Home namma chikmagalur ಸರ್ಕಾರಿ ಉದ್ಯೋಗದಲ್ಲಿ ನಿವೃತ್ತಿ-ವರ್ಗಾವಣೆ ಸಹಜ ಪ್ರಕ್ರಿಯೆ
namma chikmagalurchikamagalurHomeLatest News

ಸರ್ಕಾರಿ ಉದ್ಯೋಗದಲ್ಲಿ ನಿವೃತ್ತಿ-ವರ್ಗಾವಣೆ ಸಹಜ ಪ್ರಕ್ರಿಯೆ

Share
Share

ಚಿಕ್ಕಮಗಳೂರು: ಸರ್ಕಾರಿ ಉದ್ಯೋಗದಲ್ಲಿ ನಿವೃತ್ತಿ ವರ್ಗಾವಣೆ ಸಹಜ ಪ್ರಕ್ರಿಯೆ ಎಂದು ನಗರಸಭೆ ಪ್ರಭಾರಿ ಅಧ್ಯಕ್ಷೆ ಅನುಮಧುಕರ್ ತಿಳಿಸಿದರು.

ಅವರು ನಗರಸಭೆ ಆವರಣದಲ್ಲಿ ಏರ್ಪಡಿಸಲಾಗಿದ್ದ ಮೈಸೂರು ಜಿಲ್ಲೆ ಬೋಗಾದಿ ಪಟ್ಟಣ ಪಂಚಾಯಿತಿಗೆ ವರ್ಗಾವಣೆಯಾಗಿರುವ ನಗರಸಭೆಯ ಕಂದಾಯ ನಿರೀಕ್ಷಕರಾದ ಶಿವಾನಂದ ಹಾಗೂ ದ್ವಿತೀಯ ದರ್ಜೆ ಸಹಾಯಕರಾಗಿ ನಿವೃತ್ತಿ ಹೊಂದಿದ ಇಬ್ರಾಹಿಂ ಇವರುಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಗೌರವಿಸಿ ಮಾತನಾಡಿದರು.

ನಗರಸಭೆಯ ಈ ಇಬ್ಬರು ನೌಕರರು ಇಬ್ರಾಹಿಂ ನಿವೃತ್ತಿಯಾದರೆ ಕಂದಾಯ ನಿರೀಕ್ಷಕ ಶಿವಾನಂದ್ ಅವರು ಮೈಸೂರು ನಗರ ಪಟ್ಟಣ ಪಂಚಾಯಿತಿಗೆ ವರ್ಗಾವಣೆಯಾಗಿರುವುದು ತುಂಬಾ ಬೇಸರದ ಸಂಗತಿ ಎಂದರು.
ಪೌರಾಯುಕ್ತ ಬಿ.ಸಿ. ಬಸವರಾಜ್ ಮಾತನಾಡಿ, ಸರ್ಕಾರಿ ನೌಕರರಿಗೆ ವರ್ಗಾವಣೆ, ನಿವೃತ್ತಿ ಬಯಸದೇ ಬಂದ ಭಾಗ್ಯ ಎಂದು ಹೇಳಿದರು.

ವರ್ಗಾವಣೆಯಾಗಿರುವ ಶಿವಾನಂದ ಅವರು ದೊಡ್ಡ ಜಿಲ್ಲೆಯ ಪಟ್ಟಣ ಪಂಚಾಯಿತಿಗೆ ಹೋಗುತ್ತಿರುವುದು ಸಂತಸ ತಂದಿದೆ. ಜೊತೆಗೆ ಒಳ್ಳೆಯ ಕೆಲಸದ ಮೂಲಕ ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರರಾಗಲಿ ಎಂದು ಶುಭ ಹಾರೈಸಿದರು.
ಜನರ ಮೆಚ್ಚುಗೆಗೆ ಪಾತ್ರರಾಗಿ ಕೆಲಸ ಮಾಡುವ ನೌಕರರಿಗೆ ಸದಾ ಅವರ ಆಶೀರ್ವಾದ ಇರುತ್ತದೆ. ಮತ್ತೊಮ್ಮೆ ಅವಕಾಶ ಸಿಕ್ಕರೆ ಪುನಃ ಈ ನಗರಸಭೆಗೆ ಮರಳಿ ಬರುವಂತೆ ಸಲಹೆ ನೀಡಿದರು.

ಇಂದು ನಿವೃತ್ತಿಯಾಗುತ್ತಿರುವ ಇಬ್ರಾಹಿಂರವರು ನಗರಸಭೆಯೊಂದಿಗೆ ಉತ್ತಮ ಸೇವೆಯೊಂದಿಗೆ ಎಲ್ಲರ ಒಡನಾಡಿಯಾಗಿದ್ದರು ಎಂದು ಬಣ್ಣಿಸಿದರು.

