Home namma chikmagalur chikamagalur ಮಾನವ ಜನಾಂಗ ಉದ್ದಾರಕ್ಕೆ ಯೇಸುವಿನ ಜನನ
chikamagalurHomeLatest Newsnamma chikmagalur

ಮಾನವ ಜನಾಂಗ ಉದ್ದಾರಕ್ಕೆ ಯೇಸುವಿನ ಜನನ

Share
Share

ಚಿಕ್ಕಮಗಳೂರು: ಮಾನವ ಜನಾಂಗ ಉದ್ದಾರಗೊಳಿಸಲು, ಪ್ರೀತಿ, ಐಕ್ಯತೆ ಸಾರಲು ಹಾಗೂ ದ್ವೇಷ, ಹಗೆತನವನ್ನು ಹೋಗಲಾಡಿಸಲು ಭೂಲೋಕದಲ್ಲಿ ಸಾವಿರಾರು ವರ್ಷಗಳ ಮೊದಲೇ ಯೇ ಸುಕಿಸ್ತರು ಜನಿಸಿ ಮನುಷ್ಯ ಕುಲಕ್ಕೆ ಸಂದೇಶ ನೀಡಿದವರು ಎಂದು ಹಾಸನ-ಚಿಕ್ಕಮಗಳೂರು ಕ್ಯಾಥಲಿಕ್ ಧರ್ಮಧ್ಯಾಕ್ಷ ಡಾ|| ಅಂತೋಣಿಸ್ವಾಮಿ ಹೇಳಿದರು.

ನಗರದ ಚಂದ್ರಶೇಖರ್ ಆಜಾದ್‌ಪಾರ್ಕ್ ವೃತ್ತದಲ್ಲಿ ಆಲ್ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಪೋ ರಂ ಫಾರ್ ಹ್ಯೂಮಲ್ ರೈಟ್ಸ್ ಚಿಕ್ಕಮಗಳೂರು ವಲಯದಿಂದ ಆಯೋಜಿಸಿದ್ಧ ಕ್ರಿಸ್ಮಸ್ ರ್‍ಯಾಲಿ-೨೦೨೫ ವೇದಿ ಕೆ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಗುರುವಾರ ಸಂಜೆ ಅವರು ಮಾತನಾಡಿ
ಮಾನವರಿಗೆ ಪಾಪದಿಂದ ವಿಮುಕ್ತಿಗೊಳಿಸಿ, ದೇವರ ಸ್ವರ್ಗಕ್ಕೆ ತೆರಳಲು ಯೇಸುಕಿಸ್ತರ ಕೊಡುಗೆ ಅಪಾ ರವಿದೆ. ಮನುಷ್ಯ ಮನುಷ್ಯನ ನಡುವೆ ಅನೋನ್ಯತೆ, ಸಂತೋಷದಿಂದ ಬದುಕಲು, ಶಾಂತಿ, ಸಮಾಧಾನ ಭಿತ್ತ ಲು ಜಗತ್ತಿಗೆ ದೇವಮಾನಂತೆ ಅಪ್ಪಳಿಸಿದವರು ಯೇಸುಪ್ರಭುಗಳು ಎಂದು ಹೇಳಿದರು.

ಯೇಸುಕಿಸ್ತರು ಸಾಕಷ್ಟು ನೋವುಗಳ ನಡುವೆ ಮನುಷ್ಯನಿಗೆ ಸಾತ್ವಿಕ ಜೀವನಕ್ಕೆ ಮಾರ್ಗ ತೋರಿದವರು. ಅಲ್ಲದೇ ಸಮಾಧಿಯಿಂದ ಪುನರ್‍ಜೀವಿಸಿ ನಿಂತ ಯೇಸು ದೇವನಿಗೆ ಮಾನವ ಸಂಕುಲವು ಚಿರಋಣಿಯಾ ಗಬೇಕು. ಕ್ರಿಸ್ಮಿಸ್ ಇಲ್ಲದಿದ್ದರೆ, ಯೇಸವಿಲ್ಲದಂತೆ. ಹೀಗಾಗಿ ಈ ಹಬ್ಬವನ್ನು ಸಂತೋಷದಿಂದ ಆಚರಿಸಬೇಕು ಎಂದರು.

