Home Latest News ಸಸ್ಪೆಂಡ್ ಆಗಿದ್ದ ಡಾ ಬಸವರಾಜ್ ಜಿಲ್ಲಾ ಸರ್ಜನ್ ಆಗಿ ನೇಮಕ : ಸಾರ್ವಜನಿಕರ ಆಕ್ರೋಶ
Latest News

ಸಸ್ಪೆಂಡ್ ಆಗಿದ್ದ ಡಾ ಬಸವರಾಜ್ ಜಿಲ್ಲಾ ಸರ್ಜನ್ ಆಗಿ ನೇಮಕ : ಸಾರ್ವಜನಿಕರ ಆಕ್ರೋಶ

Share
Share

ಚಿಕ್ಕಮಗಳೂರು : ಜಿಲ್ಲಾ ಕೇಂದ್ರದಲ್ಲಿರುವ ಮಲ್ಲೇಗೌಡ ಜನರಲ್ ಆಸ್ಪತ್ರೆ ಜಿಲ್ಲಾ ಶಸ್ತ್ರ ಚಿಕಿತ್ಸಾಕರಾಗಿದ್ದ ಮೋಹನ್ ಕುಮಾರ್ ರವರಿಗೆ ತುಮಕೂರು ಜಿಲ್ಲೆಗೆ ವರ್ಗಾವಣೆ ಆಗಿದೆ ಅವರ ಸ್ಥಾನಕ್ಕೆ ಚಿತ್ರದುರ್ಗದಲ್ಲಿ ಸಸ್ಪೆಂಡ್ ಆಗಿದ್ದ ‌ಡಾ. ಬಸವರಾಜ್ ಬರಲು ಕಾತರರಾಗಿದ್ದಾರೆ ಎಂಬ ಮಾಹಿತಿ ಇದೆ.
ಡಾ. ಮೋಹನ್ ಕುಮಾರ್ ಕಳೆದ ಐದು ವರ್ಷಗಳಿಂದ ಸೇವೆ ಸಲ್ಲಿಸಿದ್ದು, ಸಣ್ಣಪುಟ್ಟ ವ್ಯತ್ಯಾಸಗಳ ನಡುವೆ ಸಾರ್ವಜನಿಕರಿಗೆ ಸ್ಪಂದಿಸುವ ರೀತಿ ಮೆಚ್ಚುಗೆ ತರಿಸಿತ್ತು. ಸದಾ ಮಂದಸ್ಮಿತರಾಗಿ ಸಿಬ್ಬಂದಿ ಮತ್ತು ಜನಪ್ರತಿನಿದಿಗಳೊಂದಿಗೆ ಬೆರೆಯುತ್ತಿದ್ದರು ಇದೀಗ ವರ್ಗಾವಣೆ ಆಗಿದ್ದಾರೆ. ಮೋಹನ್ ಕುಮಾರ್ ಸ್ಥಾನಕ್ಕೆ ಬರುತ್ತಿರುವ ಡಾಕ್ಟರ್ ಬಸವರಾಜ್ ಇತಿಹಾಸ ಕೇಳಿದರೆ ಜಿಲ್ಲಾಸ್ಪತ್ರೆ ಗತಿಸ್ಥಿತಿ ಏನಾಗಬಹುದು ಎಂದು ಚರ್ಚೆ ಆಗುವುದರಲ್ಲಿ ಅನುಮಾನವಿಲ್ಲ ಎಂಬ ಮಾಹಿತಿ ಇದೆ. ಬಹುತೇಕ ಚಿತ್ರದುರ್ಗದಲ್ಲಿ ಸೇವೆ ಸಲ್ಲಿಸಿರುವ ಈತನನ್ನು ಕರೆಯುವ ಹಸು ಎಂದು ಕೂಡ ಕರೆಯುತ್ತಾರೆ ಇನ್ನು ಕೇವಲ ಹದಿಮೂರು ತಿಂಗಳುಗಳಲ್ಲಿ ನಿವೃತ್ತಿಯಾಗಲಿದ್ದು ಕೊನೆಯ ದಿನಗಳಲ್ಲಿ ಏಕೆ ಎಂಬ ಲೆಕ್ಕಾಚಾರ ಮಾಡಿಕೊಂಡು ಕೊಡುವುದನ್ನು ಕೊಟ್ಟು ಬಿಡುವುದನ್ನು ಬಿಟ್ಟು ಬರುತ್ತಿದ್ದಾರೆ .

ಕಳೆದ ವರ್ಷ ಅರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದಾಗ ಆಸ್ಪತ್ರೆಯ ಅವ್ಯವಸ್ಥೆ ಮತ್ತು ಅಸಡ್ಡೆತನ ಕಂಡು ಸ್ಥಳದಲ್ಲಿ ಅಮಾನತ್ತು ಮಾಡಿ ತನಿಖೆಗೆ ಆದೇಶ ಮಾಡಿದ್ದರು. ರಾಜಕೀಯ ಮತ್ತು ಜಾತಿ ಬಲದಿಂದ ಅಮಾನತ್ತು ರದ್ದುಪಡಿಸಿಕೊಂಡು ಬೀರೂರು ಆಸ್ಪತ್ರೆಗೆ ಬಂದು ಅಲ್ಲಿಂದ ಪ್ರಸ್ತುತ ಚನ್ನಗಿರಿಯಲ್ಲಿದ್ದು ಇನ್ನೂ ತನಿಖೆ ನಡೆಯುತ್ತಿರುವಾಗ ಅಯಾಕಟ್ಟಿನ ಸ್ಥಾನಕ್ಕೆ ಟವೆಲ್ ಹಾಕಿರುವುದು ಇವರ ಪ್ರಭಾವ ಹೇಗಿದೆ ಮುಂದೆ ಏನು ನಡೆಯಬಹುದು ಎಂಬುದೇ ಸದ್ಯದ ಕುತೂಹಲ

ಚಿತ್ರದುರ್ಗದ ಸಾರ್ವಜನಿಕರು ಮತ್ತು ಪತ್ರಕರ್ತರು ಹೇಳುವುದು ಕೇಳಿದರೆ ಬಸವರಾಜ್ ಅಲ್ಪ ಸ್ವಲ್ಪ ಗೌರವ ಉಳಿಸಿಕೊಂಡಿರುವ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆ ಏನಾಗುತ್ತದೆ ಎಂದು ಯೋಚಿಸುವಂತಾಗಿದೆ .

