Home namma chikmagalur chikamagalur ವಂದೇ ಮಾತರಂ ಹೋರಾಟಗಾರರಿಗೆ ಪ್ರೇರಣಾ ಶಕ್ತಿ
chikamagalurHomeLatest Newsnamma chikmagalur

ವಂದೇ ಮಾತರಂ ಹೋರಾಟಗಾರರಿಗೆ ಪ್ರೇರಣಾ ಶಕ್ತಿ

Share
Share

ಚಿಕ್ಕಮಗಳೂರು: ವಂದೇ ಮಾತರಂ ಗೀತೆ ದೇಶದ ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರೇರಣೆ ಯ ಶಕ್ತಿಮಂತ್ರವಾಗಿತ್ತು. ಚಂದ್ರಶೇಖರ ಆಜಾದ್, ಭಗತ್ ಸಿಂಗ್, ರಾಜಗುರು, ಸುಖದೇವ್ ಹಾಗೂ ಸುಭಾ? ಚಂದ್ರ ಬೋಸ್ ಅವರಂತಹ ಕ್ರಾಂತಿಕಾರಿಗಳಿಗೆ ಈ ಗೀತೆ ಹೋರಾಟದ ಸ್ಫೂರ್ತಿ ನೀಡಿತ್ತು. ಇಂ ತಹ ಐತಿಹಾಸಿಕ ಗೀತೆಯ ಮಹತ್ವವನ್ನು ಇಂದಿನ ಯುವಜನತೆಗೆ ತಿಳಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಬುಧವಾರ ಯುವ ಯುವ ಬ್ರಿಗೇಡ್ ವತಿಯಿಂದ ವಂದೇ ಮಾತರಂ ಗೀತೆಯ ೧೫೦ನೇ ವ?ಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ರಥಯಾತ್ರೆ ಹಾಗೂ ಬಹಿರಂಗ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿ ವಂದೇ ಮಾತರಂ ಗೀತೆಯನ್ನು ರಚಿಸಿದ ಬಂಕಿಮಚಂದ್ರ ಚಟ್ಟೋಪಾಧ್ಯಾಯ ಅವರ ದೇಶಭಕ್ತಿ ಯನ್ನು ಸ್ಮರಿಸಿದ ಅವರು, ಈ ಗೀತೆ ೧೮೭೪-೭೫ರ ಅವಧಿಯಲ್ಲಿ ರೂಪುಗೊಂಡಿದ್ದು, ಬಳಿಕ ಅವರ ಕಾದಂಬ ರಿಯಲ್ಲಿ ಸೇರ್ಪಡೆಯಾಯಿತು. ತಾಯ್ನಾಡಿಗೆ ವಂದನೆ ಸಲ್ಲಿಸುವ ಎರಡು ಪದಗಳ ಈ ಮಂತ್ರ ದೇಶದ ಮೂಲೆಮೂಲೆಗೂ ಹರಡಿ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಅಭೂತಪೂರ್ವ ದೇಶಭಕ್ತಿಯನ್ನು ಮೂಡಿಸಿತು ಎಂದರು.

ವಂದೇ ಮಾತರಂ ಗೀತೆಯನ್ನು ಮೊದಲ ಬಾರಿಗೆ ಸಾರ್ವಜನಿಕವಾಗಿ ವ್ಯಾಪಕವಾಗಿ ಜನಪ್ರಿಯಗೊ ಳಿಸುವಲ್ಲಿ ರವೀಂದ್ರನಾಥ ಠಾಕೂರ ಅವರ ಪಾತ್ರ ಮಹತ್ವದ್ದಾಗಿದೆ. ಮುಂದೆ ಜನಗಣಮನ ಗೀತೆಯನ್ನು ರಾ?ಗೀತೆಯಾಗಿ ಸ್ವೀಕರಿಸಲಾಯಿತು. ಆದರೆ ವಂದೇ ಮಾತರಂ ಗೀತೆಯ ಸಂಪೂರ್ಣ ಚರಣಗಳನ್ನು ಹಾಡುವ ವಿಚಾರದಲ್ಲಿ ರಾಜಕೀಯ ಹಾಗೂ ಇತರ ಕಾರಣಗಳಿಂದಾಗಿ ನಿಬಂಧಗಳು ಎದುರಾದವು ಎಂದು ಅವರು ಆಕ್ಷೇಪಿಸಿದರು.