ನಿಸ್ವಾರ್ಥದಿಂದ ಒಳ್ಳೆಯ ಕೆಲಸ ಮಾಡುವ ನೌಕರರಿಗೆ ಕೆಡುಕನ್ನು ಬಯಸಿ ಬಲಿಪಶು ಮಾಡಬೇಡಿ, ಎಲ್ಲಾ ನೌಕರರು ಒಗ್ಗಟ್ಟಿನಿಂದ ಸರ್ಕಾರಿ ಸೇವೆ ಸಲ್ಲಿಸುವ ಮೂಲಕ ಒಳ್ಳೆಯ ಸಮಾಜ ನಿರ್ಮಾಣಕ್ಕೆ ನಾಂದಿಯಾಗೋಣ ಎಂದರು.

ವರ್ಗಾವಣೆಗೊಂಡಿರುವ ಕಂದಾಯ ನಿರೀಕ್ಷಕ ಶಿವಾನಂದ ಅವರು ಗೌರವವನ್ನು ಸ್ವೀಕರಿಸಿ ಮಾತನಾಡಿ, ನನಗೆ ವರ್ಗಾವಣೆಯಾಗಿರುವುದು ಸಂತೋಷ ಒಂದೆಡೆಯಾದರೆ ದುಖಃವೂ ಆಗುತ್ತಿದೆ. ಹಲವು ವರ್ಷಗಳಿಂದ ನಗರಸಭೆಯಲ್ಲಿ ಸೇವೆ ಸಲ್ಲಿಸಿರುವುದು ತೃಪ್ತಿ ಮತ್ತು ಖುಷಿ ತಂದಿದೆ ಎಂದು ಹೇಳಿದರು.

೨೦೧೭ ರಲ್ಲಿ ನಗರಸಭೆಗೆ ಬಂದಾಗ ಸ್ನೇಹಿತರು ಸಹಕರಿಸಿ ಮಾರ್ಗದರ್ಶನ ನೀಡಿ ಸರ್ಕಾರಿ ಸೇವೆಯನ್ನು ಸಮರ್ಪಕವಾಗಿ ಮಾಡಲು ಜೀವ ತುಂಬಿದರು ಎಂದು ಸ್ಮರಿಸಿದರು. ನಗರಸಭೆ ನೌಕರನಾಗಿ ಒಬ್ಬರಿಂದ ಸಾರ್ವಜನಿಕರ ಕೆಲಸ ಮಾಡಲು ಸಾಧ್ಯವಿಲ್ಲ, ಎಲ್ಲಾ ಸಿಬ್ಬಂದಿ ಒಗ್ಗಟ್ಟಿನಿಂದ ಕೂಡಿದಾಗ ಮಾತ್ರ ಸೇವೆಯಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು.

ಮುಂಗೋಪಿಯಾದ ನಾನು ಕೆಲಸದ ವಿಷಯದಲ್ಲಿ ಗದರಿಸಿದ್ದೇನೆ. ಯಾರಿಗಾದರೂ ನೋವಾಗಿದ್ದರೆ ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ವಿನಂತಿಸಿದ ಅವರು, ನಗರದ ಜನತೆಗೆ ಅಭಾರಿಯಾಗಿದ್ದೇನೆ, ಸೇವಾವಧಿಯಲ್ಲಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಶಾಸಕ ಹೆಚ್.ಡಿ. ತಮ್ಮಯ್ಯ ಮೊದಲಿನಿಂದಲೂ ನನಗೆ ಉತ್ತಮವಾಗಿ ಕೆಲಸ ಮಾಡುತ್ತಿದ್ದೀರೆಂದು ಬೆನ್ನು ತಟ್ಟುತ್ತಿದ್ದರು. ಇವರ ಜೊತೆಗೆ ನಗರಸಭೆ ಸದಸ್ಯರು ನನ್ನ ಮೇಲೆ ವಿಶ್ವಾಸವಿಟ್ಟುಕೊಂಡಿದ್ದರು ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಲಕ್ಷ್ಮಣ್, ಗುರುಮಲ್ಲಪ್ಪ, ರೂಪ ಕುಮಾರ್ ಮತ್ತು ನಗರಸಭೆ ಸಿಬ್ಬಂದಿ ಉಪಸ್ಥಿತರಿದ್ದರು. ಮೊದಲಿಗೆ ಸಿಇಓ ಚಂದ್ರಶೇಖರ್ ಸ್ವಾಗತಿಸಿ, ಆರೋಗ್ಯ ನಿರೀಕ್ಷಕ ವೆಂಕಟೇಶ್ ಕೊನೆಯಲ್ಲಿ ವಂದಿಸಿದರು.

