Home Latest News ಶಾಸಕ ಶ್ರೀನಿವಾಸ್ ಬೆಂಬಲಿಗ – ಪುರಸಭಾ ಸದಸ್ಯ ರಂಗನಾಥ್ ಲೋಕಾಯುಕ್ತ ಬಲೆಗೆ
Latest NewsCrime NewsHomenamma chikmagalurTarikere

ಶಾಸಕ ಶ್ರೀನಿವಾಸ್ ಬೆಂಬಲಿಗ – ಪುರಸಭಾ ಸದಸ್ಯ ರಂಗನಾಥ್ ಲೋಕಾಯುಕ್ತ ಬಲೆಗೆ

Share
Share

ತರೀಕೆರೆ: ಮಾಜಿ ಪುರಸಭಾ ಅಧ್ಯಕ್ಷ ಹಾಲಿ ಸದಸ್ಯ ರಂಗನಾಥ್ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಶಾಸಕ ಶ್ರೀನಿವಾಸ್ ಅಪ್ತ ಬಳಗದಲ್ಲಿ ಗುರ್ತಿಸಿ ಕೊಂಡಿದ್ದ ರಂಗನಾಥ್ ತರೀಕೆರೆ ಪಟ್ಟಣದ ಮೂರನೇ ವಾರ್ಡ್‌ ನಿಂದ ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದ. ಸಾರ್ವಜನಿಕರಿಗೆ ಕಿರುಕುಳ ನೀಡಿ ಹಣ ಕೀಳುತ್ತಿದ್ದ ಎಂಬ ವ್ಯಾಪಕ ದೂರುಗಳಿದ್ದವು.

ಸಾರ್ವಜನಿಕರು ಮನೆ ಕಟ್ಟಲು ಪ್ರಾರಂಭಿಸಿದರೆ ಸಾಕು ಅಲ್ಲಗೆ ಬಂದು ಹಣ ಕಿತ್ತುಕೊಳ್ಳುತ್ತಿದ್ದ ಎಂದು ಸಾರ್ವಜನಿಕರು ದೂರಿದ್ದಾರೆ.

ಮಾಜಿ ಪುರಸಭಾ ಸದಸ್ಯ ಟಿ.ಕೆ.ರಮೇಶ್ ಎಂಬುವರಿಂದ ಗ್ರಾನೈಟ್ ಅಂಗಡಿ ಪರವಾನಿಗೆ ಪಡೆಯಲು ಒಂದು ಲಕ್ಷ ರೂ ಲಂಚ ಕೇಳಿ ಇಂದು ಬೆಳಗ್ಗೆ ಐವತ್ತು ಸಾವಿರ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸ್ ರು ಬಂಧಿಸಿದ್ದಾರೆ.

ಲೋಕಾಯುಕ್ತ ಉಪಾಧೀಕ್ಷರಾದ ತಿರುಮಲೇಶ್ ನೇತೃತ್ವದಲ್ಲಿ ಮುಖ್ಯ ಪೊಲೀಸ್ ಪೇದೆಗಳಾದ ಸಿ. ಲೋಕೇಶ್ ವಿಜಯಭಾಸ್ಕರ್ ಪೇದೆಗಳಾದ ಪ್ರಸಾದ್.ಎಂ,ಚಂದ್ರಶೆಟ್ಟಿ,ಮಜೀಬ್ ಖಾನ್,ಶ್ರೀಧರ್, ಸವಿನಯ,ರವಿಚಂದ್ರ,ಮಲ್ಲಿಕಾರ್ಜುನ್ ಮತ್ತು ಚಂದನ್ ಕುಮಾರ್ ದಾಳಿ ನಡೆಸಿ ರಂಗನಾಥ್ ನನ್ನು ಬಂಧಿಸಿದ್ದಾರೆ.

ಸಾರ್ವಜನಿಕರು ಇನ್ನೂ ಕೆಲವು ಸದಸ್ಯರು ವಸೂಲಿ ಯಲ್ಲಿ ನಿರತರಾಗಿದ್ದಾರೆ ಎಂದು ಆರೋಪ ಮಾಡಿ ಅಮೃತ್2 ಯೋಜನೆ ಮತ್ತು ಪೈಪ್ ಲೈನ್ ಅಳವಾಡಿಸಿದಾಗ ಹಾಗೂ ಲೇಔಟ್ ನಿರ್ಮಾಣ ಮಾಡುವವರಿಂದ ವಸೂಲಿ ಮಾಡಿದ್ದಾರೆ ಎಂದು ದೂರಿದ್ದಾರೆ.

