Home namma chikmagalur ಒಡೆಯರ್ ಕಸಾಪ ಸ್ಥಾಪಿಸಿ ನಾಡಿನ ಸಂಸ್ಕೃತಿ ಎತ್ತಿಹಿಡಿದರು
namma chikmagalurchikamagalurHomeLatest News

ಒಡೆಯರ್ ಕಸಾಪ ಸ್ಥಾಪಿಸಿ ನಾಡಿನ ಸಂಸ್ಕೃತಿ ಎತ್ತಿಹಿಡಿದರು

Share
Share

ಚಿಕ್ಕಮಗಳೂರು: ನಾಡಿನ ಭಾಷಾ ಸಂಸ್ಕೃತಿಯನ್ನು ಎಲ್ಲೆಡೆ ವಿಸ್ತರಿಸಲು ನಾಲ್ವಡಿ ಕೃಷ್ಣ ರಾಜ ಒಡೆಯರ್ ಕಸಾಪವನ್ನು ಸ್ಥಾಪಿಸಿ ನೆಲ, ಜಲ, ಭಾಷೆಯ ಸ್ವಾಭಿಮಾನವನ್ನು ಎತ್ತಿಹಿಡಿದವರು ಎಂದು ಪರಿಸರ ಮೌಲ್ಯಮಾಪನ ತಜ್ಞರ ಸಮಿತಿ ಅಧ್ಯಕ್ಷ ಎ.ಎನ್.ಮಹೇಶ್ ಹೇಳಿದರು.

ನಗರದ ನೇಕಾರ ಬೀದಿಯ ಶ್ರೀ ಕೋದಂಡರಾಮ ದೇವಾಲಯದ ಸಭಾಂಗಣದಲ್ಲಿ ಬುಧವಾರ ಸಂ ಜೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ಧ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನ, ಅಂಬಳೆ ಹೋಬಳಿ ಘಟಕ ಸೇವಾಧೀಕ್ಷೆ ಸಮಾರಂಭ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಒಡೆಯ ರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ನಾಲ್ವಡಿ ಕೃ?ರಾಜ ಒಡೆಯರ್ ಅವರು ಸುಮಾರು ನಾ ಲ್ಕು ದಶಕಗಳ ಕಾಲ ಮೈಸೂರನ್ನು ಆಳಿದರು. ಅವರು ಒಬ್ಬ ಪ್ರಾಮಾಣಿಕ ಹಾಗೂ ದಕ್ಷ ಆಡಳಿತಗಾರರಾಗಿ ದ್ದರು. ಜನಸಾಮಾನ್ಯರ ಏಳಿಗೆಯೇ ಮುಖ್ಯವೆಂದು ನಂಬಿ ಕೆಲಸ ಮಾಡಿದವರು ಎಂದು ಹೇಳಿದರು.

ಉಳ್ಳವರ ಪಾಲಿಗೆ ಸೀಮಿತವಾಗಿ ಸೌಲಭ್ಯಗಳನ್ನು ಪ್ರತಿ ಸಮಾಜದವರಿಗೆ ಕೊಡಲು ಮೀಸಲಾತಿ ತಂದ ವರು. ಮೈಸೂರು ವಿಶ್ವವಿದ್ಯಾಲಯ, ಮೈಸೂರು ಬ್ಯಾಂಕ್, ಕಾರ್ಖಾನೆ ಸ್ಥಾಪಿಸಿ ಬಡವರಿಗೆ ಉದ್ಯೋಗವನ್ನು ಕರುಣಿಸಿದ್ದರು. ಮೂಡನಂಬಿಕೆ, ಕಂದಾಯ ವಿರುದ್ಧ ಹೋರಾಡಿದ ಅವರು ದೇವದಾಸಿ ಪದ್ಧತಿ ನಿರ್ಮೂ ಲನೆಗೊಳಿದರು ಎಂದರು.