ಜಗತ್ತಿನ ಬಹುತೇಕ ಎಲ್ಲಾ ರಾಷ್ಟ್ರಗಳಲ್ಲಿ ಕ್ರಿಸ್ಮಿಸ್‌ನ್ನು ಸಂಭ್ರಮದಿಂದ ಆಚರಿಸುವರು. ಯೇಸುವಿನ ಸಂ ದೇಶವನ್ನು ಮನುಷ್ಯ ಹೃದಯಲ್ಲಿ ನೆಲೆಸುವ ಮೂಲಕ ಇತರೆ ಹೃದಯಕ್ಕೆ ತಲುಪಿಸು ಕಾರ್ಯ ಮಾಡಬೇಕು. ಕ್ರೈಸ್ತರು ಸೇರಿದಂತೆ ಪ್ರತಿ ಮನುಷ್ಯನಲ್ಲಿ ದೇವರು ನೆಲೆಸಿದ್ದು ಕಲ್ಮಶ ತುಂಬಿರುವ ಮನಸ್ಸಿನಲ್ಲಿ ಒಳಿತಿನ ಸಂ ದೇಶ ರವಾನಿಸಬೇಕು ಎಂದು ತಿಳಿಸಿದರು.

ಧರ್ಮಗುರು ಶಾಂತರಾಜ್ ಮಾತನಾಡಿ ಕಿಸ್ಮಿಸ್ ಯಾವುದೇ ಒಂದು ಜಾತಿ, ಊರಿಗೆ ಸೇರಿದ ಹಬ್ಬವ ಲ್ಲ, ಜಾಗತೀಕ ಹಬ್ಬ. ಜಗತ್ತಿನ ನಾನಾ ಮೂಲೆಗಳಲ್ಲಿ ಈ ಹಬ್ಬವನ್ನು ಸಂತೋಷದಿಂದ ಆಚರಿಸುತ್ತಾರೆ. ಈ ಸಂಭ್ರಮ ಕೇವಲ ಕೇಕ್ ಕತ್ತರಿಸುವುದ್ದಲ್ಲ. ಪ್ರೀತಿ, ಶಾಂತಿ ಸಾರುವು ಕಿಸ್ಮಿಸ್ ಒಂದು ಬೆಳಕಿನ ಹಬ್ಬವೆಂದು ಬಣ್ಣಿಸಿದರು.

ಜನತೆಯಲ್ಲಿ ಯೇಸುಪ್ರಭುಗಳು ಸುಖ-ದುಃಖ, ಆಸೆ-ನಿರಾಸೆ ಸರಿಸಮವಾಗಿರಬೇಕು. ಎಲ್ಲರನ್ನೂ ಸೇ ವಾಗುಣದಿಂದ ಜೋಡಿಸಿಕೊಳ್ಳಬೇಕೆಂಬ ಆಶಯವಿದೆ. ಆ ನಿಟ್ಟಿನಲ್ಲಿ ವಿವಿಧ ಸ್ಥರಗಳಲ್ಲಿ ಕ್ರಿಶ್ಚಿಯನ್ ಧರ್ಮ ಸಂಸ್ಥೆಗಳು ಆಸ್ಪತ್ರೆ, ಶಿಕ್ಷಣ ಕ್ಷೇತ್ರವನ್ನು ಸ್ಥಾಪಿಸುವ ಮೂಲಕ ಮಾನವರಿಗೆ ಅಪಾರವಾದ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.

