ಚಿಕ್ಕಮಗಳೂರು: ಕಷಿಯಲ್ಲಿ ಹೆಚ್ಚು ರಾಸಾಯನಿಕ, ಕ್ರಿಮಿನಾಶಕ ಬಳಸುತ್ತಿರುವುದರಿಂದ ನಾವು ತಿನ್ನುತ್ತಿರುವ ಆಹಾರವೇ ವಿಷಮಿಶ್ರಿತವಾಗಿದೆ. ವಿಷಮುಕ್ತ ಆಹಾರಕ್ಕಾಗಿ ಸಾವಯವ ಕಷಿ ಪದ್ದತಿಯೊಂದಿಗೆ ಸಿರಿಧಾನ್ಯಗಳನ್ನು ಬಳಸಿ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ಕರ್ನಾಟಕ ರಾಜ್ಯ ಕೃಷಿ ಇಲಾಖೆ, ಜಲಾನಯನ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕಷಿ ಇಲಾಖೆ ಸಹಯೋಗದಲ್ಲಿ ನಗರದ ಎಐಟಿ ಕಾಲೇಜಿನ ಆಂಫಿ ಥಿಯೇಟರ್ನಲ್ಲಿ ಭಾನುವಾರ ಸಿರಿಧಾನ್ಯ ಮೇಳದ ಪ್ರಯುಕ್ತ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಾವಯವ ಮತ್ತು ಸಿರಿಧಾನ್ಯ ಮೇಳದ ಅಧ್ಯPತೆ ವಹಿಸಿ ಅವರು ಮಾತನಾಡಿದರು.
ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯಗಳೇ ರಾಮಬಾಣ. ಸಾವಯವ ಕಷಿಯಲ್ಲಿ ಬೆಳೆದ ಸಿರಿಧಾನ್ಯಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದೆ. ಮಳೆ ಕಡಿಮೆ ಬೀಳುವ ಪ್ರದೇಶದಲ್ಲೂ ಸಿರಿಧಾನ್ಯಗಳನ್ನು ಬೆಳೆಯಬಹುದು. ಸರ್ಕಾರ ಕೂಡ ಸಿರಿಧಾನ್ಯಗಳನ್ನು ಹೆಚ್ಚು ಬೆಳೆಯಬೇಕು ಎಂಬ ನಿಟ್ಟಿನಲ್ಲಿ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಿದರು.
ಬರ ನಿರೋಧಕ ಶಕ್ತಿ ಸಿರಿಧಾನ್ಯಗಳಿಗೆ ಇರುವುದರಿಂದ ಮಳೆ ಕಡಿಮೆಯಾದರೂ ಸಿರಿಧಾನ್ಯಗಳನ್ನು ಬೆಳೆಯಬಹುದು. ಸಿರಿಧಾನ್ಯಗಳಿಂದ ಮಧುಮೇಹ, ಹದಯ ಬೇನೆ ಮತ್ತಿತರೆ ಅನೇಕ ಕಾಯಿಲೆಗಳನ್ನು ತಡೆಯಬಹುದು, ಅಧಿಕ ಪೌಷ್ಟಿಕತೆಯನ್ನು ಹೊಂದಿವೆ. ಹೀಗಾಗಿ ಕಷಿ ಕುಟುಂಬದಲ್ಲಿರುವ ಎಲ್ಲರೂ ಸಾವಯವ ಮತ್ತು ಸಿರಿಧಾನ್ಯಗಳ ಕಷಿಗೆ ಹೆಚ್ಚು ಒತ್ತುಕೊಡಬೇಕು ಎಂದು ಮನವಿ ಮಾಡಿದರು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಪ್ರಾಕತಿಕ ಸರಪಳಿಯನ್ನು ಮನುಷ್ಯ ತುಂಡರಿಸಿರುವುದರಿಂದ ಸ್ವಾವಲಂಬಿಯಾಗಬೇಕಿದ್ದ ರೈತ ಇಂದು ಪರಾವಲಂಬಿಯಾಗಬೇಕಿದೆ. ಎಲ್ಲ ಜೀವಜಂತುಗಳಿಗೂ ಭಗವಂತ ಕೆಲ ಶಕ್ತಿ ಮತ್ತು ಮಿತಿಗಳನ್ನು ಕೊಟ್ಟಿದ್ದಾನೆ. ಹುಳ ಹುಪ್ಪಟೆಗಳನ್ನು ಕಪ್ಪೆ ತಿಂದರೆ, ಕಪ್ಪೆ ಹಾವಿಗೆ ಆಹಾರವಾಗಿತ್ತು. ಹಾವು ನವಿಲಿನ ಆಹಾರವಾಗುತ್ತಿತ್ತು.
