ಚಿಕ್ಕಮಗಳೂರು: ಮಧ್ಯಮ ವರ್ಗದ ಮಕ್ಕಳಿಗೆ ಜಾತಿ ತಾರತಮ್ಯ ಮಾಡದೇ ಸರ್ವ ತೋಮುಖ ಶಿಕ್ಷಣಕ್ಕೆ ಆದ್ಯತೆ ನೀಡಿದವರು ಬಾಲಗಂಗಾಧರನಾಥ ಶ್ರೀಗಳು. ಇಲ್ಲಿ ವಿದ್ಯಾಭ್ಯಾಸ ಪೂರೈಸಿದ ಅನೇಕರು ಜಗತ್ತಿನಾದ್ಯಂತ ಉನ್ನತ ಹುದ್ದೆ ಅಲಂಕರಿಸಿರುವುದು ಹೆಮ್ಮೆಯಿದೆ ಎಂದು ಆದಿಚುಂಚನಗಿರಿ ಶೃಂ ಗೇರಿ ಶಾಖಾಮಠದ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.
ನಗರದ ಎಐಟಿ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ಭಾನುವಾರ ಹಿರಿಯ ವಿದ್ಯಾರ್ಥಿಗಳ ಸಮಾ ವೇಶದ ಉದ್ಘಾಟನೆ ಹಾಗ ಹಿರಿಯ ವಿದ್ಯಾರ್ಥಿಗಳ ನೂತನ ವಿಜ್ಞಾತಂ ಭವನದ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಆರ್ಶೀವಚನ ನೀಡಿದರು.
ಬಡತನದ ಬೇಗೆಯಲ್ಲಿ ಜೀವನ ದೂಡುತ್ತಿದ್ದ ಹಿಂದುಳಿದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಕಲ್ಪಿಸಿಕೊಡ ಬೇಕೆಂಬ ಕನಸು ಶ್ರಿಗಳಾದಾಗಿತ್ತು. ನಾಡಿನಾದ್ಯಂತ ವಿದ್ಯಾಸಂಸ್ಥೆ ಸ್ಥಾಪಿಸಿ, ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡಿದವರು. ಇಲ್ಲಿ ವ್ಯಾಸಂಗ ಪೂರೈಸಿದ ಅನೇಕ ವಿದ್ಯಾರ್ಥಿಗಳು ಉದ್ಯಮಿ, ಸೈನಿಕ, ರಾಜಕೀಯ ಸೇರಿ ದಂತೆ ಸರ್ಕಾರಿ ವೃತ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಶ್ರೀಗಳು ರಾಮನಗರ ಭಾಗದಲ್ಲಿ ಪ್ರವಾಸಕ್ಕೆ ತೆರಳಿದ ವೇಳೆ ಮರದ ಸಮೀಪ ಧಣಿವು ಆರಿಸಿಕೊಳ್ಳಲು ಕುಳಿತ್ತಿದ್ದರು. ಅದೇ ದಾರಿಯಲ್ಲಿ ಸಾಗುತ್ತಿದ್ದ ದೃಷ್ಟಿಹೀನ ಮಕ್ಕಳನ್ನು ಕರೆದು ವಿಚಾರಿಸಿದಾಗ, ಮಕ್ಕಳು ಅಂಧ ರಾದ ನಮಗೇ ಹೆತ್ತವರು ದೂರ ತಳ್ಳಿದ್ದು, ಆತ್ಮಹತ್ಯೆ ತೆರಳುತ್ತಿದ್ದೇವೆ ಎಂದಾಗ ಶ್ರೀಗಳು ಕಣ್ಣೀರಿಟ್ಟಿದ್ದರು. ಅಂ ದೇ ತೀರ್ಮಾನ ಕೈಗೊಂಡು ತಂಗಿದ್ಧ ಜಾಗವನ್ನು ದಾನದ ರೂಪದಲ್ಲಿ ಪಡೆದು ಮಕ್ಕಳಿಗೆ ವಿದ್ಯಾಸಂಸ್ಥೆ, ಆಶ್ರ ಯತಾಣ ಮಾಡಿಕೊಟ್ಟವರು ಎಂದರು.
