Home namma chikmagalur ಬಡಾವಣೆಗೆ ಮೂಲಸೌಕರ್ಯ ಕಲ್ಪಿಸಲು ಸಚಿವರಿಗೆ ಕನ್ನಡಸೇನೆ ಮನವಿ
namma chikmagalurchikamagalurHomeLatest News

ಬಡಾವಣೆಗೆ ಮೂಲಸೌಕರ್ಯ ಕಲ್ಪಿಸಲು ಸಚಿವರಿಗೆ ಕನ್ನಡಸೇನೆ ಮನವಿ

Share
Share

ಚಿಕ್ಕಮಗಳೂರು: ಇಂದಿರಾಗಾಂಧಿ ಬಡಾವಣೆಯ ನಿವಾಸಿಗಳಿಗೆ ಮೂಲ ಸವಲತ್ತು ಕಲ್ಪಿ ಸಿಕೊಡಬೇಕು ಎಂದು ಕನ್ನಡಸೇನೆ ಮುಖಂಡರುಗಳು ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಮನವಿ ಸಲ್ಲಿಸಿದರು.

ಈ ಕುರಿತು ಮಾತನಾಡಿದ ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಹಿಂದಿನ ಸಚಿವ ಸಗೀರ್ ಅಹ್ಮದ್ ಕಾಲದಲ್ಲಿ ಬಡಾವಣೆ ನಿರ್ಮಾಣವಾಗಿದ್ದರೂ ಮೂಲಸೌಕರ್ಯಗಳು ಅಚ್ಚುಕಟ್ಟಾಗಿಲ್ಲ. ಜೊತೆಗೆ ಐದು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಬಡಾವಣೆಯಲ್ಲಿ ವಾಸಿಸುತ್ತಿದ್ದು ನ್ಯಾಯಬೆಲೆ ಅಂಗಡಿಯೂ ತೆರೆದಿಲ್ಲ ಎಂದು ಹೇಳಿದರು.

ರಾಜ್ಯಸರ್ಕಾರದ ಅನ್ನಭಾಗ್ಯ ಯೋಜನೆಯ ಅಕ್ಕಿ ಪಡೆಯಲು ನಿವಾಸಿಗಳು ಎರಡು ಕಿ.ಮೀ. ಕಾಲ್ನಡಿಗೆ ಯಲ್ಲೇ ಸಾಗಬೇಕಿದೆ. ಬಡಾವಣೆಗೆ ನಾಮಫಲಕವಿಲ್ಲ, ಚಾಮುಂಡೇಶ್ವರಿ ದೇವಾಲಯದ ಜೀರ್ಣೋದ್ದಾರ ಕ್ಕೂ ಅನೇಕ ಮನವಿ ಸಲ್ಲಿಸಿದರೂ ಜನಪ್ರತಿನಿಧಿಗಳು ಕೇವಲ ಆಶ್ವಾಸನೆಗಳು ಮಾತ್ರ ಜನತೆಗ ನೀಡಿ ತೆರಳುತ್ತಿ ದ್ದಾರೆ ಎಂದು ತಿಳಿಸಿದರು.

ಬಡಾವಣೆಯ ಮಸೀದಿ ಸೇರಿದಂತೆ ಕೆಲವೆಡೆ ಎಲ್ಲೆಂದರಲ್ಲಿ ಕಸ ಹಾಕಿ ಮಲೀನಗೊಳಿಸುತ್ತಿದ್ದಾರೆ. ಕಳೆ ದ ಎಂಟು ವರ್ಷಗಳಿಂದ ಸಮುದಾಯ ಭವನ ನಿರ್ಮಾಣ ಹಂತದಲ್ಲಿಯೇ ಇದೆ. ಜನರಿಗೆ ಕುಡಿಯುವ ನೀರಿನ ಸಮಸ್ಯೆ ಬಹಳಷ್ಟು ಕಾಡುತ್ತಿದ್ದು ಇಪ್ಪತ್ತು ದಿನಕ್ಕೊಮ್ಮೆ ನೀರನ್ನು ಬಿಡುವ ಜೊತೆಗೆ ಸಾಂಕ್ರಾಮಿಕ ರೋ ಗಗಳು ಹೆಚ್ಚಾಗುತ್ತಿವೆ ಎಂದರು.

