ಚಿಕ್ಕಮಗಳೂರು: ರಾಷ್ಟ್ರದ ಬಹುಸಂಖ್ಯಾತ ಮೂಲನಿವಾಸಿಗಳು ಅಧಿಕಾರದ ಚುಕ್ಕಾ ಣಿ ಹಿಡಿಯುವುದು ಅಂಬೇಡ್ಕರ್ ಕನಸಾಗಿತ್ತು. ಈ ಕನಸನ್ನು ಸಾಕಾರಗೊಳಿಸದ ಕೆಲವರು ಮನುವಾದಿಗಳ ಪಕ್ಷದ ಜೊತೆಗೂಡಿ ಟಿಕೇಟ್‌ಗಾಗಿ ಅಂಗಲಾಚಿ, ಅಂಬೇಡ್ಕರ್ ಆಶಯವನ್ನು ಮಣ್ಣುಪಾಲು ಮಾಡುತ್ತಿವೆ ಎಂ ದು ಬಿಎಸ್ಪಿ ರಾಜ್ಯ ಸಂಯೋಜಕ ಗಂಗಾಧರ್ ಬಹುಜನ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಶನಿವಾರ ಬಹುಜನ ಸಮಾಜ ಪಾರ್ಟಿ-ಹಾಸನ ವಲಯದಿಂದ ಬಾಬಾಸಾಹೇಬ್ ಡಾ|| ಬಿ.ಆರ್.ಅಂಬೇಡ್ಕರ್ ಪರಿಬ್ಬಾಣ ಅಂಗವಾಗಿ ಆಯೋಜಿಸಿದ್ಧ ಬಹು ಜನ ರಾಜಕೀಯ ಸಂಕಲ್ಪ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ದೇಶದ ಮೂಲ ನಿವಾಸಿಗಳಿಗೆ ಮನುವಾದಿ ಪಕ್ಷಗಳು ಆಮಿಷವೊಡ್ಡಿ ಹಸಿನಂತೆ ಮೂಗುದಾರ ಹಾಕು ತ್ತಿದೆ. ಆಳುವ ಬಹುಜನರನ್ನು ಅಧಿಕಾರದಿಂದ ವಂಚಿತಗೊಳಿಸಿ, ಮತದಾನದ ಗುಲಾಮರಾಗಿ ಬಳಸಿಕೊಂ ಡು, ಸಂವಿಧಾನಾತ್ಮಕವಾಗಿ ಶೋಷಿತರನ್ನು ತುಳಿತಕ್ಕೆ ಒಳಗಾಗಿಸಿ ದೊರೆಗಳಂತೆ ದೇಶ ಹಾಗೂ ರಾಜ್ಯವನ್ನು ಆಳ್ವಿಕೆ ನಡೆಸುತ್ತಿವೆ ಎಂದು ದೂರಿದರು.
ಪ್ರಸ್ತುತ ದೇಶದ ಶೇ.೩೩ರಷ್ಟು ಮೂಲನಿವಾಸಿಗೆ ಸ್ವಂತ ಸೂರಿಲ್ಲ, ಅಧಿಕಾರವಿಲ್ಲ, ಒಂದೂತ್ತಿನ ಊಟ ಕ್ಕೂ ಬಹಳಷ್ಟು ಶ್ರಮಿಸಬೇಕಿದೆ. ಅಲ್ಲದೇ ಕೊನೆಗಳಿಗೆಯಲ್ಲಿ ಸ್ಮಶಾನದಲ್ಲೂ ಅಂತ್ಯಕ್ರಿಯೆ ನಡೆಸಲು ಸ್ಥಳವಿಲ್ಲ ದೇ ಪರದಾಡುವಂತಾಗಿದೆ. ಈ ವಿರುದ್ಧ ಜನತೆ ಎಚ್ಚೆತ್ತುಕೊಂಡು ಮತ ಕೇಳುವ ಸಂದರ್ಭದಲ್ಲಿ ಸಂವಿಧಾನ ದಡಿ ಜಾರಿಗೊಂಡ ಸವಲತ್ತು ತಲುಪಿದೆಯೇ ಎಂದು ಪ್ರಶ್ನಿಸಬೇಕು ಎಂದರು.
ಭವಿಷ್ಯದಲ್ಲಿ ರಾಷ್ಟ್ರದ ಮೂಲ ಜನರು ಸಂವಿಧಾನವನ್ನು ಯಥಾವತ್ತಾಗಿ ಜಾರಿಗೊಳಿಸುವ ಹಾಗೂ ಸ ರ್ವ ಜನಾಂಗವನ್ನು ಒಂದುಗೂಡಿಸುವ ಬಿಎಸ್ಪಿ ಪಕ್ಷವನ್ನು ಬೆಂಬಲಿಸುವ ಸಂಕಲ್ಪ ಮಾಡಬೇಕು. ಒಂದು ವೇಳೆ ಮೈಮರೆತರೆ ಹೆಚ್ಚು ಕಾಲ ಉಳಿಗಾವಿಲ್ಲ. ಅಲ್ಲದೇ ಮೂಲನೆಲೆಯನ್ನು ಮತ್ತು ಸಂವಿಧಾನವನ್ನು ಕಳೆ ದುಕೊಳ್ಳಬೇಕು ಎಂದು ಎಚ್ಚರಿಸಿದರು.
