Home Latest News ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ : ಫಕ್ರುದ್ದೀನ್ ಶಾಖಾದ್ರಿ ಆರೋಪ
Latest News

ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ : ಫಕ್ರುದ್ದೀನ್ ಶಾಖಾದ್ರಿ ಆರೋಪ

Share
Share

ಚಿಕ್ಕಮಗಳೂರು : ಶ್ರೀಗುರು ಬಾಬಾಬುಡನ್ ದತ್ತಾತ್ರೇಯ ಸ್ವಾಮಿ ದರ್ಗಾದಲ್ಲಿ ಶಾಖಾದ್ರಿ ವಂಶಸ್ಥರು ಫಾತೇಹ ಆಚರಣೆಯನ್ನು ಪ್ರತಿವರ್ಷ ಆಚರಿಸಿಕೊಂಡು ಬರುತ್ತಿದ್ದು ನ್ಯಾಯಾಲಯದ ಆದೇಶ ಉಲ್ಲಂಘನೆಯಾಗಿಲ್ಲ. ಆದರೆ, ಮುಜರಾಯಿ ಇಲಾಖೆ ನೂತನ ಕಾರ್ಯನಿರ್ವಹಣಾಧಿಕಾರಿ ದರ್ಗಾದಲ್ಲಿ ಫಾತೇಹ ಆಚರಣೆಗೆ ಅವಕಾಶ ನೀಡದೆ ಸಮುದಾಯದ ಭಾವನೆಗೆ ನೋವುಂಟು ಮಾಡಿದ್ದಾರೆ. ಧಾರ್ಮಿಕ ಹಕ್ಕಿನ ನಿರಾಕರಣೆಯಾಗಿದ್ದು ಮುಜರಾಯಿ ಇಲಾಖೆ ಕಾರ್ಯ ನಿರ್ವಹಣಾ ಅಧಿಕಾರಿಯನ್ನ ಬೇರೆಡೆ ವರ್ಗಾವಣೆ ಮಾಡಬೇಕು ಹಾಗೂ ವ್ಯವಸ್ಥಾಪನಾ ಸಮಿತಿಯನ್ನು ಬರಖಾಸ್ತುಗೊಳಿಸಿ ಜಾತ್ಯತೀತ ಸಮಿತಿ ನೇಮಿಸ ಬೇಕೆಂದು ಸೈಯದ್ ಬುಡೇನ್ ಶಾಖಾದ್ರಿ ವಂಶಸ್ಥ ಸೈಯದ್ ಫಕ್ರುದ್ದೀನ್ ಶಾಖಾದ್ರಿ ಸರ್ಕಾರವನ್ನು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಮೂರು ದಿನಗಳ ಹಿಂದೆ ಇನಾಂ ದತ್ತಾತ್ರೇಯ ಪೀಠ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಬಾಬಾ ಬುಡನ್ ದರ್ಗಾದಲ್ಲಿ ಸೈಯದ್ ಬುಡೆನ್ ಶಾ ಖಾದ್ರಿ ವಂಶಸ್ಥರಿಂದ ಪ್ರತಿವರ್ಷ ಆಚರಿಸಲ್ಪಡುವ ಫಾತೇಹ ಎಂಬ ಧಾರ್ಮಿಕ ವಿಧಿ ನೆರವೇರಿಸಲು ಸಮುದಾಯದ ಜನರೊಂದಿಗೆ ತೆರಳಿದ್ದು, ಈ ವೇಳೆ ಬಾಬಾಬುಡನ್ ದತ್ತಾತ್ರೇಯ ಸ್ವಾಮಿ ದರ್ಗಾದ ನೂತನ ಕಾರ್ಯ ನಿರ್ವಹಣಾಧಿಕಾರಿ ಫಾತೇಹ ಆಚರಣೆ ಪೊಲೀಸರ ಮೂಲಕ ತಡೆದು ಸಮುದಾಯದವರ ಧಾರ್ಮಿಕ ಆಚರಣೆಗೆ ಅಡ್ಡಿಪಡಿಸಿ ನಮ್ಮ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂದರು.

