Home namma chikmagalur ಕನ್ನಡದ ಮನಸ್ಸುಗಳು ಕಟ್ಟಿದ ಸರ್ಕಾರಿ ಶಾಲೆ : ಸುಣ್ಣ ಬಣ್ಣ ಕಂಡು ಸಖತ್ ಮಿಂಚಿಂಗ್
namma chikmagalur

ಕನ್ನಡದ ಮನಸ್ಸುಗಳು ಕಟ್ಟಿದ ಸರ್ಕಾರಿ ಶಾಲೆ : ಸುಣ್ಣ ಬಣ್ಣ ಕಂಡು ಸಖತ್ ಮಿಂಚಿಂಗ್

Share
Share

ಚಿಕ್ಕಮಗಳೂರು : ಕನ್ನಡ ನೆಲ ಜಲ ಭಾಷೆ ಅಂದ್ರೆ ವೇದಿಕೆಯ ಮೇಲೆ ಪುಂಕಾನು ಪುಂಕವಾಗಿ ಅಬ್ಬರದ ಭಾಷಣಕಷ್ಟೆ ಸೀಮಿತ ಅನ್ನುವಂತಾಗಿದೆ. ವರ್ಷಕ್ಕೊಮ್ಮೆ ಜರುಗೋ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡ ಕೇವಲ ತೋರಿಕೆ ಪ್ರೀತಿಯಷ್ಟೇ ಅನ್ನುವಂತೆ ಕಾಣುತ್ತಿದೆ. ಆದರೆ ಇಲ್ಲೊಂದು ತಂಡ ರಾಜ್ಯವೇ ಮೆಚ್ಚುವಂತ ಕೆಲಸ ಮಾಡಿ ಕನ್ನಡ ತನವನ್ನ ವಿಚಾರಗಳನ್ನ ಮೇಳೈಸುತ್ತೆ ಮಾಡಿದೆ. ಆ ಕಾರ್ಯಕ್ಕೆ ಕೈ ಹಾಕಿರೋದು ಅದುವೇ “ಕನ್ನಡ ಮನಸುಗಳು ಕರ್ನಾಟಕ ಎಂಬ ಎನ್‌ಜಿಒ ತಂಡ” ಮಾಡಿರೋ ಕಾರ್ಯ ನಿಜಕ್ಕೂ ಶ್ಲಾಘನೀಯ..!. ಇದಕ್ಕೆ ಸಾಕ್ಷಿ ಎಂಬಂತೆ ಚಿಕ್ಕಮಗಳೂರು ತಾಲೂಕಿನ ಇತಿಹಾಸ ಪ್ರಸಿದ್ಧ ಬೆಳವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. 1885ರಲ್ಲಿ ಆರಂಭವಾಗಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ.

ಕೆಲವೇ ದಿನಗಳ ಹಿಂದೆ ಅಳುವಿನ ಹಂಚಿನಲ್ಲಿತ್ತು. ಈ ಶಾಲೆಗೆ ಹಾಜರಾತಿ ಕೊರತೆಯೂ ಕಾಡುತ್ತಿತ್ತು. ಸರಿಯಾದ ಸಲಕರಣೆ ಪೀಠೋಪಕರಣ ಹಾಗೂ ಕೊಠಡಿ ದುರಸ್ತಿಯಲ್ಲಿದ್ದ ಕಾರಣ ಶತಮಾನದ ಈ ಕನ್ನಡ ಶಾಲೆ ಸರ್ಕಾರದ ಕಣ್ಣಿಗೆ ಕಾಣಲೇ ಇಲ್ಲವೇನೋ. ಆದರೆ ಈ ಕನ್ನಡ ಮನಸುಗಳ ತಂಡ ಗ್ರಾಮಕ್ಕೆ ಆಗಮಿಸಿ ಇಲ್ಲಿ ಒಂದು ರೀತಿಯ ಅಭಿಯಾನ ನಡೆಸಿ ಇದೀಗ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗಿದೆ. ಈ ಎನ್‌ಜಿಓ ತಂಡ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಶಾಲೆಯ ಶಾಲೆಯ ಕಟ್ಟಡ ಮೇಲ್ಚಾವಣಿಯನ್ನು ದುರಸ್ತಿಗೊಳಿಸಿ, ಸುಣ್ಣ ಬಣ್ಣ ಬಳಿಯುವ ಮೂಲಕ ಗಮನ ಸೆಳೆದಿದೆ. ಅಷ್ಟೇ ಅಲ್ಲದೆ ಶಾಲೆಯ ಕಾಂಪೌಂಡ್ ಹಾಗೂ ಗೋಡೆಗಳ ಮೇಲೆ ಕನ್ನಡ ಹಾಗೂ ಕನ್ನಡದ ಗಣ್ಯರ ಭಾವಚಿತ್ರಗಳನ್ನು ಅದ್ಭುತವಾಗಿ ಮೂಡಿಸುವ ಮೂಲಕ ಕನ್ನಡತನ ಎದ್ದು ಕಾಣುವಂತೆ ಮಾಡಿದೆ. ಬಗೆಬಗೆಯ ಚಿತ್ತಾಕರ್ಷಕ ಕಾರ್ಟೂನ್ ಚಿತ್ರಗಳನ್ನು ಬರೆದು ಮಕ್ಕಳ ಗಮನ ಶಾಲೆಯ ಮೇಲೆ ಬೀಳುವಂತೆ ಮಾಡಿರುವುದು ನಿಜಕ್ಕೂ ಸಂತಸದ ವಿಚಾರ.

