Home namma chikmagalur chikamagalur ಸಿದ್ದು ಮೌನಂ ಸಮ್ಮತಿ ಯಾವಾಗ ಸ್ಪೋಟಿಸುತ್ತದೆ ?
chikamagalurHomeLatest Newsnamma chikmagalurPolitical NewsState News

ಸಿದ್ದು ಮೌನಂ ಸಮ್ಮತಿ ಯಾವಾಗ ಸ್ಪೋಟಿಸುತ್ತದೆ ?

Share
Share

ಕರ್ನಾಟಕದ ರಾಜಕಾರಣದಲ್ಲಿ ಇಂತಹ ಬೆಳವಣಿಗೆ ನಡೆಯ ಬಹುದು ಎಂದು ಯಾರು ಕೂಡ ನಿರೀಕ್ಷೆ ಮಾಡಿರಲಿಲ್ಲ. 2013 ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಡಿ.ಕೆ.ಶಿವಕುಮಾರ್ ಮಂತ್ರಿಯಾಗಲಿಲ್ಲಾ.ಒಂದು ವರ್ಷಗಳ ಕಾಲ ಡಿ.ಕೆ.ಶಿ.ಪಟ್ಟ ಸಂಕಟವನ್ನು ಯಾರಿಗೂ ಹೇಳಲಿಲ್ಲ. ಈಗ ಇದೇ ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ರವರನ್ನು ಮುಖ್ಯಮಂತ್ರಿ ಹುದ್ದೆಗೆ ಕರೆದುಕೊಂಡು ಬಂದು ಕೂರಿಸಿದ್ದಾರೆ ಎಂದರೆ ಡಿ.ಕೆ.ತಾಕತ್ತು ಮತ್ತು ತಾಳ್ಮೆ ಮೆಚ್ಚಲೇ ಬೇಕು.

ಸಿದ್ದರಾಮಯ್ಯ ನಡೆದು ಬಂದ ದಾರಿ,ಜ್ಞಾನ, ನಡವಳಿಕೆ, ಸ್ವಾಭಿಮಾನ ಮೆಚ್ಚುವ ಜನರೇ ಹೆಚ್ಚು. ಸಾರಸ್ವತ ಲೋಕದ ಜನ ಇವರನ್ನು ಮೆಚ್ಚಿ ಕೊಂಡಿದ್ದರು. ಆದರೆ ಆದೇ ಮಾತು ಡಿ.ಕೆ.ಶಿ ಬಗ್ಗೆ ಹೇಳಲು ಸಾಧ್ಯವಿಲ್ಲ.
ಸಿದ್ದರಾಮಯ್ಯಗೆ ಸಿದ್ದರಾಮಯ್ಯ ಸರಿ ಸಾಟಿ.ಬಡತನದ ನೋವು ಜೊತೆಗೆ ಹೋರಾಟಗಾರರ ,ಸಾಮಾಜಿಕ ಹಿನ್ನೆಲೆಯಲ್ಲಿ ಅಳೆದು ತೂಗಿ ನೋಡುವ ಜನರು ಮೆಚ್ಚಿದ್ದು .ಆದರೆ ಶಿವಕುಮಾರ್ ನಂತಹ ವ್ಯಾಪಾರದ ಮನಸ್ಸು ಸ್ಥಿತಿಯ ಕೊತ್ವಾಲ್ ನ ನಡೆ ನುಡಿಯ ವ್ಯಕ್ತಿಯನ್ನು ಸಿಂಹಾಸನದ ಮೇಲೆ ಕೂರಿಸಲು ಸಿದ್ದರಾಮಯ್ಯ ಟೂಲ್‌ ಕಿಟ್ ಬಳಕೆಯಾಗಿದ್ದು ಇವತ್ತಿನ ವ್ಯಾಪಾರಸ್ಥರಿಗೆ ಈ ಪರಿ ಸೊಂಟ ಬಗ್ಗಿಸಿ ನಡೆದುಕೊಂಡ ಸಿದ್ದರಾಮಯ್ಯರನ್ನು ಕ್ಷಮಿಸಲು ಸಾಧ್ಯವಿಲ್ಲ.

