸಕಿ ನಯನ ಮೋಟಮ್ಮ ಹೇಳಿದರು.

ತಾಲ್ಲೂಕಿನ ಮರ್ಲೆ ಗ್ರಾ.ಪಂ. ವ್ಯಾಪ್ತಿಯ ರಾಮನಹಳ್ಳಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆ ಲೋಕಾರ್ಪಣೆಗೊಳಿಸಿ ಸೋಮವಾರ ಸಂಜೆ ಅವರು ಮಾತನಾಡಿ ಮೂನ್ನೂರು ವರ್ಷಗಳ ಹಿಂದೆಯೇ ರಾಯಣ್ಣ ಯಾವುದೇ ಸವಲತ್ತುಗಳಿಲ್ಲದೇ ಬ್ರಿಟಿಷರ ವಿರುದ್ಧ ಹೋರಾಡಿ ಜೀವಂತಿಕೆ ಕಾಪಾಡಲು ಅವರ ಆದರ್ಶಗಳೇ ಪ್ರಮುಖ ಕಾರಣ. ದೇಶ ಹಾಗೂ ನಾಡಿನ ಜನರ ಬಗ್ಗೆ ಅಪಾರ ಪ್ರೀತಿಯನ್ನಿಟ್ಟುಕೊಂಡಿದ್ಧ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ ಬಂಟನಾಗಿ ಹೋರಾಡಿದ ಶ್ರೇ ಷ್ಟರು ಎಂದರು.

ಗ್ರಾಮದಲ್ಲಿ ಸಂಗೊಳ್ಳಿ ಪ್ರತಿಮೆ ನಿರ್ಮಿಸಿ ಮುಂದಿನ ಪೀಳಿಗೆಗೆ ಮಕ್ಕಳಿಗೆ ಇತಿಹಾಸವನ್ನು ಪರಿಚಯಿಸು ತ್ತಿರುವುದು ಹೆಮ್ಮೆಯ ಸಂಗತಿ. ಗ್ರಾಮದಲ್ಲಿ ಮಗು ಜನಿಸಿದರೆ, ಪ್ರತಿಮೆ ಹಿನ್ನೆಲೆಯನ್ನು ಬಾಲ್ಯದಿಂದಲೇ ಮನ ದಟ್ಟಾಗಲು ಈ ಪುತ್ಥಳಿ ಪ್ರೇರಣೆ. ಹೀಗಾಗಿ ರಾಯಣ್ಣನಂಥ ಆತ್ಮವಿಶ್ವಾಸ, ಧೈರ್ಯವನ್ನು ಮಕ್ಕಳು ಬೆಳೆಸಿ ಕೊಳ್ಳಬೇಕು ಎಂದು ಹೇಳಿದರು.