ತನಿಖೆ ನಡೆಯುತ್ತಿರುವಾಗ ಆಡಳಿತಾತ್ಮಕ ಹುದ್ದೆಗಳಿಗೆ ನೇಮಕ ಮಾಡಲು ಅವಕಾಶವಿಲ್ಲ ಅದರಲ್ಲೂ ಅರೋಗ್ಯ ಸಚಿವರೇ ಇವರ ಅವಾಂತರ ನೋಡಿ ಕೇಳಿ ದಂಗಾಗಿ ಅಮಾನತು ಮಾಡಿದ್ದನ್ನು ಮೀರಿ ಬರುತ್ತಿರುವುದು ನೋಡಿದರೆ ಅರೋಗ್ಯ ಸಚಿವರ ಮೇಲೆ ಸವಾರಿ ಮಾಡಿದಂತೆ ಆಗಿದೆ. ಇಲ್ಲಿನ ಶಾಸಕ ತಮ್ಮಯ್ಯರವರನ್ನು ವಿಚಾರಿಸಲು ನಾಲ್ಕು ಬಾರಿ ಕರೆ ಮಾಡಿದರು ಸಿಗಲಿಲ್ಲ.ಯಾಥಾ ರಾಜ ತಥಾ ಪ್ರಜೆ ಮತ್ತು ಅಧಿಕಾರಿಗಳು ಎನ್ನುವಂತಾಗಿದೆ.

Share

Leave a comment

Leave a Reply

Your email address will not be published. Required fields are marked *

Don't Miss

ಜೀವಾಣು ಹೆಚ್ಚಿಸುವ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕು

ಚಿಕ್ಕಮಗಳೂರು: ಮಣ್ಣು ರೋಗಯುಕ್ತವಾಗಿದ್ದು, ಅದಕ್ಕೆ ಬೇಕಿರುವ ಜೀವಾಣುಗಳನ್ನು ಹೆಚ್ಚಿಸುವ ಮೂಲಕ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕಾದ ಅನಿವಾರ್ಯ ಇದೆ’ ಎಂದು ಕನ್ನೇರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು. ಸಾವಯವ ರೈತರ ಬಳಗದಿಂದ...

ಅಡ್ಡ ಮತದಾನದ ಸತ್ಯಶೋಧನಾ ಸಮಿತಿ ವರದಿ ಸಿದ್ದ

ಚಿಕ್ಕಮಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ರಚಿಸಿರುವ ಸತ್ಯಶೋಧನಾ ಸಮಿತಿಯು ತನ್ನ ಪ್ರಾಥಮಿಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಸಮಿತಿಯ ಸದಸ್ಯರಾದ ಸಿ.ಟಿ. ರವಿ ಅವರು ಚಿಕ್ಕಮಗಳೂರಿನಲ್ಲಿ ಈ...

Related Articles

ಸ್ವಚ್ಛ ಪರಿಸರ ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ

ಚಿಕ್ಕಮಗಳೂರು: ಮಲೆನಾಡಿನ ನಿಸರ್ಗದತ್ತ ಸೌಂದರ್ಯ ಮತ್ತು ಸ್ವಚ್ಛ ಪರಿಸರವನ್ನು ಉಳಿಸಿ ಬೆಳೆಸುವ ಮಹತ್ತರವಾದ ಹೊಣೆಗಾರಿಕೆ ನಮ್ಮೆಲ್ಲರ...

ಪ್ರವಾಹ ಪರಿಸ್ಥಿತಿ ಎದುರಿಸುವ ಅಣಕು ಪ್ರದರ್ಶನ

ಚಿಕ್ಕಮಗಳೂರು: ಕಾಫಿನಾಡಿನ ಹಿರೇಕೊಳಲೆ ಕೆರೆಯಲ್ಲಿ ಪ್ರವಾಹ ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಅಗ್ನಿಶಾಮಕ ಮತ್ತು...

ಯುವಜನತೆ ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಲಿ

ಚಿಕ್ಕಮಗಳೂರು: ಇಂದಿನ ಸಮಾಜದಲ್ಲಿ ಮಾದಕ ದ್ರವ್ಯಗಳ ಹಾವಳಿ ಹೆಚ್ಚಾಗುತ್ತಿದ್ದು, ಇದು ಯುವ ಪೀಳಿಗೆಯ ಭವಿಷ್ಯ ಹಾಗೂ...

ಭಿಕ್ಷುಕಿಯನ್ನು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ

ಚಿಕ್ಕಮಗಳೂರು:  ಕ್ಷುಲ್ಲಕ ಕಾರಣಕ್ಕೆ ಸೈಜುಕಲ್ಲು ಎತ್ತಿಹಾಕಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿಗೆ ಇಲ್ಲಿನ ಒಂದನೇ ಅಧಿಕ...