ಚಿಕ್ಕಮಗಳೂರು: ವಿದ್ಯಾರ್ಥಿದೆಸೆಯಿಂದ ಕಠಿಣ ಪರಿಶ್ರಮ, ನಿರಂತರ ಕಲಿಕೆ ಹಾಗೂ ವಿದ್ಯಾಭ್ಯಾಸದ ಒಲವು ಹೊಂದಿರಬೇಕು. ಇದು ವಿದ್ಯಾರ್ಥಿಗಳ ಭವಿಷ್ಯವನ್ನು ಸಾಧನೆಯ ಮೆಟ್ಟಿಲೇರಲು ಪ್ರೇ ರಣೆ ನೀಡಲಿದೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.
ನಗರದ ಡಾ|| ಬಿ.ಆರ್.ಅಂಭೇಡ್ಕರ್ ಭವನದಲ್ಲಿ ಭಾನುವಾರ ಕರ್ನಾಟಕ ಪ್ರತಿಭಾ ಅಕಾಡೆಮಿ ಜಿಲ್ಲಾ ಘಟಕದಿಂದ ಆಯೋಜಿಸಿದ್ಧ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿ ತರಿಸಿ ಅವರು ಮಾತನಾಡಿದರು.
ಪ್ರೌಢಶಾಲೆ ಮತ್ತು ಕಾಲೇಜು ಜೀವನದ ದಿಕ್ಕನ್ನು ಬದಲಿಸುವ ವಯಸ್ಸು. ಈ ಪ್ರಾಯದಲ್ಲಿ ಜಾಗರೂ ಕತೆಯಿಂದ ಹೆಜ್ಜೆಯಿಡಬೇಕು. ಪಾಲಕರು ಮತ್ತು ಗುರುವೃಂದ ವಿದ್ಯಾರ್ಥಿಗಳ ಆಸಕ್ತಿ ವಿಷಯವೆಂಬ ಗಿಡಕ್ಕೆ ನೀರೂಣಿಸುವ ಕಾರ್ಯ ಮಾಡಿದರೆ ಆ ಮಕ್ಕಳು ಹೆಮ್ಮರವಾಗಿ ಬೆಳವಣಿಗೆ ಹೊಂದಲು ಸಾಧ್ಯ ಎಂದರು.
ಪ್ರಸ್ತುತ ಅಕಾಡೆಮಿ ಜಿಲ್ಲೆಯ ಅಹಿಂದಾ ವರ್ಗದ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಶ್ಲಾಘನೀಯ. ಇದು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಆತ್ಮಶಕ್ತಿ ತುಂಬಿಸುತ್ತದೆ. ಜೊತೆಗೆ ಪುರಸ್ಕಾರ ಪಡೆಯದ ಮಕ್ಕಳಿಗೆ ಪ್ರೇರಣೆಯಾಗಲಿದೆ. ಹೀಗಾಗಿ ಮುಂದಿನ ಪರೀಕ್ಷಾ ಹಂತದಲ್ಲಿ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡ ಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳು ಜೀವನದಲ್ಲಿ ಮೊದಲು ಪಾಲಕರು-ಗುರುಹಿರಿಯರನ್ನು ಗೌರವಿಸಬೇಕು. ರಾಷ್ಟ್ರದ ಸ ತ್ರ್ಪಜೆಗಳಾಗಲು ಛಲ ಮತ್ತು ಗುರಿ ಹೊಂದಿರಬೇಕು. ಈ ಕಲಿಕೆಯ ಹಠ ಮತ್ತು ದೇಶದ ಮಹಾನೀಯರ ವಿಚಾರಧಾರೆ ಒಟ್ಟುಗೂಡಿದಾಗ ಯಶಸ್ಸು ವಿದ್ಯಾರ್ಥಿಗಳಿಗೆ ಕಟ್ಟಿಟ್ಟಬುತ್ತಿ ಎಂದು ಹೇಳಿದರು.
ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ ಪಾಲಕರು ವಿದ್ಯೆ ಬೆಲೆಕಟ್ಟಲಾಗದ ಸಂಪತ್ತು. ಮಕ್ಕಳಿಗಾಗಿ ಆಸ್ತಿ-ಅಂತಸ್ತನ್ನು ಕೂಡಿಡದೇ, ದುಡಿದು ತಿನ್ನುವ ಪಾಠವನ್ನು ಬೋಧಿಸಬೇಕು. ಆಗ ಮಾತ್ರ ಸಮಾಜವನ್ನು ಆತ್ಮಸ್ಥೈರ್ಯದಿಂದ ಎದುರಿಸಲು ಸಾಧ್ಯ. ಇದರಿಂದ ಮಕ್ಕಳ ಊರಿಗೆ ಹಾಗೂ ನಾಡಿಗೆ ಕೀರ್ತಿ ತರಲಿದ್ದಾರೆ ಎಂದು ತಿಳಿಸಿದರು.