ಎಲ್ಲಿಯ ಸಿದ್ದರಾಮಯ್ಯ, ಅದೇ ಎಲ್ಲಿಯ ಡಿ.ಕೆ.ಶಿವಕುಮಾರ್ ಉತ್ತರ ,ದಕ್ಷಣ ಧ್ರುವಗಳು ಈ ಹೇಸಿಗೆ ರಾಜಕಾರಣಕ್ಕೆ ಒಂದಾಗಿದ್ದು ಮಾತ್ರ ಜನ ಕ್ಷಮೆ ಮಾಡಲು ಸಾಧ್ಯವಿಲ್ಲ. ಇನ್ನೂ ಎರಡು ವರ್ಷ ಡಿ.ಕೆ.ಸಿ ಆಡಳಿತ ನೋಡ ಬೇಕು ಎಂಬುದು ಯಕ್ಷ ಪ್ರಶ್ನೆಯಲ್ಲ ಅನಿವಾರ್ಯ ತಂದಿಟ್ಟಿರುವ ರಾಹುಲ್, ಸೋನಿಯಾ ಮತ್ತು ಪ್ರಿಯಾಂಕ ಗಾಂಧಿಗಳು ಮುಂದಿನ ದಿನಗಳಲ್ಲಿ ನೋವು ಅನುಭವಿಸ ಬೇಕು ಜೊತೆಗೆ ಜನರು ಕೂಡ.

ಸಿದ್ದರಾಮಯ್ಯ ಹುಣ್ಣಿಮೆ ಯ ಬೆಳದಿಂಗಳ ರೀತಿಯಲ್ಲಿ ನಾಡಿನ ಜನರಲ್ಲಿ ಬೆರೆತರೆ,ಡಿ.ಕೆ.ಶಿವಕುಮಾರ್ ಅಮವಾಸ್ಯೆಯಂತೆ ಜನರ ಮನದಲ್ಲಿ ಇಟ್ಟುಕೊಂಡವರು ಹೆಚ್ಚು.ಸಿದ್ದರಾಮಯ್ಯ ಭಾಷೆ, ಆಡಳಿತ, ನಡೆ,ನಡಿಯಲ್ಲಿ ಕಂಗೊಳಿಸಿದ್ದಾರೆ.ಡಿ.ಕೆ.ಉತ್ತಮ ಸಂಘಟಕ ನಿಜ ಎಲ್ಲದರಲ್ಲೂ ವ್ಯವಹಾರ, ನಡೆ,ನುಡಿ ಭಾಷೆಯಲ್ಲಿ ಥೇಟ್ ಕೊತ್ವಲನ ಪಡಿಯಚ್ಚು ಎಂದು ಕರೆಯುವವರೆ ಹೆಚ್ಚು.

ಕುರ್ಚಿ ಕಾಳಗದಲ್ಲಿ ತಾಳ್ಮೆಯಿಂದ ಎಲ್ಲವನ್ನೂ ನಿಭಾಯಿಸಿದಂತೆ ಆಡಳಿತದಲ್ಲಿ ಸೈ ಅನ್ನಿಸಿಕೊಂಡರೆ ಮಾತ್ರ ಮುಂದೆ ರಾಜಕಾರಣ ಮಾಡಬಹುದು. ಇಲ್ಲದಿದ್ದರೆ ಬಂದ ಪುಟ್ಟ, ಹೋದ ಪುಟ್ಟ ಎನ್ನಿಸಿಕೊಳ್ಳು ಬೇಕಾಗುತ್ತದೆ.ಕಾಂಗ್ರೆಸ್ ನಲ್ಲಿ ಬೂದಿ ಮುಚ್ಚಿದ ಕೆಂಡ ಇರುವುದು ಸ್ಪಷ್ಟ ಅದು ಯಾವಾಗ ಬೇಕಾದರೂ ಹತ್ತಿ ಕೊಳ್ಳಬಹುದು.

ಅಧಿಕಾರ ಎಂಬುದು ಮಾಯೆಯಂತೆ,ಅದರ ನಶೆ ಏರಿಕೆ ಹೆಚ್ಚಾದರೂ ಕಷ್ಟ.ಕಡಿಮೆಯಾದರೂ ಸಂಕಷ್ಟ. ಎಲ್ಲವನ್ನೂ ನಿಭಾಯಿಸುವ ಸಾಮರ್ಥ್ಯ ಮುಖ್ಯ. ಡಿ.ಕೆ.ಪರಿಸ್ಥಿತಿ ಮುಳ್ಳಿನ ದಾರಿ ಅವರ ವಿರೋಧಿಗಳು “ಮೌನ” ವಾಗಿದ್ದಾರೆ ಎಂದು ತಿಳಿದು ಹೆಜ್ಜೆಗಳನ್ನು ಇರಬೇಕಾಗುತ್ತದೆ. ಮೌನ ಸ್ಫೋಟವಾದರೆ ಕಷ್ಟ,ಕಷ್ಟ.

