Home namma chikmagalur ವೈದ್ಯಕೀಯ ಕಾಲೇಜಿನ ಮಳೆಕೊಯ್ಲು ವ್ಯವಸ್ಥೆಗೆ 3.2 ಕೋಟಿ ಅನುದಾನ
namma chikmagalurchikamagalurHomeLatest News

ವೈದ್ಯಕೀಯ ಕಾಲೇಜಿನ ಮಳೆಕೊಯ್ಲು ವ್ಯವಸ್ಥೆಗೆ 3.2 ಕೋಟಿ ಅನುದಾನ

Share
Share

ಚಿಕ್ಕಮಗಳೂರು: ನೀರಿನ ಸಮಸ್ಯೆ ತೀವ್ರವಾಗಿರುವ ನಗರದ ವೈದ್ಯಕೀಯ ಕಾಲೇಜಿಗೆ ಮಳೆ ನೀರು ಕೊಯ್ಲು ವ್ಯವಸ್ಥೆ ಕಲ್ಪಿಸಲು ಈಗಾಗಲೇ ಸಲ್ಲಿಸಿರುವ ಪ್ರಸ್ತಾವನೆಯಲ್ಲಿರುವ ೩.೨ ಕೋಟಿ ರೂ.ಗಳ ಹೆಚ್ಚುವರಿ ಅನುದಾನವನ್ನು ಸರ್ಕಾರದಿಂದ ಒದಗಿಸಲು ಶಿಫಾರಸ್ಸು ಮಾಡುವುದಾಗಿ ವಿಧಾನಸಭೆ ಉಪಸಭಾಪತಿಗಳು ಹಾಗೂ ವಿಧಾನಸಭೆಯ ಅರ್ಜಿಗಳ ಸಮಿತಿಯ ಅಧ್ಯಕ್ಷರಾದ ರುದ್ರಪ್ಪ ಮಾನಪ್ಪ ಲಮಾಣಿ ತಿಳಿಸಿದರು.

ನಗರದ ವೈದ್ಯಕೀಯ ಕಾಲೇಜಿಗೆ ಗುರುವಾರ ತಮ್ಮ ಸಮಿತಿ ಸದಸ್ಯರೊಂದಿಗೆ ಭೇಟಿ ನೀಡಿ ಕಟ್ಟಡದ ಸ್ಥಿತಿಗತಿಯನ್ನು ವೀಕ್ಷಿಸಿದ ಬಳಿಕ ಕಾಲೇಜಿನ ಅಧಿಕಾರಿಗಳು ಹಾಗೂ ಮುಖ್ಯ ಇಂಜಿನಿಯರ್ ಜೊತೆ ಮಾತನಾಡಿದ ಅವರು, ಈ ತಕ್ಷಣದ ಪರಿಹಾರ ಕ್ರಮವಾಗಿ ನೀರಿನ ವ್ಯವಸ್ಥೆ ಹಾಗೂ ವಿದ್ಯುತ್ ಸಮಸ್ಯೆಯನ್ನು ಪ್ರಥಮ ಆದ್ಯತೆಯಾಗಿ ಪರಿಗಣಿಸಿ ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ೬೦:೪೦ ಅನುಪಾತದ ಅನುದಾನದಲ್ಲಿ ವೈದ್ಯಕೀಯ ಕಾಲೇಜು ಕಟ್ಟಡಕ್ಕೆ ೨೭೫.೦೩ ಕೋಟಿ ರೂ.ಗಳ ಟೆಂಡರ್ ಆಗಿತ್ತು. ಅನಂತರದಲ್ಲಿ ವೆಚ್ಚ ಪರಿಷೃರಿಸಿ ೨೦೨೪ ರಲ್ಲಿ ೪೫೫ ಕೋಟಿ ರೂ.ಗಳ ಅಂದಾಜು ತಯಾರಿಸಿ ಕಳುಹಿಸಲಾಗಿತ್ತು. ಈ ಮೊತ್ತದಲ್ಲಿ ೪೩೮.೨೯ ಕೋಟಿ ವೆಚ್ಚವಾಗಿದ್ದು. ಶೇ.೯೦ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಆದರೆ ಈ ಕಟ್ಟಡಕ್ಕೆ ಹೆಚ್ಚುವರಿಯಾಗಿ ವಿದ್ಯುತ್ ಸಮಸ್ಯೆ ಇದೆ ಮುಖ್ಯ ಇಂಜಿನಿಯರ್ ಮುಕ್ಕಣ್ಣ ನಾಯಕ್ ತಿಳಿಸಿದರು.