ಆದರೆ, ಭೂಮಿಗೆ ಕ್ರಿಮಿನಾಶಕ ಮತ್ತು ರಾಸಾಯನಿಕ ಸುರಿದಿರುವ ಪರಿಣಾಮ ಇಂತಹ ಪ್ರಾಕತಿಕ ಸರಪಳಿಯೇ ತುಂಡಾಗಿದೆ. ಹೀಗಾಗಿ ಅಮತವಾಗಬೇಕಿದ್ದ ತಾಯಿಯ ಹಾಲೇ ವಿಷವಾಗುತ್ತಿದೆ ಎಂದು ಇತ್ತೀಚಿನ ವರದಿಯೊಂದು ಹೇಳಿದೆ. ಸಹಜ ಕಷಿ ಬಿಟ್ಟಿzವೆ. ಸ್ವಾವಲಂಬನೆಯಿಂದ ಪರಾವಲಂಬಿಗಳಾಗಿzವೆ. ಮತ್ತೆ ಸಹಜ ಕಷಿಯತ್ತ ಹೊರಳುವುದೇ ಈಗಿರುವ ಏಕೈಕ ಮಾರ್ಗ. ಇಂತಹ ಸಾವಯವ ಕಷಿ ಮೇಳಗಳು ರೈತನನ್ನು ಸ್ವಾವಲಂಬಿಯಾಗಿಸಲು ಪೂರಕವಾಗಲಿ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ಕಷಿ ಎತ್ತ ಸಾಗುತ್ತಿದೆ ಎಂಬ ಬಗ್ಗೆ ಆತ್ಮಾವಲೋಕನದ ಅಗತ್ಯವಿದೆ. ಕಷಿ ಕುಟುಂಬದಲ್ಲೇ ಹುಟ್ಟಿದ್ದರೂ ಇಂದು ಕಷಿಯಿಂದ ದೂರ ಉಳಿಯುತ್ತಿದ್ದಾರೆ. ಕಷಿ ಬದುಕು ಲಾಭದಾಯಕ, ಇದರಲ್ಲಿ ನೆಮ್ಮದಿ ಕಂಡುಕೊಳ್ಳಬಹುದು ಎಂಬುದನ್ನು ತೋರಿಸಿಕೊಡಬೇಕಿದೆ. ಕಷಿ ಬದುಕು ನಾಶವಾದರೆ ಇಡೀ ದೇಶ, ಮಾನವ ಕುಲ ನಾಶವಾದಂತೆ. ಹೀಗಾಗಿ ಕಷಿ ಬದುಕಿಗೆ ಹೆಚ್ಚಿನ ಮಹತ್ವ ಕೊಡಬೇಕು. ಇಲ್ಲದಿದ್ದರೆ ಮುಂದಿನ ಪೀಳಿಗೆ ಕರಾಳ ದಿನಗಳನ್ನು ನೋಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯP ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ, ಆಧುನಿಕ ಕೃಷಿ ಪದ್ಧತಿಯ ಬಗ್ಗೆ ಹಾಗೂ ಗ್ಯಾರಂಟಿ ಯೋಜನೆಗಳ ಮಹತ್ವದ ಬಗ್ಗೆ ಮಾತನಾಡಿದರು. ಕರ್ನಾಟಕ ರಾಜ್ಯ ಕಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯP ಬಿ.ಎಚ್.ಹರೀಶ್ ಮಾತನಾಡಿದರು. ರೈತ ಮುಖಂಡ ಹೊನ್ನೂರು ಪ್ರಕಾಶ್ ಉಪನ್ಯಾಸ ನೀಡಿದರು. ಹಾಪ್ಕಾಮ್ಸ್ ಅಧ್ಯP ಕೆ.ಎಚ್.ಕುಮಾರಸ್ವಾಮಿ, ರೈತ ಮುಖಂಡರಾದ ಬಸವರಾಜಪ್ಪ, ಕಲ್ಮರುಡಪ್ಪ, ಸುರೇಶ್, ಬಾಲಕಷ್ಣ, ಕಷಿ ವಿಜ್ಞಾನಿ ಡಾ.ಕಷ್ಣಮೂರ್ತಿ, ರವಿ ಮತ್ತಿತರರಿದ್ದರು.
ಗತಿಸಿದ ಜಂಟಿ ಕಷಿ ನಿರ್ದೇಶಕ ಡಾ.ತಿರುಮಲೇಶ್ ಪ್ರಾಸ್ತಾವಿಕ ಮಾತನಾಡಿದರು. ರೂಪನಾಯ್ಕ ನಿರೂಪಿಸಿದರು.
ಸಿರಿಧಾನ್ಯ ಪಾಕ ಸ್ಪರ್ಧೆಯ ವಿಜೇತರಿಗೆ ಪ್ರಮಾಣ ಪತ್ರ ನೀಡಲಾಯಿತು. ಕಷಿ ಮತ್ತು ಸಂಬಂಧಿತ ಇಲಾಖೆಗಳಿಂದ ವಸ್ತು ಪ್ರದರ್ಶನ, ಸಾವಯವ ಮತ್ತು ಸಿರಿಧಾನ್ಯ ಉತ್ಪನ್ನಗಳ ಪ್ರದರ್ಶನ, ಕಷಿ ಯಂತ್ರೋಪಕರಣಗಳ ಪ್ರದರ್ಶನದ ಜತೆಗೆ ಸ್ವಸಹಾಯ ಸಂಘಗಳ ಉತ್ಮನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು.
Return to organic farming for toxin-free food
Leave a comment