When will the silent consent explode?

Share

Leave a comment

Leave a Reply

Your email address will not be published. Required fields are marked *

Don't Miss

ವಿಕಸಿತ ಭಾರತ ನಿರ್ಮಾಣಕ್ಕೆ ‘ವೋಕಲ್ ಫಾರ್ ಲೋಕಲ್’ ಸಂಕಲ್ಪ ಅಗತ್ಯ

ಚಿಕ್ಕಮಗಳೂರು: ಕಳೆದ 25 ವರ್ಷಗಳ ಕಾಲ ಯಾವುದೇ ಕಳಂಕವಿಲ್ಲದೆ, ರಜೆಯನ್ನೂ ಪಡೆಯದೆ, ನಿರಂತರವಾಗಿ ರಾಷ್ಟ್ರಕ್ಕಾಗಿ ಕೆಲಸ ಮಾಡಿದವರು ಪ್ರಧಾನಿ ನರೇಂದ್ರ ಮೋದಿಯವರು. ಅವರು ಒಬ್ಬ ಕನಸುಗಾರ ಮಾತ್ರವಲ್ಲದೆ, ಆ ಕನಸನ್ನು ನನಸು...

ಅತ್ಯಾಚಾರ ಆರೋಪಿ ಪರ ನಿಂತಿದ್ದ ಪೇದೆ ಅಮಾನತು

ಚಿಕ್ಕಮಗಳೂರು: ತಲೆಮರೆಸಿಕೊಂಡಿರುವ ಅತ್ಯಾಚಾರ ಪ್ರಕರಣದ ಆರೋಪಿ ಸತೀಶ್ ಪಾತ್ರಿ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪೊಲೀಸ್ ಠಾಣೆಯಲ್ಲಿನ ಆಗುಹೋಗು ಹಾಗೂ ತನಿಖೆಗೆ ಸಂಬಂಧಿಸಿದ ಮಾಹಿತಿಯನ್ನು ಆರೋಪಿಗೆ ರವಾನಿಸುತ್ತಿದ್ದ ಆರೋಪದ ಮೇಲೆ ಎನ್‌.ಆರ್‌.ಪುರ ಪೊಲೀಸ್...

Related Articles

ಅಂಗನವಾಡಿಗೆ ದಾಖಲಾಗದಿರುವ ಮಕ್ಕಳ ಮರು ಸಮೀಕ್ಷೆಗೆ ಸೂಚನೆ

ಚಿಕ್ಕಮಗಳೂರು: ನಗರ ಪ್ರದೇಶದಲ್ಲಿ ಅಂಗನವಾಡಿಗೆ ದಾಖಲಾಗದಿರುವ ಮಕ್ಕಳನ್ನು ಮರು ಸಮೀಕ್ಷೆ ನಡೆಸಿ ದಾಖಲಿಸಲು ಕ್ರಮ ವಹಿಸುವಂತೆ...

ಅಪಘಾತ ವಲಯ ಸರಿಪಡಿಸಲು ಯೋಜನೆ ರೂಪಿಸಿ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಈಗಾಗಲೇ ೨೧ ಅಪಘಾತ ಸಂಭಾವ್ಯ ಸ್ಥಳಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ ೩ ಅಪಘಾತ ವಲಯಗಳನ್ನು...

ನಿಖಿಲ್ ಕುಮಾರಸ್ವಾಮಿ ರಾಜಕಾರಣದಲ್ಲಿ ಕಣ್ಣು ಬಿಡುತ್ತಿರುವ ವ್ಯಕ್ತಿ

 ಕಡೂರು:  ಪಟ್ಟಣದ ಕೃಷಿ ಮಾರುಕಟ್ಟೆ ಸಮಿತಿ ಆವರಣದಲ್ಲಿ ಜೆಡಿಎಸ್ ನ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ...

ಹರಿಹರಪುರದಲ್ಲಿ ಮನೆ ಕಳ್ಳತನ: ₹2 ಲಕ್ಷ ಮೌಲ್ಯದ ಚಿನ್ನದ ಸರ ಅಪಹರಣ

ಕೊಪ್ಪ: ಮನೆಯ ಮುಂಭಾಗದ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು, ಬೀರುವಿನಲ್ಲಿದ್ದ ಸುಮಾರು ₹2 ಲಕ್ಷ...