Home Crime News ಕೊಳಲು ನುಡಿಸುವ ಆಸೆ, ಓದಲು ಇಷ್ಟವಿಲ್ಲ: ವಿದ್ಯಾರ್ಥಿ ಆತ್ಮಹತ್ಯೆ
Crime News

ಕೊಳಲು ನುಡಿಸುವ ಆಸೆ, ಓದಲು ಇಷ್ಟವಿಲ್ಲ: ವಿದ್ಯಾರ್ಥಿ ಆತ್ಮಹತ್ಯೆ

Share
student suicide in sringeri
Share

Sringeri NEWS, 3 OCTOBER 2024 : ಕೊಳಲು ನುಡಿಸುವ ಆಸೆ ಇದ್ದ ಹತ್ತನೇ ತರಗತಿ ವಿದ್ಯಾರ್ಥಿ ಓದಲು ಇಷ್ಟವಿಲ್ಲದೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಯನ್ನು ಹತ್ತನೇ ತರಗತಿಯ ಧ್ರುವ ಎಂದು ಗುರುತಿಸಲಾಗಿದೆ. ಮೃತ ಧ್ರುವ ಮೂಲತಃ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನವನು. ಶೃಂಗೇರಿ ಪಟ್ಟಣದಲ್ಲಿ ಪಿಜಿಯಲ್ಲಿ ಇದ್ದುಕೊಂಡು 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದನು.

ಮೃತ ವಿದ್ಯಾರ್ಥಿ ಧ್ರುವನಿಗೆ ಓದಿನಲ್ಲಿ ಆಸಕ್ತಿ ಇರಲಿಲ್ಲ. ಕೊಳಲು ನುಡಿಸಲು ಹೆಚ್ಚಿನ ಆಸಕ್ತಿ ಹೊಂದಿದ್ದನು. ಪೋಷಕರು ಹತ್ತನೇ ತರಗತಿ ಮುಗಿಯಲಿ ಆಮೇಲೆ ಹೋಗುವಂತೆ ಎಂದು ಪೋಷಕರು ಬುದ್ಧಿ ಹೇಳಿದ್ದರು ಎಂದು ತಿಳಿದುಬಂದಿದೆ.

ಆದರೆ, 10ನೇ ತರಗತಿಯ ಮಧ್ಯವಾರ್ಷಿಕ ಪರೀಕ್ಷೆಗೆ ಧ್ರುವ ಎರಡು ದಿನಗಳಿಂದ ಹೋಗಿರಲಿಲ್ಲ. ಈ ಬಗ್ಗೆ ಮೃತ ಬಾಲಕ ಧ್ರುವ ಅಜ್ಜನಿಗೆ ಶಾಲೆಯ ಮುಖ್ಯಸ್ಥರು ಫೋನ್ ಮಾಡಿ ಹೇಳಿದ್ದರು. ಶೃಂಗೇರಿ ಪಟ್ಟಣದ ಪಿಜಿವೊಂದರಲ್ಲಿ ಧ್ರುವ ಇದ್ದ ರೂಮಿಗೆ ಬಂದು ತಾತ ನೋಡಿದಾಗ ಆತ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದನು.

ಧ್ರುವ ಆರಂಭದಲ್ಲಿ ಶೃಂಗೇರಿ ಪಟ್ಟಣದ ಸಮೀಪದ ಹಳ್ಳಿಯಿಂದ ನಿತ್ಯ ಶಾಲೆಗೆ ಬಂದು ಹೋಗುತ್ತಿದ್ದನು. ಆದರೆ, ಆ ಮಾರ್ಗದಲ್ಲಿ ಆನೆ ಕಂಡು ಶಾಲೆಗೆ ಬರಲು ಭಯವಾಗಿ ಪಿಜಿಯಲ್ಲೇ ಇದ್ದನು. ಇಂದು ಪಿಜಿಯ ತನ್ನ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ಥಳಕ್ಕೆ ಶೃಂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share