Municipal council member Ranganath falls into Lokayukta trap

Share

Leave a comment

Leave a Reply

Your email address will not be published. Required fields are marked *

Don't Miss

ತರೀಕೆರೆ-ಕಡೂರು-ಚಿಕ್ಕಮಗಳೂರು: ಅದಲು-ಬದಲು ಕಾಂಗ್ರೆಸ್, ಬಿಜೆಪಿ ಕಿತ್ತಾಟ !

ಚಿಕ್ಕಮಗಳೂರು: ರಸ್ತೆ ಕಾಮಗಾರಿಗಳು, ಭದ್ರ ಉಪಕಣಿವೆ ಯೋಜನೆಗಳಿಗೆ ಕಾಂಗ್ರೆಸ್ ಶಾಸಕರುಗಳಲ್ಲಿ “ಸಿಟ್ಟು” ಮಡಿಗಟ್ಟಿದೆ. ಇದಕ್ಕೆ ಪ್ರತಿಯಾಗಿ ವಿಧಾನ ಪರಿಷತ್ ಸದಸ್ಯಮತ್ತು ಬಿಜೆಪಿ ಮುಖಂಡ ಸಿ.ಟಿ.ರವಿ ಹಾದಿ ರಂಪ,ಬೀದಿ ರಂಪ ಮಾಡಿಕೊಂಡು ದೂರುಪ್ರತಿದೂರು...

ಸ್ಥಳೀಯ ಶಾಸಕರ ಪ್ರಚೋದನಾಕಾರಿ ಹೇಳಿಕೆಯಿಂದ ಶಾಸಕ ಸಿ.ಟಿ ರವಿ ಹಲ್ಲೆಗೆ ಯತ್ನ

ಚಿಕ್ಕಮಗಳೂರು: ರಾಂಪುರ ರಸ್ತೆ ಕಾಮಗಾರಿ ವೀಕ್ಷಣೆ ಸಂದರ್ಭದಲ್ಲಿ ಸ್ಥಳೀಯ ಶಾಸಕರ ಪ್ರಚೋದನಾಕಾರಿ ಹೇಳಿಕೆ ಹಿನ್ನಲೆಯಲ್ಲಿ ಬಿಜೆಪಿ ಪಕ್ಷದ ಮುಖಂಡರು ಹಾಗೂ ವಿಧಾನಪರಿಷತ್ ಶಾಸಕ ಸಿ.ಟಿ ರವಿ ರವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು...

Related Articles

ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಜನಪ್ರತಿನಿಧಿಗಳಿಂದ ಸ್ವಾಗತ

ಚಿಕ್ಕಮಗಳೂರು:  ಬೇಸಿಗೆ ರಜೆ ಮುಗಿದು ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದ್ದು, ಅತ್ಯಂತ ಹುರುಪಿನಿಂದ ಶಾಲೆಗಳಿಗೆ ಆಗಮಿಸಿದ ಮಕ್ಕಳಿಗೆ...

ಮತದಾರರ ಪಟ್ಟಿ ಶುದ್ಧೀಕರಣಕ್ಕೆ ಆದ್ಯತೆ ನೀಡಿ

ಚಿಕ್ಕಮಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಸುಸೂತ್ರ ಹಾಗೂ ಪಾರದರ್ಶಕವಾಗಿ ನಡೆಯಬೇಕಾದರೆ ದೋಷಮುಕ್ತ ಮತದಾರರ ಪಟ್ಟಿ ಅತ್ಯಗತ್ಯ....

 ಮಕ್ಕಳ ಶಾಲಾ ಹಾಜರಾತಿ ಬಗ್ಗೆ ಪೋಷಕರು ನಿಗಾ ವಹಿಸಬೇಕು

ಚಿಕ್ಕಮಗಳೂರು: ಮಕ್ಕಳು ಪ್ರತಿದಿನ ತಪ್ಪದೆ ಶಾಲೆಗೆ ಹಾಜರಾಗಬೇಕು. ಶಿಕ್ಷಣದಲ್ಲಿ ನಿರಂತರತೆ ಅತ್ಯಂತ ಮುಖ್ಯವಾಗಿದ್ದು, ಪೋಷಕರು ಈ...

ನಿವೇಶನಕ್ಕಾಗಿ ಒತ್ತಾಯಿಸಿ 4ನೇ ದಿನಕ್ಕೆ ಮುಂದುವರೆದ ಧರಣಿ

ಮೂಡಿಗೆರೆ: ತಾಲೂಕಿನ ಮಣ್ಣಿಕೆರೆ ಗ್ರಾಮದಲ್ಲಿ ಟಿಯುಸಿಐ ಮತ್ತು ವಸತಿಗಾಗಿ ಹೋರಾಟ ವೇದಿಕೆ ವತಿಯಿಂದ ನಿವೇಶನ ರಹಿತರು...