ವೃತ್ತದಲ್ಲಿ ಆಲ್ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಪೋ ರಂ ಫಾರ್ ಹ್ಯೂಮಲ್ ರೈಟ್ಸ್‌ನ ಕಾರ್ಯ ದರ್ಶಿ ಕೆ.ಕೆ.ವರ್ಗೀಸ್ ಮಾತನಾಡಿ ಎರಡೂವರೆ ಸಾವಿರ ವರ್ಷಗಳ ಹಿಂದೆ ಮಾನವರ ಪಾಪ, ದ್ರೋಹ ಪರಿಹರಿಸಲು ಯೇಸು ಜನಿಸಿದರು. ಪಾಪದ ಕಾರ್ಯದಿಂದ ದೇವರ ಮಹಿಮೆ ಕಳೆದುಕೊಂಡಿದ್ದು ಆ ಮಹಿ ಮೆ ಪುನರ್ ಜೀವಿಸಲು ಧರೆಗಿಳಿದ ಜೊತೆಗೆ ಅಶುದ್ಧ ಮನಸ್ಸಿಗೆ ದೇವಸಂದೇಶವನ್ನು ಯೇಸು ನೀಡಿದವರು ಎಂದು ಹೇಳಿದರು.

ಮಾನವರು ದೇವರ ಸಂದೇಶ ಪಾಲಿಸಲು ಮತ್ತು ಪಾಪ, ಅಪರಾಧ ಹಾಗೂ ದ್ರೋಹವನ್ನು ಹೊರಹಾ ಕಲು ಮೊದಲು ಯೇಸುವನ್ನು ನಂಬಬೇಕು. ನಿತ್ಯಜೀವನದಲ್ಲಿ ಯೇಸುವಿನ ಸಂದೇಶವು ಬದುಕಿನ ಮಾರ್ಗ ಕ್ಕೆ ಸಹಾಯವಾಗುವ ಜೊತೆಗೆ ಯೇಸುವಿನ ಮಹಿಮೆ ಎಲ್ಲರಲ್ಲೂ ಸುಖ, ಶಾಂತಿ ನೆಲೆಸಲು ಕಾರಣವಾಗ ಲಿದೆ ಎಂದು ತಿಳಿಸಿದರು.

ಇದೇವೇಳೆ ಯೇಸು ಶಿಲಬೆ, ಪುನರುತ್ಥಾನ ಯೇಸುವಿನ ಕಮಾನುಗಳು ಸೇರಿದಂತೆ ಕ್ರಿಶ್ಚಿಯನ್ ಬಾಂಧ ವರು ನಗರದ ತಾಲ್ಲೂಕು ಕಚೇರಿಯಿಂದ ಚಂದ್ರಶೇಖರ್‌ಆಜಾದ್ ವೃತ್ತದವರೆಗೆ ಮೆರವಣಿಗೆಯಲ್ಲಿ ಸಾಗಿ ಯೇಸುವಿನ ಸಂದೇಶವನ್ನು ದಾರಿಯುದ್ಧಕ್ಕೂ ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ಹ್ಯೂಮಲ್ ರೈಟ್ಸ್‌ನ ಕಾರ್ಯಾಧ್ಯಕ್ಷ ಫಾದರ್ ರಾಯಪ್ಪ, ಖಜಾಂಚಿ ಜೇಮ್ಸ್ ಡಿ ಸೋಜಾ, ಸಹ ಕಾರ್ಯದರ್ಶಿ ಜೇಮಿನಿ ಜಾರ್ಜ್, ನಿರ್ದೇಶಕ ಶ್ರೀಧರ್ ಸ್ವಾಮಿಯಲ್, ಸಂಜು, ಸಮಾಜ ದ ಮುಖಂಡರುಗಳಾದ ಫಾಸ್ಟರ್ ರಂಗ ಉಪಸ್ಥಿತರಿದ್ದರು.