ರಾಮನಹಳ್ಳಿ ಗ್ರಾಮದಲ್ಲಿ ರಸ್ತೆ ಅಭಿವೃದ್ದಿ ಹಾಗೂ ಮೂಲಸೌಕರ್ಯಕ್ಕೆ ಲಕ್ಷಾಂತರ ರೂ. ಅನುದಾನ ನೀಡಲಾಗಿದೆ. ಅಲ್ಲದೇ ಉಸ್ತುವಾರಿ ಸಚಿವರು ಗ್ರಾಮದ ಶಾಲೆಯ ಅಭಿವೃದ್ದಿಗೆ ೫೦ ಲಕ್ಷ ರೂ.ಗಳು ಘೋಷಿ ಸಿದ್ದು ಹಂತ ಹಂತವಾಗಿ ನಿವಾಸಿಗಳ ಇತರೆ ಸೌಕರ್ಯಕ್ಕೆ ರಾಜ್ಯಸರ್ಕಾರ ಸ್ಪಂದಿಸಲಿದೆ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ ಮಾತನಾಡಿ ದೀರ ಸೇನಾನಿ ಸಂಗೊ ಳ್ಳಿ ರಾಯಣ್ಣ ಅನ್ಯಾಯಕ್ಕೆ ಹೆದರದಿರುವ ಗಂಡು. ಆ ವಂಶಸ್ಥ ಕುಟುಂಬದಲ್ಲಿ ನಾವುಗಳು ಜನಿಸಿರುವುದಕ್ಕೆ ಸಂತೋಷ ತಂದಿದೆ. ಅವರ ಆಚಾರ-ವಿಚಾರ, ಸಂಸ್ಕೃತಿಗಳನ್ನು ಇಂದಿನ ಮಕ್ಕಳು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಜಿ.ಪಂ. ಮಾಜಿ ಅಧ್ಯಕ್ಷ ಎ.ಎನ್.ಮಹೇಶ್ ಮಾತನಾಡಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ಧ ರಾಯಣ್ಣನವ ರು ನಮ್ಮ ಕುಲದವರೆಂದು ಹೇಳಿಕೊಳ್ಳಲು ಖುಷಿಯಿದೆ. ಶೌರ್ಯದ ಸಂಕೇತ ಹಾಗೂ ಸಮಾಜದ ಒಳಿತಿಗೆ ಜೀವನವನ್ನೇ ಮುಡಿಪಿಟ್ಟ ದಿಗ್ಗಜ. ಕುರುಬ ಜನಾಂಗ ನಾಡು ಹಾಗೂ ದೇಶವನ್ನು ಆಳಿದೆ. ಚಂದ್ರಗುಪ್ತ ಮೌ ರ್ಯ, ಕನಕದಾಸ ಕೀರ್ತನೆ ಮತ್ತು ಇಂದು ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮದ ಮುಖಂಡ ಆರ್.ಎಂ.ರುದ್ರೇಗೌಡ ವಹಿಸಿದ್ದರು.ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಕರ್ನಾಟಕ ಪ್ರದೇಶ ಕುರುಬ ಸಂಘದ ಉಪಾಧ್ಯಕ್ಷೆ ರೇಖಾ ಹುಲಿಯಪ್ಪಗೌ ಡ ಮಾತನಾಡಿದರು. ಬಳಿಕ ಗ್ರಾಮದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ಎಸ್.ಕಾವ್ಯ ಸಂತೋಷ್, ಜಿಲ್ಲಾ ಗ್ಯಾರಂಟಿ ಸಮಿತಿ ಸದಸ್ಯ ಆರ್.ಎಂ.ಬಸವರಾಜು, ಕಾಂಗ್ರೆಸ್ ಅಂಬಳೆ ಹೋಬಳಿ ಅಧ್ಯಕ್ಷ ಎಂ.ವಿಜಯ್‌ಕುಮಾರ್, ಪುತ್ಥಳಿ ನಿರ್ಮಾತೃ ರಾಮು, ರವಿಕುಮಾರ್, ಕಾಳೇಗೌಡ, ಮಾಜಿ ಗ್ರಾ.ಪಂ. ಅಧ್ಯಕ್ಷ ದಾಸೇಗೌಡ, ರಾಮನಹಳ್ಳಿ ಕಾಂಗ್ರೆಸ್ ಬೂತ್ ಅಧ್ಯಕ್ಷ ರಮೇಶ್, ಅಂಬಳೆ ಹೋಬಳಿ ಎಸ್ಸಿ ಸೆಲ್ ಅಧ್ಯಕ್ಷ ಭಾಸ್ಕರ್, ಮುಖಂಡರುಗಳಾದ ಭೀಮಯ್ಯ, ಚಂ ದ್ರಶೇಖರ್, ಶಾಲಾ ಮುಖ್ಯಶಿಕ್ಷಕ ರಮಾನಾಥ್, ಸಹ ಶಿಕ್ಷಕಿ ರುಕ್ಮಿಣಿ ಇದ್ದರು.

Sangolli Rayanna is an unparalleled freedom fighter.

Share

Leave a comment

Leave a Reply

Your email address will not be published. Required fields are marked *

Don't Miss

ಸಿ.ಡಿ.ಎ ಮಾಜಿ ಅಧ್ಯಕ್ಷ ಆನಂದ್ ಮೇಲೆ ಹಲ್ಲೆ …?