Retirement-transfer is a natural process in government employment

Share

Leave a comment

Leave a Reply

Your email address will not be published. Required fields are marked *

Don't Miss

ಅಜ್ಜಂಪುರದ‌ಲ್ಲಿ ಇಂದು ನೂತನ ರಸ್ತೆ ಮೇಲ್ವೇತುವೆಯ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ

ಚಿಕ್ಕಮಗಳೂರು: ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ಸಚಿವರಾದ ವಿ.ಸೋಮಣ್ಣ ಅವರು ಮೇ 31 ರಂದು (ನಾಳೆ ಭಾನುವಾರ) ಚಿಕ್ಕಮಗಳೂರು ಜಿಲ್ಲೆಯ ವಿವಿಧ ರೈಲ್ವೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಬೆಳಿಗ್ಗೆ...

ಶ್ರೀಗಂಧ ಮರಗಳ ರಕ್ಷಣೆ, ಪ್ಲಾಸ್ಟಿಕ್ ಮುಕ್ತಕ್ಕೆ ಆಗ್ರಹಿಸಿ ಮೌನ ಪ್ರತಿಭಟನೆ

ಚಿಕ್ಕಮಗಳೂರು: ನಾಡಿನಲ್ಲಿ ಶ್ರೀಗಂಧ ಮರಗಳ ರಕ್ಷಣೆ ಮತ್ತು ನಗರವನ್ನು ಪ್ಲಾಸ್ಟಿಕ್ ಮು ಕ್ತಗೊಳಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ಜಿಲ್ಲಾ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘ ಮತ್ತು ವಿವಿಧ ಕನ್ನಡಪರ ಸಂಘಟನೆಗಳ...

Related Articles

ಪ್ಲೆಕ್ಸ್‌ ಹರಿದ ಪ್ರಕರಣ ಇಬ್ಬರು ಆರೋಪಿಗಳ ಬಂಧನ

ಚಿಕ್ಕಮಗಳೂರು: ಕಾಫಿನಾಡಿನ ಕಾಂಗ್ರೆಸ್ ಶಾಸಕ ಹೆಚ್.ಡಿ.ತಮ್ಮಯ್ಯ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಭಾವಚಿತ್ರವಿದ್ದ ಪ್ಲೆಕ್ಸ್‌ಗೆ...

ಅಡಿಕೆ ಕಳವು ಪ್ರಕರಣದ ಆರೋಪಿಗಳ ಬಂಧನ

ಬಾಳೆಹೊನ್ನೂರು: ಇಲ್ಲಿಗೆ ಸಮೀಪದ ಜಕ್ಕಣಕ್ಕಿಯ ರೈತರ ಗೋದಾಮಿನಲ್ಲಿಟ್ಟಿದ್ದ ಅಡಿಕೆಯನ್ನು ಕಳವು ಮಾಡಿದ ಆರೋಪದಲ್ಲಿ ಪೊಲೀಸರು ಇಬ್ಬರನ್ನು...

ಮೂಡಿಗೆರೆಯಲ್ಲಿ ಬಾಗಿಲು ಮುರಿದು ಕಳ್ಳತನ

ಮೂಡಿಗೆರೆ: ಬೀಗ ಹಾಕಿದ್ದ ಮನೆಯೊಂದರ ಮುಂಬಾಗಿಲು ಮುರಿದು ಮನೆಯೊಳಗೆ ನುಗ್ಗಿ ನಗದು ಸಹಿತ ಅಪಾರ ಮೌಲ್ಯದ...

ನಾಗಲಕ್ಷ್ಮಿ ಚಿತ್ರಮಂದಿರದ ಪ್ರದರ್ಶನ ಸ್ಥಗಿತ

ಚಿಕ್ಕಮಗಳೂರು: ಅಗ್ನಿ ಸುರಕ್ಷತಾ ಪರಿಕರಗಳನ್ನು ಅಳವಡಿಸದ ಕಾರಣಕ್ಕೆ ನಗರದ ನಾಗಲಕ್ಷ್ಮಿ ಚಿತ್ರಮಂದಿರದಲ್ಲಿ ಚಲನಚಿತ್ರ ಪ್ರದರ್ಶನಗಳನ್ನು ಅಧಿಕಾರಿಗಳು...