Home namma chikmagalur chikamagalur ಜಿಲ್ಲೆಯವರಿಗೆ ಮಂತ್ರಿ ಸ್ಥಾನ ಇಲ್ಲವೆ ಇಲ್ಲ
chikamagalurHomeLatest Newsnamma chikmagalur

ಜಿಲ್ಲೆಯವರಿಗೆ ಮಂತ್ರಿ ಸ್ಥಾನ ಇಲ್ಲವೆ ಇಲ್ಲ

Share
Share

ನ್ಯೂಸ್ ಕಿಂಗ್ ಈ ಹಿಂದೆ ಜಿಲ್ಲೆಯ ಯಾರಿಗೂ ಮಂತ್ರಿ ಸ್ಥಾನ ಸಿಗುವುದಿಲ್ಲ ಎಂದು ಸುದ್ದಿ ನೀಡಿತ್ತು.ಆದರೆ ಅನಿವಾಸಿ ಕನ್ನಡಿಗರಿಗೆ ಸಚಿವಾಲಯ ಹೊಸದಾಗಿ ಪ್ರಾರಂಭಿಸಿದರೆ ಆರತಿ ಕೈಷ್ಣರಿಗೆ ಅವಕಾಶ ಸಿಗಬಹುದು ಎಂಬ ಅನಿಸಿಕೆ ಕೂಡ ಹೇಳಿತ್ತು ಆದರೆ ಇತ್ತೀಚಿನ ಬೆಳವಣಿಗೆಯಲ್ಲಿ ಸಚಿವಾಲಯ ಪ್ರಾರಂಭವಾಗುವುದು ಖಚಿತ ಆದರೆ ಆರತಿ ಕೃಷ್ಣರಿಗೆ ಸಚಿವ ಸ್ಥಾನ ಖಚಿತವಾಗಿ ಸಿಗುವುದಿಲ್ಲ.

ಆರತಿ ಕೃಷ್ಣ 30 ಕ್ಕೂ ಹೆಚ್ಚು ಅನಿವಾಸಿ ಕನ್ನಡಿಗರನ್ನು ಕರೆ ತಂದು ಪತ್ರಿಕಾ ಗೋಷ್ಠಿ ಮಾಡಿಸಿ ಮಂತ್ರಿ ಸ್ಥಾನಕ್ಕೆ ಲಾಭಿ ಶುರುಮಾಡಿದ್ದರು ಪಕ್ಕ ವ್ಯವಹಾರಗಾರಿಕೆಯಲ್ಲಿ ಪಳಗಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೊಸದಾಗಿ ರಚನೆಯಾಗುವ ಸಚಿವಾಲಯ ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಯೋಜನೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ಆರತಿ ಕೃಷ್ಣ ಕೇವಲ ಐದಾರು ತಿಂಗಳ ಹಿಂದೆ ವಿಧಾನ ಪರಿಷತ್ ಸದಸ್ಯರಾದವರು ಜೊತೆಗೆ ಒಕ್ಕಲಿಗರು ಹೀಗಾಗಿ ಬಹುತೇಕ ಹಿರಿಯ ಒಕ್ಕಲಿಗರಿಗೆ ಮಂತ್ರಿ ಸ್ಥಾನ ನೀಡಬೇಕಾಗಿರುವುದರಿಂದ ಆರತಿಗೆ ಸಚಿವ ಸ್ಥಾನ ಕಷ್ಟ ಎನ್ನುವುದರ ಜೊತೆಗೆ ಲಾಭಿ ಮಾಡುತ್ತಿದ್ದ ಆರತಿಯವರಿಗೆ ನೇರವಾಗಿ ಹೇಳಿಕಳಿಸಲಾಗಿದೆ ಎಂಬ ಮಾಹಿತಿ ಕಾಂಗ್ರೆಸ್ ವಲಯದಲ್ಲಿ ಹರಿದಾಡುತ್ತಿದೆ.