ಈ ಸುತ್ತಮುತ್ತಲು ಬೀದಿ ದೀಪಗಳ ಕೊರತೆಯಿಂದ ಸಂಜೆ ಸಮಯ ಕೆಲಸ ಪೂರ್ಣಗೊಳಿಸಿ ಮಹಿಳೆ ಯರು ಮನೆಗೆ ಹಿಂತಿರುಗಲು ಭಯಭೀತರಾಗುತ್ತಿದ್ದಾರೆ. ಮುಖ್ಯವಾಗಿ ಬಡಾವಣೆಯಲ್ಲಿ ಪೊಲೀಸ್ ಠಾಣೆ ತೆರೆದರೆ ಬಹಳಷ್ಟು ಅನೈತಿಕ ಚಟುವಟಿಕೆಗಳಿಗೂ ಕಡಿವಾಣ ಹಾಕಬಹುದು. ಪೌರಕಾರ್ಮಿಕರು ಮುಖ್ಯರಸ್ತೆ ಯನ್ನು ಮಾತ್ರ ಸ್ವಚ್ಚಗೊಳಿಸಿ ಒಳಗಿನ ರಸ್ತೆಗಳಿಗೆ ಬರುತ್ತಿಲ್ಲ ಎಂದು ತಿಳಿಸಿದರು.

ಬಡಾವಣೆ ಅನೇಕ ವರ್ಷಗಳಿಂದ ವಾಸಿಸುತ್ತಿರುವ ನಿವಾಸಿಗಳಿಗೆ ಸ್ವಾಧೀನ ಪತ್ರ ವಿತರಣೆಯಾಗಿಲ್ಲ. ಇದಕ್ಕೆ ಮನನೊಂದು ಸ್ಥಳೀಯರು ಸ್ವಾಧೀನ ಪತ್ರಕ್ಕಾಗಿ ಹಲವು ರೀತಿಯ ಮನವಿ ಸಲ್ಲಿಸಿದರೂ ಯಾವುದೇ ಪ್ರತಿಕ್ರಿಯೆ ದೊರೆತ್ತಿಲ್ಲ. ಇದರಿಂದಾಗಿ ಕೂಡಲೇ ಸಚಿವರು ಈ ಎಲ್ಲಾ ಸಮಸ್ಯೆಗಳ ಬಗ್ಗೆ ಕೂಲಂಕುಶವಾ ಗಿ ಪರಿಶೀಲಿಸಿ ಸಮಸ್ಯೆ ಪರಿಹರಿಸಬೇಕಿದೆ ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕನ್ನಡಸೇನೆ ವಕ್ತಾರ ಹುಣಸೇಮಕ್ಕಿ ಲಕ್ಷ್ಮಣ್, ಮುಖಂಡರುಗಳಾದ ಕಲ್ಲುದೊಡ್ಡಿ ಸತೀಶ್, ಜಯಪ್ರಕಾಶ್, ನಿಶ್ಚಿತ್, ಪಾಲಾಕ್ಷಿ, ಅನ್ವರ್ ಮತ್ತಿತರರು ಹಾಜರಿದ್ದರು.

