Home Latest News ನವಂಬರ್ 9,10 ರಂದು ಈ ಸ್ಥಳಗಳಿಗೆ ಪ್ರವಾಸಿಗರಿಗೆ ನಿರ್ಬಂಧ : ಎಲ್ಲೆಲ್ಲಿ ಮತ್ತು ಏಕೆ
Latest News

ನವಂಬರ್ 9,10 ರಂದು ಈ ಸ್ಥಳಗಳಿಗೆ ಪ್ರವಾಸಿಗರಿಗೆ ನಿರ್ಬಂಧ : ಎಲ್ಲೆಲ್ಲಿ ಮತ್ತು ಏಕೆ

Share
Share

ಚಿಕ್ಕಮಗಳೂರು :

ಕಳೆದ ನವಂಬರ್ 4 ರಿಂದ ಆರಂಭಗೊಂಡಿರುವ ಶ್ರೀರಾಮಸೇನೆ ಪ್ರಾಯೋಜಿತ ದತ್ತಮಾಲಾ ಅಭಿಯಾನ ಇದೇ ನ.10 ಕ್ಕೆ ಅಂತ್ಯಗೊಳ್ಳಲಿದೆ ಈ ಹಿನ್ನೆಲೆ ವೀಕ್ ಎಂಡ್ ಕಾಫಿನಾಡಿನ ಪ್ರವಾಸಿತಾಣ ಮುಳ್ಳಯ್ಯನಗಿರಿ ಸೇರಿದಂತೆ ಕೆಲ ಪ್ರದೇಶಗಳಿಗೆ ಪ್ರವೇಶ ಬಂದ್ ಆಗಿರಲಿದೆ.

ಮುಳ್ಳಯ್ಯನಗಿರಿ, ಇನಾಮ್ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಪೀಠ, ಗಾಳಿಕೆರೆ, ಸೀತಾಳಯ್ಯನಗಿರಿ, ಮಾಣಿಕ್ಯಾಧಾರಗಳಿಗೆ ಪ್ರವಾಸಿಗರ ಭೇಟಿ ಬಂದ್ ಗೊಳಿಸಲಾಗಿದೆ. ಪಶ್ಚಿಮಘಟ್ಟಗಳ ತಪ್ಪಲಿನ ಪ್ರವಾಸಿ ತಾಣಗಳಿಗೆ ಈ ವಾರಾಂತ್ಯ ಆಗಮನ ನಿರ್ಬಂಧಿಸಲಾಗಿದೆ. ಶ್ರೀರಾಮಸೇನೆ ದತ್ತಮಾಲಾ ಅಭಿಯಾನದ ಕೊನೆ ದಿನಗಳಾದ್ದರಿಂದ ಎರಡು ದಿನಗಳು ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ನವೆಂಬರ್ ೯ ರ ಶನಿವಾರ ಹಾಗೂ ನವೆಂಬರ್ ೧೦ ರ ಭಾನುವಾರ ಎರಡೂ ದಿನಗಳು ಪ್ರವಾಸಿಗರಿಗೆ ನಿರ್ಬಂಧವನ್ನು ಜಿಲ್ಲಾಡಳಿತ ಆದೇಶಿಸಿದೆ. ಆ ಎರಡು ದಿನಗಳು ದತ್ತ ಮಾಲಾಧಾರಿಗಳಿಗೆ ಮಾತ್ರ ಪ್ರವೇಶಕ್ಕೆ ಜಿಲ್ಲಾಡಳಿತ ಅವಕಾಶ ನೀಡಿದೆ. ಮುಳ್ಳಯ್ಯನಗಿರಿ ಘಟ್ಟದ ಸಾಲಿಗೆ ನಿರ್ಬಂಧ ಹೇರಿರುವುದು ದೂರದ ಊರುಗಳಿಂದ ಆಗಮಿಸೊ ಪ್ರವಾಸಿಗರಿಗೆ ನಿರಾಸೆ ಮೂಡಿಸಿದೆ. ಚಿಕ್ಕಮಗಳೂರು ಜಿಲ್ಲಾಧಿಕಾರಿ ಸಿ.ಎನ್ ಮೀನಾ ನಾಗರಾಜ್ ಇಂದು ಪ್ರವಾಸಿಗರಿಗೆ ನಿರ್ಬಂಧದ ಆದೇಶ ಹೊರಡಿಸಿದ್ದಾರೆ. ಇದರಿಂದಾಗಿ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ, ಐ.ಡಿಪೀಠ ಭಾಗಗಳು ಬಿಕೋ ಎನ್ನಲಿವೆ.

