Home namma chikmagalur chikamagalur ಜಿಲ್ಲಾ ಆಟದ ಮೈದಾನದಲ್ಲಿ ರಾಜ್ಯ ಮಟ್ಟದ ಡಾಗ್ ಶೋ
chikamagalurHomeLatest Newsnamma chikmagalur

ಜಿಲ್ಲಾ ಆಟದ ಮೈದಾನದಲ್ಲಿ ರಾಜ್ಯ ಮಟ್ಟದ ಡಾಗ್ ಶೋ

Share
Share

ಚಿಕ್ಕಮಗಳೂರು- ನಮಗಿಂತ ನಾಲ್ಕು ಪಟ್ಟು ನಾಯಿಗಳು ನಮ್ಮನ್ನು ಪ್ರೀತಿಸುತ್ತವೆ. ರೈತ ಸ್ನೇಹಿಯಾಗಿರುವ ನಾಯಿಗಳು ಪೊಲೀಸ್ ಇಲಾಖೆ ಮತ್ತು ಸೈನ್ಯದಲ್ಲಿ ದೇಶ ಕಾಯುವ ಸೇನಾನಿಗಳು ಹೌದು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಅಭಿಪ್ರಾಯ ಪಟ್ಟರು.

ನಗರದ ಸುಭಾಷ್‌ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಕೆನಲ್ ಕ್ಲಬ್ ನಿಂದ ಭಾನುವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಡಾಗ್ ಶೋ ಉದ್ಘಾಟಿಸಿ ಅವರು ಮಾತನಾಡಿದರು. ಶ್ವಾನಗಳೆಂದರೆ ಬಹುತೇಕ ಎಲ್ಲರಿಗೂ ಅಚ್ಚುಮೆಚ್ಚು. ರೈತರ ಜಮೀನಿನಲ್ಲಿ ಬೆಳೆ ರಕ್ಷಣೆ ಮಾಡುವ ನಿಯತ್ತಿನ ಪ್ರಾಣಿ ಶ್ವಾನ.

ದೇಶದಲ್ಲಿ ಯಾವುದೇ ಅಪರಾಧ ಕೃತ್ಯ ನಡೆದಲ್ಲಿ ಅದನ್ನು ತನಿಖೆ ಮಾಡಲು ಪೊಲೀಸರಿಗೆ ಅತಿಹೆಚ್ಚು ಸಹಾಯ ಮಾಡುವುದೇ ಈ ಶ್ವಾನಗಳು. ಬಾಂಬ್ ನಿಷ್ಕ್ರೀಯ ದಳದಲ್ಲೂ ಶ್ವಾನಗಳು ಪ್ರಮುಖ ಪಾತ್ರ ವಹಿಸುತ್ತವೆ. ಒಂಟಿ ಮನೆ, ಹೊರವಲಯದ ಮನೆಗಳಲ್ಲಿ ನೆಮ್ಮದಿಯಿಂದ ಕಾಲ ಕಳೆಯಲು ಈ ಶ್ವಾನಗಳೇ ಕಾರಣ. ನಾಯಿಗಳನ್ನು ಮಕ್ಕಳಿಗಿಂತ ಹೆಚ್ಚು ಪ್ರೀತಿಸುವವರಿದ್ದಾರೆ ಎಂದರು.

ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್‌ಕುಮಾರ್ ಮಾತನಾಡಿ, ಇಲಾಖೆಯಿಂದ ಜನವರಿ ೨೬ ರ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ನಗರದಲ್ಲಿ ಜಾನುವಾರು ಪ್ರದರ್ಶನದ ಜತೆಗೆ ಡಾಗ್ ಶೋ ನಡೆಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಶ್ವಾನ ಸಂರಕ್ಷಣಾ ಕೇಂದ್ರದ ನಳಿನಾ ಡಿಸಾ ಮಾತನಾಡಿ, ಮಾನವನ ಬಿಟ್ಟು ಬದುಕಿರಲಾರದಂತಹ ನಿಷ್ಠಾವಂತ ಪ್ರಾಣಿ ನಾಯಿ. ಪ್ರಕೃತಿಯ ಒಂದು ಭಾಗ ಪಶು,ಪ್ರಾಣಿಗಳು. ಅವುಗಳ ಜತೆಯೇ ಜೀವನ ನಡೆಸುವುದೂ ಅನಿವಾರ್ಯ. ಅದನ್ನು ಬ್ರೇಕ್ ಮಾಡಬಾರದು. ಮಾಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದರು. ನಾಯಿಗಳಿಗೆ ಸಾರ್ವಜನಿಕ ಸ್ಥಳದಲ್ಲಿ ಊಟ ಹಾಕಬಾರದು ಎಂದು ನ್ಯಾಯಾಲಯ ಹೇಳಿದೆ.

