ಚಿಕ್ಕಮಗಳೂರು: ರಕ್ತಕ್ಕೆ ಪರ್ಯಾಯ ವ್ಯವಸ್ಥೆಗಳಿಲ್ಲ. ಈ ದಿಸೆಯಲ್ಲಿ ರಕ್ತದ ಅವಶ್ಯಕತೆ ಅರಿತು ರಕ್ತದಾನ ಮಾಡಬೇಕು. ಇದು ಮಾನವೀಯತೆ ದೃಷ್ಟಿಯಿಂದ ಒಂದಿ? ಜೀವ ಉಳಿಸಲು ಸಾಧ್ಯವಾ ಗಲಿದೆ ಎಂದು ಜಿಲ್ಲಾ ಸರ್ಜನ್ ಡಾ|| ಚಂದ್ರಶೇಖರ್ ಸಾಲಿಮಠ್ ಹೇಳಿದರು.
ನಗರದ ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದಿಂದ ಶುಕ್ರವಾರ ಆಯೋಜಿಸಿದ್ಧ ಕಲಾವಿದರಿಂದ ರಕ್ತಶಿಬಿರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಮಾತನಾಡಿ ಪ್ರತಿಯೊಬ್ಬ ವ್ಯಕ್ತಿ ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಕೆಲಸದಲ್ಲಿ ಭಾಗಿಯಾಗಬೇಕು ಎಂದು ಕಿವಿಮಾತು ಹೇಳಿದರು.
ಸಾಮಾನ್ಯವಾಗಿ ರಸ್ತೆ ಅಪಘಾತದಲ್ಲಿ ರಕ್ತಸ್ರಾವಗೊಂಡ ರೋಗಿಗಳು ಮತ್ತು ಹೆರಿಗೆ ಸಂದರ್ಭದಲ್ಲಿ ಗರ್ಭಿಣಿಯರಿಗೆ ರಕ್ತದ ಅವಶ್ಯಕತೆ ಇರುತ್ತದೆ. ಇಂಥ ಸಂದರ್ಭದಲ್ಲಿ ರಕ್ತದಾನಿಗಳು ನೀಡುವ ರಕ್ತ ಮಹತ್ವ ವನ್ನು ಪಡೆಯುತ್ತದೆ. ಹೀಗಾಗಿ ಈ ಸತ್ಯಾರ್ಯದಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು ಎಂದರು.
ಪ್ರಸ್ತುತ ಸಾರ್ವಜನಿಕರು ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಮನು?ನ ಅಗತ್ಯತೆಗೆ ಅನುಗು ಣವಾಗಿ ರಕ್ತ ಸಿಗದಂತಾಗಿದೆ. ರಕ್ತದ ಅಗತ್ಯತೆ, ಮಹತ್ವ ಅರಿತು ೧೮ ವಯಸ್ಸಿನವರ ಮೇಲ್ಪಟ್ಟು ಎಲ್ಲರೂ ರಕ್ತ ದಾನ ಮಾಡಲು ಮುಂದಾಗಬೇಕು. ನೀವು ಕೊಡುವ ರಕ್ತ ಮೂರು ಜನರ ಜೀವ ಉಳಿಸಲು ನೆರವಾಗುತ್ತದೆ ಎಂದರು.
ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ಅಧ್ಯಕ್ಷ ಜಯಪ್ರಕಾರ್ ಕೂದುವಳ್ಳಿ ಮಾತನಾಡಿ ರಕ್ತದಾನ ಶಿಬಿ ರದಲ್ಲಿನ ಪಾಲ್ಗೊಳ್ಳುವ ಮೂಲಕ ಜೀವ ಉಳಿಸುವ ಕಾಯಕದಲ್ಲಿ ತೊಡಗುವ ಕಲಾವಿದರಿಗೆ ಸಂಘದಿಂದ ಗುರುತಿಸಿ, ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದ್ದು, ಕಲೆಯ ನಡುವೆ ಜೀವಕ್ಕೆ ಪ್ರಾಧ್ಯಾನ್ಯತೆ ಕೊಡುವ ನಿ ಟ್ಟಿನಲ್ಲಿ ಕಲಾವಿದರು ಮುಂದಾಗಬೇಕು ಎಂದು ಹೇಳಿದರು.
ಆರೋಗ್ಯಾಧಿಕಾರಿ ಜಲಜಾಕ್ಷಿ ಮಾತನಾಡಿ ರಕ್ತವು ಕೃತಕವಾಗಿ ಉತ್ಪಾದಿಸಲು ಎಂದಿಗೂ ಸಾಧ್ಯವಿಲ್ಲ. ಹೀಗಾಗಿ ತುರ್ತು ಸಂದರ್ಭದಲ್ಲಿ ರಕ್ತವನ್ನು ಮನುಷ್ಯನಿಂದಲೇ ಪಡೆದು ಮನುಷ್ಯನಿಗೆ ನೀಡಬೇಕು. ಈ ಕಾರ್ಯ ದಲ್ಲಿ ಯುವಜನತೆ ಹೆಚ್ಚು ತೊಡಗಿಸಿಕೊಳ್ಳಬೇಕು. ಆರೋಗ್ಯವಂತ ಮನುಷ್ಯ ಕನಿಷ್ಟ ೩ ತಿಂಗಳಿಗೊಮ್ಮೆ ರಕ್ತ ದಾನ ಮಾಡಬಹುದು ಎಂದು ಮಾಹಿತಿ ನೀಡಿದರು.
ಇದೇ ವೇಳೆ ರಕ್ತದಾನ ಶಿಬಿರದಲ್ಲಿ ಸುಮಾರು ೦೭ ಕಲಾವಿದರು ರಕ್ತದಾನ ಮಾಡಿದರು. ಈ ಸಂದರ್ಭ ದಲ್ಲಿ ವೈದ್ಯರಾದ ಡಾ|| ಭರತ್, ಕಲಾವಿದರ ಸಂಘದ ರಾಯಬಾರಿ ಮಂಜುನಾಥ್ ಹೆಡದಾಳ್, ಜಿಲ್ಲಾ ಗೌರ ವಾಧ್ಯಕ್ಷ ಶಿವಣ್ಣ, ಕಾರ್ಯದರ್ಶಿ ಮಧು, ಉಪಾಧ್ಯಕ್ಷ ಸುರೇಶ್, ಮುಖಂಡರಾದ ಶೃತಿ, ರತ್ನ, ಮುರಳೀ, ಅ ಶೋಕ್ ರಾಜರತ್ನಂ, ಭಾರತಿ, ಉಮೇಶ್, ತಂಪಿತಾಗೌಡ, ಪೂರ್ಣೇಶ್ ಮುಂತಾದವರು ಉಪಸ್ಥಿತರಿದ್ದರು.
There are no alternatives to blood people should be aware of the need and donate blood.
Leave a comment