Home namma chikmagalur chikamagalur ಒಳ ಮೀಸಲಾತಿ ಜಾರಿಯಲ್ಲಿ ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯ ಪಾಲಿಸಿಲ್ಲ
chikamagalurHomeLatest Newsnamma chikmagalur

ಒಳ ಮೀಸಲಾತಿ ಜಾರಿಯಲ್ಲಿ ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯ ಪಾಲಿಸಿಲ್ಲ

Share
Share

ಚಿಕ್ಕಮಗಳೂರು: ಒಳ ಮೀಸಲಾತಿ ಜಾರಿಯಲ್ಲಿ ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯ ಪಾಲಿಸಿಲ್ಲ, ಎಸ್‌ಸಿಎಸ್‌ಟಿ ಮೀಸಲಾತಿಯನ್ನು ಕಡಿತಗೊಳಿಸಿರುವುದು ಏಕೆ ಎಂಬುದನ್ನು ಸರ್ಕಾರ ಜನತೆಗೆ ವಿವರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ.ರವಿ ಆಗ್ರಹಿಸಿದ್ದಾರೆ.

ಒಳಮೀಸಲಾತಿ ಕುರಿತು ಪ್ರತಿಕ್ರಿಯೆನೀಡಿದಿರುವ ಅವರು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ನಿರ್ಧಾರ ಸಾಮಾಜಿಕ ಅನ್ಯಾಯವನ್ನು ಮಾಡಿದೆ. ಒಳಮೀಸಲಾತಿ ಜಾರಿಗೆತರಲುಸರ್ಕಾರ ಎರಡುವರ್ಷಕ್ಕೂ ಹೆಚ್ಚುಕಾಲವಿಳಂಬಮಾಡಿದ್ದು, ಅಂತಿಮವಾಗಿಜಾರಿಗೊಳಿಸಿದ ಮಾದರಿಯೂನ್ಯಾಯ ಸಮ್ಮತವಾಗಿಲ್ಲ. ಹೈಕೋರ್ಟ್ ಶೇ.೫೦ ಮಿತಿಯೊಳಗೆ ಮೀಸಲಾತಿ ನೀಡುವಂತೆ ಸೂಚಿಸಿದ್ದೇ ಹೊರತು, ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮೀಸಲಾತಿ ಕಡಿತಗೊಳಿಸಲು ಹೇಳಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಒಳಮೀಸಲಾತಿ ರೂಪಿಸುವಲ್ಲಿ ವಿವಿಧಸಮಿತಿಗಳಶಿಫಾರಸು ಪರಿಗಣಿಸಿಲ್ಲ. ಸದಾಶಿವ ಆಯೋಗ, ಮಾಜಿ ಸಚಿವ ಮಾಧು ಸ್ವಾಮಿ ವರದಿ ಹಾಗೂ ಸ್ವತಃ ಈ ಸರ್ಕಾರವೇ ನೇಮಿಸಿದ ನ್ಯಾಯಮೂರ್ತಿನಾಗಮೋಹನ್?ಸ್‌ಸಮಿತಿವರದಿಗಳನ್ನೂ ಕಡೆಗಣಿಸಲಾಗಿದೆ ಎಂದು ಹೇಳಿದರು.

ಸಚಿವ ಸಂಪುಟದಲ್ಲಿ ಪರಿಶಿಷ್ಟ ಜಾತಿ ಮೀಸಲಾತಿಯನ್ನು ಎ. ಎ, ಬಿ ಮತ್ತು ಸಿ ವರ್ಗಗಳಾಗಿ ವಿಭಜಿಸಿರುವ ಕ್ರಮದ ಮೇಲೂ ಅವರು ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿ ಸರ್ಕಾರದ
ಅವಧಿಯಲ್ಲಿ ಮೀಸಲಾತಿಯನ್ನು ಶೇ.೧೫ ರಿಂದ ೧೭ಕ್ಕೆ ಹೆಚ್ಚಿಸಲಾಗಿತ್ತು ಎಂದು ನೆನಪಿಸಿದರು.