ಆದರೆ, ನಾವು ಆಹಾರ ಹಾಕಿದರೆ ಮಾತ್ರ ನಾಯಿಗಳು ಬದುಕುತ್ತವೆ. ಇಲ್ಲದಿದ್ದರೆ ಮತ್ತಷ್ಟು ವ್ಯಗ್ರವಾಗುತ್ತವೆ. ಹೀಗಾಗಿ ಜನ ಸಮೂಹ ಇಲ್ಲದಕಡೆ, ಮಕ್ಕಳಿಲ್ಲದ ಕಡೆ ಊಟ ಹಾಕಬಹುದು. ನಾಯಿ ಸೇರಿದಂತೆ ಎಲ್ಲ ಪ್ರಾಣಿಗಳಿಗೂ ಕರುಣೆ ,ಅನುಕಂಪ ತೋರಿಸಿ ಎಂದು ಹೇಳಿದರು. ಇದೇ ವೇಳೆಕೆನಲ್ ಕ್ಲಬ್ ಲೋಗೋ ಮತ್ತು ವಾರ್ಷಿಕ ಮ್ಯಾಗ್ಸಿನ್ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್, ಉಪಾಧ್ಯಕ್ಷೆ ಲಲಿತಾರವಿನಾಯ್ಕ, ಸದಸ್ಯರಾದ ಎ.ಸಿ.ಕುಮಾರಗೌಡ, ಸಂತೋಷ್ ಕೋಟ್ಯಾನ್, ಕೆನಲ್ ಕ್ಲಬ್ ಗೌರವಾಧ್ಯಕ್ಷ ಕವೀಶ್ ಕುಮಾರ್, ಅಧ್ಯಕ್ಷ ಅನೂಪ್, ಉಪಾಧ್ಯಕ್ಷ ರಮೇಶ್ ಎಮ್ಮೆದೊಡ್ಡಿ, ಕಾರ್ಯದರ್ಶಿ ಉದಯ್ ಕುಮಾರ್.ಕೆ. ಸಹಕಾರ್ಯದರ್ಶಿ ವೆಂಕಟೇಶ್ ಕಡೂರ್, ಮನೋಜ್, ದೀಪಕ್ ಸುವರ್ಣ, ಚಂದನ್ ಅರಸ್, ವಿಜಯ್, ಪ್ರವೀಣ್, ಪೀಟರ್ ನಿರಂಜನ್ ಹೊಸಮನೆ, ನಾಗೇಂದ್ರ ತರೀಕೆರೆ, ಮಧು ಕಡೂರು, ಪ್ರದೀಪ್ ಕೋಟೆ ಕಡೂರ್, ಪ್ರದೀಪ್‌ಶಿವಕುಮಾರ್, ದೀಕ್ಷತ್ ಗೌಡ, ಗೌತಮ್, ಪುನೀತ್, ಮನನ್ ಗೌಡ, ಹರ್ಷಿತ್ ಗೌಡ ಮತ್ತಿತರೆ ಪದಾಕಾರಿಗಳು ಇದ್ದರು. ಜರ್ಮನ್ ಶಫರ್ಡ್ ಸೇರಿದಂತೆ ದೇಶಿಯ ವಿವಿಧ ತಳಿಗಳ ಶ್ವಾನಗಳ ಪ್ರದರ್ಶನ ನಡೆಯಿತು. ತೀರ್ಪುಗಾರರಾಗಿ ಕಲ್ಕತ್ತಾದ ಭಟ್ಟಾಚಾರ್ಯ, ಸುಭಾಷ್ ಅಲ್ದಾರ್ ಭಾಗವಹಿಸಿದ್ದರು.

