ಚಿಕ್ಕಮಗಳೂರು: ನಗರದ ಆಜಾದ್ವೃತ್ತದಲ್ಲಿ ಪರಿಶಿಷ್ಟಜಾತಿ ನಿವೃತ್ತ ನೌಕರರ ಸಂಘದಿಂದ ೨೦೮ನೇ ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ಆಚರಿಸಲಾಯಿತು.
ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಪಿ.ಪರಮೇಶ್ವರ್ ಭೀಮಾಕೋರೆಗಾಂವ್ ವಿಜಯೋತ್ಸವ ಕುರಿತು ಉಪನ್ಯಾಸ ನೀಡಿ ದೇಶದ ಚರಿತ್ರೆಯಲ್ಲಿ ಸಮಾನತೆ ಮತ್ತು ಸ್ವಾಭಿಮಾನಕ್ಕಾಗಿ ಅನೇಕ ಹೋರಾಟಗಳು ನಡೆದಿದ್ದು, ಅದರಲ್ಲಿ ಅತ್ಯಂತ ಮಹತ್ವವಾದವುಗಳಲ್ಲಿ ಕೋರೆಗಾಂವ್ ಯುದ್ಧ ಮಹತ್ವವಾಗಿದೆ ಎಂದು ತಿಳಿಸಿದರು.
ಕಳೆದ ೧೮೧೭ರ ಡಿಸೆಂಬರ್ ೩೧ ರಂದು ಪುಣೆಯಿಂದ ಹೊರದ ಬಾಂಬೆ ರೆಜಿಮೆಂಟ್ ಸೈನ್ಯ ೧೨ ಗಂಟೆ ನಡೆದು ಭೀಮಾನದಿತೀರದ ಕೋರೆಗಾಂವ್ ಸ್ಥಳದಲ್ಲಿ ೫೦೦ ಮಂದಿ ಮಹರ್ ಸೈನಿಕರು ಪೇಶ್ವೆಯ ೨ನೇ ಬಾಜಿರಾಯನ ವಿರುದ್ಧ ಯುದ್ಧಮಾಡಿ ಪೇಶ್ವೆಯ ೨೮ಸಾವಿರ ಸೈನಿಕರನ್ನು ಸೋಲಿಸುತ್ತಾರೆ. ೧೭೧ಬಾಂಬೆ ರೆಜಿಮೆಂಟ್ ಸೈನಿಕರ ಬಲಿದಾನದೊಂದಿಗೆ ೧೮೧೮ನೇ ಜನವರಿ ೧ ರಂದು ಬೆಳಿಗ್ಗೆ ಮಹರ್ ಸೈನಿಕರು ಭೀಮಾನದಿಯಲ್ಲಿ ಸ್ನಾನಮಾಡಿ ವಿಜಯೋತ್ಸವ ಆಚರಿಸುತ್ತಾರೆಂದರು.
ಯುದ್ಧದಲ್ಲಿ ಮಡಿದ ಮಹರ್ ಸೈನಿಕರ ನೆನಪಿಗಾಗಿ ಸ್ತೂಪವನ್ನು ಬ್ರಿಟಿಸ್ ಸರ್ಕಾರ ನಿರ್ಮಿಸುತ್ತದೆ. ಈ ಯುದ್ಧದ ಮಾಹಿತಿಯನ್ನು ಅಂಬೇಡ್ಕರ್ ತಿಳಿದುಕೊಳ್ಳುತ್ತಾರೆ. ಪ್ರತಿವರ್ಷ ಜನವರಿ ೧ರಂದು ದೇಶದ ಯಾವ ಮೂಲೆಯಲ್ಲಿದ್ದರೂ ಅಂಬೇಡ್ಕರ್ ಕೋರೆಗಾಂವ್ ಸ್ಥಳಕ್ಕೆ ಆಗಮಿಸಿ ಯುದ್ಧದಲ್ಲಿ ಮಡಿದ ಮಹರ್ ಸೈನಿಕರ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದರೆಂದರು.
ಪರಿಶಿಷ್ಟಜಾತಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಮಾಗಡಿ ಜವರಯ್ಯ ಅಧ್ಯಕ್ಷತೆವಹಿಸಿದ್ದರು. ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ, ಸಂಘದ ಗೌರವಾಧ್ಯಕ್ಷ ಹರಿಯಪ್ಪ, ಉಪಾಧ್ಯಕ್ಷ ಅಣ್ಣಯ್ಯ, ಇಂದಿರಮ್ಮ, ಖಜಾಂಚಿ ರೇವಣ್ಣ, ಮುಖಂಡರಾದ ಹೆಚ್.ಜೆ. ಪರಮೇಶ್, ಎಂ.ಎಸ್.ಪ್ರಕಾಶ್, ಜಯರಾಮ, ದಲಿತ ಸಂಘಟನೆ ಮರ್ಲೆ ಅಣ್ಣಯ್ಯ, ದಂಟರಮಕ್ಕಿ ಶ್ರೀನಿವಾಸ ಅಂಬೇಡ್ಕರ್ ಸ್ಟಡಿಸರ್ಕಲ್ ಮುಖ್ಯಸ್ಥ ಚಂದ್ರಪ್ಪ, ಮೂಡಿಗೆರೆ ಅನಂತ್, ಮರಿಯಪ್ಪ, ಹಾಲಯ್ಯ, ಬಾಳೆಹೊನ್ನೂರಿನ ನಿರ್ವಾಣಪ್ಪ, ಮಂಜುನಾಥ, ಪುಟ್ಟಸ್ವಾಮಿ ಇದ್ದರು.
ಸಂಘದ ಕಾರ್ಯದರ್ಶಿ ವೀರಭದ್ರಯ್ಯ ಸ್ವಾಗತಿಸಿ, ಭೀಮಯ್ಯ ವಂದಿಸಿ, ಎಂ.ಆರ್.ಗಂಗಾಧರ ನಿರೂಪಿಸಿದರು.
208th Bhima Koregaon Victory Day
Leave a comment