Home namma chikmagalur ಉಪಲೋಕಾಯುಕ್ತರಿಂದ ಕಚೇರಿಗಳಿಗೆ ದಿಢೀರ್ ಭೇಟಿ
namma chikmagalurchikamagalurHomeLatest News

ಉಪಲೋಕಾಯುಕ್ತರಿಂದ ಕಚೇರಿಗಳಿಗೆ ದಿಢೀರ್ ಭೇಟಿ

Share
Share

ಚಿಕ್ಕಮಗಳೂರು: ಗೌರವಾನ್ವಿತ ಉಪಲೋಕಾಯುಕ್ತ ನ್ಯಾಯಮೂರ್ತಿಗಳಾದ ಶ್ರೀ ಕೆ.ಎನ್.ಫಣೀಂದ್ರ  ಅವರು ಇಂದು ನಗರಸಭೆ, ಮಲ್ಲೇಗೌಡ ಸಾರ್ವಜನಿಕ ಆಸ್ಪತ್ರಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು ಸಾರ್ವಜನಿಕ  ದೂರು ಪೆಟ್ಟಿಗೆಯಲ್ಲಿ ೨೦೨೦ರ ದೂರು ಪತ್ರ ಪತ್ತೆಯಾದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ ಅವರು ಆಕ್ಷೇಪ ವ್ಯಕ್ತಪಡಿಸಿದರಲ್ಲದೇ ದೂರು ಪತ್ರಗಳಿಗೆ ಸಂಬಂಧಿಸಿದಂತೆ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರಸಭೆಗೆ ಭೇಟಿ ನೀಡಿದ ಅವರು ಈ ಸಂದರ್ಭದಲ್ಲಿ ದೂರು ಪೆಟ್ಟಿಗೆಯನ್ನು ಗಮನಿಸಿದ ಅವರು ಅದನ್ನು ತೆರೆಯುವಂತೆ ಸೂಚಿಸಿದಾಗ ನಗರಸಭೆಯ ಅಧಿಕಾರಿಗಳು ಪೆಟ್ಟಿಗೆಯ ಕೀ ಕಳೆದು ಹೋಗಿರುವುದಾಗಿ ವಿವರಣೆ ನೀಡಿದರು. ಉಪಲೋಕಾಯುಕ್ತರ ಸೂಚನೆ ಮೇರೆಗೆ  ದೂರು ಪೆಟ್ಟಿಗೆಯ ಬೀಗ ಒಡೆದಾಗ ೨೦೨೦ ರಿಂದೀಚೆಗೆ ಸಾರ್ವಜನಿಕರು ಹಾಕಿದ್ದ ಹಲವು ಪತ್ರಗಳು ಪತ್ತೆಯಾದವು ಅವುಗಳನ್ನು ಕೂಡಲೇ ಪರಿಶೀಲಿಸಿ ಅವುಗಳಿಗೆ ಸ್ಪಂದಿಸುವಂತೆ  ತಿಳಿಸಿದ ಅವರು ಹಳೆಯ ದೂರು ಪೆಟ್ಟಿಗೆಯನ್ನು ತೆಗೆದು ಹೊಸ ಪೆಟ್ಟಿಗೆಯನ್ನು ಆಳವಡಿಸುವಂತೆ ಹಾಗೂ ನಗರಸಭೆ ಕಚೇರಿಯ ಟೇಬಲ್‌ಗಳ ಮೇಲಿದ್ದ ಕಡತಗಳನ್ನು ಗಮನಿಸಿ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಸೂಚಿಸಿದರು.

ಅವರು ನಗರದ ರಸ್ತೆಗಳು ಗುಂಡಿಗಳಿಂದ ತುಂಬಿರುವುದನ್ನು ಗಮನಿಸಿದ ಉಪಲೋಕಾಯುಕ್ತರು ಮಳೆ ಕಡಿಮೆಯಾದ ಕೂಡಲೇ ರಸ್ತೆಗಳನ್ನು ದುರಸ್ಥ್ಧಿಪಡಿಸುವಂತೆ ನಿರ್ದೇಶನ ನೀಡಿ, ಸಾರ್ವಜನಿಕರಿಂದ ನಗರಸಭೆಯ ವಿರುದ್ಧವೇ ಹೆಚ್ಚಾಗಿ ದೂರುಗಳು ಕೇಳಿ ಬರುತ್ತಿರುವುದರಿಂದ ಸಾರ್ವಜನಿಕ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಅವರ ಸಮಸ್ಯೆಗಳಿಗೆ  ಪರಿಹಾರ ಕಲ್ಪಿಸುವಂತೆ ತಿಳಿಸದರು ಇಲ್ಲದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಅನಂತರ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಉಪಲೋಕಾಯುಕ್ತರು, ಮೂರು ದಿನಗಳಿಗೊಮ್ಮೆ ಆಸ್ಪತ್ರೆಯ ಬಯೋ ತ್ಯಾಜ್ಯವನ್ನು ಆಗಾಗ್ಗೆ ವಿಲೇವಾರಿ ಮಾಡುವಂತೆ ತಿಳಿಸಿದರಲ್ಲದೆ, ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ವಿಳಂಬ ಧೋರಣೆ ಅನುಸರಿಸುವುದು ಸಲ್ಲದು ಎಂದರು. ಬಳಿಕ ಪ್ರತಿಯೊಂದು ವಾರ್ಡ್‌ಗಳಿಗೆ ತೆರಳಿ ರೋಗಿಗಳ ಯೋಗಕ್ಷೇಮ ವಿಚಾರಿಸಿದರಲ್ಲದೆ, ಆಸ್ಪತ್ರೆಯ ಊಟೋಪಚಾರದ ಬಗ್ಗೆ, ವೈದ್ಯರ ಆರೈಕೆಯ ಬಗ್ಗೆ ವಿವರ ಪಡೆದರು. ಸಂಜೆ ೬ ಗಂಟೆ ಬಳಿಕ ಸೊಳ್ಳೆ ಕಾಟವಿರುವುದರಿಂದ ಸೊಳ್ಳೆ ಪರದೆ ಅಳವಡಿಸುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದ ಅವರು. ಆಸ್ಪತ್ರೆಯ ಆವರಣವನ್ನು ಸ್ವಚ್ಚವಾಗಿಟ್ಟುಕೊಳ್ಳುವಂತೆ ಹೇಳಿದರು.