ಇದೀಗ ಅಂಬಳೆ ಕಸಾಪ ನೇತೃತ್ವ ವಹಿಸಿಕೊಂಡಿರುವ ನೂತನ ಅಧ್ಯಕ್ಷರು ಗ್ರಾಮೀಣ ಭಾಗದಲ್ಲಿ ಕಲೆ, ಸಾಹಿತ್ಯಕ್ಕೆ ಒತ್ತು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಸ್ಥಳೀಯ ಕಲಾವಿದರು, ಲೇಖಕರು, ಬರಹ ಗಾರರನ್ನು ಪ್ರೋತ್ಸಾಹಿಸಬೇಕು. ಆ ನಿಟ್ಟಿನಲ್ಲಿ ನೂತನ ಅಧ್ಯಕ್ಷರು ಅತ್ಯಂತ ಪ್ರಾಮಾಣಿಕತೆಯಿಂದ ಕನ್ನಡ ಕಟ್ಟು ವ ಕೆಲಸ ಮಾಡುವ ಆಶಯವಿದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಅಂಬಳೆ ಹೋಬಳಿಗೆ ನೂತನ ಸಾರಥ್ಯ ಹೊತ್ತಿರುವ ಮಾಸ್ತೇಗೌಡರು ಕನ್ನಡ ರಥವನ್ನು ಹೋಬಳಿ ಯುದ್ದಕ್ಕೂ ಎಳೆಯುವಂತಾ ಗಲೀ. ಜೊತೆಗೆ ಜಿಲ್ಲಾ ಸಮಿತಿಯು ಸಂಪೂರ್ಣ ಸಹಕಾರ ನೀಡಿ ಭಾಷಾ ಸಂಸ್ಕೃತಿ ಬೆಳವಣಿಗೆಗೆ ಸಹಕರಿ ಸಲಾಗುವುದು ಎಂದು ತಿಳಿಸಿದರು.

ಅಂಬಳೆ ಹೋಬಳಿ ಕಸಾಪ ನೂತನ ಅಧ್ಯಕ್ಷ ಕೆ.ಸಿ.ಮಾಸ್ತೇಗೌಡ ಮಾತನಾಡಿ ಹಿರಿಯ ಮಾರ್ಗದರ್ಶ ನದೊಂದಿಗೆ ಕನ್ನಡದ ಕಂಪನ್ನು ಪಸರಿಸುವ ನಿಟ್ಟಿನಲ್ಲಿ ದೈನಂದಿನ ವೇಳೆಯನ್ನು ಕನ್ನಡಕ್ಕಾಗಿ ಮುಡಿಪಿ ಡು ತ್ತೇನೆ. ಜೊತೆಗೆ ಭುವನೇಶ್ವರಿ ತಾಯಿಯ ಸೇವೆಯಲ್ಲಿ ತೊಡಗಿ ಕೊಟ್ಟಿರುವ ಸ್ಥಾನಕ್ಕೆ ಚ್ಯುತಿ ಬಾರದಂತೆ ನಡೆ ದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಇದೇ ವೇಳೆ ಅಂಬಳೆ ಹೋಬಳಿ ನಿಯೋಜಿತ ಅಧ್ಯಕ್ಷ ಕೆ.ಸಿ.ಮಾಸ್ತೇಗೌಡ ಅವರಿಗೆ ಕಸಾಪ ಜಿಲ್ಲಾ ಪ್ರ ಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್ ಪ್ರತಿಜ್ಞಾವಿಧಿ ಬೋಧಿಸಿದರು. ಕಸಾಪ ತಾಲ್ಲೂಕು ಅಧ್ಯಕ್ಷ ಮಾವಿನಕೆರೆ ದಯಾನಂದ್ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಹರಿಹರದಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಲಲಿತ ಶಿವಾನಂದ್, ಮಾಜಿ ಅಧ್ಯಕ್ಷರಾದ ಕೆ.ಇ. ಮಂಜೇಗೌಡ, ಶಾರದಾ ಮಾಸ್ತೇಗೌಡ, ಸದಸ್ಯ ಯಶ್ವಂತ್‌ರಾಜ್ ಅರಸ್, ಪಿಸಿಎಆರ್‌ಡಿ ಬ್ಯಾಂಕ್ ಅಧ್ಯಕ್ಷ ಬೈರೇಗೌಡ, ನಿಕಟ ಪೂರ್ವ ಅಧ್ಯಕ್ಷ ಚಂದ್ರಶೇಖರ್, ಕಸಾಪ ಮುಖಂಡರುಗಳಾದ ಶಿವಾನಂದ್, ಟಿ.ಸಂದೀ ಫ್, ಬಸವರಾಜ್, ಡಾ|| ಸತೀಶ್, ಬಲರಾಮ್, ಧರ್ಮೇಗೌಡ, ತಮ್ಮೇಗೌಡ ಉಪಸ್ಥಿತರಿದ್ದರು.