ಇಲ್ಲಿರುವ ಸಮಸ್ಯೆ ಬಗ್ಗೆ ಅಧ್ಯಕ್ಷರು ಪ್ರಶ್ನಿಸಿದಾಗ, ಸಮಿತಿ ಸದಸ್ಯರು ಹಾಗೂ ಸ್ಥಳೀಯ ಶಾಸಕರು ಆದ ಹೆಚ್.ಡಿ.ತಮ್ಮಯ್ಯ ಮಾತನಾಡಿ, ೧೫೦೦ ವಿದ್ಯಾರ್ಥಿಗಳಿರುವ ಈ ಕಾಲೇಜಿಗೆ ಮೂಲಭೂತ ಸೌಕರ್ಯಗಳಿಲ್ಲ. ೨೦೨೨ರಲ್ಲಿ ತರಾತುರಿಯಲ್ಲಿ ಇಲ್ಲಿನ ವ್ಯವಸ್ಥೆ ಪರಿಗಣಿಸದೆ ಸ್ಥಳಾಂತರಿಸಲಾಗಿದೆ. ಇಲ್ಲಿ ನೀರು, ವಿದ್ಯುತ್, ಕ್ಯಾಂಟೀನ್, ಶೌಚಾಲಯಕ್ಕೂ ನೀರಿನ ಕೊರತೆಯಾಗಿದೆ. ಹಾಸ್ಟೆಲ್ ಊಟವೂ ಸಮರ್ಪಕವಾಗಿಲ್ಲ ಎಂಬ ದೂರು ಕೇಳಿಬಂದಿದೆ. ಈ ಕಟ್ಟಡದಲ್ಲಿ ವಿದ್ಯುತ್ ಹಾಗೂ ನೀರಿನ ಸಮಸ್ಯೆ ಪ್ರಮುಖವಾಗಿದೆ ಎಂದರು.

ಈ ಹಂತದಲ್ಲಿ ಉತ್ತರಿಸಿದ ಇಂಜಿನಿಯರ್ ಮುಕ್ಕಣ್ಣ ನಾಯಕ್, ಈ ಮೊದಲು ತೋಡಿದ ಕೊಳವೆ ಬಾವಿಗಳು ವಿಫಲವಾದ ಹಿನ್ನೆಲೆಯಲ್ಲಿ ಸಮಸ್ಯೆಯಾಗಿದೆ. ಇಲ್ಲಿಗೆ ಸಮೀಪದಲ್ಲೇ ಇರುವ ಕೆರೆ ಪಕ್ಕದಲ್ಲಿ ಎರಡು ಕೊಳವೆ ಬಾವಿಗಳನ್ನು ಕೊರೆಸಿ ನೀರೆತ್ತಲು ಚಿಂತನೆ ನಡೆಸಲಾಗಿದೆ. ಇದರಿಂದ ೧೫ ಲಕ್ಷ ಲೀಟರ್ ನೀರು ಸಂಗ್ರಹಿಸಿ ೫ ಲಕ್ಷವನ್ನು ಕ್ಯಾಂಪಸ್‌ಗೆ ಬಳಸಬಹುದು. ೧೦ ಲಕ್ಷ ನೀರು ಸಂಗ್ರಹಿಸಬಹುದು ಎಂದರು. ಈಗ ಹೆಚ್ಚುವರಿ ೩,೨ ಕೋಟಿ ಮಳೆನೀರು ಕೊಯ್ಲಿಗೆ ಅನುದಾನ ಕೇಳಲಾಗಿದೆ ಎಂದು ತಿಳಿಸಿದರು.

ಈಗಾಗಲೇ ಜಿಲ್ಲಾಧಿಕಾರಿಗಳು ಒಂದೂವರೆ ಎಕರೆ ಜಾಗ ಒದಗಿಸಿದ್ದು, ಇಲ್ಲಿನ ವಿದ್ಯುತ್ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ೪.೩೭ ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಉಪ ಕೇಂದ್ರ ಸ್ಥಾಪಿಸಿ ಫೀಡರ್‌ನಿಂದ ವಿದ್ಯುತ್ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಕಾಲೇಜಿನ ವಿದ್ಯಾರ್ಥಿಗಳಿಗೆ ಮಲಗಲು ಚಾಪೆ ನೀಡಲಾಗಿದೆ ಎಂಬ ದೂರಿರುವ ಬಗ್ಗೆ ಶಾಸಕ ಹೆಚ್.ಡಿ.ತಮ್ಮಯ್ಯ ತಿಳಿಸಿದಾಗ, ಉತ್ತರಿಸಿದ ಡೀನ್ ಡಾ.ಎಂ.ಸಿ.ಹರೀಶ್, ಹಾಸ್ಟೆಲ್‌ನಲ್ಲಿ ಈಗಾಗಲೇ ಅವರಿಗೆ ಪೀಠೋಪಕರಣಗ ವ್ಯವಸ್ಥೆ ಮಾಡಲಾಗಿದೆ. ಹಾಸ್ಟೆಲ್‌ನಲ್ಲಿ ೧೮೦ ವಿದ್ಯಾರ್ಥಿಗಳು ಹಾಗೂ ೧೮೦ ವಿದ್ಯಾರ್ಥಿನಿಯರಿದ್ದು, ಈಗಾಗಲೇ ಅವರಿಗೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.  ಸಮಿತಿ ಸದಸ್ಯರುಗಳು ಹಾಗೂ ಶಾಸಕರುಗಳಾದ ಕೆ.ಎಸ್.ಆನಂದ್, ಎಸ್.ಮುನಿರಾಜು, ಯು.ಬಿ.ಬಣಕಾರ್, ಡಾ.ಅವಿನಾಶ್ ಉಮೇಶ್ ಜಾದವ್ ಚರ್ಚೆಯಲ್ಲಿ ಭಾಗವಹಿಸಿದ್ದರು.

