Home namma chikmagalur ajjampura ಅಜ್ಜಂಪುರ ಗರಿಗೆದರಿದ ಪಟ್ಟಣ ಪಂಚಾಯತಿ ಚುನಾವಣೆ
ajjampuraHomeLatest Newsnamma chikmagalur

ಅಜ್ಜಂಪುರ ಗರಿಗೆದರಿದ ಪಟ್ಟಣ ಪಂಚಾಯತಿ ಚುನಾವಣೆ

Share
Share

ಅಜ್ಜಂಪುರ:ಗ್ರಾಮ ಪಂಚಾಯಿತಿಯಾಗಿದ್ದನ್ನು ಮೇಲ್ದರ್ಜೆಗೆ ಏರಿಸಿ ಪಟ್ಟಣ ಪಂಚಾಯತಿಯಾಗಿ ಹಲವು ತಕರಾರುಗಳಿಂದಾಗಿ ಐದಾರು ವರ್ಷಗಳು ಚುನಾವಣೆ ನಡೆದಿಲ್ಲ.

ಆಗಸ್ಟ್ 17 ರಂದು ಚುನಾವಣೆ ನಡೆಯಲಿದ್ದು 11 ವಾರ್ಡ್‌ಗಳಿಗೆ ಅಭ್ಯರ್ಥಿಗಳನ್ನು ಚುನಾವಣಾ ಅಖಾಡಕ್ಕೆ ಇಳಿಸಲು ಕಾಂಗ್ರೆಸ್ ಮತ್ತು ಬಿಜೆಪಿ ತಯಾರಿ ನಡೆಸುತ್ತಿವೆ.

ಕೆಲ ವಾರ್ಡ್‌ ಗಳಲ್ಲಿ ಕಾಂಗ್ರೆಸ್ ಬಿಜೆಪಿಗೆ ತಲೆ ನೋವು ಸೃಷ್ಟಿಯಾಗಿದೆ.ಆಗಸ್ಟ್ 5 ನಾಮ ಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು ಆಕಾಂಕ್ಷೆಗಳಿಗೆ ಎದೆ ಬಡೆತ ಇದ್ದೇ ಇರುತ್ತದೆ.ಈ ವಾರ್ಡ್‌ ಗೆ ಅವರಂತೆ,ಇವರಂತೆ ಎಂಬ ಸುದ್ದಿಗಳು ಹರಿದಾಡುತ್ತಿವೆ.
ಬಿಜೆಪಿಗೆ 1 ಮತ್ತು2 ನೇ ವಾರ್ಡ್‌ನಲ್ಲಿ ಗೊಂದಲವಿದ್ದರೆ ಕಾಂಗ್ರೆಸ್ ಗೆ 8 ಮತ್ತು 11 ವಾರ್ಡ್‌ನಲ್ಲಿ ಗೊಂದಲವಿದೆ.

ಹೀಗಾಗಿ ಕೆಲ ಅನಿರೀಕ್ಷಿತ ರಾಜಕೀಯ ಬೆಳವಣಿಗೆ ಆಗುತ್ತದೆ ಎಂದು ಹೇಳಲಾಗುತ್ತದೆ.

ಅಜ್ಜಂಪುರದ ರಾಜಕೀಯ ರೂವಾರಿಗಳೆಂದು ಕರೆಸಿ ಕೊಳ್ಳುತ್ತಿದ್ದ ದಿವಂಗತ ಕೃಷ್ಣೋಜಿ ರಾವ್ ಚವಾಣ್ ಮಗ ಗಿರೀಶ್ ಚವಾಣ್ ಗೆ ಸ್ಪರ್ಧೆ ಮಾಡುವ ಅವಕಾಶವಿದ್ದರೂ ಸ್ಪರ್ಧೆ ಮಾಡುತ್ತಿಲ್ಲ.

ದಿವಂಗತ ಏಕೋರಾಮಸ್ವಾಮಿ ಮಗ ರಾಜ್ ಕುಮಾರ್ ಗೆ 8ನೇ ವಾರ್ಡ್‌ ನಿಂದ ಸ್ಪರ್ಧೆ ಮಾಡುವ ಅವಕಾಶ ಗ್ಯಾರಂಟಿ ಇಲ್ಲ ಪ್ರಯತ್ನ ನಡೆದಿದೆ.

ಇನ್ನೂ ಎಸ್ ತಿಪ್ಪೇರುದ್ರಪ್ಪರ ಕುಟುಂಬದವರು ಕಾಂಗ್ರೆಸ್ ಗೆ ಗುಡ್ ಬೈ ಹೇಳುವುದು ಖಚಿತ ಎಂದು ವಿಶ್ಲೇಷಣೆ ನಡೆಯುತ್ತಿದೆ.ಕೊನೆ ಘಳಿಗೆಯಲ್ಲಿ ಬದಲಾವಣೆಯೊಂದಿಗೆ ಅಖಾಡಕ್ಕೆ ಇಳಿದರು ಆಶ್ಚರ್ಯವಿಲ್ಲ.

