Home namma chikmagalur ಒಂದು ವರ್ಷದ ಅಭಿನಯ – ರಂಗ ತರಬೇತಿ ಡಿಪ್ಲೋಮಾಗೆ ಆಹ್ವಾನ
namma chikmagalurHomeLatest NewsState News

ಒಂದು ವರ್ಷದ ಅಭಿನಯ – ರಂಗ ತರಬೇತಿ ಡಿಪ್ಲೋಮಾಗೆ ಆಹ್ವಾನ

Share
Share
ಚಿಕ್ಕಮಗಳೂರು: ಮಂಡ್ಯ ರಮೇಶ್ ನೇತೃತ್ವದ ನಟನ ರಂಗಶಾಲೆಯ ರಂಗಭೂಮಿ ಡಿಪ್ಲೊಮಾ ೨೦೨೫-೨೬ (ಒಂದು ವರ್ಷದ ಅಭಿನಯ ಮತ್ತು ರಂಗ ತರಬೇತಿ) ನೇ ಸಾಲಿನ ಪ್ರವೇಶ ಪ್ರಕ್ರಿಯೆ ಮತ್ತು ಅಭ್ಯರ್ಥಿಗಳ ಸಂದರ್ಶನ (ಆಡಿಷನ್) ಮೇ ೨೫ರಂದು ಬೆಳಿಗ್ಗೆ ೧೦ ಗಂಟೆಗೆ ಮೈಸೂರಿನ ರಾಮಕೃಷ್ಣನಗರದಲ್ಲಿರುವ ನಟನ ರಂಗಶಾಲೆಯಲ್ಲಿ ನಡೆಯಲಿದೆ.
ನಟನ ರಂಗಶಾಲೆಯು ಕಳೆದ ಅನೇಕ ವರ್ಷಗಳಿಂದ ರಂಗಭೂಮಿಯಲ್ಲಿ ನಿರಂತರ ಕ್ರಿಯಾಶೀಲವಾಗಿದ್ದು ರಂಗಭೂಮಿಯ ಅಧ್ಯಯನ, ಪ್ರಾತ್ಯಕ್ಷಿಕೆ, ಪ್ರಯೋಗ, ಪ್ರದರ್ಶನಗಳ ಮೂಲಕ ಶ್ರೇಷ್ಠತೆಯನ್ನು ಸಾಧಿಸುವುದರತ್ತ ಸತತವಾಗಿ ಪ್ರಯತ್ನಶೀಲವಾಗಿದೆ.
ತನ್ನ ಚಟುವಟಿಕೆಯ ಭಾಗವಾಗಿ ೧೬ ರಿಂದ ೩೨ ವರ್ಷದ ಒಳಗಿನ ಆಸಕ್ತ ಯುವಕ ಯುವತಿಯರಿಗೆ ಒಂದು ವರ್ಷದ ವಸತಿ ರಹಿತ ರಂಗಭೂಮಿ ಡಿಪ್ಲೊಮಾ ಕೋರ್ಸ್ ಅನ್ನು ನಡೆಸುತ್ತಿದ್ದು, ಕಳೆದ ಅನೇಕ ವರ್ಷಗಳಿಂದ ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ವಿದ್ಯಾರ್ಥಿಗಳು ಆಗಮಿಸಿ ನಟನ ರಂಗಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ನಟನ ರಂಗಶಾಲೆಯಲ್ಲಿ ತರಬೇತಿ ಪಡೆದ ಸುಮಾರು ೫೦೦ಕ್ಕೂ ಹೆಚ್ಚು ಕಲಾವಿದರು ದೇಶದಾದ್ಯಂತ ವಿವಿಧ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಪ್ರತಿದಿನ ಸಂಜೆ ೫.೩೦ರಿಂದ ರಾತ್ರಿ ೯ರವರೆಗೆ ತರಗತಿಗಳು ನಡೆಯಲಿದ್ದು, ಅಭಿನಯ, ರಂಗ ಸಿದ್ಧಾಂತ, ರಂಗ ಸಂಗೀತ, ಆಂಗಿಕ ಚಲನೆ, ಧ್ವನಿ ಬಳಕೆ, ಪ್ರಸಾಧನ, ಬೆಳಕು, ರಂಗ ವಿನ್ಯಾಸ, ಪರಿಕರ ನಿರ್ಮಾಣ, ರಂಗ ಇತಿಹಾಸ, ನಾಟಕ ತಯಾರಿ, ಪ್ರದರ್ಶನ.. ಹೀಗೆ ರಂಗಭೂಮಿಯ ಬೇರೆ ಬೇರೆ ಆಯಾಮಗಳ ಪರಿಚಯಾತ್ಮಕ ಪ್ರಾಯೋಗಿಕ ತರಗತಿಗಳು ನಡೆಯಲಿವೆ. ನೇರ ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಮೇಲ್ಕಂಡ ದಿನಾಂಕದಂದೇ ಸಂದರ್ಶನದಲ್ಲಿ ಭಾಗವಹಿಸಬಹುದು.
ರಂಗಭೂಮಿಯನ್ನು ಗಂಭೀರವಾಗಿ ಅಭ್ಯಸಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ಸಂಸ್ಥೆಯ ವೆಬ್‌ಸೈಟ್ (ತಿತಿತಿ.ಟಿಚಿಣಚಿಟಿಚಿmಥಿsuಡಿu.oಡಿg) ಅಥವಾ ಕಚೇರಿಯಲ್ಲಿ ನಿಗದಿತ ಶುಲ್ಕ ಪಾವತಿಸಿ ಅರ್ಜಿ ಪಡೆದು ಅಂಚೆ ಮುಖಾಂತರ ಅಥವಾ ನೇರವಾಗಿ ತಲುಪಿಸಬೇಕು. ಆಡಿಷನ್ ಮತ್ತು ಪ್ರವೇಶಾತಿ ಕುರಿತ ಸೂಚನೆಗಳು ಮತ್ತು ಹೆಚ್ಚಿನ ಮಾಹಿತಿಗಳು ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ ೭೨೫೯೫೩೭೭೭೭, ೯೪೮೦೪೬೮೩೨೭, ೯೮೪೫೫೯೫೫೦೫ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ನಟನ ರಂಗಶಾಲೆಯ ಪ್ರಕಟಣೆ ತಿಳಿಸಿದೆ.
Invitation to the actor’s theater diploma
Share