Kannada Sena requests the minister to provide infrastructure for the barangay

Share

Leave a comment

Leave a Reply

Your email address will not be published. Required fields are marked *

Don't Miss

ಗುಡುಗು-ಸಿಡಿಲಿನ ಭಾರಿ ಮಳೆಗೆ ಇಡೀ ನಗರ ತಲ್ಲಣ

ಚಿಕ್ಕಮಗಳೂರು: ಶುಕ್ರವಾರ ಮಧ್ಯರಾತ್ರಿ ಗುಡುಗು-ಸಿಡಿಲಿನ ಅಬ್ಬರದೊಂದಿಗೆ ಸುರಿದ ಭಾರಿ ಮಳೆಗೆ ಇಡೀ ನಗರ ತಲ್ಲಣಗೊಂಡಿದೆ. ಮರಗಳು ವಿದ್ಯುತ್ ಕಂಬಗಳ ಸಹಿತ ರಸ್ತೆಗೆ ಉರಳಿದವು. ಹಲವು ಕಟ್ಟಡಗಳ ಚಾವಣಿ ಹಾರಿ ಹೋಗಿವೆ. ಮಧ್ಯರಾತ್ರಿ...

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ನೇಮಕ ನಿಯಮ ಬಾಹಿರ

ಚಿಕ್ಕಮಗಳೂರು: ಇತ್ತೀಚೆಗೆ ಡಿ. ರಾಮೇಗೌಡರವರನ್ನು ಕರ್ನಾಟಕ ರಾಜ್ಯ ರೈತ ಸಂಘದ ಚಿಕ್ಕಮಗಳೂರು ತಾಲ್ಲೂಕು ಘಟಕದ ಅಧ್ಯಕ್ಷನಾಗಿ ನೇಮಕ ಮಾಡಿರುವುದು ನಿಯಮ ಬಾಹಿರವಾಗಿದ್ದು, ಈ ಆಯ್ಕೆ ಅಮಾನ್ಯ ಎಂದು ಜಿಲ್ಲಾಧ್ಯಕ್ಷ ಮಹೇಶ್ ಹೇಳಿದರು....

Related Articles

‘ನಮ್ಮೂರಿಗೆ ರಸ್ತೆ ಅಭಿವೃದ್ಧಿ ಬೇಡ’ ಎಂದು ಗ್ರಾಮಸ್ಥರು….?

ಚಿಕ್ಕಮಗಳೂರು: ಸಾಮಾನ್ಯವಾಗಿ ಗ್ರಾಮಗಳಿಗೆ ರಸ್ತೆ ಬೇಕು, ಕುಡಿಯುವ ನೀರು ಬೇಕು, ವಿದ್ಯುತ್ ಬೇಕು ಎಂದು ಜನ...

ಜಿಲ್ಲೆಯಲ್ಲಿ ಅಧಿಕಗೊಂಡ ನಾಪತ್ತೆ ಪ್ರಕರಣಗಳು

ಚಿಕ್ಕಮಗಳೂರು: ಬೀರೂರು ಮತ್ತು ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ಪ್ರತ್ಯೇಕ ನಾಪತ್ತೆ ಪ್ರಕರಣಗಳು ದಾಖಲಾಗಿದ್ದು,...

ಮಲೆನಾಡಿನಲ್ಲಿ ಮತ್ತೆ ಅಪಾಯಕಾರಿ ಕಾಲುಸಂಕಗಳನ್ನೇ ಆಶ್ರಯ ಪಡೆದ ಗ್ರಾಮಸ್ಥರು

ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ನಕ್ಸಲ್ ಚಟುವಟಿಕೆಗಳು ಸ್ತಬ್ಧವಾಗುತ್ತಿದ್ದಂತೆ ಸರ್ಕಾರ ಅಲ್ಲಿನ ಕುಗ್ರಾಮಗಳನ್ನು ಸಂಪೂರ್ಣವಾಗಿ ಕೈಬಿಟ್ಟಿದೆ...

ಜೆಜೆಎಂನಲ್ಲಿ ನಕಲಿ ಛಾಪಾ ಕಾಗದ ಬಳಸಿ ಸರ್ಕಾರಕ್ಕೆ ವಂಚನೆ

ಶೃಂಗೇರಿ:  ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಜೆಜೆಎಂ (ಜಲ ಜೀವನ್ ಮಿಷನ್) ಹಾಗೂ ಟಾಸ್ಕ್ ಫೋರ್ಸ್...