Share

Leave a comment

Leave a Reply

Your email address will not be published. Required fields are marked *

Don't Miss

ವೈದ್ಯರ ಬೇಜವಾಬ್ದಾರಿತನಕ್ಕೆ ಮೂರು ತಿಂಗಳ ಹಸುಗೂಸು ಸಾವು

ಚಿಕ್ಕಮಗಳೂರು: ವೈದ್ಯರ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯದ ಆರೋಪಕ್ಕೆ ಮೂರು ತಿಂಗಳ ಹಸುಗೂಸೊಂದು ಬಲಿಯಾಗಿರುವ ಘಟನೆ ಚಿಕ್ಕಮಗಳೂರು ನಗರದ ಸರ್ಕಾರಿ ಜಿಲ್ಲಾ ಹೆರಿಗೆ ಆಸ್ಪತ್ರೆಯಲ್ಲಿ ನಡೆದಿದೆ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡದೆ...

ಜಿಲ್ಲೆಯಾದ್ಯಂತ ಮೊಹರಂ ಹಬ್ಬ ಆಚರಣೆ

ಚಿಕ್ಕಮಗಳೂರು: ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಮುಸ್ಲಿಮರು ಜಿಲ್ಲೆಯಾದ್ಯಂತ ಶುಕ್ರವಾರ ಶ್ರದ್ದಾಭಕ್ತಿಯಿಂದ ಆಚರಿಸಿದರು. ಕಳೆದ ಎರಡು ದಿನಗಳಿಂದ ಉಪವಾಸವಿದ್ದ ಭಕ್ತರು ನಗರದ ಬಡಾವಣೆಗಳ ವಿವಿಧ ಮಸೀದಿಗಳಿಗೆ ಬೆಳಿಗ್ಗೆಯೇ ತೆರಳಿ...

Related Articles

ನೀವು ಬೆಳಿಗ್ಗೆ ಕಸ ಗುಡಿಸದಿದ್ದರೆ ದೇಶವೇ ನಡೆಯಲ್ಲ ಧೈರ್ಯವಾಗಿ ಹಕ್ಕು ಕೇಳಿ

ಚಿಕ್ಕಮಗಳೂರು:  “ನೀವು ಬೆಳಿಗ್ಗೆ ಎದ್ದು ಕಸ ಗುಡಿಸದಿದ್ದರೆ ಈ ದೇಶದ ಯಾವುದೇ ನಗರ, ಪಟ್ಟಣ, ಊರುಗಳು...

ಸರ್ಕಾರಿ ಕಚೇರಿಗಳಲ್ಲಿ ಇ-ಆಫೀಸ್ ಮೂಲಕವೇ ವ್ಯವಹರಿಸಿ

ಚಿಕ್ಕಮಗಳೂರು: ಪ್ರತೀ ಕಚೇರಿಗಳಲ್ಲೂ ಇ-ಆಫೀಸ್ ಮೂಲಕವೇ ಪತ್ರ ಹಾಗೂ ಕಡತಗಳನ್ನು ನಿರ್ವಹಿಸುವಂತೆ ಸರ್ಕಾರದ ಅಪರ ಮುಖ್ಯ...

ಕುಂದೂರು ಫಾರೆಸ್ಟ್‌ನ ಹೆಬ್ಬಾಳ ಗದ್ದೆಯಲ್ಲಿ ಗಂಡು ಕಾಡಾನೆ ಸಾವು

​ಚಿಕ್ಕಮಗಳೂರು: ಜಿಲ್ಲೆಯ ಆಲ್ದೂರು ಅರಣ್ಯ ವಲಯದ ವ್ಯಾಪ್ತಿಯಲ್ಲಿ ಒಂಟಿ ಗಂಡು ಕಾಡಾನೆಯೊಂದು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ...

ಶೃಂಗೇರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿ

ಶೃಂಗೇರಿ: ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿಯನ್ನು ಕೇರಳ ಪೊಲೀಸರು ಶೃಂಗೇರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಶುಕ್ರವಾರ  ಹಾಜರುಪಡಿಸಿದರು....