Home namma chikmagalur ಸರ್ಕಾರಿ ಶಾಲೆಗೆ ಉಚಿತ ನೋಟ್‌ಪುಸ್ತಕ, ಲೇಖನಿ ವಿತರಣೆ
namma chikmagalurchikamagalurHomeLatest News

ಸರ್ಕಾರಿ ಶಾಲೆಗೆ ಉಚಿತ ನೋಟ್‌ಪುಸ್ತಕ, ಲೇಖನಿ ವಿತರಣೆ

Share
Share

ಚಿಕ್ಕಮಗಳೂರು: ಕೊಟ್ಟಿಗಟ್ಟಲೇ ಆಸ್ತಿ, ಅಂತಸ್ತು ಕೂಡಿಟ್ಟರೆ ಮನಸ್ಸಿಗೆ ನೆಮ್ಮದಿ ದೊರೆ ಯುವುದಿಲ್ಲ. ಅಸಹಾಯಕರು, ಬಡವರ್ಗದ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಟ್ಟರೆ ಬದುಕಿನಲ್ಲಿ ಸಂತೋಷ ತುಂಬಲಿದೆ ಎಂದು ಕರವೇ ಸ್ವಾಭಿಮಾನದ ಬಣದ ಜಿಲ್ಲಾಧ್ಯಕ್ಷ ಗುರುಮೂರ್ತಿ ಹೇಳಿದರು.

ನಗರದ ಕೋಟೆ ಸಮೀಪ ಸರ್ಕಾರಿ ನಗರ ಬಾಲಕರ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಸೋಮ ವಾರ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾ ಘಟಕದಿಂದ ಉಚಿತ ನೋಟ್‌ಪುಸ್ತಕ, ಲೇಖನ ಸಾಮಾಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು.

ಮಕ್ಕಳಿಗೆ ದಾನದ ರೂಪದಲ್ಲಿ ನೋಟ್‌ಪುಸ್ತಕ ವಿತರಿಸುತ್ತಿಲ್ಲ. ಬದಲಾಗಿ ಭವಿಷ್ಯದಲ್ಲಿ ವಿದ್ಯಾವಂತರಾ ಗಿ ಸಮಾಜದಲ್ಲಿ ದೊಡ್ಡವ್ಯಕ್ತಿಗಳಾಗಿ ರೂಪುಗೊಳ್ಳುವ ಉದ್ದೇಶದಿಂದ ಈ ಸಾಮಾಜಿಕ ಕಾರ್ಯಕ್ಕೆ ಮುಂದಾ ಗಿದೆ. ಹೀಗಾಗಿ ಶಾಲಾಮಕ್ಕಳು ಸೌಲಭ್ಯವನ್ನು ಸದ್ಬಳಕೆ ಮಾಡಿಕೊಂಡು ಭವಿಷ್ಯದಲ್ಲಿ ನೀವು ಅಸಹಾಯಕರಿಗೆ ಸ್ಪಂದಿಸುವ ಗುಣ ಬೆಳೆಸಿಕೊಳ್ಳಬೇಕು ಎಂದರು.

ಯಾವುದೇ ಮನುಷ್ಯ ಕೋಟಿಗಟ್ಟಲೇ ಆಸ್ತಿಗಳಿದ್ದರೂ ಕೊನೆಗಳಿಗೆಯಲ್ಲಿ ಎಲ್ಲವನ್ನೂ ತ್ಯಜಿಸಿ ಮಣ್ಣಾ ಗಲೇಬೇಕಿದೆ. ನೈಜವಾಗಿ ಸಕಲ ಐಶ್ಚರ್ಯವಿರುವನು ಶ್ರೀಮಂತನಲ್ಲ. ಬಡವರಿಗೆ, ನೊಂದವರಿಗೆ ಸಹಾಯ ಹಸ್ತ ಚಾಚುವನೇ ನಿಜವಾದ ಶ್ರೀಮಂತ ವ್ಯಕ್ತಿ ಎಂದ ಅವರು ಮನುಜ ದುಡಿಮೆಯ ಒಂದಿಷ್ಟು ಹಣವನ್ನು ಸಮಾಜಕ್ಕಾಗಿ ಬಳಸಿದರೆ ಬದುಕು ಸಾರ್ಥಕವಾಗಲಿದೆ ಎಂದು ಹೇಳಿದರು.

