Home namma chikmagalur chikamagalur ಕಾಡನೆಗಳು ರಿಟರ್ನ್-ರಾಜೀನಾಮೆ ಶಾಸಕರು ಯೂರ್ಟನ್ ?
chikamagalurHomeLatest Newsnamma chikmagalur

ಕಾಡನೆಗಳು ರಿಟರ್ನ್-ರಾಜೀನಾಮೆ ಶಾಸಕರು ಯೂರ್ಟನ್ ?

Share
Share

ಚಿಕ್ಕಮಗಳೂರು: 38ಕ್ಕೂ ಹೆಚ್ಚು ಕಾಡಾನೆಗಳ ಕಾಟದಿಂದ ಸಾವು,ಬೆಳೆನಾಶ ಜೊತೆಗೆ ಜನರಿಗೆ ಆತಂಕ ಸೃಷ್ಟಿಸಿದೆ. ಹಾಸನ ಜಿಲ್ಲೆಯ ಬೇಲೂರು ತಾಲೂಕ್ ವ್ಯಾಪ್ತಿಯಲ್ಲಿ ಇಬ್ಬರ ಜೀವ ಹಾನಿಯಿಂದ ಜನ ರೊಚ್ಚಿಗೆದ್ದು ಆನೆಗಳ ಕಾಟ ತಪ್ಪಿಸಲು ಒತ್ತಾಯ ತಂದಾಗ ಕಾಡನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಬಿಡಲು ತೀರ್ಮಾನ ಮಾಡಿ ಪಟಾಕಿ ಸಿಡಿಸಿ ಆನೆಗಳ ಹಿಂಡು ಮೂಡಿಗೆರೆಯ ತೆತ್ಕೊಳ ಅರಣ್ಯದ ಮೂಲಕ ಭದ್ರಾ ಅಭಯಾರಣ್ಯದತ್ತ ತೆರಳುವಂತೆ ಮಾಡಿದ್ದರು.

ನಿದ್ರೆಯಿಂದ ದಿಢೀರ್ ಎಚ್ಚೆತ್ತ ಚಿಕ್ಕಮಗಳೂರು ಜಿಲ್ಲೆಯ ಶಾಸಕರುಗಳಾದ ನಯನಾ ಮೋಟಮ್ಮ ಮತ್ತು ಟಿ.ಡಿ.ರಾಜೇಗೌಡ ಹಾಗೂ ಹೆಚ್.ಡಿ.ತಮ್ಮಯ್ಯ ಪತ್ರಿಕಾಗೋಷ್ಠಿ ಸರ್ಕಾರದ ನಿರ್ಧಾರದ ವಿರುದ್ಧ ರಾಜೀನಾಮೆ ಕೊಡುವುದಾಗಿ ಹೇಳಿಕೆ ನೀಡಿದರು.ನಯನಾ ಸ್ಪೀಕರ್ ಗೆ ರಾಜೀನಾಮೆ ನೀಡುವ ಬದಲು ಪ್ರಬಂಧ ಬರೆದು ಆಪ್ತ ಸಹಾಯಕರ “ಕೈ” ಗೆ ರಾಜೀನಾಮೆ ಸಲ್ಲಿಸಿದರೆ ರಾಜೇಗೌಡ ಮತ್ತು ತಮ್ಮಯ್ಯ ಕ್ಷೇತ್ರದಲ್ಲಿದ್ದರು.ಇಂತಹ ವಿಚಾರಗಳ ಬಗ್ಗೆ ರಾಜೀನಾಮೆ ನೀಡಲು ಶಾಸಕರುಗಳು ಪುಕ್ಕಟ್ಟೆ ಪ್ರಚಾರ ಪಡೆದರು ಎನ್ನಲಾಗುತ್ತದೆ.

ಆದರೆ ಮುಖ್ಯಮಂತ್ರಿ ಮತ್ತು ಸ್ಪೀಕರ್ ತಿಪ್ಪೇಸಾರಿಸಿ ಕಳುಹಿಸಿದ್ದಾರೆ.ಗ್ರಹಚಾರ ಕ್ಕೆ ಆನೆಗಳ ಹಿಂಡು ಮೂಡಿಗೆರೆಯಿಂದ ಬೇಲೂರು ಕಡೆಗೆ ರೀರ್ಟನ್ ಹೊಡೆದು ಹೋಗುತ್ತಿರುವ ಸುದ್ದಿಯ ಜೊತೆಗೆ ಶಾಸಕರುಗಳು ಯೂರ್ಟನ್ ಹೊಡೆದ ರಾಜಧಾನಿಯಿಂದ ಕ್ಷೇತ್ರ ಗಳ ಕಡೆ ಬರುತ್ತಿದ್ದಾರೆ ಎನ್ನಲಾಗುತ್ತಿದೆ.ಜನರ ಹಿತ ನಮಗೆ ಮುಖ್ಯ ಎನ್ನುವ ಶಾಸಕರುಗಳ ಮೂಡಿಗೆರೆ ಜನ ಬಂದ್ ಗೆ ಕರೆಕೊಟ್ಟು ಯಶಸ್ಸು ಗೊಳಿಸಿದ್ದಾರೆ. ಈ ಬಗ್ಗೆ ತುಟಿ ಬಿಚ್ಚದಿರುವುದು ಹಲವರು ಪ್ರಶ್ನೆ ಮಾಡುತ್ತಿದ್ದಾರೆ.

