ಚಿಕ್ಕಮಗಳೂರು: ಇಲ್ಲಿನ ಕರ್ತಿಕೆರೆ ಗ್ರಾಮ ಪಂಚಾಯಿತಿಯಲ್ಲಿ ಅಕ್ರಮ ಅವ್ಯವಹಾರಗಳು ನಡೆದಿರುವುದನ್ನು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಇದೇ ಪಂಚಾಯಿತಿ ಕಾಂಗ್ರೆಸ್ ಸದಸ್ಯ ಸಿ.ಎಲ್. ಸಿದ್ದರಾಮೇಗೌಡ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ೨೦೨೧-೨೨ ಮತ್ತು ೨೦೨೨-೨೩ನೇ ಸಾಲಿನಲ್ಲಿ ಪಂಚಾಯಿತಿಯಲ್ಲಿ ಯಾವುದೇ ಕ್ರಿಯಾ ಯೋಜನೆ ಮಾಡದೆ ಸಾಮಾನ್ಯ ಸಭೆಯಲ್ಲಿ ಚರ್ಚಿಸದೆ ೧೫ನೇ ಹಣಕಾಸು ಮತ್ತು ವರ್ಗ-೧ ವಿಕಾಸ್ ಹಣ ಪಂಚಾಯಿತಿಗೆ ಸೇರಿದ ಕೆರೆಗಳ ಅಭಿವೃದ್ಧಿಗೆ ಮೀಸಲಿಟ್ಟ ೭.೧೦ ಲಕ್ಷ ರೂ ಹಾಗೂ ಚೆಕ್ ಬಳಸಿ ೨೪ ಲಕ್ಷ ಒಟ್ಟು ಸುಮಾರು ೩೧ ಲಕ್ಷ ರೂ ಹಣವನ್ನು ಅಧ್ಯಕ್ಷರೂ ಮತ್ತು ಪಿಡಿಓ ಶಾಮೀಲಾಗಿ ಅಕ್ರಮ ಎಸಗಿದ್ದಾರೆಂದು ದೂರಿದರು.
ಯೂನಿಯನ್ ಬ್ಯಾಂಕಿನಲ್ಲಿ ಸೆಲ್ಪ್ ಚೆಕ್ ಮುಖಾಂತರ ಮತ್ತು ಹಿರೇಮಗಳೂರು ಕರ್ನಾಟಕ ಗ್ರಾಮೀಣ ಬ್ಯಾಂಕ್ನಲ್ಲಿ ೫ ರಿಂದ ೬ ಚೆಕ್ ಬಳಸಿ ೨೪ ಲಕ್ಷ ರೂ ಪಡೆದುಕೊಂಡು ವಂಚಿಸಿದ್ದಾರೆಂದು ಆರೋಪಿಸಿದರು.
ಈ ಸಂಬಂಧ ಜಿಲ್ಲಾಧಿಕಾರಿಗಳು ಜಿ.ಪಂ ಸಿಇಓ, ತಾ.ಪಂ ಇಓ ಇವರುಗಳಿಗೆ ಹಲವಾರು ಬಾರಿ ಲಿಖಿತ ದೂರು ನೀಡಿದ್ದರೂ ಕಾನೂನು ಕ್ರಮ ಕೈಗೊಳ್ಳದೆ ಆರೋಪಿಗಳನ್ನು ರಕ್ಷಣೆ ಮಾಡಿದ್ದಾರೆಂದು ತಿಳಿಸಿದರು.
ಸಾರ್ವಜನಿಕರ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಇವರುಗಳ ಮೇಲೆ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಲು ನಿರ್ಧರಿಸಲಾಗಿದ್ದು, ವಿಳಂಭವಾದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ನಾಮಿನಿ ಸದಸ್ಯ ಪ್ರಕಾಶ್ರೈ, ಚಂದ್ರಣ್ಣ, ಮಂಜುನಾಥ, ಲಾಕೇಶ್ ಉಪಸ್ಥಿತರಿದ್ದರು
Complaint to Lokayukta against illegality of Karthikere Panchayat
Leave a comment