ಬ್ರಿಟಿ?ರ ಕಾಲದ ಪೊಲೀಸ್ ಬ್ಯಾಂಡ್‌ಸೆಟ್‌ಗೆ ವಂದೇ ಮಾತರಂ ರಾಗ ಹೊಂದಿಕೆಯಾಗುವುದಿಲ್ಲ ಎಂಬ ಕಾರಣವನ್ನು ಮುಂದಿಟ್ಟು ಈ ಗೀತೆಯನ್ನು ರಾ?ಗೀತೆಯನ್ನಾಗಿ ಮಾಡಬಾರದು ಎಂಬ ಚರ್ಚೆ ನಡೆದಿತ್ತು. ಆದರೆ ಭಾರತೀಯ ಸಂಗೀತಗಾರರು ಪೊಲೀಸ್ ಬ್ಯಾಂಡ್‌ನ ಸ್ವರೂಪವನ್ನು ಗಮನಿಸಿ ಅದಕ್ಕೆ ಹೊಂದುವಂತೆ ವಂದೇ ಮಾತರಂ ಗೀತೆಯ ರಾಗವನ್ನು ರೂಪಿಸಬಹುದೆಂದು ತೋರಿಸಿಕೊಟ್ಟಿದ್ದರು. ಆದರೂ ರಾಜಕೀಯ ನಿರ್ಧಾರಗಳಿಂದಾಗಿ ವಂದೇ ಮಾತರಂ ರಾ?ಗೀತೆಯಾಗಲಿಲ್ಲ ಎಂದು ಹೇಳಿದರು.

ಗೀತೆಯ ಕೆಲವು ಚರಣಗಳನ್ನು ಧಾರ್ಮಿಕ ಕಾರಣಗಳನ್ನು ಮುಂದಿಟ್ಟು ಕೈಬಿಡಲಾಯಿತು. ಅದರಲ್ಲೂ ತಾಯ್ನಾಡನ್ನು ದುರ್ಗೆಯ ರೂಪದಲ್ಲಿ ವರ್ಣಿಸುವ ಚರಣಗಳ ಬಗ್ಗೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಗೀತೆಯ ಮೂಲ ಸ್ವರೂಪವನ್ನು ಮೊಟಕುಗೊಳಿಸಲಾಯಿತು. ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಲಕ್ಷಾಂತರ ಕ್ರಾಂತಿಕಾರಿಗಳಿಗೆ ಸ್ಫೂರ್ತಿಯಾಗಿದ್ದ ಗೀತೆಯ ಸಂಪೂರ್ಣ ಮಹತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ ಎಂದರು.

ವಂದೇ ಮಾತರಂ ಗೀತೆಯೊಂದಿಗೆ ಸಿಸ್ಟರ್ ನಿವೇದಿತಾ ಅವರ ದೇಶಸೇವೆಯನ್ನೂ ಸ್ಮರಿಸಿದ ಸೂಲಿ ಬೆಲೆ, ಐಲೆಂಡ್ ಮೂಲದ ಮಾರ್ಗರೇಟ್ ನೋಬೆಲ್ ಅವರು ಭಾರತಕ್ಕೆ ಬಂದು ತಮ್ಮ ಜೀವನವನ್ನೇ ದೇಶದ ಸೇವೆಗೆ ಮುಡಿಪಾಗಿಟ್ಟಿದ್ದರು. ವಂದೇ ಮಾತರಂ ಹೆಸರಿನ ಪತ್ರಿಕೆಯ ಸಂಪಾದಕೀಯ ಕಾರ್ಯ ದಲ್ಲಿಯೂ ತೊಡಗಿಸಿಕೊಂಡು ಸ್ವಾತಂತ್ರ್ಯ ಚಳವಳಿಗೆ ಬೆಂಬಲ ನೀಡಿದ್ದರು ಎಂದು ಹೇಳಿದರು.

ಇತ್ತೀಚೆಗೆ ದೇಶಾದ್ಯಂತ ವಂದೇ ಮಾತರಂ ಗೀತೆಯ ೧೫೦ನೇ ವ?ಚರಣೆ ಸಂದರ್ಭದಲ್ಲಿ ಪೂರ್ಣ ಗೀತೆಯನ್ನು ಹಾಡುವ ಕುರಿತು ಚರ್ಚೆ ನಡೆಯುತ್ತಿದೆ. ಆದರೆ ಕರ್ನಾಟಕದಲ್ಲಿ ಸರ್ಕಾರಿ ಕಾರ್ಯಕ್ರಮಗಳಲ್ಲಿ ಪೂರ್ಣ ಗೀತೆಗೆ ಬದಲಾಗಿ ಎರಡು ಚರಣಗಳನ್ನು ಹಾಡಿದರೆ ಸಾಕು ಎಂಬ ನಿಯಮವಿದೆ ಎಂದು ಆಕ್ಷೇಪಿ ಸಿದ ಅವರು, ಇಂತಹ ನಿಬಂಧಗಳ ನಡುವೆಯೂ ಜನರಲ್ಲಿ ಗೀತೆಯ ಬಗ್ಗೆ ಜಾಗೃತಿ ಮೂಡಿಸಲು ಯುವ ಬ್ರಿಗೇಡ್ ಮುಂದಾಗಿದೆ ಎಂದರು.