ಹಿರಿಯ ವಿದ್ಯಾರ್ಥಿಗಳ ನೆನಪಿನಾರ್ಥ ಕಾಲೇಜು ಆವರಣದಲ್ಲೇ ವಿಜ್ಞಾತಂ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿದೆ. ಈ ಕಟ್ಟಡದಲ್ಲಿ ಸುಮಾರು ೨೫ಕ್ಕೂ ಹೆಚ್ಚು ಕೊಠಡಿಗಳನ್ನು ನಿರ್ಮಿಸುವ ಉದ್ದೇ ಶವಿದೆ. ಇನ್ನೊಂದು ವರ್ಷದಲ್ಲಿ ಪೂರ್ಣಗೊಳ್ಳುವ ಗುರಿಯಿದೆ. ಹಳೇ ವಿದ್ಯಾರ್ಥಿಗಳು ಕಟ್ಟಡದ ಅಭಿವೃ ದ್ದಿಗೆ ಸಲಹೆ ಮತ್ತು ಸಹಕಾರ ನೀಡಬೇಕು ಎಂದು ಕೋರಿದರು.
ಪ್ರತಿವರ್ಷ ವಿದ್ಯಾರ್ಥಿಗಳ ಸಮಾವೇಶದಲ್ಲಿ ಹಿರಿಯ ವಿದ್ಯಾರ್ಥಿಗಳು ಕುಟುಂಬ ಸಮೇತ ಭಾಗವಹಿಸಿ ಇತರೆಡೆ ವಾಸ್ತವ್ಯ ಹೂಡದೇ, ಕಾಲೇಜು ಭವನದ ಕೊಠಡಿಯಲ್ಲೇ ತಂಗುವ ಮೂಲಕ ತಮ್ಮ ಮಕ್ಕಳಿಗೆ ಕಾ ಲೇಜನ್ನು ಪರಿಚಯಿಸಬಹುದು. ಅಲ್ಲದೇ ಒಂದು ಕೊಠಡಿ ನಿರ್ಮಾಣಕ್ಕೆ ಪೂರ್ಣ ಸಹಕರಿಸಿದರೆ, ಆ ಕು ಟುಂಬದ ಪೂರ್ವಿಕರ ಭಾವಚಿತ್ರ ಹಾಕಿ ನಾಮಾಂಕಿತಗೊಳಿಸಲಾಗುವುದು ಎಂದರು.
ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್.ಮಹೇಶ್ ಮಾತನಾಡಿ ವಿದ್ಯಾರ್ಥಿ ಬ ದುಕು ಚಿನ್ನದ ಬದುಕು, ಸಾರ್ವಕಾಲಿಕ ಸತ್ಯ. ಕಾಲೇಜಿನ ಆ ಕ್ಷಣದ ಸ್ನೇಹತ್ವ, ಬಾಂಧವ್ಯ ಹಾಗೂ ಪರಸ್ಪರ ಒಡನಾಟ ಖುಷಿಯಿತ್ತು. ಇಂದಿನ ಕಾಲಮಾನದ ವಿದ್ಯಾರ್ಥಿಗಳಲ್ಲಿ ನಶಿಸುತ್ತಿವೆ. ಇದೀಗ ಕೇವಲ ವ್ಯವಹಾರಿಕ ಜ್ಞಾನ ಬೆಳೆದು, ಸಂಬಂಧಗಳ ಕೊಂಡಿ ಕಳಚುತ್ತಿವೆ ಎಂದು ಹೇಳಿದರು.
ಚಿಕ್ಕಮಗಳೂರು ಕುಗ್ರಾಮದ ಸಮಯದಲ್ಲಿ ಬಾಲಗಂಗಾಧರನಾಥ ಶ್ರೀಗಳ ಮುಂದಾಲೋಚನೆಯಿಂದ ಮೊಟ್ಟ ಮೊದಲು ಇಂಜಿನಿಯರ್ ಕಾಲೇಜು ಸ್ಥಾಪಿಸುವ ಆಲೋಚನೆ ವಿಭಿನ್ನವಾಗಿತ್ತು. ಅಂದಿನಿಂದ ಈ ಕಾ ಲೇಜಿನಲ್ಲಿ ವಿದ್ಯಾರ್ಜನೆ ಪಡೆದವರು ಜಗತ್ತಿನಾದ್ಯಂತ ಸಮಾಜದ ಕೆಲಸ-ಕಾರ್ಯಗಳಲ್ಲಿ ಕಾರ್ಯನಿರ್ವಹಿ ಸುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಕಾಲೇಜಿನ ನೆನಪಿನಾರ್ಥ ನೂತನ ಭವನಕ್ಕೆ ಹಳೇ ವಿದ್ಯಾರ್ಥಿಗಳು ಶಕ್ತಿಗನು ಸಾರ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಎಐಟಿ ಕಾಲೇಜು ನಿರ್ದೇಶಕ ಡಾ|| ಸಿ.ಕೆ. ಸುಬ್ಬರಾಯ ಮಾತನಾಡಿ ಇಂದಿನ ಹಿರಿಯ ವಿದ್ಯಾರ್ಥಿಗಳ ಬ್ಯಾಚ್ನಲ್ಲಿ ತಾವು ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿರುವುದು ಹೆಮ್ಮೆಯಿದೆ. ರಾಜ್ಯದ ಹಲ ವಾರು ಜಿಲ್ಲೆಗಳಲ್ಲಿ ಶ್ರೀಗಳು ವಿದ್ಯಾಸಂಸ್ಥೆ ಸ್ಥಾಪಿಸಿ, ಸಮಗ್ರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ವಿದ್ಯಾ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ ಎಂದರು.