Leave a comment

Leave a Reply

Your email address will not be published. Required fields are marked *

Don't Miss

ಶೇ.90ಕ್ಕೂ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಚಿಕ್ಕಮಗಳೂರು: ಅಖಿಲ ಭಾರತ ವೀರಶೈವ ಮಹಾಸಭಾದ ಚಿಕ್ಕಮಗಳೂರು ಜಿಲ್ಲಾ ಘಟಕದ ವತಿಯಿಂದ 2025–26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿರುವ ಸಮಾಜದ ವಿದ್ಯಾರ್ಥಿ–ವಿದ್ಯಾರ್ಥಿನಿಯರಿಗೆ ಅಕ್ಟೋಬರ್ 7ರಂದು...

ರಾಜ್ಯ ಹೆದ್ದಾರಿಯಲ್ಲಿ ದೈತ್ಯ ಒಂಟಿ ಸಲಗ ಪ್ರತ್ಯಕ್ಷ

ಚಿಕ್ಕಮಗಳೂರು : ಪ್ರಸಿದ್ದ ಧಾರ್ಮಿಕ ಕ್ಷೇತ್ರಗಳಾದ ಶೃಂಗೇರಿ ಹಾಗೂ ಹೊರನಾಡಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ದೈತ್ಯ ಒಂಟಿ ಸಲಗವೊಂದು ಪ್ರತ್ಯಕ್ಷವಾಗಿ ವಾಹನ ಸವಾರರಲ್ಲಿ ಆತಂಕ ಸೃಷ್ಟಿಸಿದೆ. ಚಿಕ್ಕಮಗಳೂರು ತಾಲೂಕಿನ ಬಸವರಹಳ್ಳಿ...

Related Articles

ಫೇಸ್‌ಬುಕ್‌ನ ‘ಕೇರಳ ಲಾಟರಿ’ ಜಾಹೀರಾತು ನಂಬಿ ₹4.30 ಲಕ್ಷ ಕಳೆದುಕೊಂಡ ವ್ಯಕ್ತಿ

ಚಿಕ್ಕಮಗಳೂರು: ಫೇಸ್‌ಬುಕ್‌ನಲ್ಲಿ ಕಾಣಿಸಿಕೊಂಡ ‘ಕೇರಳ ಲಾಟರಿ’ ಜಾಹೀರಾತಿನ ಲಿಂಕ್ ಕ್ಲಿಕ್ ಮಾಡಿ, ಲಾಟರಿ ಗೆದ್ದಿರುವುದಾಗಿ ನಂಬಿ...

ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ-ನಗದು ಕಳವು

ಕೊಪ್ಪ: ಮನೆ ಮಾಲೀಕರು ಇಲ್ಲದ ಸಮಯ ನೋಡಿ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಖದೀಮರು ಲಕ್ಷಾಂತರ...

ಕೋಟ್ಯಂತರ ರೂಪಾಯಿ ವಂಚಿಸಿದ ನಕಲಿ ಲೇಡಿ ಪಿಎಸ್‌ಐ ಬಂಧನ

ಚಿಕ್ಕಮಗಳೂರು: ತಾನು ಬೆಂಗಳೂರಿನ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಎಂದು ನಂಬಿಸಿ, ಚಿನ್ನ, ಹಣ, ಮೊಬೈಲ್ ಹಾಗೂ ಕಾರು...

ದೊಣ್ಣೆಯಿಂದ ಹಲ್ಲೆಯಾದ ಭಿಕ್ಷುಕನ ಸಾವು

ತರೀಕೆರೆ: ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ ಸುಮಾರು 65 ವರ್ಷದ ವ್ಯಕ್ತಿಯೊಬ್ಬರನ್ನು ದೊಣ್ಣೆಯಿಂದ ಹೊಡೆದು, ಕಾಲಿನಿಂದ...