Leave a comment

Leave a Reply

Your email address will not be published. Required fields are marked *

Don't Miss

ಸಮುದಾಯದ ಅಭಿವೃದ್ಧಿಗೆ ದುಡಿಯುವ ಸಂಕಲ್ಪ ಮಾಡಬೇಕು

ಚಿಕ್ಕಮಗಳೂರು: ಪರಿಶಿಷ್ಟಜಾತಿ,ಪರಿಶಿಷ್ಟ ಪಂಗಡದ ಸರ್ಕಾರಿ ನೌಕರರು, ನಿವೃತ್ತ ಸರ್ಕಾರಿ ನೌಕರ ಸಂಘದವರು ಸಮುದಾಯದ ಅಭಿವೃದ್ಧಿಗೆ ದುಡಿಯುವ ಸಂಕಲ್ಪ ಮಾಡಬೇಕು ಎಂದು ಜಿಲ್ಲಾಧಿಕಾರಿ ಕೆಲಸ ನಿರ್ವಹಿಸಿ ಬೆಂಗಳೂರಿಗೆ ವರ್ಗಾವಣೆ ಗೊಂಡಿರುವ ಎನ್.ಎಂ. ನಾಗರಾಜ್...

ಗ್ರಾಮಲೆಕ್ಕಿಗನಿಗೆ ನಕಲಿ ಕೆ.ಜಿ. ಬೆಳ್ಳಿ ಗಟ್ಟಿ ನೀಡಿ ವಂಚನೆ

ಚಿಕ್ಕಮಗಳೂರು : ಗ್ರಾಮಲೆಕ್ಕಿಗರೊಬ್ಬರಿಗೆ ಚಿನ್ನ, ಬೆಳ್ಳಿ ಮೇಲೆ ಹೂಡಿಕೆ ಮಾಡಿ ಲಾಭಮಾಡಿಕೊಡುವ ಆಮಿಷವೊಡ್ಡಿದ ಬ್ಯಾಂಕ್ ಉದ್ಯೋಗಿಯೊಬ್ಬ ೪೫.೨೦ ಲಕ್ಷ ಹಣಕ್ಕೆ ೫೦ ನಕಲಿ ಕೆ.ಜಿ. ಬೆಳ್ಳಿ ಗಟ್ಟಿ ನೀಡಿ ವಂಚಿಸಿರುವ ಬಗ್ಗೆ...

Related Articles

ಸಿದ್ದು ಮೌನಂ ಸಮ್ಮತಿ ಯಾವಾಗ ಸ್ಪೋಟಿಸುತ್ತದೆ ?

ಕರ್ನಾಟಕದ ರಾಜಕಾರಣದಲ್ಲಿ ಇಂತಹ ಬೆಳವಣಿಗೆ ನಡೆಯ ಬಹುದು ಎಂದು ಯಾರು ಕೂಡ ನಿರೀಕ್ಷೆ ಮಾಡಿರಲಿಲ್ಲ. 2013...

ಗುಡುಗು-ಸಿಡಿಲಿನ ಭಾರಿ ಮಳೆಗೆ ಇಡೀ ನಗರ ತಲ್ಲಣ

ಚಿಕ್ಕಮಗಳೂರು: ಶುಕ್ರವಾರ ಮಧ್ಯರಾತ್ರಿ ಗುಡುಗು-ಸಿಡಿಲಿನ ಅಬ್ಬರದೊಂದಿಗೆ ಸುರಿದ ಭಾರಿ ಮಳೆಗೆ ಇಡೀ ನಗರ ತಲ್ಲಣಗೊಂಡಿದೆ. ಮರಗಳು...

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ನೇಮಕ ನಿಯಮ ಬಾಹಿರ

ಚಿಕ್ಕಮಗಳೂರು: ಇತ್ತೀಚೆಗೆ ಡಿ. ರಾಮೇಗೌಡರವರನ್ನು ಕರ್ನಾಟಕ ರಾಜ್ಯ ರೈತ ಸಂಘದ ಚಿಕ್ಕಮಗಳೂರು ತಾಲ್ಲೂಕು ಘಟಕದ ಅಧ್ಯಕ್ಷನಾಗಿ...

ಸಂವಿಧಾನ ವಿರೋಧಿ ಎಸ್.ಐ.ಆರ್ ರದ್ಧತಿಗೆ ಆಗ್ರಹಿಸಿ ಪ್ರತಿಭಟನೆ

ಚಿಕ್ಕಮಗಳೂರು: ಸಂವಿಧಾನ, ಪ್ರಜಾತಂತ್ರ, ಜನವಿರೋಧಿ ಆಗಿರುವ ಸರ್ವಾಧಿಕಾರಿ ಗುಣವಿರುವ ಎಸ್.ಐ.ಆರ್ ರದ್ಧಾಗಬೇಕು ಸಂವಿಧಾನ ಬದ್ಧವಾದ, ಜನಸ್ನೇಹಿಯಾದ...