ಸಂವಿಧಾನ ಪರಿನಿಬ್ಬಾಣ ೬೯ನೇ ಸ್ಮರಣೆ ಹಾಗೂ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಏಳುವರೆ ದಶಕ ಪೂರೈಸಿ ದರೂ ಬಹುಜನರು ಹಿಂದೆಯೇ ಉಳಿದಿದ್ದಾರೆ. ಸಂವಿಧಾನದಡಿ ಪ್ರಮಾಣ ಸ್ವೀಕರಿಸಿದ ಜನಪ್ರತಿನಿಧಿಗಳು ವೈಯಕ್ತಿಕ, ಜಾತಿ ಆಧಾರಿತವಾಗಿ ಅಭಿವೃದ್ದಿಯಾಗಿದೆ. ಕೇವಲ ಭಾಷಣದಲ್ಲಿ ಅಂಬೇಡ್ಕರ್‌ಗೆ ಬಿರುದು ಸಲ್ಲಿಸಿ ದರೆ ಸಾಲದು, ಶೋಷಿತರನ್ನು ಸಮಾಜದ ಮುಖ್ಯವಾಹಿನಿಗೆ ಕರೆದಿರುವ ಮಾಹಿತಿ ನೀಡಬೇಕು ಎಂದರು.
ಕೇಂದ್ರ ಸರ್ಕಾರ ಬಡತನ ನಿರ್ಮೂಲನೆಗೊಳಿಸಿಲ್ಲ. ನಿರುದ್ಯೋಗ ಸೃಷ್ಟಿಸದ ಕಾರಣ ಯುವಕರು ಬಡ ತನದ ಬೇಗೆಯಲ್ಲಿ ಸುಡುತ್ತಿದ್ದಾರೆ. ಬಹುತೇಕ ಸರ್ಕಾರಿ ಕಚೇರಿಗಳು ಖಾಸಗೀಕರಣಗೊಂಡಿವೆ. ರೈಲ್ವೆ, ಸಾ ರಿಗೆ ವ್ಯವಸ್ಥೆಯನ್ನು ಖಾಯಂನಿಂದ ಹೊರಗುತ್ತಿಗೆ ನೀಡುವ ಮೂಲಕ ಆಧುನಿಕ ಜೀತಪದ್ಧತಿ ಉಂಟು ಮಾ ಡುತ್ತಿದೆ. ಈ ನಡುವೆ ರಾಜ್ಯದಲ್ಲಿ ಬಾಡೂಟ ಅಬ್ಬರ ಜೋರಾಗಿ ಕುರ್ಚಿ ಉಳಿಸಿಕೊಳ್ಳುವ ಪ್ರಕ್ರಿಯೇಗಳೇ ಹೆ ಚ್ಚಾಗಿವೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಕಾಂಗ್ರೆಸ್‌ನ ಎರಡು ಪ್ರಮುಖ ನಾಯಕರು ಸಾರ್ವ ಜನಿಕ ಎದುರು ಮೌನವಹಿಸಿ, ಹಿಂಬದಿಯಲ್ಲಿ ಬಹಳಷ್ಟು ಲಾಭಿ ಮಾಡುತ್ತಿವೆ. ಧೈರ್ಯವಾಗಿ ದಲಿತ ಮುಖ್ಯ ಮಂತ್ರಿ ಘೋಷಣೆ ಬಗ್ಗೆ ಯಾವ ಶಾಸಕರು ತುಟಿಬಿಚ್ಚುವ ತಾಕತ್ತು ತೋರುತ್ತಿಲ್ಲ. ಈ ಬಗ್ಗೆ ವಿಚಾರಿಸಿದರೆ ಮುಂದೆ ಕಾಲಕೂಡಿಬರಲಿದೆ ಎಂಬ ಸಬೂಬು ಹೇಳಿಕೆ ನೀಡುತ್ತಿವೆ ಎಂದರು.
ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿ ಚಿಕ್ಕ ಮಗಳೂ ರು, ಹಾಸನ, ಮಂಗಳೂರು ಮತ್ತು ಉಡುಪಿ ಜಿಲ್ಲೆಗಳನ್ನು ಒಳಗೊಂಡ ಕಾರ್ಯಕರ್ತರ ಸಮಾವೇಶ ಹಾ ಗೂ ಬಹುಜನರು ರಾಜಕೀಯ ಸಂಕಲ್ಪ ದಿನವನ್ನು ನಗರದಲ್ಲಿ ಆಚರಿಸುವ ಮೂಲಕ ಪಕ್ಷದ ಕಾರ್ಯಕರ್ತ ರಿಗೆ ಹುರುಪು ತುಂಬುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ದಲಿತರನ್ನು ಕೆಲವು ಮನುವಾದಿ ಪಕ್ಷಗಳು ಬ್ರಾಂಡ್‌ಗಳನ್ನಾಗಿ ಮಾಡಿಕೊಂಡು ಮೂಲನಿವಾಸಿಗಳ ಹೆ ಸರಿನಲ್ಲಿ ಅಧಿಕಾರ, ಅಂತಸ್ತನ್ನು ಗಳಿಸುತ್ತಿದೆ. ಈ ವ್ಯವಸ್ಥೆಯಿಂದ ದಲಿತರು ಹೊರಬಂದು ಅಂಭೇಡ್ಕರ್ ವಿ ಚಾರಧಾರೆ, ತತ್ವಾದರ್ಶಗಳನ್ನು ಹೊಂದಿರುವ ಬಹುಜನ ಪಕ್ಷವನ್ನು ಒಗ್ಗಟ್ಟಿನಿಂದ ಬೆಂಬಲಿಸಿ, ಬಹುಸಂಖ್ಯಾ ತರಾದ ಶೋಷಿತರು, ಅಲ್ಪಸಂಖ್ಯಾತರು, ಹಿಂದುಳಿದವರ ಕೈಬಲಪಡಿಸಬೇಕು ಎಂದರು.
ಬಿಎಸ್ಪಿ ಹಾಸನ ಜಿಲ್ಲಾ ಸಂಯೋಜಕ ಹೆಚ್.ಪಿ.ಮಲ್ಲಯ್ಯ ಮಾತನಾಡಿ ಸಂವಿಧಾನವು ಶೋಷಿತ ಸಮಾ ಜಕ್ಕೆ ಅಂಬೇಡ್ಕರ್ ನೀಡಿರುವ ಪವಿತ್ರವಾದ ಗ್ರಂಥ. ಇದನ್ನು ಬಹುಜನರು ರಾಜಕೀಯವಾಗಿ ಮುಂಚೂಣಿ ಗೆ ಬಂದು, ಸಮುದಾಯದ ಏಳಿಗೆಗೆ ಶ್ರಮಿಸುವ ಕಾಯಕ ಮಾಡಬೇಕು. ಇದು ಭವಿಷ್ಯದಲ್ಲಿ ಜನಾಂಗ ದೌ ರ್ಜನ್ಯ, ದಬ್ಬಾಳಿಕೆಯಿಂದ ಹೊರಬರಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಬಿಎಸ್ಪಿ ಜಿಲ್ಲಾಧ್ಯಕ್ಷ ಪಿ.ಪರಮೇಶ್ವರ್ ವಹಿಸಿದ್ದರು. ವೇದಿಕೆಯಲ್ಲಿ ಬಿಎಸ್ಪಿ ರಾಜ್ಯ ಉಪಾಧ್ಯಕ್ಷ ಜಾಕೀರ್ ಹುಸೇನ್, ಕಾರ್ಯದರ್ಶಿಗಳಾದ ಕೆ.ಬಿ.ಸುಧಾ, ಪಿ.ವೇಲಾಯುಧನ್, ಜಾಕೀರ್ ಅಲಿಖಾನ್, ಹರೀಶ್ ಅತ್ನಿ, ಲೋಕಸಭಾ ಸಂಯೋಜಕರಾದ ಕೆ.ಆರ್.ಗಂಗಾಧರ್, ಬಿ.ಎಂ.ಶಂಕರ್, ಜಿಲ್ಲಾ ಸಂಯೋಜಕರಾದ ಕೆ.ಎಂ.ಗೋಪಾಲ್, ಯು.ಬಿ.ಮಂಜಯ್ಯ, ಮಂಗಳೂರು ಸಂಯೋಜಕ ನಾರಾಯಣ್ ಬೌಧ್ ಉಪಸ್ಥಿತರಿದ್ದರು. ಬಿಎಸ್ಪಿ ಜಿಲ್ಲಾ ಉಪಾದ್ಯಕ್ಷೆ ಕೆ.ಎಸ್.ಮಂಜುಳಾ ಸ್ವಾಗತಿಸಿದರು. ಕಾರ್ಯದರ್ಶಿ ಬಕ್ಕಿ ಮಂಜುನಾಥ್ ನಿರೂಪಿಸಿದರು. ಪುಟ್ಟಸ್ವಾಮಿ ವಂದಿಸಿದರು.
Ambedkar Ashaya Mundpalu along with Manuwadi Party
Leave a comment