ಜಿ.ಪಂ. ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ ಅಂಬೇಡ್ಕರ್ ಸಂವಿಧಾನದಿಂದ ಸಮಾ ಜವು ವಿದ್ಯಾವಂತರಾಗುವ ಜೊತೆಗೆ ಪ್ರಭುಪ್ರಭುತ್ವಕ್ಕೆ ಅಡಿಪಾಯವಾಗಿದೆ. ಹೆಣ್ಣು ಮತ್ತು ಗಂಡಿಗೆ ಸರಿಸಮಾ ನ ಶಿಕ್ಷಣ ಪಡೆಯಲು ಅಂಬೇಡ್ಕರ್ ಮುಳ್ಳಿನ ಹಾದಿಯಲ್ಲಿ ಸಾಗಿ, ಭವಿಷ್ಯದ ಮಕ್ಕಳಿಗೆ ಹೂವಿನ ಹಾಸಿಗೆ ಮಾ ಡಿಕೊಟ್ಟಿದ್ದಾರೆ ಎಂದು ಬಣ್ಣಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ರುದ್ರಪ್ಪ ಮಾತನಾಡಿ ಮಕ್ಕಳಲ್ಲಿ ಅಧ್ಯಯನಶೀಲತೆ ಕೂಡಿರಬೇಕು. ಅಂ ಬೇಡ್ಕರ್ ಮತ್ತು ಗಾಂಧೀಜೀಯವರ ಜೀವನ ಚರಿತ್ರೆ ಓದುವುದರಿಂದ ನಾಡಿನ ಸತ್ರ್ಪಜೆಗಳಾಗಿ ಹೊರಹೊ ಮ್ಮಲು ಸಾಧ್ಯ. ಹೀಗಾಗಿ ಹೆಚ್ಚು ಸಮಯ ಕಲಿಕೆಗೆ ಮಹತ್ವ ನೀಡಬೇಕು ಎಂದು ಸಲಹೆ ಮಾಡಿದರು.
ವಾಲ್ಮೀಕಿ ಸಂಘದ ಯುವ ಘಟಕದ ಅಧ್ಯಕ್ಷ ಜಗದೀಶ್ ಕೋಟೆ ಮಾತನಾಡಿ ಪ್ರತಿಭಾ ಪುರಸ್ಕಾರ ಎ ನ್ನುವುದು ಸುಖಸುಮ್ಮನೆ ಲಭಿಸುವುದಿಲ್ಲ. ಕಲಿಕೆಯಲ್ಲಿ ಪರಿಶ್ರಮ ಇರುವವರಿಗೆ ಮಾತ್ರ ಲಭಿಸಲಿದೆ. ಆ ನಿಟ್ಟಿ ನಲ್ಲಿ ಇಂದು ಜಿಲ್ಲೆಯ ಪ್ರತಿ ತಾಲ್ಲೂಕಿನಿಂದ ಮಕ್ಕಳನ್ನು ಗುರುತಿಸಿ ಅಕಾಡೆಮಿ ಪ್ರೋತ್ಸಾಹಿಸುತ್ತಿರುವುದು ಒಳ್ಳೆ ಯ ವಿಚಾರ ಎಂದರು.
ಮಾನವ ಬಂಧುತ್ವ ವೇದಿಕೆ ವಿಭಾಗೀಯ ಸಂಚಾಲಕ ಡಾ|| ಸತೀಶ್‌ಕುಮಾರ್ ಮಾತನಾಡಿ ಸಚಿವ ಜಾ ರಕಿಹೊಳೆ ನೇತೃತ್ವದಲ್ಲಿ ಪ್ರತಿಭಾ ಅಕಾಡೆಮಿ ರಾಜ್ಯಾದ್ಯಂತ ಸಂಚರಿಸಿ ಪುರಸ್ಕಾರ ಕಾರ್ಯಕ್ರಮ ನಡೆಸುತ್ತಿದೆ. ಈಗಾಗಲೇ ಒಟ್ಟು ೧೫ ಜಿಲ್ಲೆಗಳನ್ನು ಪೂರೈಸಿದ್ದು, ಇದೀಗ ಚಿಕ್ಕಮಗಳೂರು ಜಿಲ್ಲೆಯ ವಿದ್ಯಾರ್ಥಿಗಳನ್ನು ಗೌರ ವಿಸಿ ಮಕ್ಕಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದರು.
ಇದೇ ವೇಳೆ ಜಿಲ್ಲೆಯ ವಿವಿಧ ತಾಲ್ಲೂಕಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಅತಿಹೆಚ್ಚು ಅಂಕ ಗಳಿಸಿದ ಸುಮಾರು ೨೦೦ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು. ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾ ಲಕ ಸಂತೋಷ್ ಉಪ್ಪಾರ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ದಸಂಸ ರಾಜ್ಯ ಸಮಿತಿ ಸದಸ್ಯ ಮರ್ಲೆ ಅಣ್ಣಯ್ಯ, ರಾಜ್ಯ ಸಂಘಟನಾ ಸಂಚಾಲಕ ದಂಟರಮಕ್ಕಿ ಶ್ರೀನಿವಾಸ್, ಛಲವಾದಿ ಮಹಸಭಾ ಜಿಲ್ಲಾಧ್ಯಕ್ಷ ರಘು, ಮಾದಿಗ ದಂಡೂ ಸಂಘದ ಅಧ್ಯಕ್ಷ ರಮೇಶ್, ಭೀಮ ಆರ್ಮಿ ಜಿಲ್ಲಾಧ್ಯಕ್ಷ ಗಿರೀಶ್, ಬಂಧುತ್ವ ವೇದಿಕೆಯ ತಾಲ್ಲೂಕು ಸಂಚಾಲಕ ರಾಕೇಶ್, ಶೃಂಗೇರಿ ಸಂಚಾಲಕ ಎ.ಸಿ.ಶ್ರೀನಿವಾಸ್, ಕಡೂರು ಸಂಚಾಲಕ ಕೆ.ಮೋಹನ್‌ಕುಮಾರ್ ಉಪಸ್ಥಿತರಿದ್ದರು.
The student should have a passion for learning.
Leave a comment