ಹಿಂದೂ ಧಾರ್ಮಿಕ ಪದ್ಧತಿಯಂತೆ ಕಾಯಿ, ಹೂವು, ಹಣ್ಣುಗಳೊಂದಿಗೆ ಮಾತ್ರ ಫಾರೇಹ ಮಾಡಬೇಕು, ರೊಟ್ಟಿ ಬಾಜಿಯನ್ನು ಗುಹೆಯೊಳಗೆ ಕೊಂಡೊಯ್ಯುವಂತಿಲ್ಲ ಎನ್ನುವ ಮೂಲಕ ನಮ್ಮದಲ್ಲದ ಆಚರಣೆ ಮಾಡಲು ಒತ್ರಾಯಿಸಿದ್ದಾರೆ ಎಂದು ದೂರಿದರು. ಮುಜರಾಯಿ ಇಓ ಅವರು ನ್ಯಾಯಾಲಯದ ಆದೇಶಕ್ಕೆ ಅವಮಾನ ಮಾಡಿದ್ದು, ಹಿಂದಿನಿಂದಲೂ ಈ ಆಚರಣೆ ಇದ್ದರೂ ಇದರ ಪರಿಜ್ಞಾನವಿಲ್ಲದವರಂತೆ ಮಾತನಾಡಿದ್ದಾರೆ. ಫಾತೇಹ ಆಚರಣೆಗೆ ನ್ಯಾಯಾಲಯವೂ ಅವಕಾಶ ನೀಡಿದೆ. 1947 ರ ಮೈಸೂರು ಗೆಜೆಟಿಯರ್‌ನಲ್ಲೂ ಈ ಆರಚರಣೆ ಬಗ್ಗೆ ಉಲ್ಲೇಖವಿದೆ. 1991ರ ನ್ಯಾಯಾಲಯದ ಆದೇಶದಲ್ಲಿ ಇದಕ್ಕೆ ಅವಕಾಶವಿದ್ದರೂ ಅವಕಾಶ ನೀಡಿಲ್ಲ ಎಂದರು.

ಕೂಡಲೇ ಈ ಅಧಿಕಾರಿಯನ್ನು ಬೇರೆಡೆಗೆ ವರ್ಗಾವಣೆ ಮಾಡಬೇಕು. ಅಲ್ಲದೇ ವ್ಯವಸ್ಥಾಪನಾ ಸಮಿತಿಯನ್ನು ಬರಖಾಸ್ತುಗೊಳಿಸಿ ಜಾತ್ಯತೀತ ಸಮಿತಿಯನ್ನು ಸರ್ಕಾರ ರಚಿಸಬೇಕು. ಇಲ್ಲದೇ ದರ್ಗಾದಲ್ಲಿನ ನಮ್ಮ ಧಾರ್ಮಿಕ ಆಚರಣೆಗಳ ಮೇಲ್ವಿಚಾರಣೆಗೆ ಶಾಖಾದ್ರಿ ನೇತೃತ್ವದ ಸಮಿತಿ ರಚನೆ ಮಾಡಬೇಕು, ತಪ್ಪಿದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

Share

Leave a comment

Leave a Reply

Your email address will not be published. Required fields are marked *

Don't Miss

30 ಲಕ್ಷ ರೂಪಾಯಿ ಹಣ ನೀಡುವಂತೆ ಬ್ಲಾಕ್‌ ಮೆಲ್

ಚಿಕ್ಕಮಗಳೂರು: ಎಡಿಟ್ ಮಾಡಿದ ಗೃಹಿಣಿಯೊಬ್ಬರ ಫೋಟೋಗಳನ್ನು ಅವರ ಮೊಬೈಲ್‌ಗೇ ಕಳುಹಿಸಿ, ಬರೋಬ್ಬರಿ 30 ಲಕ್ಷ ರೂಪಾಯಿ ಹಣ ನೀಡುವಂತೆ ಕಿಡಿಗೇಡಿಗಳು ಬೇಡಿಕೆಯಿಟ್ಟಿದ್ದ ಘಟನೆ ಬೆಳಕಿಗೆ ಬಂದಿದೆ. ಒಂದು ವೇಳೆ ಹಣ ನೀಡದಿದ್ದರೆ...

