Home namma chikmagalur ಶೃಂಗೇರಿ ಲಡಾಯಿ: ಶಾಸಕ ಟಿ.ಡಿ.ರಾಜೇಗೌಡ V/S ಜೀವರಾಜ್
namma chikmagalurchikamagalurHomeLatest NewsPolitical News

ಶೃಂಗೇರಿ ಲಡಾಯಿ: ಶಾಸಕ ಟಿ.ಡಿ.ರಾಜೇಗೌಡ V/S ಜೀವರಾಜ್

Share
Share

ಶೃಂಗೇರಿ: ಶೃಂಗೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಮತ್ತು ಬಿಜೆಪಿ ಮಾಜಿ ಸಚಿವ ಶಾಸಕ ಜೀವರಾಜ್ ಮಧ್ಯೆ ಭಾರಿ ಲಡಾಯಿ ನಡೆಯುತ್ತಿದೆ.

ಮಲೆನಾಡಿನ ರಾಜಕಾರಣ ಬಯಲು ಸೀಮೆ ರಾಜಕಾರಣಕ್ಕಿಂತ ಹೆಚ್ಚು ರಂಗು ಪಡೆಯುತ್ತಿದೆ.ದಿನವೂ ಒಂದಲ್ಲ ಒಂದು ಆರೋಪ ಪ್ರತಿ ಆರೋಪಗಳು ನಡೆಯುತ್ತಿವೆ.ಇಂದು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ತಲುಪಿದೆ.

ಅನ್ಯಾಯದ ಪರಮಾವಧಿ ತಲುಪಿರುವ ಸ್ಥಿತಿಗೆ ಶೃಂಗೇರಿ ಕ್ಷೇತ್ರದ ರಾಜಕಾರಣ ತಲುಪಿದೆ. ದಿನನಿತ್ಯ ಶಾಸಕ ರಾಜೇಗೌಡರ ಮಧ್ಯೆ ಆರೋಪ ಪ್ರತಿ ಆರೋಪಗಳು ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಬರುತ್ತಿವೆ.

ರಾಜೇಗೌಡ ಭ್ರಷ್ಟ ಅಲ್ಲ ಆದರೆ ಮೊದಲಿನ ಚಟುವಟಿಕೆ ಇಲ್ಲ ಆದರೂ ಭ್ರಷ್ಟಾಚಾರದ ಪ್ರಕರಣ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ದಾಖಲಾಗಿದೆ.ಇದಕ್ಕೆ ಜೀವರಾಜ್ ಕಾರಣ ಎಂದು ಕಾಂಗ್ರೆಸ್ ನವರ ಆರೋಪ.

ಆದಾಯ ಕ್ಕಿಂತ ಹೆಚ್ಚು ವಹಿವಾಟು ನಡೆಸಿದ್ದಾರೆ ಎಂದು ದೂರು ದಾಖಲಾಗಿದೆ.ಈ ಬಗ್ಗೆ ತನಿಖೆ ನಡೆಯುತ್ತಿದೆ ಇದರ ಹಿಂದೆ ಸೋತಿರುವ ಜೇವರಾಜ್ ಬುಸುಗುಟ್ಟುತ್ತಿದ್ದಾರೆ.ಇದರ ಫಲವೇ ಹಾದಿ ಬೀದಿಯಲ್ಲಿ ಅವರ ಮೇಲೆ ಇವರು, ಇವರ ಮೇಲೆ ಅವರು ಆರೋಪ ಪ್ರತಿ ಆರೋಪ ಮಾಡುತ್ತಿದ್ದಾರೆ.ಹಲ್ಲಿಲ್ಲದ ಹಾವು ಕಚ್ಚಲು ಸಾಧ್ಯವಿಲ್ಲ.ಆದರೆ ಸದಾ ಪ್ರಚಾರವೋ ಅಪಪ್ರಚಾರವೋ ನಡೆಯುತ್ತಿದೆ.

ಶಾಸಕ ರಾಜೇಗೌಡರ ಮೇಲೆ ದಿನಕ್ಕೊಂದು ದೂರು ಹೇಳುವುದೆ ಜೀವರಾಜ್ ಮತ್ತು ಬಿಜೆಪಿಯವರ ಕೆಲಸ ಎಂದು ಕಾಂಗ್ರೆಸ್ ನವರು ಹೇಳುತ್ತಿದ್ದಾರೆ.

ಚುನಾವಣೆಯಲ್ಲಿ ಘೋಷಣೆ ಮಾಡಿರುವ ಆದಾಯಕ್ಕಿಂತ ಹೆಚ್ಚಿನ ಆದಾಯ ಇದೆ ಎಂದು ಬಿಜೆಪಿಯ ದಿನೇಶ್ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ದೂರು ನೀಡಿದ್ದು ಜೀವರಾಜ್ ಮಾಧ್ಯಮಗಳ ಮುಂದೆ ಆರಚಿಕೊಳ್ಳುತ್ತಿದ್ದಾರೆ.ಇದಕ್ಕೆ ಶಾಸಕ ರಾಜೇಗೌಡ ಕೂಡ ಕೆಂಡ ಮಂಡಲರಾಗಿದ್ದಾರೆ. ಜನರು ಕೂಡ ಪುಕ್ಕಟ್ಟೆ ಮಜಾ ತೆಗೆದುಕೊಳ್ಳುತ್ತಿದ್ದಾರೆ.ಸದ್ಯ ಕಾಂಗ್ರೆಸ್ ನವರು”ಸತ್ಯ ಮೇವ ಜಯತೆ” ಎಂದು ತಿರುಗಿ ಬೀಳಲು ತಯಾರಾಗಿದ್ದಾರೆ.