ಚಿಕ್ಕಮಗಳೂರಿನ ವಿದ್ಯಾರ್ಥಿಗಳು ವಂದೇ ಮಾತರಂನ ಸಂಪೂರ್ಣ ಗೀತೆಯನ್ನು ಕಲಿತು ಹಾಡುತ್ತಿ ರುವುದು ಸಂತಸದ ಸಂಗತಿ. ಯಾರು ಹಾಡುತ್ತಾರೆ, ಯಾರು ಹಾಡುವುದಿಲ್ಲ ಎಂಬುದಕ್ಕಿಂತ ನಮ್ಮ ಮಕ್ಕಳಿಗೆ ಈ ಗೀತೆಯ ಇತಿಹಾಸ ಮತ್ತು ಮಹತ್ವವನ್ನು ತಿಳಿಸುವುದು ಮುಖ್ಯ. ದೇಶಭಕ್ತಿಯ ವಿಚಾರದಲ್ಲಿ ಯುವ ಜನತೆ ಆತ್ಮವಿಶ್ವಾಸ ಹಾಗೂ ಧೈರ್ಯದಿಂದ ಮುನ್ನಡೆಯಬೇಕು ಎಂದು ಕರೆ ನೀಡಿದರು.

ಸ್ವಾಮಿ ವಿವೇಕಾನಂದರು ಯುವಜನರಿಗೆ ಪುರು?ಸಿಂಹರಾಗಿ ಎಂದು ಕರೆ ನೀಡಿದ್ದರು. ನಾವು ದುರ್ಬ ಲ ಮನೋಭಾವದಿಂದ ಬದುಕುವವರಾಗಬಾರದು. ದೇಶವನ್ನು ಕಟ್ಟುವ ಶಕ್ತಿ ಯುವಜನರಲ್ಲಿದೆ. ಶೌರ್ಯ, ಸಾಹಸ ಮತ್ತು ಆತ್ಮವಿಶ್ವಾಸದೊಂದಿಗೆ ರಾ? ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ವಂದೇ ಮಾತರಂ ಗೀತೆಯ ಇತಿಹಾಸ, ಅದರ ಹಿಂದೆ ಅಡಗಿರುವ ತ್ಯಾಗ, ಬಲಿದಾನ ಹಾಗೂ ದೇಶಭಕ್ತಿಯ ಸಂದೇಶವನ್ನು ಪ್ರತಿಯೊಬ್ಬರಿಗೂ ತಲುಪಿಸುವ ಉದ್ದೇಶದಿಂದ ರಾಜ್ಯಾದ್ಯಂತ ರಥಯಾತ್ರೆ ನಡೆಸಲಾಗುತ್ತಿದೆ. ಈ ಗೀತೆಯ ವೈಭವವನ್ನು ಪ್ರತಿಯೊಬ್ಬರೂ ಹೃದಯದಲ್ಲಿ ಬೆಳಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮಕ್ಕೂ ಮುನ್ನ ನಗರದ ಶಂಕರ ಮಠದಿಂದ ಆರಂಭಗೊಂಡ ಶೋಭಾಯಾತ್ರೆ ಹನುಮಂತಪ್ಪ ವೃತ್ತದ ಮೂಲಕ ಎಂ.ಜಿ. ರಸ್ತೆಯಲ್ಲಿ ಸಾಗಿ ಆಜಾದ್ ಮೈದಾನದಲ್ಲಿ ಸಮಾಗಮಗೊಂಡಿತು. ವಿದ್ಯಾರ್ಥಿಗಳು, ಯುವ ಬ್ರಿಗೇಡ್ ಕಾರ್ಯಕರ್ತರು, ಸಂಘ ಪರಿವಾರದ ಕಾರ್ಯಕರ್ತರು ಹಾಗೂ ಸಾರ್ವ ಜನಿಕರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಸುಮಂತ್ ನೆಮ್ಮರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಶ್ರೀ ರಾಮಕೃ? ಆಶ್ರಮದ ಸ್ವಾಮಿ ಸಚ್ಚಿದಾನಂದ ಸರಸ್ವತಿ, ನಗರಸಭೆ ಅಧ್ಯಕ್ಷೆ ಭವ್ಯ ಮಂಜುನಾಥ, ಸಾಯಿ ಏಂಜಲ್ಸ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ವಿಜಯ ನಾಗೇಶ್, ನೈಟಿಂಗೇಲ್ ಕಾಲೇಜಿನ ಮುಖ್ಯಸ್ಥೆ ಶಶಿಕಲಾ ನಾಯಕ್, ನಾಗೇಶ್, ವಿಶ್ವ ಹಿಂದೂ ಪರಿ?ತ್ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ ಉಪಸ್ಥಿತರಿದ್ದರು. ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ಸ್ವಾಗತಿಸಿದರು. ಎಬಿವಿಪಿ ಜಿಲ್ಲಾ ಸಂಚಾಲಕ ಭಗವಾನ್ ನಿರೂಪಿಸಿದರು. ಚಂದ್ರಶೇಖರ್ ವಂದಿಸಿದರು.