The birth of Jesus for the salvation of mankind

Share

Leave a comment

Leave a Reply

Your email address will not be published. Required fields are marked *

Don't Miss

ಸಾಲದ ಹಣ ಕೇಳಿದ್ದಕ್ಕೆ ಹಲ್ಲೆ; ತಾಯಿ-ಮಗನ ವಿರುದ್ಧ ಪ್ರಕರಣ

ಕಡೂರು: ಸಾಲವಾಗಿ ನೀಡಿದ್ದ ₹50 ಸಾವಿರವನ್ನು ಹಿಂದಿರುಗಿಸುವಂತೆ ಕೇಳಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಯಗಟಿ ಪೊಲೀಸ್ ಠಾಣೆಯಲ್ಲಿ ತಾಯಿ-ಮಗನ ವಿರುದ್ಧ ಪ್ರಕರಣ ದಾಖಲಾಗಿದೆ. ಯಗಟಿ ಗ್ರಾಮದ ಮುದಿಯಪ್ಪ ಬಡಾವಣೆಯ...

ಹುಬ್ಬಳ್ಳಿಯಲ್ಲಿ ಆಗಸ್ಟ್ 9ರಂದು ರಾಜ್ಯಮಟ್ಟದ 32ನೇ ವಿಶ್ವ ಆದಿವಾಸಿ ದಿನಾಚರಣೆ

ಚಿಕ್ಕಮಗಳೂರು: ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಹಾಗೂ ಆದಿವಾಸಿ ಹರಣ ಶಿಖಾರಿ ಪಾರಿ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಆಗಸ್ಟ್ 9ರಂದು ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ 32ನೇ ವಿಶ್ವ ಆದಿವಾಸಿ ದಿನಾಚರಣೆ ಅಂಗವಾಗಿ...

Related Articles

ಗ್ರಾಮೀಣ ಪ್ರದೇಶದಲ್ಲಿ ವಲಸೆ ತಡೆಗೆ ವಿಬಿ ಜಿ ರಾಮ್ ಜಿ ಆಸರೆ

ಚಿಕ್ಕಮಗಳೂರು: ಗ್ರಾಮೀಣ ಭಾಗದ ಜನರು ಉದ್ಯೋಗಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಿ, ತಮ್ಮ ಗ್ರಾಮಗಳಲ್ಲಿಯೇ...

ಆಗಸ್ಟ್ 14 ಮತ್ತು 16 ರಂದು ವಿದ್ಯುತ್ ನಿಲುಗಡೆ

ಚಿಕ್ಕಮಗಳೂರು:  ಗ್ರಾಮೀಣ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಹೊಸದಾದ ಗಾಣದಾಳು ವಿ.ವಿ ಕೇಂದ್ರದ ೧೧ ಕೆ.ವಿ ಲಿಂಕ್...

ವೃದ್ದರ ಮಾಶಾಸನ ಬಿಡುಗಡೆ ಆಗ್ರಹಿಸಿ ಕರವೇ (ಪ್ರವೀಣ್‌ಶೆಟ್ಟಿ)ಬಣ ಪ್ರತಿಭಟನೆ

ಚಿಕ್ಕಮಗಳೂರು: ವೃದ್ದರ ಮಾಶಾಸನ ಬಿಡುಗಡೆ ಹಾಗೂ ಬಿಡದಿಯಲ್ಲಿ ರೈತರ ಜೀವನ ಉಳಿಸಬೇಕು ಎಂದು ಆಗ್ರಹಿಸಿ ಕರವೇ...

ವಿದ್ಯುತ್ ಸ್ಪರ್ಶದಿಂದ ಎರಡು ಜಾನುವಾರುಗಳ ಸಾವು

ನರಸಿಂಹರಾಜಪುರ: ಜಮೀನಿಗೆ ಅಳವಡಿಸಿದ್ದ ಐಬೆಕ್ಸ್ ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ ಪರಿಣಾಮ ಎರಡು...