ಚಿಕ್ಕಮಗಳೂರು: ಮಾಜಿ ಸಚಿವ ಸಿ.ಟಿ.ರವಿ ಆಪ್ತ ಸುದರ್ಶನ್ ಬಲಗೈ ಬಂಟ ಹಾಲಿ ಮೂಗ್ತಿಹಳ್ಳಿ ಸಹಕಾರ ಸಂಘದ ಅಧ್ಯಕ್ಷ ಆನಂದ್ ನ ರಸಲೀಲೆ ನಡೆಸುತ್ತಿದ್ದಾರೆ ಎಂದು ಕೆಲವರು ಹೋಮ್ ಸ್ಟೇಗೆ ನುಗ್ಗಿ ಗಲಾಟೆ...

ರೈತರಿಗೆ ತೋಟಗಾರಿಕೆ ಬೆಳೆಗಳ ಬಗ್ಗೆ ಮಾಹಿತಿ ನೀಡುವುದೇ ಚೈತ್ರೋತ್ಸವದ ಉದ್ದೇಶ

ಚಿಕ್ಕಮಗಳೂರು: ಜಿಲ್ಲೆಯರೈತರು ಮತ್ತು ಬೆಳೆಗಾರರಿಗೆ ತೋಟಗಾರಿಕೆ ಬೆಳೆಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡುವುದೇಚೈತ್ರೋತ್ಸವದಉದ್ದೇಶಎಂದುಜಿಲ್ಲಾಧಿಕಾರಿಎಂ.ಎನ್ ನಾಗರಾಜ್ ತಿಳಿಸಿದರು. ಅವರುಇಂದು ನಗರದ ನೇತಾಜಿ ಸುಭಾಷ್‌ಚಂದ್ರಬೋಸ್‌ಜಿಲ್ಲಾಆಟದ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪಶುಪಾಲನಾ ಮತ್ತು ಪಶು...

Related Articles

ಲಾಭಾಂಶ ಆಮಿಷ ಯುವಕನಿಗೆ ಲಕ್ಷಾಂತರ ರೂಪಾಯಿ ವಂಚನೆ

ಚಿಕ್ಕಮಗಳೂರು: ಟ್ರೇಡಿಂಗ್ ಹೆಸರಿನಲ್ಲಿ ಹೆಚ್ಚಿನ ಲಾಭಾಂಶ ನೀಡುವ ಆಮಿಷವೊಡ್ಡಿ ಯುವಕನೊಬ್ಬನಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ...

ಸಿಡಿಎ ಅಧ್ಯಕ್ಷರಾಗಿ ಎಚ್‌.ಪಿ. ಮಂಜೇಗೌಡ ನೇಮಕ

ಚಿಕ್ಕಮಗಳೂರು: ಚಿಕ್ಕಮಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಸಿಡಿಎ) ಚಿಕ್ಕಮಗಳೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಪಿ. ಮಂಜೇಗೌಡ ಅವರನ್ನು...

ಕಾಂಗ್ರೆಸ್ ನಲ್ಲಿ ಸಿ.ಡಿ.ಎ. ಫೈಟ್ – ಕಾಂಗ್ರೆಸ್ ನಲ್ಲಿ ಸಿ.ಡಿ.ಎ. ಫೈಟ್ – ರಾಮಚಂದ್ರ ಬಿಗಿ ಪಟ್ಟು

ಚಿಕ್ಕಮಗಳೂರು: ಹಿರೇಮಗಳೂರು ರಾಮಚಂದ್ರ ಸಿ.ಡಿ.ಎ.ಅಧ್ಯಕ್ಷ ಸ್ಥಾನ ಪಡೆಯಲು ಬಿಗಿ ಪಟ್ಟು ಹಿಡಿದು ಒತ್ತಾಯ ಮಾಡುತ್ತಿದ್ದಾರೆ. ಕಳೆದ...

ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಮೂವರು ಸಾವು

ಚಿಕ್ಕಮಗಳೂರು :ಜಿಲ್ಲೆಯಲ್ಲಿ ನಡೆದ ಮೂರು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಮೂವರು ಸಾವಪ್ಪಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್...