ವಿದ್ಯಾರ್ಥಿ ಹಾಗೂ ವೈಯಕ್ತಿಕ ಜೀವನದಲ್ಲಿ ನಾವುಗಳು ಮಾತೃ, ಪಿತೃ ಹಾಗೂ ಆಚಾರ್ಯ ದೇವೋ ಭವ ಎಂಬ ಅಂಶವಿರಬೇಕು. ವಿದ್ಯೆ ಕಲಿಸಿದ ಶಿಕ್ಷಕರು ಹಾಗೂ ಜೀವನದ ಪಾಠ ಬೋಧಿಸಿದ ಪಾಲಕರನ್ನು ಪ್ರತಿನಿತ್ಯವು ಸ್ಮರಿಸುವ, ಗೌರವಿಸುವ ಗುಣ ಬೆಳೆಸಿಕೊಂಡರೆ ಮಾತ್ರ ಗೆಲುವಿನ ಯಶಸ್ಸನ್ನು ಮುಡಿಗೇರಿಸಿಕೊ ಳ್ಳಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಹಿರಿಯ ವಿದ್ಯಾರ್ಥಿ ಥಾಮಸ್ ಮಾತನಾಡಿ ಕಳೆದ ಇಪ್ಪತ್ತೈದು ವರ್ಷಗಳ ಹಿಂದೆ ನಾವುಗಳು ಓಡಾಡಿ ದ ಕ್ಷಣಗಳನ್ನು ಕಾಲೇಜಿನಲ್ಲಿಂದು ಪುನರುಜ್ಜೀವಗೊಂಡಿದೆ. ಇಲ್ಲಿನ ವಾತಾವರಣ ಅತ್ಯಂತ ರೋಮಾಂ ಚನ ಕಾರಿ ತಂದಿದೆ. ಅಂದಿನ ವೇಳೆಯಲ್ಲಿ ಸಮವಸ್ತ್ರ ಧರಿಸುವುದು ತಿಳಿದಿರಲಿಲ್ಲ. ಮಾತಿನ ಚಾಕ್ಯತೆ ತಿಳಿದಿರಲಿಲ್ಲ. ೧೮-೨೨ ವಯಸ್ಸಿನಲ್ಲಿ ನಾವುಗಳು ಯಾವುದೇ ತಂತ್ರಜ್ಞಾನವಿಲ್ಲದ ಕಾಲದಲ್ಲಿ ವಿದ್ಯಾಭ್ಯಾಸ ಪೂರೈಸಿದ್ದೇವೆ ಎಂ ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಐಟಿ ಕಾಲೇಜು ಪ್ರಾಂಶುಪಾಲ ಡಾ|| ಸಿ.ಟಿ.ಜಯದೇವ್ ವಹಿಸಿದ್ದ ರು. ಹಿರಿಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಡಾ|| ಜಿ.ಎಂ.ಸತ್ಯನಾರಾಯಣ್, ಹಳೇ ವಿದ್ಯಾರ್ಥಿಗ ಳಾದ ಶುಭ, ಅಶ್ಚಿನಿ, ಅರುಣ್, ಶಿವಕುಮಾರ್, ಪ್ರಬಾದ್, ಅಜಿತ್ಕುಮಾರ್, ವಿದ್ಯಾರ್ಥೀ ಕ್ಷೇಮಾಭಿವೃದ್ದಿ ಸಂಘದ ಸಂಗಾರೆಡ್ಡಿ ಹಾಗೂ ಎಐಟಿ ಕಾಲೇಜಿನ ವಿವಿ ಧ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.
AIT students in top positions around the world
Leave a comment