ಎ ವರ್ಗಕ್ಕೆ ಶೇ.೬ ಮತ್ತು ಬಿ ವರ್ಗಕ್ಕೆ ಶೇ.೫.೫ ಇದ್ದ ಮೀಸಲಾತಿಯನ್ನು ತಲಾ ೫,೨೫ಕ್ಕೆಕ್ಕೆ ಇಳಿಸಿ, ಎರಡೂ ಸಮುದಾಯ ಗಳಿಗೆ ಅನ್ಯಾಯ ಮಾಡಲಾಗಿದೆ. ಭೋವಿ, ಬಂಜಾರ, ಕೊರಚ, ಕೊರಮ ಸೇರಿದಂತೆ ಹಲವು ಸಮುದಾಯಗಳಿಗೆ೪.೫ ಮೀಸಲಾತಿ ಇತ್ತು.

ಅವುಗಳನ್ನು ಸಿ ವರ್ಗದಲ್ಲಿ ಒಗ್ಗೂಡಿಸಲಾಗಿದೆ. ಇದರೊಡನೆ, ಅಲೆಮಾರಿ ಸಮುದಾಯಕ್ಕೆ ಶೇ.೧ ರಷ್ಟು ಮೀಸಲಾತಿ ಇತ್ತು. ಅವರನ್ನೂ ಸಿ ವರ್ಗಕ್ಕೆ ಸೇರಿಸಲಾಗಿದೆ. ನ್ಯಾಯಯುತವಾಗಿ ಸಿ ವರ್ಗಕ್ಕೆ ಸಿಗಬೇಕಿದ್ದ ಶೇ.೫.೫ ಮೀಸಲಾತಿ ಬದಲು ಕೇವಲ ಶೇ.೪.೫ ಮಾತ್ರ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಳ ಮೀಸಲಾತಿ ಹೆಸರಿನಲ್ಲಿ ದಲಿತ ಸಮುದಾಯಗಳಿಗೆ ಮೋಸ ಮಾಡಲಾಗಿದೆ. ಸಂವಿಧಾನ ವಿರೋಧಿಯಾದ, ಮತೀಯ ಆಧಾರದ ಮೀಸಲಾತಿ ಮುಂದುವರಿಸಿ, ಎಸ್‌ಸಿ ಎಸ್‌ಟಿಮೀಸಲಾತಿ ನಿರ್ಧಾರದ ಸಂವಿಧಾನಬದ್ಧ ಕಡಿತಗೊಳಿಸಿರುವುದು ಅನ್ಯಾಯದ ನಡೆ. ರಾಜ್ಯಸರ್ಕಾರದ ನಿರ್ಧಾರ ವಿವಿಧ ಪಂಗಡಗಳ ನಡುವೆ ಒಳ ಜಗಳ ಉಂಟು ಮಾಡುವ ಸಾಧ್ಯತೆಯಿದೆ.

ಈ ಪರಿಣಾಮವನ್ನುಕಾಂಗ್ರೆಸ್ ಶೀಘ್ರದಲ್ಲೇಎದುರಿಸಲಿದೆ. ಯಾವ ಪಂಗಡವೂ ಈ ಅನ್ಯಾಯದ ಒಳ ಮೀಸಲಾತಿನ್ನು ಒಪ್ಪಿಕೊಳ್ಳುವುದಿಲ್ಲ. ಇದರಿಂದ ಕಾಂಗ್ರೆಸ್ ಅಧಿಕಾರ ಕಳೆದು ಕೊಳ್ಳಲಿದೆ ಎಂದು ಹೇಳಿದ್ದಾರೆ.

The state government has not followed social justice in implementing internal reservation.

