Home namma chikmagalur ಸಹಕಾರ ಸಂಘಕ್ಕೆ ಸದಸ್ಯರಾಗಿ ಒಗ್ಗಟ್ಟನ್ನು ಪ್ರದರ್ಶಿಸಿ
namma chikmagalurchikamagalurHomeLatest News

ಸಹಕಾರ ಸಂಘಕ್ಕೆ ಸದಸ್ಯರಾಗಿ ಒಗ್ಗಟ್ಟನ್ನು ಪ್ರದರ್ಶಿಸಿ

Share
Share

ಚಿಕ್ಕಮಗಳೂರು: ಬಡ ಜನಾಂಗದ ಅಭಿವೃಧ್ದಿಗೆ ನಿರ್ಮಿತಗೊಂಡಿರುವ ಪರಿಶಿಷ್ಟ ಸಹಕಾರ ಸಂಘದಲ್ಲಿ ಇನ್ನಷ್ಟು ಹೆಚ್ಚು ಮಂದಿ ಸದಸ್ಯರಾಗುವ ಮೂಲಕ ಸಮಾಜದಲ್ಲಿ ಒಗ್ಗಟ್ಟನ್ನು ಪ್ರದರ್ಶಿಸ ಬೇಕು ಎಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಹೇಳಿದರು.

ನಗರದ ಡಾ|| ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಗೌತಮಬುದ್ಧ ಪರಿಶಿಷ್ಟ ಜಾತಿ ಸಹಕಾ ರ ಸಂಘದ ೨೦೨೪-೨೫ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ಸಂಘದಲ್ಲಿ ೮೦೦ಕ್ಕೂ ಹೆಚ್ಚು ಮಂದಿ ಸದಸ್ಯರುಗಳು ೨೨ ಲಕ್ಷ ರೂ.ಗಳ ವಹಿವಾಟು ನಡೆಸು ತ್ತಿರುವುದು ಸ್ವಾಗತಾರ್ಹ. ಕೇವಲ ಐದು ವರ್ಷಗಳಲ್ಲಿ ಸ್ಥಾಪಿತಗೊಂಡಿರುವ ಸಹಕಾರ ಸಂಘವು ಏರುಪೇ ರಿನ ನಡುವೆ ಪ್ರತಿವರ್ಷವು ಮುಂಚೂಣಿಯತ್ತ ಸಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಸಂಘವು ಆರ್ಥಿಕ ಅಭಿವೃದ್ದಿ ಹೊಂದಲು ಓರ್ವನಿಂದ ಸಾಧ್ಯವಿಲ್ಲ. ಪರಸ್ಪರ ಸಹಕಾರ ನೀಡಿ ಆಂ ದೋಲನವನ್ನು ನಡೆಸಬೇಕಿದೆ. ಜೊತೆಗೆ ಎಸ್‌ಬಿ ಖಾತೆ ತೆರೆಯುವಿಕೆ, ಎಫ್‌ಡಿ ಕಲೆಕ್ಷನ್ ಮುಖಾಂತರ ವಹಿ ವಾಟು ಮಾಡಿಕೊಂಡು ಡಿಸಿಸಿ ಬ್ಯಾಂಕ್‌ನಲ್ಲಿ ಇರುವಂಥ ಷೇರುಧನಕ್ಕೆ ಸಮನಾದ ಸಾಲಸೌಲಭ್ಯ ಪಡೆದು ಕೊಂಡು ಸದಸ್ಯರಿಗೆ ಸಹಕರಿಸಬೇಕು ಎಂದು ತಿಳಿಸಿದರು.

ಪುಟ್ಟಮಗುವಿನಂತೆ ಉಗಮವಾಗಿರುವ ಪರಿಶಿಷ್ಟ ಸಹಕಾರ ಸಂಘವು ಭವಿಷ್ಯದಲ್ಲಿ ಇನ್ನಷ್ಟು ಹೆಚ್ಚಿನ ವಹಿವಾಟು ನಡೆಸಿ ಜಿಲ್ಲೆಯಲ್ಲೇ ಮಾದರಿ ಸಂಘವಾಗಿ ಹೆಸರು ಸಂಪಾದಿಸಲಿ ಎಂದು ಹಾರೈಸಿದರು.

ಸಹಕಾರ ಸಂಘದ ಅಧ್ಯಕ್ಷ ಜಿ.ಕೆ.ಬಸವರಾಜ್ ಅಧ್ಯಕ್ಷತೆ ವಹಿಸಿ ಮಾತನಾಡಿ ತಾಲ್ಲೂಕಿನ ಪ್ರತಿ ಗ್ರಾಮ ಮಟ್ಟದಲ್ಲಿ ಪದಾಧಿಕಾರಿಗಳು ಪರಿಶಿಷ್ಟರನ್ನು ಭೇಟಿ ಮಾಡಿ ಸದಸ್ಯರಾಗಿಸುವ ನಿಟ್ಟಿನಲ್ಲಿ ಪ್ರಚಾರ ಮಾಡಲಾಗು ತ್ತಿದೆ. ಸಮಾಜದ ಬಾಂಧವರು ಹೆಚ್ಚಿನ ವ್ಯವಹಾರ, ಷೇರುಗಳನ್ನು ಹೊಂದಬೇಕಿದೆ ಎಂದು ತಿಳಿಸಿದರು.