ಸರ್ಕಾರೇತರ ಈ ಸಂಸ್ಥೆಯ ಕಿರಣ್  ಶಾಲೆಯ ಸಹಶಿಕ್ಷಕಿ ಸುಮಲತಾ, ಎಸ್ ಡಿ ಎಂ ಸಿ ಅಧ್ಯಕ್ಷರು, ಹಳೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಈ ಕಾರ್ಯಕ್ಕೆ ಕೈಜೋಡಿಸಿದ್ದರಿಂದ ಮತ್ತಷ್ಟು ಪ್ರೇರೇಪಿತಗೊಂಡಿರುವ ಈ ಕನ್ನಡ ಮನಸುಗಳ ತಂಡ ಶಾಲೆಗೆ ಬೇಕಾದ ಫ್ಯಾನ್, ವಿದ್ಯುತ್, ಕುಡಿಯುವ ನೀರು ಸೇರಿ ಅನೇಕ ವ್ಯವಸ್ಥೆಗಳನ್ನು ಮಾಡಿರುವುದು ಗಮನಾರ್ಹ..!. ಇನ್ನೇನು ಶಾಲೆಯ ಕಥೆ ಮುಗಿದೇ ಹೋಯಿತು ಅನ್ನುವಷ್ಟರಲ್ಲಿ ಮತ್ತೆ ಶತಮಾನದ ಶಾಲೆ, ಫೋಟೋದ ಹೇಳುವಂತೆ ಮಾಡಿರುವ ಕನ್ನಡ ಮನಸುಗಳ ಸರ್ಕಾರಿಯೇತರ ತಂಡದ ಕಾರ್ಯಕ್ಕೆ ಸೆಲ್ಯೂಟ್ ಹಿನ್ನೆಲೆ ಬೇಕು…

Share

Leave a comment

Leave a Reply

Your email address will not be published. Required fields are marked *

Don't Miss

ವೈದ್ಯರ ಬೇಜವಾಬ್ದಾರಿತನಕ್ಕೆ ಮೂರು ತಿಂಗಳ ಹಸುಗೂಸು ಸಾವು

ಚಿಕ್ಕಮಗಳೂರು: ವೈದ್ಯರ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯದ ಆರೋಪಕ್ಕೆ ಮೂರು ತಿಂಗಳ ಹಸುಗೂಸೊಂದು ಬಲಿಯಾಗಿರುವ ಘಟನೆ ಚಿಕ್ಕಮಗಳೂರು ನಗರದ ಸರ್ಕಾರಿ ಜಿಲ್ಲಾ ಹೆರಿಗೆ ಆಸ್ಪತ್ರೆಯಲ್ಲಿ ನಡೆದಿದೆ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡದೆ...

ಜಿಲ್ಲೆಯಾದ್ಯಂತ ಮೊಹರಂ ಹಬ್ಬ ಆಚರಣೆ

ಚಿಕ್ಕಮಗಳೂರು: ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಮುಸ್ಲಿಮರು ಜಿಲ್ಲೆಯಾದ್ಯಂತ ಶುಕ್ರವಾರ ಶ್ರದ್ದಾಭಕ್ತಿಯಿಂದ ಆಚರಿಸಿದರು. ಕಳೆದ ಎರಡು ದಿನಗಳಿಂದ ಉಪವಾಸವಿದ್ದ ಭಕ್ತರು ನಗರದ ಬಡಾವಣೆಗಳ ವಿವಿಧ ಮಸೀದಿಗಳಿಗೆ ಬೆಳಿಗ್ಗೆಯೇ ತೆರಳಿ...

Related Articles

ನೀವು ಬೆಳಿಗ್ಗೆ ಕಸ ಗುಡಿಸದಿದ್ದರೆ ದೇಶವೇ ನಡೆಯಲ್ಲ ಧೈರ್ಯವಾಗಿ ಹಕ್ಕು ಕೇಳಿ

ಚಿಕ್ಕಮಗಳೂರು:  “ನೀವು ಬೆಳಿಗ್ಗೆ ಎದ್ದು ಕಸ ಗುಡಿಸದಿದ್ದರೆ ಈ ದೇಶದ ಯಾವುದೇ ನಗರ, ಪಟ್ಟಣ, ಊರುಗಳು...

ಸರ್ಕಾರಿ ಕಚೇರಿಗಳಲ್ಲಿ ಇ-ಆಫೀಸ್ ಮೂಲಕವೇ ವ್ಯವಹರಿಸಿ

ಚಿಕ್ಕಮಗಳೂರು: ಪ್ರತೀ ಕಚೇರಿಗಳಲ್ಲೂ ಇ-ಆಫೀಸ್ ಮೂಲಕವೇ ಪತ್ರ ಹಾಗೂ ಕಡತಗಳನ್ನು ನಿರ್ವಹಿಸುವಂತೆ ಸರ್ಕಾರದ ಅಪರ ಮುಖ್ಯ...

ಕುಂದೂರು ಫಾರೆಸ್ಟ್‌ನ ಹೆಬ್ಬಾಳ ಗದ್ದೆಯಲ್ಲಿ ಗಂಡು ಕಾಡಾನೆ ಸಾವು

​ಚಿಕ್ಕಮಗಳೂರು: ಜಿಲ್ಲೆಯ ಆಲ್ದೂರು ಅರಣ್ಯ ವಲಯದ ವ್ಯಾಪ್ತಿಯಲ್ಲಿ ಒಂಟಿ ಗಂಡು ಕಾಡಾನೆಯೊಂದು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ...

ಶೃಂಗೇರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿ

ಶೃಂಗೇರಿ: ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿಯನ್ನು ಕೇರಳ ಪೊಲೀಸರು ಶೃಂಗೇರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಶುಕ್ರವಾರ  ಹಾಜರುಪಡಿಸಿದರು....