ಲಾಸ್ಟ್‌ ಸೀಪ್: 

ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಅದಲುಬದಲು ಮಾಡಲಾಗಿದೆ.ಶಾಸಕರುಗಳ ಮೂಗಿನ ನೇರಕ್ಕೆ ಜಿಲ್ಲೆಯ ಹಲವು ಕ್ಷೇತ್ರಗಳ ಮೀಸಲಾತಿ ಬದಲಾಯಿಸಲಾಗಿದೆ.
ಶಿವನಿ,ಬಿಸಿಎಂ ಮೀಸಲಾತಿ ಬದಲಾಯಿಸಿ ಸಾಮಾನ್ಯ ಕ್ಷೇತ್ರವನ್ನಾಗಿಸಲಾಗಿದೆ.ಹಿರೇನಲ್ಲೂರು ಬಿಸಿಎಂ ಬಿ ಸಾಮಾನ್ಯ ವರ್ಗವನ್ನು ಬಿಸಿಎಂ ಬಿ ಮಹಿಳ ಕ್ಷೇತ್ರ ವನ್ನಾಗಿಸಿದ್ದು ದೇವನೂರು ಕ್ಷೇತ್ರವನ್ನು ಸಾಮಾನ್ಯ ವರ್ಗದಿಂದ ಸಾಮಾನ್ಯ ಮಹಿಳಾ ಕ್ಷೇತ್ರಕ್ಕೆ ಮೀಸಲಿರಿಸಲಾಗಿದೆ.

ಜಾಗರ ಸಾಮಾನ್ಯ ವರ್ಗದಿಂದ ಸಾಮಾನ್ಯ ಮಹಿಳಾ ಕ್ಷೇತ್ರ ವಾಗಿಸಿದರೆ ಕುರವಂಗಿ ಕ್ಷೇತ್ರ ಬಿಸಿಎಂ ಎ ಮಹಿಳಾ ಕ್ಷೇತ್ರದ ಬದಲಿಗೆ ಬಿಸಿಎಂ ಎ ಗೆ ಬದಲಾಯಿಸಲಾಗಿದೆ. ಯಗಟಿ ಬಿಸಿಎಂ ಎ ನ ಬದಲಿಗೆ ಬಿಸಿಎಂ ಎ ಮಹಿಳಾ ಕ್ಷೇತ್ರಕ್ಕೆ ಮೀಸಲಿರಿಸಿದರೆ ,ಕೊಪ್ಪ ತಾಲ್ಲೂಕಿನ ಐದು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲು ಅದಲುಬದಲು ಮಾಡಲಾಗಿದೆ.ಮೀಸಲಾತಿ ಶಾಸಕರುಗಳ ಮೂಗಿನ ನೇರಕ್ಕೆ ನಡೆದಿರುವುದು ಹಲವು ಅಕಾಂಕ್ಷಿಗಳ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.

Wild elephants return—are the resigned MLAs returning?

Share

Leave a comment

Leave a Reply

Your email address will not be published. Required fields are marked *

Don't Miss

ಮನೆ ಬೀಗ ಒಡೆದು ಚಿನ್ನ, ಬೆಳ್ಳಿ ಹಾಗೂ ನಗದು ಕಳವು

ಚಿಕ್ಕಮಗಳೂರು: ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೀಗ ಒಡೆದು ಒಳನುಗ್ಗಿದ ಕಳ್ಳರು ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ನಗದು ಹಣ ಕಳವು ಮಾಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ನಡೆದಿದೆ....

ಜೀವರಾಜ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣ ಹೈಕೋರ್ಟ್‌ನಿಂದ ವಜಾ

ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದಡಿ ಮಾಜಿ ಶಾಸಕ ಡಿ.ಎನ್. ಜೀವರಾಜ್ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕ್ರಿಮಿನಲ್...

Related Articles

ಕಾಡಾನೆಯಿಂದ ಕಾಫಿ, ಅಡಿಕೆ -ತೆಂಗಿನ ಮರಗಳು ಧ್ವಂಸ

ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಕಾರ್ಬೈಲು ಗ್ರಾಮದಲ್ಲಿ 20ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ದಾಳಿ ನಡೆಸಿ ಕಾಫಿ,...

ಸರಗಳ್ಳರ ಬಂಧನ: 21 ಲಕ್ಷ ರೂ. ಮೌಲ್ಯದ ಕದ್ದಮಾಲು ವಶ

ಚಿಕ್ಕಮಗಳೂರು: ಚಿಕ್ಕಮಗಳೂರು ನಗರ ಹಾಗೂ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ನಡೆಸಿ ಸಾರ್ವಜನಿಕರಲ್ಲಿ ಆತಂಕ...

ಸಂವಿಧಾನದ ಆಶಯಗಳನ್ನು ಯುವಪೀಳಿಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು

ಚಿಕ್ಕಮಗಳೂರು:  ಸಂವಿಧಾನ ನಮಗೆ ನೀಡಿರುವ ಹಕ್ಕುಗಳ ಬಗ್ಗೆ ಮಾತನಾಡುವಷ್ಟೇ ಅದರಲ್ಲಿರುವ ಮೂಲಭೂತ ಕರ್ತವ್ಯಗಳನ್ನೂ ಪ್ರತಿಯೊಬ್ಬರೂ ಜೀವನದಲ್ಲಿ...

‘ಅಸ್ಪೃಶ್ಯತೆ ನಿವಾರಣೆಗೆ ಜನರ ಮನಸ್ಥಿತಿ ಬದಲಾಗಬೇಕು’

ಚಿಕ್ಕಮಗಳೂರು: ಸಂವಿಧಾನ ಮತ್ತು ಕಾನೂನಿನಿಂದ ಮಾತ್ರ ದೇಶದಲ್ಲಿರುವ ಮೇಲು-ಕೀಳು ಹಾಗೂ ಅಸ್ಪೃಶ್ಯತೆಯನ್ನು ಸಂಪೂರ್ಣವಾಗಿ ಹೋಗಲಾಡಿಸಲು ಸಾಧ್ಯವಿಲ್ಲ....