Home namma chikmagalur chikamagalur 208ನೇ ಭೀಮಾ ಕೋರೆಗಾಂವ್ ವಿಜಯೋತ್ಸವ
chikamagalurHomeLatest Newsnamma chikmagalur

208ನೇ ಭೀಮಾ ಕೋರೆಗಾಂವ್ ವಿಜಯೋತ್ಸವ

Share
Share

ಚಿಕ್ಕಮಗಳೂರು: ನಗರದ ಆಜಾದ್‌ವೃತ್ತದಲ್ಲಿ ಪರಿಶಿಷ್ಟಜಾತಿ ನಿವೃತ್ತ ನೌಕರರ ಸಂಘದಿಂದ ೨೦೮ನೇ ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ಆಚರಿಸಲಾಯಿತು.

ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಪಿ.ಪರಮೇಶ್ವರ್ ಭೀಮಾಕೋರೆಗಾಂವ್ ವಿಜಯೋತ್ಸವ ಕುರಿತು ಉಪನ್ಯಾಸ ನೀಡಿ ದೇಶದ ಚರಿತ್ರೆಯಲ್ಲಿ ಸಮಾನತೆ ಮತ್ತು ಸ್ವಾಭಿಮಾನಕ್ಕಾಗಿ ಅನೇಕ ಹೋರಾಟಗಳು ನಡೆದಿದ್ದು, ಅದರಲ್ಲಿ ಅತ್ಯಂತ ಮಹತ್ವವಾದವುಗಳಲ್ಲಿ ಕೋರೆಗಾಂವ್ ಯುದ್ಧ ಮಹತ್ವವಾಗಿದೆ ಎಂದು ತಿಳಿಸಿದರು.

ಕಳೆದ ೧೮೧೭ರ ಡಿಸೆಂಬರ್ ೩೧ ರಂದು ಪುಣೆಯಿಂದ ಹೊರದ ಬಾಂಬೆ ರೆಜಿಮೆಂಟ್ ಸೈನ್ಯ ೧೨ ಗಂಟೆ ನಡೆದು ಭೀಮಾನದಿತೀರದ ಕೋರೆಗಾಂವ್ ಸ್ಥಳದಲ್ಲಿ ೫೦೦ ಮಂದಿ ಮಹರ್ ಸೈನಿಕರು ಪೇಶ್ವೆಯ ೨ನೇ ಬಾಜಿರಾಯನ ವಿರುದ್ಧ ಯುದ್ಧಮಾಡಿ ಪೇಶ್ವೆಯ ೨೮ಸಾವಿರ ಸೈನಿಕರನ್ನು ಸೋಲಿಸುತ್ತಾರೆ. ೧೭೧ಬಾಂಬೆ ರೆಜಿಮೆಂಟ್ ಸೈನಿಕರ ಬಲಿದಾನದೊಂದಿಗೆ ೧೮೧೮ನೇ ಜನವರಿ ೧ ರಂದು ಬೆಳಿಗ್ಗೆ ಮಹರ್ ಸೈನಿಕರು ಭೀಮಾನದಿಯಲ್ಲಿ ಸ್ನಾನಮಾಡಿ ವಿಜಯೋತ್ಸವ ಆಚರಿಸುತ್ತಾರೆಂದರು.

ಯುದ್ಧದಲ್ಲಿ ಮಡಿದ ಮಹರ್ ಸೈನಿಕರ ನೆನಪಿಗಾಗಿ ಸ್ತೂಪವನ್ನು ಬ್ರಿಟಿಸ್ ಸರ್ಕಾರ ನಿರ್ಮಿಸುತ್ತದೆ. ಈ ಯುದ್ಧದ ಮಾಹಿತಿಯನ್ನು ಅಂಬೇಡ್ಕರ್ ತಿಳಿದುಕೊಳ್ಳುತ್ತಾರೆ. ಪ್ರತಿವರ್ಷ ಜನವರಿ ೧ರಂದು ದೇಶದ ಯಾವ ಮೂಲೆಯಲ್ಲಿದ್ದರೂ ಅಂಬೇಡ್ಕರ್ ಕೋರೆಗಾಂವ್ ಸ್ಥಳಕ್ಕೆ ಆಗಮಿಸಿ ಯುದ್ಧದಲ್ಲಿ ಮಡಿದ ಮಹರ್ ಸೈನಿಕರ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದರೆಂದರು.