ಪ್ರಸ್ತುತ ಸಂಘದಲ್ಲಿ ೧೦ ಲಕ್ಷ ರೂ.ಗಳಷ್ಟು ಸಾಲಸೌಲಭ್ಯವನ್ನು ಒದಗಿಸಿದ್ದು ವಸೂಲಾತಿ ಕಾರ್ಯವು ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ. ಒಟ್ಟಾರೆ ಪ್ರತಿವರ್ಷವು ಸಹಕಾರ ಸಂಘವು ಆರ್ಥಿಕ ಲಾಭಾಂ ಶವನ್ನು ಹೊಂದುವ ಮೂಲಕ ಮುನ್ನೆಡೆ ಸಾಧಿಸಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಘದ ಗೌರವ ಕಾರ್ಯದರ್ಶಿ ಹಂಪಯ್ಯ, ಉಪಾಧ್ಯಕ್ಷ ಬಿ.ಎಂ.ಶಂಕರ್, ನಿರ್ದೇ ಶಕರುಗಳಾದ ಪಿ.ವೇಲಾಯುಧನ್, ಕೆ.ಎಂ.ಗೋಪಾಲ್, ಎಲ್.ಶಾಂತಕುಮಾರ್, ಎ.ನಾಗರಾಜ್, ಎಂ.ಟಿ. ಲೋಕೇಶಪ್ಪ, ಎಂ.ಆರ್.ಗಂಗಾದರ್. ಹೆಚ್.ಜೆ.ಪರಮೇಶ್ವರಪ್ಪ, ಕೆ.ನಾಗರಾಜ್, ಎಂ.ಎ ಸ್.ವೆಂಕಟೇಶ್, ಕೆ.ಟಿ.ಶ್ರೀನಿವಾಸ್, ಸುರೇಂದ್ರ ಬಾಬು, ಪಾರ್ವತಮ್ಮ, ರೇಣುಕಾ ಮತ್ತಿತರರಿದ್ದರು.

Show solidarity by becoming a member of a cooperative.

Share

Leave a comment

Leave a Reply

Your email address will not be published. Required fields are marked *

Don't Miss

19 ಲಕ್ಷ ಜನರ ಪಿಂಚಣಿ ರದ್ದು: ಸರ್ಕಾರದ ವಿರುದ್ಧ ವಿಧಾನಮಂಡಲದಲ್ಲಿ ಸಂಗ್ರಾಮ

ಸಖರಾಯಪಟ್ಟಣ: ರಾಜ್ಯದಲ್ಲಿ 19 ಲಕ್ಷಕ್ಕೂ ಹೆಚ್ಚು ಜನರ ವೃದ್ಧಾಪ್ಯ, ವಿಧವಾ ಹಾಗೂ ಅಂಗವಿಕಲ ಪಿಂಚಣಿಯನ್ನು ರದ್ದುಪಡಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಮಾರು 67 ಸಾವಿರ ಫಲಾನುಭವಿಗಳ ಪಿಂಚಣಿ ಸ್ಥಗಿತಗೊಳಿಸಲಾಗಿದೆ ಎಂದು ವಿಧಾನಪರಿಷತ್ ಸದಸ್ಯ...

ಸಖರಾಯಪಟ್ಟಣದ ಮೂಲಸೌಕರ್ಯ ಸಮಸ್ಯೆ ಪರಿಹಾರಕ್ಕೆ 5 ಬೇಡಿಕೆ

ಚಿಕ್ಕಮಗಳೂರು: ಜಿಲ್ಲೆಯ ಪ್ರಮುಖ ಗ್ರಾಮ ಪಂಚಾಯಿತಿಗಳಲ್ಲಿ ಒಂದಾಗಿರುವ ಸಖರಾಯಪಟ್ಟಣದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಜನರು ತೊಂದರೆ ಅನುಭವಿಸುತ್ತಿದ್ದು, ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಜಿಪಂ–ತಾಪಂ ಸದಸ್ಯ...

Related Articles

ಮಳೆಗಾಲದಲ್ಲಿ ಟಿಂಬರ್ ಸಾಗಣೆರಸ್ತೆಯಿಂದ ರಸ್ತೆ ಹಾಳು

ಕೊಪ್ಪ: ತಾಲೂಕಿನ ಅಸಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯಿಂದ ಮಳೆಗಾಲದಲ್ಲಿಯೇ ಟಿಂಬರ್‌ಗಳನ್ನು ಕಡಿದು ಸಾಗಿಸುತ್ತಿರುವುದರಿಂದ...

ನಗರಕ್ಕೆ ಎರಡು ದಿನಗಳ ಕಾಲ ಕುಡಿಯುವ ನೀರಿನ ಸರಬರಾಜು ಸ್ಥಗಿತ

ಚಿಕ್ಕಮಗಳೂರು: ನಗರದ ದಂಟರಮಕ್ಕಿ ವ್ಯಾಪ್ತಿಯಲ್ಲಿ 600 ಎಂಎಂ ಸಾಮರ್ಥ್ಯದ ಪ್ರಮುಖ ಕುಡಿಯುವ ನೀರಿನ ಕೊಳವೆ ಮಾರ್ಗ...

ಚಿಕ್ಕಮಗಳೂರು-ಯಶವಂತಪುರ ಎಕ್ಸ್‌ಪ್ರೆಸ್ ರೈಲು ಸಂಚಾರ ಸ್ಥಗಿತ…?

ಚಿಕ್ಕಮಗಳೂರು: ಮಲ್ಲಸಂದ್ರ ಮತ್ತು ಗುಬ್ಬಿ ರೈಲ್ವೆ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ ಗೇಟ್ (LC-48) ಬದಲಿಗೆ...

ಅಣ್ಣ-ತಮ್ಮಂದಿರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ

ತರೀಕೆರೆ: ಮನೆಯಲ್ಲಿ ಆಟವಾಡುತ್ತಿದ್ದ ಮಗುವಿನ ಕೆನ್ನೆ ಊದಿಕೊಂಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಕ್ಷುಲ್ಲಕ ಕಾರಣಕ್ಕೆ ಅಣ್ಣ-ತಮ್ಮಂದಿರ ನಡುವೆ...