ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿದ ಸೆಲೋರಿಯಾ ಕಾರೊಂದು ರಸ್ತೆಯ ಪಕ್ಕದ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದು ಕಂಬವನ್ನು 20 ಅಡಿ ದೂರಕ್ಕೆ ಎಳೆದೊಯ್ದ ಘಟನೆ ಚಿಕ್ಕಮಗಳೂರು ತಾಲೂಕಿನ ವಸ್ತಾರೆ ಬಳಿ ನಡೆದಿದೆ.
ಡಿಕ್ಕಿಯ ರಭಸಕ್ಕೆ ನೆಲದಲ್ಲಿ ಹೂತಿದ್ದ ವಿದ್ಯುತ್ ಕಂಬ ಸಂಪೂರ್ಣ ಮುರಿದು ಕಾರಿನ ಜೊತೆಗೆ ಎಳೆಯಲ್ಪಟ್ಟಿದ್ದು. ಗೌಂಡಿಂಗ್ ಕೇಬಲ್ ಕೂಡ ತುಂಡಾಗಿದೆ.
ಅಪಘಾತ ಸಂಭವಿಸುತ್ತಿದ್ದಂತೆ ಕಾರಿನ ಏರ್ ಬ್ಯಾಗ್ ಓಪನ್ ಆಗಿರುವ ಪರಿಣಾಮ ಚಾಲಕನ ಜೀವ ಉಳಿದಿದೆ.
ಕಂಬ ಮುರಿದು ಬೀಳುತ್ತಿದ್ದಂತೆಯೇ ವಿದ್ಯುತ್ ಸಂಪರ್ಕವೂ ಕಟ್ ಆಗಿದ್ದು, ಭಾರೀ ಅನಾಹುತವೊಂದು ತಪ್ಪಿದೆ.
ಅಜಾಗರೂಕ ಚಾಲನೆ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು ಆಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ. ಸ್ಥಳೀಯರು ಅಪಘಾತದ ರಭಸವನ್ನು ಕಂಡು ಬೆಚ್ಚಿಬಿದ್ದಿದ್ದಾರೆ.
Car loses control and crashes into light pole
Leave a comment