ಚಿಕ್ಕಮಗಳೂರು: ನಗರದಲ್ಲಿ ಸುಮಾರು ೧೮ ಕೋಟಿ ರೂ. ವಿಶೇಷ ಅನುದಾನದಲ್ಲಿ ನಡೆಯುತ್ತಿರುವ ಪ್ರಮುಖ ರಸ್ತೆಗಳ ಡಾಂಬರೀಕರಣ ನಡೆಯುತ್ತಿದ್ದು, ಕಳಪೆ ಕಾಮಗಾರಿ ಕೈಗೊಳ್ಳುವ ಮೂಲಕ ಶಾಸಕ ಹೆಚ್.ಡಿ. ತಮ್ಮಯ್ಯನವರ ಪರಿಶ್ರಮವನ್ನು ಗುತ್ತಿಗೆದಾರರು ಹಾಳುಮಾಡುತ್ತಿದ್ದಾ ಎಂದು ಮಾಜಿ ನಗರಸಭಾಧ್ಯಕ್ಷ ವರಸಿದ್ದಿ ವೇಣುಗೋಪಾಲ್ ತಿಳಿಸಿದ್ದಾರೆ.
ಇಂದು ನಗರದ ಕಿರಣ್ ಬೇಕರಿ ಪಕ್ಕದ ಗೌರಿಕಾಲುವೆಗೆ ಸಂಪರ್ಕ ಕಲ್ಪಸುವ ರಸ್ತೆಯಲ್ಲಿ ನಡೆಯುತ್ತಿದ್ದ ಡಾಂಬರೀಕರಣ ಕಾಮಗಾರಿಯನ್ನು ವೀಕ್ಷಿಸಿದ ಅವರು, ಕಳಪೆ ಕಾಮಗಾರಿ ನಡೆಯುತ್ತಿರುವ ಬಗ್ಗೆ ಇಂಜಿನಿಯರ್ ಹಾಗೂ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು.
ಕಳಪೆ ಕಾಮಗಾರಿ ನಡೆಯುತ್ತಿರುವ ಕುರಿತು ಈಗಾಗಲೇ ದೂರವಾಣಿ ಮೂಲಕ ಶಾಸಕರ ಗಮನಕ್ಕೆ ತರಲಾಗಿದ್ದು, ಪದೇ ಪದೆ ಕಳಪೆ ಕಾಮಗಾರಿ ನಡೆಯುತ್ತಿರುವ ಬಗ್ಗೆ ಆಯಾ ವಾರ್ಡಿನ ಸದಸ್ಯರ ಗಮನ ಸೆಳೆದು ಉತ್ತಮ ಕಾಮಗಾರಿಗೆ ಒತ್ತಾಯ ತರುವಂತೆ ಸೂಚಿಸಿದ್ದೇವೆಂದು ತಿಳಸಿದರು.
ಈ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಶಾಶ್ವತ ಕಾಮಗಾರಿ ನಡೆಸಿ ಗುಣಮಟ್ಟ ಕಾಪಾಡಬೇಕೆಂದು ತಾಕೀತು ಮಾಡಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರುಗಳಾದ ಸಿ.ಪಿ ಲಕ್ಷ್ಮಣ, ಪರಮೇಶ್, ಲಕ್ಷ್ಮಣ, ಅರುಣ, ರಾಜು ಮತ್ತಿತರರು ಭಾಗವಹಿಸಿದ್ದರು.
Asphalting of the city calls for poor work-order
Leave a comment