‘Vande Mataram’ – A Source of Inspiration for Freedom Fighters

Share

Leave a comment

Leave a Reply

Your email address will not be published. Required fields are marked *

Don't Miss

ಮನೆ ಬೀಗ ಒಡೆದು ಚಿನ್ನ, ಬೆಳ್ಳಿ ಹಾಗೂ ನಗದು ಕಳವು

ಚಿಕ್ಕಮಗಳೂರು: ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೀಗ ಒಡೆದು ಒಳನುಗ್ಗಿದ ಕಳ್ಳರು ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ನಗದು ಹಣ ಕಳವು ಮಾಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ನಡೆದಿದೆ....

ಜೀವರಾಜ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣ ಹೈಕೋರ್ಟ್‌ನಿಂದ ವಜಾ

ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದಡಿ ಮಾಜಿ ಶಾಸಕ ಡಿ.ಎನ್. ಜೀವರಾಜ್ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕ್ರಿಮಿನಲ್...

Related Articles

ಕಾಡಾನೆಯಿಂದ ಕಾಫಿ, ಅಡಿಕೆ -ತೆಂಗಿನ ಮರಗಳು ಧ್ವಂಸ

ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಕಾರ್ಬೈಲು ಗ್ರಾಮದಲ್ಲಿ 20ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ದಾಳಿ ನಡೆಸಿ ಕಾಫಿ,...

ಸರಗಳ್ಳರ ಬಂಧನ: 21 ಲಕ್ಷ ರೂ. ಮೌಲ್ಯದ ಕದ್ದಮಾಲು ವಶ

ಚಿಕ್ಕಮಗಳೂರು: ಚಿಕ್ಕಮಗಳೂರು ನಗರ ಹಾಗೂ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ನಡೆಸಿ ಸಾರ್ವಜನಿಕರಲ್ಲಿ ಆತಂಕ...

ಸಂವಿಧಾನದ ಆಶಯಗಳನ್ನು ಯುವಪೀಳಿಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು

ಚಿಕ್ಕಮಗಳೂರು:  ಸಂವಿಧಾನ ನಮಗೆ ನೀಡಿರುವ ಹಕ್ಕುಗಳ ಬಗ್ಗೆ ಮಾತನಾಡುವಷ್ಟೇ ಅದರಲ್ಲಿರುವ ಮೂಲಭೂತ ಕರ್ತವ್ಯಗಳನ್ನೂ ಪ್ರತಿಯೊಬ್ಬರೂ ಜೀವನದಲ್ಲಿ...

‘ಅಸ್ಪೃಶ್ಯತೆ ನಿವಾರಣೆಗೆ ಜನರ ಮನಸ್ಥಿತಿ ಬದಲಾಗಬೇಕು’

ಚಿಕ್ಕಮಗಳೂರು: ಸಂವಿಧಾನ ಮತ್ತು ಕಾನೂನಿನಿಂದ ಮಾತ್ರ ದೇಶದಲ್ಲಿರುವ ಮೇಲು-ಕೀಳು ಹಾಗೂ ಅಸ್ಪೃಶ್ಯತೆಯನ್ನು ಸಂಪೂರ್ಣವಾಗಿ ಹೋಗಲಾಡಿಸಲು ಸಾಧ್ಯವಿಲ್ಲ....