ಉಪ ಲೋಕಾಯುಕ್ತರೊಂದಿಗೆ ಪರಿಶೀಲನೆ ಸಂದರ್ಭದಲ್ಲಿ  ನ್ಯಾಯಾಧೀಶರಾದ ಪೃಥ್ವಿರಾಜ್ ವರ್ಣಿಕರ್, ಶಿವಾಜಿ ಅನಂತ್ ನಲವಾಡೆ, ಉಪಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಪಿ.ಎಂ ಪಾಟೀಲ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿ.ಹನುಮಂತಪ್ಪ, ಹಾಸನ ಚಿಕ್ಕಮಗಳೂರು ಲೋಕಾಯುಕ್ತ ಕಚೇರಿಯ ಉಪನಿಬಂಧಕರಾದ ಸ್ನೇಹಾ ಮತ್ತಿತರರು ಉಪಸ್ಥಿತರಿದ್ದರು.

Sudden visit to offices by Upalokayukta

Share

Leave a comment

Leave a Reply

Your email address will not be published. Required fields are marked *

Don't Miss

ದೊಣ್ಣೆಯಿಂದ ಹಲ್ಲೆಯಾದ ಭಿಕ್ಷುಕನ ಸಾವು

ತರೀಕೆರೆ: ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ ಸುಮಾರು 65 ವರ್ಷದ ವ್ಯಕ್ತಿಯೊಬ್ಬರನ್ನು ದೊಣ್ಣೆಯಿಂದ ಹೊಡೆದು, ಕಾಲಿನಿಂದ ತುಳಿದು ಕೊಲೆ ಮಾಡಿರುವ ಆರೋಪದಡಿ ದಂಪತಿ ವಿರುದ್ಧ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ....

ಅಜ್ಜಂಪುರದಲ್ಲಿ ಅಪರಿಚಿತ ವಾಹನ ಡಿಕ್ಕಿಗೆ ವ್ಯಕ್ತಿ ಸಾವು

ಅಜ್ಜಂಪುರ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು, ಚಾಲಕ ವಾಹನ ಸಮೇತ ಪರಾರಿಯಾಗಿರುವ ಘಟನೆ ಅಜ್ಜಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಬುಕ್ಕಾಂಬೂದಿ ಗ್ರಾಮದ...

Related Articles

ಕೆರೆಗೆ ಈಜಲು ತೆರಳಿದ್ದ ಮೂವರು ಬಾಲಕರ ಸಾವು

ಚಿಕ್ಕಮಗಳೂರು: ಶಾಲೆಗೆ ರಜೆ ಇದ್ದ ಕಾರಣ ಈಜಲು ಕೆರೆಗೆ ತೆರಳಿದ್ದ ಮೂವರು ಬಾಲಕರು ನೀರಿನಲ್ಲಿ ಮುಳುಗಿ...

ಎರಡು ತಿಂಗಳ ಸುದೀರ್ಘ ವಿರಾಮದ ಬಳಿಕ ಜಿಲ್ಲೆಯಾದ್ಯಂತ ಭರ್ಜರಿ ಮಳೆ

ಚಿಕ್ಕಮಗಳೂರು: ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಕಂಗಾಲಾಗಿದ್ದ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ಜನರಿಗೆ...

ನೀಲಕುರಿಂಜಿ ಅಲ್ಲ, ಚಂದ್ರದ್ರೋಣದಲ್ಲಿ ಅರಳಿದ್ದು ಗುರಿಂಜೆ

ಚಿಕ್ಕಮಗಳೂರು: ಕಾಫಿನಾಡಿನ ಪ್ರಸಿದ್ಧ ಚಂದ್ರದ್ರೋಣ ಪರ್ವತ ಶ್ರೇಣಿಯ ಮುಳ್ಳಯ್ಯನಗಿರಿ–ಬಾಬಾಬುಡನ್‌ಗಿರಿ ಪ್ರದೇಶದಲ್ಲಿ ನೇರಳೆ ಬಣ್ಣದ ಹೂವುಗಳು ಅರಳಿ...

ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ನಿವಾರಣೆಗೆ ಸೂಕ್ತ ಕ್ರಮ

ಚಿಕ್ಕಮಗಳೂರು: ವಿದ್ಯುತ್ ಪೂರೈಕೆಯಲ್ಲಿ ಇತ್ತೀಚೆಗೆ ಉಂಟಾದ ತಾತ್ಕಾಲಿಕ ವ್ಯತ್ಯಯವನ್ನು ದೊಡ್ಡ ಸಮಸ್ಯೆಯಾಗಿ ಬಿಂಬಿಸುವ ಅಗತ್ಯವಿಲ್ಲ. ಮುಂದಿನ...