ಚಿಕ್ಕಮಗಳೂರು: ಮಲೆನಾಡು ತೋಟಕಾರ್ಮಿಕರ ನೆರವಿಗಾಗಿ ಮಲೆನಾಡು ಲೇಬರ್ ಕಂಟ್ರ್ಯಾಕ್ಟರ್ ಸಂಘ ಜಿಲ್ಲೆಯಲ್ಲಿ ಅಸ್ಥಿತ್ವಕ್ಕೆ ಬಂದಿದೆ. ಅಧ್ಯಕ್ಷರಾಗಿ ಎಸ್.ಸೆಲ್ವರಾಜ್, ಉಪಾಧ್ಯಕ್ಷ ಕೆ.ಮಂಜು ಹಾಗೂ ಕಾರ್ಯದರ್ಶಿಯಾಗಿ ಎ.ವಿ.ಮರಿಯ ದೋನಿಕ್ ಆಯ್ಕೆಯಾಗಿದ್ದಾರೆ.
ಟಿ.ಪರಶುರಾಮ್ (ಸಹ ಕಾರ್ಯದರ್ಶಿ), ಮಂಜು (ಖಜಾಂಚಿ), ಬಿ.ಎಸ್.ಯೋಗೀಶ್ (ಕಾನೂನು ಸಲಹೆಗಾರ ಹಾಗೂ ಕೆ.ಪ್ರಭಾಕರ್, ಕೆ.ಕಾಳಿಯಪ್ಪನ್, ಎಸ್.ಸೈಮನ್, ಮುರುಗೇಶ್ ಹಾಗೂ ಎಂ.ಸಿಮ್ಸನ್ (ನಿರ್ದೇಶಕರುಗಳು).
ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಎಸ್.ಸೆಲ್ವರಾಜ್ ಮಲೆನಾಡು ಭಾಗದ ಕಾಫಿ ತೋಟಗಳ ಲ್ಲಿ ಅತಿಹೆಚ್ಚು ಹೊರರಾಜ್ಯದ ತಮಿಳಿಗರಿಗೆ ತೋಟದ ಕೆಲಸಕ್ಕೆ ಆದ್ಯತೆ ನೀಡಲಾಗಿದೆ. ಇದರಿಂದ ಸ್ಥಳೀಯ ಮಲೆನಾಡು ಕಾರ್ಮಿಕರಿಗೆ ತೀವ್ರ ಸಮಸ್ಯೆ ಎದುರಾಗುತ್ತಿದೆ ಎಂದು ತಿಳಿಸಿದರು.
ಕಾಫಿ ತೋಟದ ವೃತ್ತಿಯನ್ನೇ ಅವಲಂಬಿಸಿಕೊಂಡು ಜಿಲ್ಲೆಯಲ್ಲಿ ಸಾವಿರಾರು ಮಂದಿ ಜೀವನ ಕಟ್ಟಿಕೊ ಂಡಿದ್ದಾರೆ. ಈ ವೃತ್ತಿ ಹೊರತಾಗಿ ಬೇರೆ ಯಾವುದೇ ವೃತ್ತಿ ಬಗ್ಗೆ ಅರಿವಿಲ್ಲ. ಈ ನಡುವೆ ಸ್ಥಳೀಯರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡದೇ ಹೊರರಾಜ್ಯದ ಕಾರ್ಮಿಕರಿಗೆ ಪ್ರೋತ್ಸಾಹಿಸುವುದು ತರವಲ್ಲ ಎಂದು ಹೇಳಿದರು.
ಅಲ್ಲದೇ ಹೊರರಾಜ್ಯದ ಕಾರ್ಮಿಕರು, ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಕಳಿಸದೇ ತೋ ಟದ ಕೆಲಸಕ್ಕೆ ಕರೆತಂದು ಕೆಲಸ ಮಾಡಿಸುತ್ತಿರುವುದು ಖಂಡನೀಯ. ಈ ಬಗ್ಗೆ ಸಂಬಂಧಿಸಿದ ತೋಟದ ಮಾಲೀಕರು ಹಾಗೂ ಜಿಲ್ಲಾಡಳಿತ ಸೂಕ್ತ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
Malenadu Labor Contractors Association for existence
Leave a comment