ಚಿಕ್ಕಮಗಳೂರು: ಚಿಕ್ಕಮಗಳೂರು ನಗರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಶೀಲಾ ದಿನೇಶ್ ಅವಿರೋಧವಾಗಿ ಆಯ್ಕೆಯಾದರು. ಇದರಲ್ಲಿ ದೊಡ್ಡ ಹೈಡ್ರಾಮಾವೇ ನಡೆದು ಹೋಗಿದೆ ಎಂದು ಕಾಂಗ್ರೆಸ್ ನವರು ಹಾದಿ,ಬೀದಿಯಲ್ಲಿ ಮಾತನಾಡುತ್ತಿರುವುದು ಮಾತ್ರ ಗುಟ್ಟಾಗಿ ಉಳಿದಿಲ್ಲ.
ಬಿಜೆಪಿ ಬಹುಮತ ಹೊಂದಿದ್ದರು ಗೆಲುವಿಗಾಗಿ ಜನತಾದಳವರ ಜೊತೆಗೆ ಕೈಜೋಡಿಸಿದೆ.ಬಿಜೆಪಿಯ ಸುಜಾತ ಶಿವಕುಮಾರ್ ರಾಜೀನಾಮೆ ನೀಡಿ ಜನತಾದಳ ಬೆಂಬಲಿತ ಶೀಲಾ ದಿನೇಶ್ ಅಧ್ಯಕ್ಷರಾಗುವ ಸಮಯದಲ್ಲಿ ಬಿಜೆಪಿ ವರಸಿದ್ದಿ ವೇಣುಗೋಪಾಲ ಮತ್ತು ದಿವ್ಯ ಬಸವರಾಜ್ ಹಾಗೂ ಅರುಣ್ ಎಂಬುವವರು ಕಾಂಗ್ರೆಸ್ ಬೆಂಬಲಿಸುವ ಬಗ್ಗೆ ಮಾತುಕತೆ ನಡೆದಿರುವುದು ಗುಟ್ಟಾಗಿ ಉಳಿದಿಲ್ಲ.
ಅದೇ ರೀತಿ ಕಾಂಗ್ರೆಸ್ ನ ಮೂರು ಜನ ಬಿಜೆಪಿ ದಳದವರನ್ನು ಸಂಪರ್ಕ ಮಾಡಿದ್ದರಂತೆ ಇದಕ್ಕೆ ಅಧಿಕಾರದಲ್ಲಿ ಇರುವವರ ಕುಮ್ಮಕ್ಕು ಎನ್ನುತ್ತಿದ್ದಾರೆ.
ಕಾಂಗ್ರೆಸ್ ನ ಅಕ್ಮಲ್ ಮತ್ತು ಎಸ್.ಡಿ.ಪಿ.ಐನ ಶ್ರೀನಿವಾಸ್ ಈ ಬಾರಿಯಾದರೂ ಕಾಂಗ್ರೆಸ್ ನವರು ಕುರ್ಚಿ ಹಿಡಿಯಬೇಕು ಎಂದು ಪ್ಲಾನ್ ಮಾಡಿ ತೊಡೆ ತಟ್ಟಲು ಮುನ್ನುಗಿದ್ದಾರೆ ಆದರೆ ಶಾಸಕರಾದ ತಮ್ಮಯ್ಯ ಸಹಕರಿಸಲಿಲ್ಲ ಕಾಂಗ್ರೆಸ್ ಮುಖಂಡರು ಕೂಡ ಇದರ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ.
ನಗರಸಭೆ ಅಧ್ಯಕ್ಷರ ಚುನಾವಣೆ ಮುಗಿದ ನಂತರ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸುವಾಗ ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಬೋಜೇಗೌಡ ಮತ್ತು ಸಿ.ಟಿ.ರವಿ ಶಾಸಕ ತಮ್ಮಯ್ಯರ ಸಹಕಾರವನ್ನು ಬಹಿರಂಗವಾಗಿ ಹೇಳಿದ್ದಾರೆ.
ಶಾಸಕರುಗಳೇ ಖರೀದಿಯಾಗುತ್ತಿರುವಾಗ ನಗರಸಭಾ ಸದಸ್ಯರನ್ನು ಖರೀದಿಸುವುದು ಹೊಸದೇನಲ್ಲಾ ಹೀಗಾಗಿ ಕೋಟಿ ರೂಪಾಯಿಗಳ ಡೀಲ್ ಗೆ ಇಳಿದಿದ್ದ ಅಕ್ಮಲ್ ಟೀಮ್ ನಿರಾಸೆಯಾಗುವಂತೆ ಆಯಿತು ಶಾಸಕ ತಮ್ಮಯ್ಯ ಸೋಲುವುದಕ್ಕೆ ಚುನಾವಣೆ ಮಾಡುವುದು ಇಷ್ಟ ಇಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಇದಕ್ಕೆ ಪರಸ್ಪರ ಹೊಂದಾಣಿಕೆ ರಾಜಕಾರಣವೇ ಕಾರಣ ಎಂದು ಹಾದಿ, ಬೀದಿಯಲ್ಲಿ ಮಾತನಾಡುತ್ತಿರುವುದು ಸತ್ಯ.
ಚಿಕ್ಕಮಗಳೂರಿನಲ್ಲಿ ಪಕ್ಷಗಳಿಗಿಂತ ಅಧಿಕಾರಸ್ಥರ ಹೊಂದಾಣಿಕೆ ರಾಜಕೀಯ ನೋಡಿ” ತ್ರೀ ಪಾರ್ಟಿ “ಗೆ ಮೂರು ನಾಮವೇ ಸಿಂಬಲ್ ಎಂದು ಕುಟುಕಿಸುತ್ತಿರುವುದು ಮಾತ್ರ ಸತ್ಯ.
Municipal Council President Election – Three Name Symbols for “Three Parties”?
Leave a comment