Wodeyar established Kasapa and upheld the culture of the country.

Share

Leave a comment

Leave a Reply

Your email address will not be published. Required fields are marked *

Don't Miss

19 ಲಕ್ಷ ಜನರ ಪಿಂಚಣಿ ರದ್ದು: ಸರ್ಕಾರದ ವಿರುದ್ಧ ವಿಧಾನಮಂಡಲದಲ್ಲಿ ಸಂಗ್ರಾಮ

ಸಖರಾಯಪಟ್ಟಣ: ರಾಜ್ಯದಲ್ಲಿ 19 ಲಕ್ಷಕ್ಕೂ ಹೆಚ್ಚು ಜನರ ವೃದ್ಧಾಪ್ಯ, ವಿಧವಾ ಹಾಗೂ ಅಂಗವಿಕಲ ಪಿಂಚಣಿಯನ್ನು ರದ್ದುಪಡಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಮಾರು 67 ಸಾವಿರ ಫಲಾನುಭವಿಗಳ ಪಿಂಚಣಿ ಸ್ಥಗಿತಗೊಳಿಸಲಾಗಿದೆ ಎಂದು ವಿಧಾನಪರಿಷತ್ ಸದಸ್ಯ...

ಸಖರಾಯಪಟ್ಟಣದ ಮೂಲಸೌಕರ್ಯ ಸಮಸ್ಯೆ ಪರಿಹಾರಕ್ಕೆ 5 ಬೇಡಿಕೆ

ಚಿಕ್ಕಮಗಳೂರು: ಜಿಲ್ಲೆಯ ಪ್ರಮುಖ ಗ್ರಾಮ ಪಂಚಾಯಿತಿಗಳಲ್ಲಿ ಒಂದಾಗಿರುವ ಸಖರಾಯಪಟ್ಟಣದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಜನರು ತೊಂದರೆ ಅನುಭವಿಸುತ್ತಿದ್ದು, ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಜಿಪಂ–ತಾಪಂ ಸದಸ್ಯ...

Related Articles

ಮಳೆಗಾಲದಲ್ಲಿ ಟಿಂಬರ್ ಸಾಗಣೆರಸ್ತೆಯಿಂದ ರಸ್ತೆ ಹಾಳು

ಕೊಪ್ಪ: ತಾಲೂಕಿನ ಅಸಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯಿಂದ ಮಳೆಗಾಲದಲ್ಲಿಯೇ ಟಿಂಬರ್‌ಗಳನ್ನು ಕಡಿದು ಸಾಗಿಸುತ್ತಿರುವುದರಿಂದ...

ನಗರಕ್ಕೆ ಎರಡು ದಿನಗಳ ಕಾಲ ಕುಡಿಯುವ ನೀರಿನ ಸರಬರಾಜು ಸ್ಥಗಿತ

ಚಿಕ್ಕಮಗಳೂರು: ನಗರದ ದಂಟರಮಕ್ಕಿ ವ್ಯಾಪ್ತಿಯಲ್ಲಿ 600 ಎಂಎಂ ಸಾಮರ್ಥ್ಯದ ಪ್ರಮುಖ ಕುಡಿಯುವ ನೀರಿನ ಕೊಳವೆ ಮಾರ್ಗ...

ಚಿಕ್ಕಮಗಳೂರು-ಯಶವಂತಪುರ ಎಕ್ಸ್‌ಪ್ರೆಸ್ ರೈಲು ಸಂಚಾರ ಸ್ಥಗಿತ…?

ಚಿಕ್ಕಮಗಳೂರು: ಮಲ್ಲಸಂದ್ರ ಮತ್ತು ಗುಬ್ಬಿ ರೈಲ್ವೆ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ ಗೇಟ್ (LC-48) ಬದಲಿಗೆ...

ಅಣ್ಣ-ತಮ್ಮಂದಿರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ

ತರೀಕೆರೆ: ಮನೆಯಲ್ಲಿ ಆಟವಾಡುತ್ತಿದ್ದ ಮಗುವಿನ ಕೆನ್ನೆ ಊದಿಕೊಂಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಕ್ಷುಲ್ಲಕ ಕಾರಣಕ್ಕೆ ಅಣ್ಣ-ತಮ್ಮಂದಿರ ನಡುವೆ...