ಶಾಸಕರಿದ್ದು ಆಡಳಿತಾರೂಢ ಕಾಂಗ್ರೆಸ್ ನಲ್ಲೂ ಗೊಂದಲಗಳು ಇವೆ.ಬಿಜೆಪಿ ಯಲ್ಲೂ ತಲೆನೋವು ಇದೆ.ಐದನೇ ತಾರೀಖಿನ ತನಕ ರಾಜಕೀಯ ಗೊಂದಲ ಮುಂದುವರಿಯಲಿದೆ ಎಂದು ಎರಡು ಪಕ್ಷದವರು ಹೇಳುತ್ತಿದ್ದಾರೆ.
ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಗೆ ಪ್ರತಿಷ್ಠೆ ಆದರೆ ಮಾಜಿ ಶಾಸಕರುಗಳಾದ ಡಿ.ಎಸ್.ಸುರೇಶ್ ಮತ್ತು ಎಸ್.ಎಂ.ನಾಗರಾಜುಗೂ ಪ್ರತಿಷ್ಠೆಯಾಗಿದೆ.

Town Panchayat elections in Ajjampura

Share

Leave a comment

Leave a Reply

Your email address will not be published. Required fields are marked *

Don't Miss

ಮಲೆನಾಡು ಭಾಗದಲ್ಲಿ ಭಾರೀ ಗಾಳಿ-ಮಳೆಯ ಅಬ್ಬರಕ್ಕೆ ಜನ ಜೀವನ ಅಸ್ತವ್ಯಸ್ತ

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮುಂಗಾರು ಮಳೆ ತಡವಾಗಿ ಆರಂಭಗೊಂಡಿದ್ದರೂ ಇದೀಗ ಭರ್ಜರಿಯಾಗಿ ಸುರಿಯುತ್ತಿದ್ದು, ಮಲೆನಾಡು ಭಾಗದಲ್ಲಿ ಭಾರೀ ಗಾಳಿ-ಮಳೆಯ ಅಬ್ಬರಕ್ಕೆ ಹಲವು ಅವಾಂತರಗಳು ಸೃಷ್ಟಿಯಾಗಿವೆ. ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಸುರಿಯುತ್ತಿರುವ ಮಳೆಗೆ ಹಲವು...

ಕಳಸದಲ್ಲಿ ಬೃಹತ್ ಮರ ಬಿದ್ದು ಆಟೋರಿಕ್ಷಾ ಜಖಂ

ಕಳಸ: ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಗುಡ್ಡೆಮಕ್ಕಿ ಗ್ರಾಮದಲ್ಲಿ ಭಾರಿ ಗಾಳಿ-ಮಳೆಯ ಆರ್ಭಟಕ್ಕೆ ಸುಧೀರ್ ಆಚಾರ್ ಎಂಬುವವರ ಮನೆ ಮುಂದೆ ನಿಲ್ಲಿಸಲಾಗಿದ್ದ ಆಟೋರಿಕ್ಷಾ ಹಾಗೂ ಅವರ ಮನೆಯ ಮೇಲೆ ಬೃಹತ್ ಮರವೊಂದು...

Related Articles

ವೀರಶೈವ ಲಿಂಗಾಯತ ಸಮಾರಂಭದಲ್ಲಿ “ಕುರ್ಚಿ” ತಿಕ್ಕಾಟ ಹಲವು ಸ್ವಾಮಿಜೀಗಳ ವಿರೋದ

ಚಿಕ್ಕಮಗಳೂರು: ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಸ್ವಾಮಿಗಳ ಮಧ್ಯೆ ಕುರ್ಚಿಗಾಗಿ ಪ್ರತಿರೋಧ ಪ್ಯಕ್ತಪಡಿಸಿ ಹೊರ ನಡೆದ ಘಟನೆ...

ಕಡೂರು ತಾಲ್ಲೂಕಿನಲ್ಲಿ ಬರದ ಆತಂಕ

ಕಡೂರು: ಮುಂಗಾರು ಮಳೆಯ ಕೊರತೆಯಿಂದ ಕಡೂರು ತಾಲ್ಲೂಕಿನಲ್ಲಿ ಬರದ ಆತಂಕ ಎದುರಾಗಿದ್ದು, ಕುಡಿಯುವ ನೀರು, ಜಾನುವಾರುಗಳ...

ಜು.21ಕ್ಕೆ ಕೊಪ್ಪಳದಲ್ಲಿ ಬೃಹತ್ ರೈತ ಸಮಾವೇಶ

ಚಿಕ್ಕಮಗಳೂರು : ೪೬ನೇ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಕೊಪ್ಪಳದಲ್ಲಿ ಬೃಹತ್ ರೈತ ಸಮಾವೇಶವನ್ನು ಜು.೨೧...

ಅಕ್ರಮವಾಗಿ ಸಾಗಿಸುತ್ತಿ ಕಾಡುಜಾತಿಯ ಮರಗಳ ದಿಮ್ಮಿಗಳ ವಶ

ಮೂಡಿಗೆರೆ: ಕಾಡುಜಾತಿಯ ಮರಗಳ ದಿಮ್ಮಿಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದುದನ್ನು ತಾಲ್ಲೂಕಿನ ಹಂಡುಗುಳಿ ಗ್ರಾಮದ ಸಮೀಪ ಅರಣ್ಯ ಇಲಾಖೆ...