ಜಿಲ್ಲೆಯಲ್ಲಿ ಐದು ಜನ ಕಾಂಗ್ರೆಸ್ ಶಾಸಕರು ಇದ್ದು ಇದರಲ್ಲಿ ಎರಡನೇ ಬಾರಿ ಗೆದ್ದಿರುವ ಟಿ.ಡಿ.ರಾಜೇಗೌಡರು ಒತ್ತಡ ಹೇರುವ ಪ್ರಯತ್ನಕ್ಕೆ ನಾನೇ ಮುಖ್ಯಮಂತ್ರಿಯಾಗಿರುವಾಗ ನೀನು ಪ್ರಯತ್ನ ಮಾಡುವುದು ಎಷ್ಟರಮಟ್ಟಿಗೆ ಸರಿ ಎಂಬ ಮಾತು ಹೇಳಿಕಳಿಸಿದ್ದಾರೆ ಎಂಬ ಮಾಹಿತಿ ಹೊರಬರುತ್ತಿದೆ.

ತರೀಕೆರೆ ಕ್ಷೇತ್ರದ ಶಾಸಕ ಕಳೆದ ಒಂದು ತಿಂಗಳಿಂದ ಮಂತ್ರಿ ಸ್ಥಾನ ಪಡೆಯಬೇಕು ಎಂದು ಕಾಂಗ್ರೆಸ್ ಮುಖಂಡರ ಮನೆಗಳನ್ನು ಸುತ್ತುತ್ತಿದ್ದಾರೆ ಅದರೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಂದೆ ಹೇಳುವುದು ಕಡು ಕಷ್ಟವಾಗಿದ್ದು ಜಿಲ್ಲೆಯ ಶಾಸಕರುಗಳು ಇವರ ಪರವಾಗಿಲ್ಲ ಇನ್ನೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಶ್ರೀನಿವಾಸ್ ಪರ ಇಲ್ಲದಿರುವುದು ಯಾವುದೇ ಕಾರಣಕ್ಕೂ ಮಂತ್ರಿ ಸ್ಥಾನದ ಪ್ರಶ್ನೆ ಇಲ್ಲವೇ ಇಲ್ಲ ಎನ್ನಲಾಗುತ್ತಿದೆ.

ಇನ್ನೂ ಹೊಸದಾಗಿ ಚುನಾಯಿತರಾಗಿರುವ ಹೆಚ್.ಡಿ.ತಮ್ಮಯ್ಯ ಮತ್ತು ಕಡೂರಿನ ಆನಂದ್ ಮಂತ್ರಿ ಸ್ಥಾನ ಕೇಳಲು ಹೋಗಿಲ್ಲ. ಆದರೆ ನಯನ ಮೋಟಮ್ಮ ಹಿಂಬಾಲಕರ ಮೂಲಕ ಪ್ರಚಾರದ ಗೀಳಿಗೆ ಇಳಿದಿದ್ದಾರೆ ಎನ್ನಲಾಗುತ್ತಿದೆ. ಕಳೆದ ಇಪ್ಪತ್ತೈದು ವರ್ಷಗಳಿಂದ ಜಿಲ್ಲೆಯವರು ಮಂತ್ರಿಗಳಾಗಿಲ್ಲ ಜೊತೆಗೆ ಪಕ್ಕ ವ್ಯವಹಾರಸ್ಥರನ್ನು ಜಿಲ್ಲೆಯ ಉಸ್ತುವಾರಿ ಮಂತ್ರಿ ಮಾಡುತ್ತಿದ್ದಾರೆ.ಅವರಿಗೆ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಗಮನ ಹರಿಸಲು ಸಾಧ್ಯವೇ ಇಲ್ಲ .

ಜಿಲ್ಲೆಯ ಮಂತ್ರಿಯಾಗಿದ್ದ ಜಾರ್ಜ್ ಎರಡು ಸಾವಿರ ಎಕರೆ ಕಾಫಿ ತೋಟ ಖರೀದಿ ಮಾಡಿದ್ದವರು ಈಗ ಹತ್ತು ಸಾವಿರ ಎಕರೆಯ ಕಾಫಿ ಪ್ಲಾಂಟರ್ ಆಗಿದ್ದಾರೆ.ಅದರಲ್ಲಿ ಎಷ್ಟು ಒತ್ತವರಿಯಾಗಿದೆ ಎಂಬ ಬಗ್ಗೆ ಅರಣ್ಯ ಇಲಾಖೆ ಕೇಳಲು ಸಾಧ್ಯವೇ? ಇನ್ನೂ ಬಡವ ಒಬ್ಬ ವಾಸಿಸಲು ಗುಡಿಸಲು ಕಟ್ಟಿಕೊಂಡರು ಕಾನೂನು ನೆಪ ಹೇಳಿ ಕಿತ್ತು ಬೀಸಾಕುತ್ತಾರೆ.ಕಾಂಗ್ರೆಸ್ ನವರು ಸಾ,ಸಾ ಎಂದು ಜೈ ಹುಜೂರ್ ಎಂದು ಬಹುಪಾರಕ್ ಹಾಕುತ್ತಾರೆ.

