ಚಿಕ್ಕಮಗಳೂರು: ರಾಜ್ಯದ ಅಹಿಂದಾ ನಾಯಕ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಗಳಾಗಿ ಅತಿಹೆಚ್ಚು ತಿಂಗಳು ಆಡಳಿತ ನಡೆಸಿದ ಹಿನ್ನೆಲೆ ಜ.೦೬ ರಂದು ನಗರದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಎಸ್.ಶಾಂತೇಗೌಡ ಹೇಳಿದರು.
ನಗರದ ಕನಕ ಸಮುದಾಯ ಭವನದಲ್ಲಿ ಶುಕ್ರವಾರ ಚಿಕ್ಕಮಗಳೂರು ಅಹಿಂದಾ ಒಕ್ಕೂಟದಿಂದ ಆ ಯೋಜಿಸಿದ್ಧ ಅಹಿಂದಾ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ ರಾಜ್ಯ ಕಂಡ ದಿಮಂತ ನಾಯಕ ಶೋಷಿತರ ಧ್ವನಿಯಾಗಿದ್ದ ದೇವರಾಜ್ ಅರಸ್ ಅವರ ರೀತಿಯಲ್ಲಿ ಮತ್ತೋರ್ವ ಅಹಿಂದ ಧೀಮಂತ ನಾಯಕ ಸಿದ್ದರಾಮಯ್ಯನವರು. ಈಗ ಅರಸುರವರ ದಾಖಲೆ ಮುರಿದು ದೀರ್ಘಾವಧಿ ಸಿಎಂ ಎಂಬ ಹೊಸ ದಾಖಲೆಯನ್ನು ಬರೆಯಲು ಸಿದ್ದರಾಮಯ್ಯನವರು ಹೊರಟ್ಟಿದ್ದಾರೆ ಎಂದರು.
ಪ್ರಸಕ್ತ ರಾಜ್ಯದ ಮುಖ್ಯಮಂತ್ರಿ ಚುಕ್ಕಾಣಿ ಮುಂದಿನ ಎರಡೂವರೆ ವರ್ಷಗಳ ಕಾಲ ಸಿದ್ದರಾಮಯ್ಯನ ವರೇ ಪೂರೈಸಬೇಕು ಎಂಬ ಆಶಯವನ್ನು ರಾಜ್ಯದ ಅಹಿಂದಾವಾದಿ, ಹಿಂದುಳಿದ ವರ್ಗದವರ ಕನಸಾಗಿದೆ. ಹೀಗಾಗಿ ಕ್ಷೇತ್ರದಲ್ಲಿ ಅಂದು ಆರೋಗ್ಯ, ರಕ್ತದಾನ ಶಿಬಿರ, ಆಸ್ಪತ್ರೆಗೆ ಹಣ್ಣು-ಹಂಪಲು, ಔತಣಕೂಟ ಕಾರ್ಯ ಕ್ರಮ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಅಂದಿನ ಕಾರ್ಯಕ್ರಮವು ನಗರದ ತಾಲ್ಲೂಕು ಕಚೇರಿಯ ಸಮೀಪದ ಶ್ರೀ ಗಣಪತಿ ದೇವಸ್ಥಾನದಲ್ಲಿ ಸಿದ್ದರಾಮಯ್ಯರ ದೀರ್ಘಾಯ್ಯುಷಿಗೆ ಪ್ರಾರ್ಥಿಸಲಾಗುವುದು. ನಂತರ ತಾಲ್ಲೂಕು ಕಚೇರಿಯಿಂದ ಸುಮಾರು ೬೦೦ಕ್ಕೂ ಹೆಚ್ಚು ಮಂದಿ ಅಹಿಂದಾ ಒಕ್ಕೂಟ, ಅಭಿಮಾನಿಗಳ ಬಳಗದವರು ಭಾಗವಹಿಸಿ, ಚಂದ್ರಶೇಖರ್ ಆಜಾದ್‌ಪಾರ್ಕ್ ವೃತ್ತದವರೆಗೆ ಮೆರವಣಿಗೆ ಜಾಥಾ ನಡೆಸಲಾಗುವುದು ಎಂದರು.