ಪರಿಶಿಷ್ಟಜಾತಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಮಾಗಡಿ ಜವರಯ್ಯ ಅಧ್ಯಕ್ಷತೆವಹಿಸಿದ್ದರು. ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ, ಸಂಘದ ಗೌರವಾಧ್ಯಕ್ಷ ಹರಿಯಪ್ಪ, ಉಪಾಧ್ಯಕ್ಷ ಅಣ್ಣಯ್ಯ, ಇಂದಿರಮ್ಮ, ಖಜಾಂಚಿ ರೇವಣ್ಣ, ಮುಖಂಡರಾದ ಹೆಚ್.ಜೆ. ಪರಮೇಶ್, ಎಂ.ಎಸ್.ಪ್ರಕಾಶ್, ಜಯರಾಮ, ದಲಿತ ಸಂಘಟನೆ ಮರ್ಲೆ ಅಣ್ಣಯ್ಯ, ದಂಟರಮಕ್ಕಿ ಶ್ರೀನಿವಾಸ ಅಂಬೇಡ್ಕರ್ ಸ್ಟಡಿಸರ್ಕಲ್ ಮುಖ್ಯಸ್ಥ ಚಂದ್ರಪ್ಪ, ಮೂಡಿಗೆರೆ ಅನಂತ್, ಮರಿಯಪ್ಪ, ಹಾಲಯ್ಯ, ಬಾಳೆಹೊನ್ನೂರಿನ ನಿರ್ವಾಣಪ್ಪ, ಮಂಜುನಾಥ, ಪುಟ್ಟಸ್ವಾಮಿ ಇದ್ದರು.
ಸಂಘದ ಕಾರ್ಯದರ್ಶಿ ವೀರಭದ್ರಯ್ಯ ಸ್ವಾಗತಿಸಿ, ಭೀಮಯ್ಯ ವಂದಿಸಿ, ಎಂ.ಆರ್.ಗಂಗಾಧರ ನಿರೂಪಿಸಿದರು.

208th Bhima Koregaon Victory Day

Share

Leave a comment

Leave a Reply

Your email address will not be published. Required fields are marked *

Don't Miss

ದಾಸರಹಳ್ಳಿ ಕೆರೆ ಸೆ.೧೦ ರಂದು ಲೋಕಾರ್ಪಣೆ

ಚಿಕ್ಕಮಗಳೂರು: ಸುಮಾರು ೨ ಕೋಟಿ ರುಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿರುವ ದಾಸರಹಳ್ಳಿ ಕೆರೆಯನ್ನು ಸೆಪ್ಟಂಬರ್ ೧೦ ರಂದು ಲೋಕಾರ್ಪಣೆ ಮಾಡಲಾಗುವುದು ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಹೇಳಿದರು. ಸೋಮವಾರ ಕೆರೆಯ...

ಸಾಮಾಜಿಕ ಹೋರಾಟಗಾರನ ಹತ್ಯೆಯ ಆರೋಪಿಗಳ ಕಠಿಣ ಶಿಕ್ಷೆಗೆ ಮನವಿ

ಚಿಕ್ಕಮಗಳೂರು:  ಸಾಮಾಜಿಕ ಹೋರಾಟಗಾರ ಹಾಗೂ ದಲಿತ ಮುಖಂಡ ಭೂಮಾನ ಂದ ಹತ್ಯೆಗೈದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ, ನೊಂದ ಕುಟುಂಬಕ್ಕೆ ಸರ್ಕಾರಿ ಹುದ್ದೆ ಕಲ್ಪಿಸಿಕೊಡಬೇ ಕು ಎಂದು ಆಗ್ರಹಿಸಿ ದಸಂಸ ಮುಖಂಡರುಗಳು...

Related Articles

ನಗರದಲ್ಲಿ ಅವಿಧಿ ಮುಗಿದ ಚಾಕೊಲೇಟ್ ಸಾಸ್ ಬಳಸಿ ಕೇಕ್ ….?

ಚಿಕ್ಕಮಗಳೂರು: ರಾಜ್ಯಾದ್ಯಂತ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಹೋಟೆಲ್‌ ಹಾಗೂ ಬೇಕರಿಗಳ ಮೇಲೆ ಕ್ಷಿಪ್ರ ಕಾರ್ಯಾಚರಣೆ...

ಬಿಜೆಪಿ-ಸಂಘಪರಿವಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಚಿಕ್ಕಮಗಳೂರು: ಉತ್ತರಾಖಾಂಡ ರಾಜ್ಯದ ಹಾಲದ್ವಾನಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಮೈದಾನವನ್ನು...

ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ

ಚಿಕ್ಕಮಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿಯಿಂದ...

ರಾಷ್ಟ್ರಧ್ವಜ ಅವಮಾನ ಆರೋಪ: ಕಾನೂನು ಕ್ರಮಕ್ಕೆ ರೈತ ಸಂಘ ಆಗ್ರಹ

ಚಿಕ್ಕಮಗಳೂರು: ಸ್ವಾತಂತ್ರ್ಯ ದಿನಾಚರಣೆಯಂದು ಬೆಳಿಗ್ಗೆ ರಾಷ್ಟ್ರಧ್ವಜಾರೋಹಣ ಮಾಡಿ, ಮಧ್ಯಾಹ್ನದ ವೇಳೆಗೆ ಧ್ವಜವನ್ನು ಅವರೋಹಣ ಮಾಡಿರುವ ಘಟನೆಗೆ...