Home namma chikmagalur chikamagalur ಅಕ್ರಮ ಬಂದೂಕು ಹೊಂದಿದ್ದ ಇಬ್ಬರ ಬಂಧನ
chikamagalurHomeLatest Newsnamma chikmagalur

ಅಕ್ರಮ ಬಂದೂಕು ಹೊಂದಿದ್ದ ಇಬ್ಬರ ಬಂಧನ

Share
Share

ಮೂಡಿಗೆರೆ: ಅಕ್ರಮವಾಗಿ ಬಂದೂಕುಗಳನ್ನು ಹೊಂದಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ, ಅವರಿಂದ ಎರಡು ಎಸ್‌ಬಿಬಿಎಲ್ (SBBL) ಬಂದೂಕುಗಳನ್ನು ಗೋಣಿಬೀಡು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯ ಬೈರಾಪುರ ಗ್ರಾಮದಲ್ಲಿ ಖಚಿತ ಮಾಹಿತಿ ಮೇರೆಗೆ ಪೊಲೀಸರು ನಡೆಸಿದ ದಾಳಿಯ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ.

ದಾಳಿಯ ಸಂದರ್ಭದಲ್ಲಿ ಗ್ರಾಮದ ನಿವಾಸಿಗಳಾದ ಪ್ರಸನ್ನ ಬಿ.ಡಿ. ಮತ್ತು ಪ್ರಭಾಕರ ಬಿ.ಸಿ. ಎಂಬುವವರು ತಮ್ಮ ಮನೆಗಳಲ್ಲಿ ಯಾವುದೇ ಅಧಿಕೃತ ಪರವಾನಗಿ ಇಲ್ಲದೆ ಎಸ್‌ಬಿಬಿಎಲ್‌ (SBBL) ಬಂದೂಕುಗಳನ್ನು ಇಟ್ಟುಕೊಂಡಿರುವುದು ಪತ್ತೆಯಾಗಿದೆ.

ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು, ಅವರ ಬಳಿಯಿದ್ದ ಅಕ್ರಮ ಬಂದೂಕುಗಳನ್ನು ಜಪ್ತಿ ಮಾಡಿದರು.

ಗೋಣಿಬೀಡು ಪೊಲೀಸ್ ಠಾಣೆಯ ಪಿಎಸ್‌ಐ ಹರ್ಷವರ್ಧನ್ ಅವರ ನೇತೃತ್ವದಲ್ಲಿ ನಡೆದ ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಠಾಣೆಯ ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.

ಬಂಧಿತ ಆರೋಪಿಗಳ ವಿರುದ್ಧ ಗೋಣಿಬೀಡು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಅಕ್ರಮ ಆಯುಧಗಳ ಮೂಲ ಮತ್ತು ಅವುಗಳ ಉದ್ದೇಶದ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Two arrested for possessing illegal firearms

Share

Leave a comment

Leave a Reply

Your email address will not be published. Required fields are marked *

Don't Miss

ರಾಜ್ಯ ಹೆದ್ದಾರಿಯಲ್ಲಿ ದೈತ್ಯ ಒಂಟಿ ಸಲಗ ಪ್ರತ್ಯಕ್ಷ

ಚಿಕ್ಕಮಗಳೂರು : ಪ್ರಸಿದ್ದ ಧಾರ್ಮಿಕ ಕ್ಷೇತ್ರಗಳಾದ ಶೃಂಗೇರಿ ಹಾಗೂ ಹೊರನಾಡಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ದೈತ್ಯ ಒಂಟಿ ಸಲಗವೊಂದು ಪ್ರತ್ಯಕ್ಷವಾಗಿ ವಾಹನ ಸವಾರರಲ್ಲಿ ಆತಂಕ ಸೃಷ್ಟಿಸಿದೆ. ಚಿಕ್ಕಮಗಳೂರು ತಾಲೂಕಿನ ಬಸವರಹಳ್ಳಿ...

ಸಾರಿಗೆ ಸಂಸ್ಥೆಯ ಬಸ್ – ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿ

ಮೂಡಿಗೆರೆ: ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಮತ್ತು ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಸ್ಕೂಟಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಮನಕಲಕುವ ಘಟನೆ ನಡೆದಿದೆ. ಮೂಡಿಗೆರೆ ಕಡೆಗೆ ತೆರಳುತ್ತಿದ್ದ...

Related Articles

ನಿಗಮ ಮಂಡಳಿ ಸ್ಥಾನ ನೀಡಲು ಪರದಾಡುತ್ತಿರುವ ಕಾಂಗ್ರೆಸ್

ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಪತ್ತರಗುಟ್ಟುತ್ತಿದೆ.ಶಾಸಕರು ಮತ್ತು ಕಾಂಗ್ರೆಸ್ ದುಡಿದ ಮುಖಂಡರು ಕಣ್ಣ್...

ಗಾಣದಾಳು ವಿದ್ಯುತ್ ಉಪಕೇಂದ್ರ ಕಾಮಗಾರಿ ಪೂರ್ಣ

ಚಿಕ್ಕಮಗಳೂರು: ತಾಲೂಕಿನ ಗಾಣದಾಳು ವ್ಯಾಪ್ತಿಯಲ್ಲಿ ಕೆಪಿಟಿಸಿಎಲ್ ವತಿಯಿಂದ ನಿರ್ಮಿಸಲಾಗಿರುವ ವಿದ್ಯುತ್ ಉಪಕೇಂದ್ರದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು,...

ಚುನಾವಣಾ ಆಯೋಗದ ವಿರುದ್ಧ ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಜವಾಬ್ದಾರಿಯುತ ನಡೆ ಅಗತ್ಯ

ಚಿಕ್ಕಮಗಳೂರು: ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳು ಮಾಡುತ್ತಿರುವ ಆರೋಪಗಳು ಮತ್ತು ಟೀಕೆಗಳು...

ಮತದಾರರ ಮತಪಟ್ಟಿಯಿಂದ ಹೊರಗಿಡುವವರ ವಿರುದ್ಧ ಕ್ರಮ ಕೈಗೊಳ್ಳಿ

ಚಿಕ್ಕಮಗಳೂರು: ಮತದಾರರ ಪಟ್ಟಿಯಿಂದ ಮತದಾರರನ್ನು ಕೈ ಬಿಡುವ ಚಟುವಟಿಕೆ ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ನಡೆಯುತ್ತಿದ್ದು, ಇಂಥ ದು?ತ್ಯ...