ಸಮಿತಿ ಸದಸ್ಯರು ಹಾಗೂ ಶಾಸಕರಾದ ಎಸ್.ಟಿ.ಸೋಮಶೇಖರ್, ಡಾ.ಹೆಚ್.ಡಿ.ರಂಗನಾಥ್, ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್, ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

3.2 crore grant for rain harvesting system of medical college

Share

Leave a comment

Leave a Reply

Your email address will not be published. Required fields are marked *

Don't Miss

ಜೀವಾಣು ಹೆಚ್ಚಿಸುವ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕು

ಚಿಕ್ಕಮಗಳೂರು: ಮಣ್ಣು ರೋಗಯುಕ್ತವಾಗಿದ್ದು, ಅದಕ್ಕೆ ಬೇಕಿರುವ ಜೀವಾಣುಗಳನ್ನು ಹೆಚ್ಚಿಸುವ ಮೂಲಕ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕಾದ ಅನಿವಾರ್ಯ ಇದೆ’ ಎಂದು ಕನ್ನೇರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು. ಸಾವಯವ ರೈತರ ಬಳಗದಿಂದ...

ಅಡ್ಡ ಮತದಾನದ ಸತ್ಯಶೋಧನಾ ಸಮಿತಿ ವರದಿ ಸಿದ್ದ

ಚಿಕ್ಕಮಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ರಚಿಸಿರುವ ಸತ್ಯಶೋಧನಾ ಸಮಿತಿಯು ತನ್ನ ಪ್ರಾಥಮಿಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಸಮಿತಿಯ ಸದಸ್ಯರಾದ ಸಿ.ಟಿ. ರವಿ ಅವರು ಚಿಕ್ಕಮಗಳೂರಿನಲ್ಲಿ ಈ...

Related Articles

ಸ್ವಚ್ಛ ಪರಿಸರ ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ

ಚಿಕ್ಕಮಗಳೂರು: ಮಲೆನಾಡಿನ ನಿಸರ್ಗದತ್ತ ಸೌಂದರ್ಯ ಮತ್ತು ಸ್ವಚ್ಛ ಪರಿಸರವನ್ನು ಉಳಿಸಿ ಬೆಳೆಸುವ ಮಹತ್ತರವಾದ ಹೊಣೆಗಾರಿಕೆ ನಮ್ಮೆಲ್ಲರ...

ಪ್ರವಾಹ ಪರಿಸ್ಥಿತಿ ಎದುರಿಸುವ ಅಣಕು ಪ್ರದರ್ಶನ

ಚಿಕ್ಕಮಗಳೂರು: ಕಾಫಿನಾಡಿನ ಹಿರೇಕೊಳಲೆ ಕೆರೆಯಲ್ಲಿ ಪ್ರವಾಹ ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಅಗ್ನಿಶಾಮಕ ಮತ್ತು...

ಯುವಜನತೆ ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಲಿ

ಚಿಕ್ಕಮಗಳೂರು: ಇಂದಿನ ಸಮಾಜದಲ್ಲಿ ಮಾದಕ ದ್ರವ್ಯಗಳ ಹಾವಳಿ ಹೆಚ್ಚಾಗುತ್ತಿದ್ದು, ಇದು ಯುವ ಪೀಳಿಗೆಯ ಭವಿಷ್ಯ ಹಾಗೂ...

ಭಿಕ್ಷುಕಿಯನ್ನು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ

ಚಿಕ್ಕಮಗಳೂರು:  ಕ್ಷುಲ್ಲಕ ಕಾರಣಕ್ಕೆ ಸೈಜುಕಲ್ಲು ಎತ್ತಿಹಾಕಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿಗೆ ಇಲ್ಲಿನ ಒಂದನೇ ಅಧಿಕ...