ಬಯಲು ಪ್ರದೇಶ ರಾಜಕಾರಣ ತಣ್ಣಗಾಗಿದೆ ಮಲೆನಾಡಿನಲ್ಲಿ ಬೆಂಕಿ ರಾಜಕಾರಣ ದಿನವೂ ಲಡಾಯಿ ನೋಡಿ ನಗಾಡುತ್ತಿದ್ದು ಮುಂದಿನ ಚುನಾವಣೆವರೆಗೂ ಇದು ಇದ್ದೆ ಇರುತ್ತದೆ ಎಂದು ಜನ ನಗುತ್ತಿದ್ದಾರೆ.

Sringeri Ladai MLA TD Rajegowda V/S Jeevaraj

Share

Leave a comment

Leave a Reply

Your email address will not be published. Required fields are marked *

Don't Miss

ಚಿಕ್ಕಮಗಳೂರು ತಾಲೂಕು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆಗೆ ಆಗ್ರಹ

ಚಿಕ್ಕಮಗಳೂರು: ಈ ಬಾರಿಯ ಮುಂಗಾರು ಅವಧಿಯಲ್ಲಿ ಚಿಕ್ಕಮಗಳೂರು ತಾಲೂಕಿನಲ್ಲಿ ತೀವ್ರ ಮಳೆ ಕೊರತೆಯಾಗಿದ್ದು, ಕೃಷಿ, ತೋಟಗಾರಿಕೆ, ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗುವ ಆತಂಕವಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು...

ಕಡೂರು ಬಸ್ ನಿಲ್ದಾಣದಲ್ಲಿ 50 ಗ್ರಾಂ ತೂಕದ ಚಿನ್ನದ ಸರ ಕಳ್ಳತನ

ಕಡೂರು: ಜನದಟ್ಟಣೆಯನ್ನೇ ಬಂಡವಾಳ ಮಾಡಿಕೊಂಡ ಕಳ್ಳರ ಗ್ಯಾಂಗ್ ಒಂದು, ಬಸ್ ಹತ್ತುವ ವೇಳೆ ಮಹಿಳೆಯ ಗಮನ ಬೇರೆಡೆ ಸೆಳೆದು ಕುತ್ತಿಗೆಯಲ್ಲಿದ್ದ ಬರೋಬ್ಬರಿ 50 ಗ್ರಾಂ ತೂಕದ ಚಿನ್ನದ ಸರವನ್ನು ಕ್ಷಣಾರ್ಧದಲ್ಲಿ ಎಗರಿಸಿ...

Related Articles

ಕೋಟ್ಯಂತರ ರೂಪಾಯಿ ವಂಚಿಸಿದ ನಕಲಿ ಲೇಡಿ ಪಿಎಸ್‌ಐ ಬಂಧನ

ಚಿಕ್ಕಮಗಳೂರು: ತಾನು ಬೆಂಗಳೂರಿನ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಎಂದು ನಂಬಿಸಿ, ಚಿನ್ನ, ಹಣ, ಮೊಬೈಲ್ ಹಾಗೂ ಕಾರು...

ನಲಪಾಡ್ ಹೇಳಿಕೆ ಖಂಡಿಸಿ ಜೆಡಿಎಸ್ ಅಲ್ಪಸಂಖ್ಯಾತ ಘಟಕ ಆಕ್ರೋಶ

ಚಿಕ್ಕಮಗಳೂರು: ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್ ರಾಜ್ಯ ಯುವ ಘಟಕದ...

ಮಳಲೂರು ಏತ ನೀರಾವರಿ ಯೋಜನೆ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿ ಸೂಚನೆ

ಚಿಕ್ಕಮಗಳೂರು: ಮಳಲೂರು ಏತ ನೀರಾವರಿ ಅನುಷ್ಠಾನ ಮತ್ತು ಅರಸನ ನಾಲೆ ಪುನಶ್ಚೇತನ ಯೋಜನೆಗಳ ಕಾಮಗಾರಿಗಳಿಗೆ ಉಂಟಾಗಿರುವ...

2ಬಿ ಮೀಸಲಾತಿ ಮರುಸ್ಥಾಪನೆಗೆ ಮುಸ್ಲಿಂ ಬಾಂಧವ್ಯ ವೇದಿಕೆ ಆಗ್ರಹ

ಚಿಕ್ಕಮಗಳೂರು: ರಾಜ್ಯದಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡಲಾಗುತ್ತಿದ್ದ ಶೇ.4ರಷ್ಟು 2ಬಿ ಮೀಸಲಾತಿಯನ್ನು ಮರುಸ್ಥಾಪಿಸಲು ರಾಜ್ಯ ಸರ್ಕಾರ ಕೂಡಲೇ...