ವಿದ್ಯೆಯಿಂದ ಮಾತ್ರ ಕಳೆದುಕೊಂಡಿದ್ದನ್ನು ಮರಳಿ ಪಡೆಯಲು ಸಾಧ್ಯ. ಆದ್ದರಿಂದ ಸಮಾಜದ ಮಕ್ಕ ಳು ಉನ್ನತ ಶಿಕ್ಷಣ ಪಡೆಯುವತ್ತ ಗಮನಹರಿಸಬೇಕು. ಪಾಲಕರು ಕೂಡಾ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರೋ ತ್ಸಾಹಿಸಬೇಕು. ಮಕ್ಕಳ ಶಿಕ್ಷಣಕ್ಕೆ ಯಾವುದೇ ರೀತಿಯ ಅನಾನುಕೂಲಕ್ಕೆ ಕರವೇ ಸದಾ ಬೆನ್ನೆಲುಬಾಗಿ ನಿಲ್ಲ ಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರವೇ ಗೌರವಾಧ್ಯಕ್ಷ ಮಂಜುನಾಥ್, ಮುಖಂಡರುಗಳಾದ ಅನಿಲ್, ಕಿರಣ್, ಹ ರ್ಷಿತ್, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.

Free notebooks pens distributed to government schools

Share

Leave a comment

Leave a Reply

Your email address will not be published. Required fields are marked *

Don't Miss

ಜೀವಾಣು ಹೆಚ್ಚಿಸುವ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕು

ಚಿಕ್ಕಮಗಳೂರು: ಮಣ್ಣು ರೋಗಯುಕ್ತವಾಗಿದ್ದು, ಅದಕ್ಕೆ ಬೇಕಿರುವ ಜೀವಾಣುಗಳನ್ನು ಹೆಚ್ಚಿಸುವ ಮೂಲಕ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕಾದ ಅನಿವಾರ್ಯ ಇದೆ’ ಎಂದು ಕನ್ನೇರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು. ಸಾವಯವ ರೈತರ ಬಳಗದಿಂದ...

ಅಡ್ಡ ಮತದಾನದ ಸತ್ಯಶೋಧನಾ ಸಮಿತಿ ವರದಿ ಸಿದ್ದ

ಚಿಕ್ಕಮಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ರಚಿಸಿರುವ ಸತ್ಯಶೋಧನಾ ಸಮಿತಿಯು ತನ್ನ ಪ್ರಾಥಮಿಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಸಮಿತಿಯ ಸದಸ್ಯರಾದ ಸಿ.ಟಿ. ರವಿ ಅವರು ಚಿಕ್ಕಮಗಳೂರಿನಲ್ಲಿ ಈ...

Related Articles

ಸ್ವಚ್ಛ ಪರಿಸರ ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ

ಚಿಕ್ಕಮಗಳೂರು: ಮಲೆನಾಡಿನ ನಿಸರ್ಗದತ್ತ ಸೌಂದರ್ಯ ಮತ್ತು ಸ್ವಚ್ಛ ಪರಿಸರವನ್ನು ಉಳಿಸಿ ಬೆಳೆಸುವ ಮಹತ್ತರವಾದ ಹೊಣೆಗಾರಿಕೆ ನಮ್ಮೆಲ್ಲರ...

ಪ್ರವಾಹ ಪರಿಸ್ಥಿತಿ ಎದುರಿಸುವ ಅಣಕು ಪ್ರದರ್ಶನ

ಚಿಕ್ಕಮಗಳೂರು: ಕಾಫಿನಾಡಿನ ಹಿರೇಕೊಳಲೆ ಕೆರೆಯಲ್ಲಿ ಪ್ರವಾಹ ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಅಗ್ನಿಶಾಮಕ ಮತ್ತು...

ಯುವಜನತೆ ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಲಿ

ಚಿಕ್ಕಮಗಳೂರು: ಇಂದಿನ ಸಮಾಜದಲ್ಲಿ ಮಾದಕ ದ್ರವ್ಯಗಳ ಹಾವಳಿ ಹೆಚ್ಚಾಗುತ್ತಿದ್ದು, ಇದು ಯುವ ಪೀಳಿಗೆಯ ಭವಿಷ್ಯ ಹಾಗೂ...

ಭಿಕ್ಷುಕಿಯನ್ನು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ

ಚಿಕ್ಕಮಗಳೂರು:  ಕ್ಷುಲ್ಲಕ ಕಾರಣಕ್ಕೆ ಸೈಜುಕಲ್ಲು ಎತ್ತಿಹಾಕಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿಗೆ ಇಲ್ಲಿನ ಒಂದನೇ ಅಧಿಕ...