ವಿವಾಹಿತ ಮಹಿಳೆಗಾಗಿ ನಡೆದ ಜಗಳದಲ್ಲಿ ಕೈ ಕಟ್

ಎನ್.ಆ‌ರ್.ಪುರ: ವಿವಾಹಿತ ಮಹಿಳೆಯೊಬ್ಬರಿಗಾಗಿ ಇಬ್ಬರು ವ್ಯಕ್ತಿಗಳು ಲಾಂಗು ಮಚ್ಚಿನಿಂದ ಬಡಿದಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆ‌ರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಅಡಿಗೆಬೈಲು ಗ್ರಾಮದಲ್ಲಿ ನಡೆದಿದೆ. ಗಂಡನಿಂದ ದೂರವಿದ್ದ ಮಹಿಳೆಯೊಬ್ಬರ ವಿಚಾರವಾಗಿ ಶೇಷಗಿರಿ...

Related Articles

5 ದಶಕದ ಬಳಿಕ ನಿಡಘಟ್ಟ ಆಂಜನೇಯಸ್ವಾಮಿ ದೇವಾಲಯಕ್ಕೆ ದಲಿತರ ಪ್ರವೇಶ

ಚಿಕ್ಕಮಗಳೂರು: ಇತಿಹಾಸ ಪ್ರಸಿದ್ಧ ಗಟಾಗಟಿ ದೇವರು ಎಂದು ಕರೆಯಲ್ಪಡುವ ಕಡೂರು ತಾಲೂಕಿನ ನಿಡಘಟ್ಟದ ಶ್ರೀ ಆಂಜನೇಯಸ್ವಾಮಿ ದೇವಾಲಯಕ್ಕೆ...

ದೇಶ ವ್ಯಾಪ್ತಿ ಛಾತ್ರೋನ್ ಕಿ ಗೂಂಚ್ ವಿದ್ಯಾರ್ಥಿ ಆಂದೋಲನ

ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರ ನೇತೃತ್ವದಲ್ಲಿ ಛಾತ್ರೋನ್ ಕಿ ಗೂಂಚ್ ಎಂಬ ದೇಶ ವ್ಯಾಪಿ...

ಕುಡಿಯುವ ನೀರು-ಜಾನುವಾರು ಮೇವಿಗೆ ಕೊರತೆಯಾಗದಂತೆ ಕ್ರಮಕ್ಕೆ ಸೂಚನೆ

ಚಿಕ್ಕಮಗಳೂರು: ಕುಡಿಯುವ ನೀರು, ಜಾನುವಾರುಗಳ ಮೇವಿಗೆ ಕೊರತೆಯಾಗದಂತೆ ಕ್ರಮ ಕೈಗೊಳ್ಳುವಂತೆ ಇಂಧನ, ಪ್ರವಾಸೋದ್ಯಮ ಹಾಗೂ ಚಿಕ್ಕಮಗಳೂರು...

ಗೃಹಜ್ಯೋತಿ ಯೋಜನೆ ಅರ್ಹ ಗುರುತಿಸುವ ಉದ್ದೇಶದಿಂದ ಪರಿಷ್ಕರಣೆ

ಚಿಕ್ಕಮಗಳೂರು: ಸರ್ಕಾರ ಗೃಹಜ್ಯೋತಿ ಯೋಜನೆಯನ್ನು ಸಾರಾಸಗಟಾಗಿ ಪರಿಷ್ಕರಿಸುವ ಅಥವಾ ಕಡಿತಗೊಳಿಸುವ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು...