ಚಿಕ್ಕಮಗಳೂರು: – ತಾಲ್ಲೂಕಿನ ಮಲ್ಲೇನಹಳ್ಳಿ ಸಮೀಪ ಹೆಬ್ಬೆಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲಾ ಮಕ್ಕಳಿಗೆ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಮಂಗಳವಾರ ಸಂಜೆ ಬಿಜೆಪಿ ಕೈಸ್ತ ಮುಖಂಡರು ೨೫ಕ್ಕೂ ಹೆಚ್ಚು ಮಕ್ಕಳಿಗೆ ಉಚಿತವಾಗಿ ಶಾಲಾಸಮವಸ್ತ್ರ ವಿತರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಲ್ಪಸಂಖ್ಯಾತ ಮೋರ್ಚಾ ರಾಬರ್ಟ್ ಯೇಸುದಾಸ್, ಸೋಶಿಯಲ್ ಮೀಡಿಯಾ ಜಿಲ್ಲಾ ಡ್ಯಾನಿ ಫ್ರಾನ್ಸಿಸ್, ಹಿರಿಯ ಮುಖಂಡ ಜೋಸೆಫ್ ಬೆನಡಿ ಕ್ಟ್ ಜೇಮ್ಸ್, ಮುಖಂಡರುಗಳಾದ ಸುನೀಲ್, ಆನಂದ್, ಕುಮಾರ್, ಗೀತಾ ಆಗಸ್ಟೀನ್, ಸಗಾಯ್ದಾಸ್, ಪೀಟರ್, ಅನಿತಾ ಉಪಸ್ಥಿತರಿದ್ದರು.
ಇದೇ ವೇಳೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ನೇತೃತ್ವದಲ್ಲಿ ಕ್ರೈಸ್ತ ಮುಖಂಡರುಗಳು ಚಿಕ್ಕಮ ಗಳೂರು ಮತ್ತು ಹಾಸನದ ಕ್ರೈಸ್ತ ಧರ್ಮ ಅಧ್ಯಕ್ಷ ಶ್ರೀ ಡಾ||ಅಂತೋನಿ ಸ್ವಾಮಿ ಅವರನ್ನು ಭೇಟಿ ಮಾಡಿ ಕ್ರಿಸ್ಮ ಸ್ ಹಾಗೂ ಹೊಸವರ್ಷದ ಶುಭಾಶಯ ಕೋರಲಾಯಿತು.
Distribution of uniforms to school children on the occasion of Christmas
Leave a comment