State level dog show at district playground

Share

Leave a comment

Leave a Reply

Your email address will not be published. Required fields are marked *

Don't Miss

ಸಾಲದ ಹಣ ಕೇಳಿದ್ದಕ್ಕೆ ಹಲ್ಲೆ; ತಾಯಿ-ಮಗನ ವಿರುದ್ಧ ಪ್ರಕರಣ

ಕಡೂರು: ಸಾಲವಾಗಿ ನೀಡಿದ್ದ ₹50 ಸಾವಿರವನ್ನು ಹಿಂದಿರುಗಿಸುವಂತೆ ಕೇಳಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಯಗಟಿ ಪೊಲೀಸ್ ಠಾಣೆಯಲ್ಲಿ ತಾಯಿ-ಮಗನ ವಿರುದ್ಧ ಪ್ರಕರಣ ದಾಖಲಾಗಿದೆ. ಯಗಟಿ ಗ್ರಾಮದ ಮುದಿಯಪ್ಪ ಬಡಾವಣೆಯ...

ಹುಬ್ಬಳ್ಳಿಯಲ್ಲಿ ಆಗಸ್ಟ್ 9ರಂದು ರಾಜ್ಯಮಟ್ಟದ 32ನೇ ವಿಶ್ವ ಆದಿವಾಸಿ ದಿನಾಚರಣೆ

ಚಿಕ್ಕಮಗಳೂರು: ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಹಾಗೂ ಆದಿವಾಸಿ ಹರಣ ಶಿಖಾರಿ ಪಾರಿ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಆಗಸ್ಟ್ 9ರಂದು ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ 32ನೇ ವಿಶ್ವ ಆದಿವಾಸಿ ದಿನಾಚರಣೆ ಅಂಗವಾಗಿ...

Related Articles

ಗ್ರಾಮೀಣ ಪ್ರದೇಶದಲ್ಲಿ ವಲಸೆ ತಡೆಗೆ ವಿಬಿ ಜಿ ರಾಮ್ ಜಿ ಆಸರೆ

ಚಿಕ್ಕಮಗಳೂರು: ಗ್ರಾಮೀಣ ಭಾಗದ ಜನರು ಉದ್ಯೋಗಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಿ, ತಮ್ಮ ಗ್ರಾಮಗಳಲ್ಲಿಯೇ...

ಆಗಸ್ಟ್ 14 ಮತ್ತು 16 ರಂದು ವಿದ್ಯುತ್ ನಿಲುಗಡೆ

ಚಿಕ್ಕಮಗಳೂರು:  ಗ್ರಾಮೀಣ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಹೊಸದಾದ ಗಾಣದಾಳು ವಿ.ವಿ ಕೇಂದ್ರದ ೧೧ ಕೆ.ವಿ ಲಿಂಕ್...

ವೃದ್ದರ ಮಾಶಾಸನ ಬಿಡುಗಡೆ ಆಗ್ರಹಿಸಿ ಕರವೇ (ಪ್ರವೀಣ್‌ಶೆಟ್ಟಿ)ಬಣ ಪ್ರತಿಭಟನೆ

ಚಿಕ್ಕಮಗಳೂರು: ವೃದ್ದರ ಮಾಶಾಸನ ಬಿಡುಗಡೆ ಹಾಗೂ ಬಿಡದಿಯಲ್ಲಿ ರೈತರ ಜೀವನ ಉಳಿಸಬೇಕು ಎಂದು ಆಗ್ರಹಿಸಿ ಕರವೇ...

ವಿದ್ಯುತ್ ಸ್ಪರ್ಶದಿಂದ ಎರಡು ಜಾನುವಾರುಗಳ ಸಾವು

ನರಸಿಂಹರಾಜಪುರ: ಜಮೀನಿಗೆ ಅಳವಡಿಸಿದ್ದ ಐಬೆಕ್ಸ್ ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ ಪರಿಣಾಮ ಎರಡು...