 

Share

Leave a comment

Leave a Reply

Your email address will not be published. Required fields are marked *

Don't Miss

ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದ ಬಳಿ ಹೊಸ ವಿವಾದ

ಚಿಕ್ಕಮಗಳೂರು: ಕಾಫಿನಾಡಿನ ಧಾರ್ಮಿಕ ಕ್ಷೇತ್ರ ‘ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ’ (ದತ್ತಪೀಠ) ಆವರಣದಲ್ಲಿ ಈಗ ಮತ್ತೊಂದು ಹೊಸ ವಿವಾದ ಮುನ್ನೆಲೆಗೆ ಬಂದಿದೆ. ದತ್ತಪೀಠದಿಂದ ಸುಮಾರು 6 ಕಿಲೋಮೀಟರ್ ದೂರದಲ್ಲಿರುವ ಮಾಣಿಕ್ಯಧಾರಕ್ಕೆ ತೆರಳುವ...

ರ್‍ಯಾಪಿಡ್ ಬೈಕ್-ಆಟೋ ಪರವಾನಗಿ ನಿಲ್ಲಿಸುವಂತೆ ಆಗ್ರಹಿಸಿ ಪ್ರತಿಭಟನೆ

ಚಿಕ್ಕಮಗಳೂರು: ರ್‍ಯಾಪಿಡ್ ಬೈಕ್ ಮತ್ತು ಆಟೋ ಪರವಾನಗಿಯನ್ನು ನಿಲ್ಲಿಸಬೇಕು ಎ ಂದು ಒತ್ತಾಯಿಸಿ ಸೋಮವಾರ ಚಿಕ್ಕಮಗಳೂರು ನಗರ ಆಟೋ ಚಾಲಕರು ಮತ್ತು ಮಾಲೀಕರ ಸಂಘವು ನಗರದ ಹನುಮಂತಪ್ಪ ವೃತ್ತದಿಂದ ಆಜಾದ್‌ಪಾರ್ಕ್ ವೃತ್ತದವರೆಗೆ...

Related Articles

ರಾಜ್ಯ ಪರಿಸರ ಮೌಲ್ಯಮಾಪನ ಸಮಿತಿಯು ದೇಶದಲ್ಲೇ ನಂ.1ನೇ ಸ್ಥಾನ

ಚಿಕ್ಕಮಗಳೂರು: ಪರಿಸರದ ಮೇಲೆ ಹಾನಿ, ಒತ್ತಡ ತಡೆಯುವ ನಿಟ್ಟಿನಲ್ಲಿ ಈವರೆಗೆ ಯಾವುದೇ ಕೈಗಾರಿಕೆ ಅಥವಾ ಕಟ್ಟಡ...

ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ ಪ್ರಕರಣ ದಾಖಲು

ಚಿಕ್ಕಮಗಳೂರು: ಸೈಬರ್ ಕ್ರೈಮ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳ ಲೈಂಗಿಕ ಶೋಷಣೆಯ ಅಶ್ಲೀಲ...

ಬಾಹ್ಯಾಕಾಶ ಕ್ಷೇತ್ರದಲ್ಲಿ ಆಲ್ದೂರಿನ ಯುವಕನ ಸಾಧನೆ

ಚಿಕ್ಕಮಗಳೂರಿನ ಆಲ್ದೂರು ಗ್ರಾಮದ ಅವೈಸ್ ಅಹ್ಮದ್, ತಮ್ಮ ‘Pixxeಟ’ ಸ್ಟಾರ್ಟ್‌ಅಪ್ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ...

ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಪದ ಬಳಸಲು ಮನವಿ

ಚಿಕ್ಕಮಗಳೂರು: ಕರ್ನಾಟಕ ಸರ್ಕಾರದ ಆದೇಶದಂತೆ ಜಿಲ್ಲೆಯ ಅಂಗಡಿ-ಮುಂಗಟ್ಟು ಹಾಗೂ ಸಾರ್ವಜನಿಕ ಪ್ರದೇಶದಲ್ಲಿ ಶೇ.೬೦ರಷ್ಟು ಕನ್ನಡ ಪದಗಳ...