ಚಿಕ್ಕಮಗಳೂರು ಅಹಿಂದಾ ಒಕ್ಕೂಟ ಅಧ್ಯಕ್ಷ ತ್ರಿಭುವನ್ ಎತ್ತಿನಮನೆ ಅಧ್ಯಕ್ಷತೆ ವಹಿಸಿ ಮಾತನಾಡಿ ನಾಡಿನ ಹೆಮ್ಮೆಯ ನಾಯಕ ಸಿದ್ದರಾಮಯ್ಯನವರು ಜನಪರವಾಗಿ ಕಾರ್ಯನಿರ್ವಹಿಸಿದ ಅಪರೂಪ ನಾ ಯಕ. ಇವರನ್ನು ಇಡೀ ಅಹಿಂದಾ ಸೇರಿದಂತೆ ಜನಸಾಮಾನ್ಯರು ಕೊಂಡಾಡಲು ಅವರ ಕಾರ್ಯವೈಖರಿ ಯೇ ಪ್ರಮುಖ ಕಾರಣ ಎಂದು ಹೇಳಿದರು.
ಸಿದ್ದರಾಮಯ್ಯನವರ ಕಾರ್ಯವೈಖರಿ ಸಲುವಾಗಿ ಅಹಿಂದ ಸಂಘಟನೆ ವತಿಯಿಂದ ಜನವರಿ ೦೬ರಂ ದು ಬೆಳಿಗ್ಗೆ ೧೦ ಗಂಟೆಗೆ ಬೃಹತ್ ಜಾಥಾ ಹಮ್ಮಿಕೊಳ್ಳಲಾಗಿದ್ದು ಎಲ್ಲಾ ಶೋಷಿತ ಹಿಂದುಳಿದ, ದಲಿತ, ಅಲ್ಪ ಸಂಖ್ಯಾತ, ಅಹಿಂದ ಒಕ್ಕೂಟಗಳು, ಸಿದ್ದರಾಮಯ್ಯನವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿ ಸಲಿದ್ದಾರೆ ಎಂದರು.
ಈ ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾ ವಕ್ತಾರ ರೂಬೆನ್‌ಮೋಸಸ್, ನಗರಾಧ್ಯಕ್ಷ ತನೋಜ್, ಸಿಡಿಎ ಅಧ್ಯಕ್ಷ ಮೊಹಮ್ಮದ್ ನಯಾಜ್, ಜಿ.ಪಂ. ಮಾಜಿ ಅಧ್ಯಕ್ಷೆ ರೇಖಾಹುಲಿಯಪ್ಪಗೌಡ, ನಗರಸಭೆ ಸದಸ್ಯರಾದ ಜಾವೀದ್, ಶಾದಬ್, ತಾಲ್ಲೂಕು ಗ್ಯಾರಂಟಿ ಅಧ್ಯಕ್ಷ ಮಲ್ಲೇಶಸ್ವಾಮಿ, ಮುಖಂಡರುಗಳಾದ ಪ್ರಸಾದ್ ಅಮೀ ನ್, ರಾಮಚಂದ್ರ, ಸಿಲ್ವೆಸ್ಟರ್, ಭದ್ರೇಗೌಡ, ಸಿ.ಸಿ.ಮಧು, ಡಿ.ಪಿ.ಪುಟ್ಟೇಗೌಡ, ಜಗ ದೀಶ್, ಸುರೇಶ್, ಸಂತೋ ಷ್, ಪ್ರಕಾಶ್‌ರೈ ಉಪಸ್ಥಿತರಿದ್ದರು.
Various programs from the ruling coalition for the longest month
Leave a comment