Whether or not there is a ministerial position for the district

Share

Leave a comment

Leave a Reply

Your email address will not be published. Required fields are marked *

Don't Miss

ಎಂ.ಸಿ. ಹಳ್ಳಿಯಲ್ಲಿ ಕಡವೆ ಬೇಟೆ-ಆರೋಪಿಗಳ ಬಂಧನ

ತರೀಕೆರೆ: ಲಕ್ಕವಳ್ಳಿ ವಲಯದ ಎಂ.ಸಿ. ಹಳ್ಳಿ ಶಾಖೆಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಡವೆಯನ್ನು ಬೇಟೆ ಮಾಡಿ ಮಾಂಸ ಕತ್ತರಿಸುತ್ತಿರುವ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿ, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ...

ಸೆ.21ರಿಂದ ಮುಖ್ಯಮಂತ್ರಿ ನಿವಾಸದವರೆಗೆ ಬೃಹತ್ ಪಾದಯಾತ್ರೆ

ಚಿಕ್ಕಮಗಳೂರು: ಹೊರಗುತ್ತಿಗೆ ಪೌರನೀರು ಸರಬರಾಜು ನೌಕರರನ್ನು ಪೌರಕಾರ್ಮಿಕರ ಮಾದರಿಯಲ್ಲಿ ವಿಶೇಷ ನೇರ ನೇಮಕಾತಿ ಅಥವಾ ನೇರಪಾವತಿ ವ್ಯವಸ್ಥೆಗೆ ಒಳಪಡಿಸಿ ಸೇವಾ ಭದ್ರತೆ ಕಲ್ಪಿಸಬೇಕು ಎಂದು ಒತ್ತಾಯಿಸಿ ಸೆ.21ರಿಂದ ತುಮಕೂರಿನ ಸಿದ್ದಗಂಗಾ ಮಠದಿಂದ...

Related Articles

ಪೂನಾ ಒಪ್ಪಂದ ಯಥಾವತ್ತಾಗಿ ಜಾರಿಗೆ ಆಗ್ರಹಿಸಿ ದಸಂಸ ಪ್ರತಿಭಟನೆ

ಚಿಕ್ಕಮಗಳೂರು:  ದಲಿತ ಸಮುದಾಯದ ಪ್ರಾತಿನಿಧ್ಯ ಹಾಗೂ ಹಕ್ಕುಗಳನ್ನು ಸಂರಕ್ಷಿಸುವ ಉ ದ್ದೇಶದಿಂದ ಪೂನಾ ಒಪ್ಪಂದ ಯಥಾವತ್ತಾಗಿ...

ಶೇ.90ಕ್ಕೂ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಚಿಕ್ಕಮಗಳೂರು: ಅಖಿಲ ಭಾರತ ವೀರಶೈವ ಮಹಾಸಭಾದ ಚಿಕ್ಕಮಗಳೂರು ಜಿಲ್ಲಾ ಘಟಕದ ವತಿಯಿಂದ 2025–26ನೇ ಸಾಲಿನ ಎಸ್‌ಎಸ್‌ಎಲ್‌ಸಿ...

ರಾಜ್ಯ ಹೆದ್ದಾರಿಯಲ್ಲಿ ದೈತ್ಯ ಒಂಟಿ ಸಲಗ ಪ್ರತ್ಯಕ್ಷ

ಚಿಕ್ಕಮಗಳೂರು : ಪ್ರಸಿದ್ದ ಧಾರ್ಮಿಕ ಕ್ಷೇತ್ರಗಳಾದ ಶೃಂಗೇರಿ ಹಾಗೂ ಹೊರನಾಡಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ...

ಸಾರಿಗೆ ಸಂಸ್ಥೆಯ ಬಸ್ – ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿ

ಮೂಡಿಗೆರೆ: ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಮತ್ತು ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿ...